POLICE BHAVAN KALABURAGI

POLICE BHAVAN KALABURAGI

23 January 2016

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸುರೇಖಾ ಗಂಡ ರಮೇಶ ಆಳಂದ ಇವರನ್ನು ಸುಮಾರು 6 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರು ಕಲಬುರಗಿಯ ಸಂತೋಷ ಕಾಲೋನಿಯ ಹಣಮಂತರಾಯ ಇವರ ಮಗನಾದ ರಮೇಶ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಲ್ಲಿ ಮಾತನ್ನಾಡಿದ ಪ್ರಕಾರ ವರನಿಗೆ ವರದಕ್ಷಣೆ ಅಂತಾ 1 ಲಕ್ಷ ರೂಪಾಯಿ, 6 ತೊಲೆ ಬಂಗಾರ ಹಾಗೂ ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು, ಇರುತ್ತದೆ. ಮದುವೆಯಾದ ನಂತರ ಎರಡು-ಮೂರು ತಿಂಗಳವರೆಗೆ ನನ್ನ ಗಂಡ ಹಾಗೂ ಅವರ ಮನೆಯವರು ನನ್ನೊಂದಿಗೆ ಚೆನ್ನಾಗಿದ್ದು, ತದನಂತರ ಮನೆಯ ಸಣ್ಣ ಪುಟ್ಟ ವಿಷಯಗಳಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡಲು ಪ್ರಾರಂಭಿಸಿ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ  ಹಿಂಸೆ ಕೊಡಲು ಪ್ರಾರಂಭಿಸಿದರು. ನಾನು ಅವರು ಕೊಡುವ ಹಿಂಸೆಯನ್ನು ತಾಳಲಾರದೇ  ನನ್ನ ತಂದೆ ತಾಯಿಗೆ ವಿಷಯ ತಿಳಿಸಿದಾಗ ಅವರು ಹಿರಿಯರೊಂದಿಗೆ ಬುದ್ದಿವಾದ ಹೇಳಿದ್ದು ಇರುತ್ತದೆ. ನನಗೆ  ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇರುತ್ತದೆ. ಇಷ್ಟಾದರೂ ಸಹ ನನ್ನ ಗಂಡ ಹಾಗೂ ಅವರ ಮನೆಯವರು ನನಗೆ ಹಿಂಸೆ ಕೊಡುವುದನ್ನು ಬಿಡಲಿಲ್ಲ. ನನ್ನ ಮೈದುನ ಉಮೇಶ ಇತನು ಇವಳು ನಮ್ಮ ಮನೆಯ ವಿಷಯವೆಲ್ಲಾ ಬೇರೆಯವರ ಮುಂದೆ ಹೇಳುತ್ತಾಳೆ ಇವಳಿಗೆ ಖಲಾಸ ಮಾಡಿ ಬಿಡು ಅಂತಾ ನನ್ನ ಗಂಡನಿಗೆ ಹೇಳುತ್ತಿದ್ದನು. ನನ್ನ ಗಂಡ ರಮೇಶ ಇತನು ನನಗೆ ಸಾಲವಾಗಿದೆ ನಿನ್ನ ತವರು ಮನೆಯಿಂದ ಹಣ ತರಿಸು ಅಂತಾ ಹೇಳಿದಾಗ ನಾನು ನನ್ನ ಗಂಡ ಕೊಡುವ ಕಿರುಕುಳ ತಾಳಲಾರದೇ ನನ್ನ ಸಹೋದರ ಮಾವನಾದ ರೇವಣಸಿದ್ದ ಇವರಿಗೆ ತಿಳಿಸಿದಾಗ  ಅವರು ಆಗಾಗ ಸ್ವಲ್ಪ ಸ್ವಲ್ಪ 2 ಲಕ್ಷ ರೂಪಾಯಿ ಕೊಟ್ಟಿರುತ್ತಾರೆ. ಮತ್ತೆ ನನ್ನ ಗಂಡ ನನ್ನ ಬಂಗಾರ ಎಲ್ಲಾ ಮಾರಿರುತ್ತಾನೆ.  ದಿನಾಂಕ 20-01-2016 ರಂದು 10-00 ಎ.ಎಮ್ ಕ್ಕೆ ನನ್ನ ಭಾವ ಪ್ರಕಾಶ, ನಾದಿನಿ ಸುಮಂಗಲಾ, ಅತ್ತೆ ನಾಗಮ್ಮ , ಮಾವ ಹಣಮಂತ ಇವರೆಲ್ಲರೂ ಸೇರಿ ರಂಡಿ ನಿನಗೆ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂದರೆ ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಹಣ ತರುವವರೆಗೂ ನಮ್ಮ ಮನೆಗೆ ಬರಬೇಡ ಅಂತಾ ಹೊಡೆ ಬಡೆ ಮಾಡಿರುತ್ತಾರೆ. ದಿನಾಂಕ 21-01-2016 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನನ್ನ ಗಂಡನಾದ ರಮೇಶ ಇತನು ನನಗೆ ನಾನು ವೈನ್ ಶಾಪ್ ವ್ಯಾಪಾರ ಮಾಡುತ್ತೇನೆ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಕಿರಿಕಿರಿ ಮಾಡಿ ನಾನು ಸಂಜೆ ಮನೆಗೆ ಬರುವಷ್ಟರಲ್ಲಿ ನಿಮ್ಮ ತಂದೆಗೆ ಹೇಳಿ ಹಣ ತರಿಸು ಇಲ್ಲವಾದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಹೊರಗೆ ಹೋದನು. ಸಂಜೆ 7-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಅಡಿಗೆ ಮಾಡುತ್ತಿದ್ದಾಗ ನನ್ನ ಗಂಡ ರಮೇಶ ಇತನು ನಿನ್ನ ತವರು ಮನೆಯವರು ಹಣ ತಂದು ಕೊಟ್ಟಿದ್ದಾರಾ ಅಂತಾ ಕೇಳಿದನು ಆಗ ನಾನು ಅವರ ಹತ್ತಿರ ಹಣ ಇರುವುದಿಲ್ಲ ನಾನು ಅವರಿಂದ ಹಣ ತೆಗೆದುಕೊಂಡು ಬರುವುದಿಲ್ಲ ಅಂತಾ ಹೇಳಿದಾಗ ರಂಡಿ ನೀನು ನನಗೆ ಎದುರುವಾದಿಸುತ್ತಿಯಾ?  ನಿನಗೆ ಬಹಳ ಸೊಕ್ಕು ಬಂದಿದೆ ನಿನಗೆ ಖಲಾಸ ಮಾಡಿಯೇ ಬಿಡುತ್ತೇನೆ ಅಂತಾ ಕಾಯ್ದ ಕಡಚಿಯನ್ನು ನನ್ನ ಎಡಗೈಗೆ ಹಚ್ಚಿ  ಕೈ ಸುಟ್ಟನು. ಮತ್ತೆ  ಕೈಯಿಂದ ಮೈಮೇಲೆ ಹೊಡೆ ಬಡೆ ಮಾಡಿ ನನಗೆ ಕುತ್ತಿಗೆ ಒತ್ತಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ನನ್ನ ಗಂಡ ನನಗೆ ಕೊಲೆ ಮಾಡಲು ಪ್ರಯತ್ನ ಪಟ್ಟಿ ಕುತ್ತಿಗೆ ಒತ್ತಿರುವದರಿಂದ ನಾನು ಬೇಹುಷ ಆಗಿ ಬಿದ್ದಿದ್ದು, ಸುಮಾರು ಎರಡು ಮೂರು ಗಂಟೆಗಳು ಕಳೆದ ನಂತರ ನನಗೆ ಪ್ರಜ್ಞೆ ಬಂದಾಗ ನನ್ನ ಅಣ್ಣ ಲಕ್ಷ್ಮೀಕಾಂತ ಇತನಿಗೆ ಫೋನ ಮಾಡಿ ವಿಷಯ ತಿಳಿಸಿದೆನು. ಇಂದು ಬೆಳಿಗ್ಗೆ ನನ್ನ ತಾಯಿ ಸರೋಜನಿ, ನನ್ನ ಅಣ್ಣ ಲಕ್ಷ್ಮೀಕಾಂತ ಇವರು ನಮ್ಮ ಮನೆಗೆ ಬಂದು ನನಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ನಿಂಗಪ್ಪ ಮಾಳೇನಹಳ್ಳಿ ಸಾಃ ಸದಾಶಿವ ನಗರ ಕಲಬುರಗಿ ಇವರು ದಿನಾಂಕ 20/01/2016 ರಂದು 7.10 ಪಿಎಂ ದಿಂದ 7.15 ಪಿಎಂ ಅವಧಿಯಲ್ಲಿ ಮನೆಗೆ ಹೋಗಲು ತಮ್ಮ ಕಾರ್ ನಂ. ಕೆಎ.32 ಎನ್.5968 ನೇದ್ದರಲ್ಲಿ ಕುಳಿತಿದ್ದಾಗ ಒಂದು ಬೈಕ್ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ವಿಳಾಸ ಕೇಳುವ ನೆಪದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಫಿರ್ಯಾದಿದಾರನು ತನ್ನ ಕಾರಿನಲ್ಲಿಟ್ಟಿದ್ದ ಕಪ್ಪು ಬಣ್ಣದ ಬ್ಯಾಗನ್ನು ದೋಚಿಕೊಳ್ಳುತ್ತಿರುವಾಗ ಫಿರ್ಯಾದಿದಾರನು ಸದರಿ ಬ್ಯಾಗನ್ನು ಹಿಡಿದುಕೊಂಡಾಗ ಅವರು ಅದನ್ನು ಕಿತ್ತುಕೊಂಡು ದೋಚಿಕೊಂಡು ಹೋಗಿರುತ್ತಾರೆ. ಸದರಿ ಬ್ಯಾಗಿನಲ್ಲಿ 1) ನಗದು ಹಣ 1,16,650/- ರೂ.  2) ಕೆನರಾ ಬ್ಯಾಂಕಿನ 04 ಚೆಕಬುಕ್ ಗಳು 3) ಎಚ್.ಡಿ.ಎಫ್.ಸಿ ಬ್ಯಾಂಕಿನ ಒಂದು ಬೆಕ್ ಬುಕ್ 4) ಕೆನರಾ ಬ್ಯಾಂಕಿನ ಕ್ರೆಡಿಟ್ ಕಾರ್ಡ 5) ವಾಹನ ನಂ ಕೆಎ.32 ಬಿ1247 ನೇದ್ದರ ಆರ್.ಸಿ ಬುಕ್ 6) ಡಿಎಲ್ & ಪ್ಯಾನ್ ಕಾರ್ಢ ಇತ್ಯಾದಿ ಕಾಗದ ಪತ್ರಗಳು ಇದ್ದವು ದೋಚಿಕೊಂಡು ಹೋದ ಹಣ ಹಾಗೂ ದಾಖಲಾತಿಗಳನ್ನು ಪತ್ತೆ ಮಾಡಿ, ದೋಚಿಕೊಂಡು ಹೋದ ಅಪರಿಚಿತ ಮೋಟಾರ್ ಸೈಕಲ ಸವರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 14/01/2016 ರಂದು ಮದ್ಯಾಹ್ನ 1.30 ಗಂಟೆ ಸುಮಾರಿಗೆ ಖರ್ಗೆ ಪೆಟ್ರೋಲ್ ಪಂಪ್ ಹತ್ತಿರ ರಾಯಲ್ ಎನಫೀಲ್ಡ ಮೋಟಾರ ಸೈಕಲ ನಂ. ಕೆಎ.32 ಇಬಿ. 8222 ನೇದ್ದನ್ನು ನಿಲ್ಲಿಸಿ ಕೆಲಸ ಮುಗಿಸಿಕೊಂಡು 2.30 ಪಿಎಂ ಕ್ಕೆ ಬಂದು ನೋಡಲಾಗಿ ಮೊಟಾರ ಸೈಕಲ ಇರಲಿಲ್ಲಾ. ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಕಳುವಾದ ನನ್ನ ರಾಯಲ್ ಎನಫೀಲ್ಡ ಮೋಟಾರ ಸೈಕಲ ನಂ. ಕೆ.32 ಇಬಿ 8222 ಅ.ಕಿ. 1,50,000/- ನೇದ್ದನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ಕ್ರಮ ಜರೂಗಿಸಬೇಕೆಂದು ಅಂತಾ ಶ್ರೀ ಸೈಯದ್ ಗೌಸ್ ಮೋಹಿಯುದ್ದೀನ್ ತಂದೆ ಸೈಯದ್ ಫರೀದ್ ಸಾಃ ಗಣೇಶ ನಗರ ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

21 January 2016

Kalburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-01-2016 ರಂದು ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದೆಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಸ್ವಲ್ಪ ದೂರು ಮರೆಯಲ್ಲಿ ನಿಂತು ನೋಡಲು ಲಕ್ಷ್ಮಿ ಗುಡಿ  ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ವಿಠ್ಠಲ ತಂದೆ ಜರನಪ್ಪ ನಾವಿ ಸಾ|| ಘತ್ತರಗಾ ಹಾ||| ಆಶ್ರಯ ಕಾಲೋನಿ ಅಫಜಲಪೂರ  ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 860/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 30-12-15 ರಂದು ರಾತ್ರಿ  ಮೃತ ಪ್ರಶಾಂತ ಇತನು ಮೋಟಾರ ಸೈಕಲ ನಂ ಕೆಎ-32-ಇಇ-5298 ನೇದ್ದನ್ನು ಎಸ ಪಿ ಸಾಹೇಬರ ಕಾರ್ಯಾಲಯ ಕಡೆಯಿಂದ ಸಿದ್ದಿಪಾಶಾ ದರ್ಗಾ ಕ್ರಾಸ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಎದುರಿನ ರೋಡ ಮೇಲೆ ಎಡ ಬಲ ಕಟ್ ಹೊಡೆದು ರೋಡ ಪಕ್ಕದಲ್ಲಿರುವ ಬೇವಿನ ಗಿಡಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಬಿದ್ದು ತೆಲೆಯ ಎದುರುಗಡೆ ರಕ್ತಗಾಯ ಬಾಯಿಗೆ ಪೆಟ್ಟು ಬಿದ್ದು ತುಟಿಗಳಿಗೆ ಗದ್ದಕ್ಕೆ ಮೂಗಿಗೆ ರಕ್ತಗಾಯ ಹಾಗೂ ಕುತ್ತಿಗೆಗೆ ಗುಪ್ತಪೆಟ್ಟು ಆಗಿ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ಸೇರಿಕೆಯಗಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಉಪಚಾರ ಮಾಡಿಕೊಂಡು ಹಣದ ಅಡಚಣೆ ಆದ ಕಾರಣ ದಿನಾಂಕ 18-01-2016 ರಂದು ಬಸವೇಶ್ವರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮಹಾಗಾಂವ ಗ್ರಾಮದಲ್ಲಿರುವ ಮೃತನ ಸಂಬಂದಿ ಕಾಶಪ್ಪಾ ಇವರ ಮನೆಗೆ ಹೋದಾಗ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ರಾತ್ರಿ 10-00 ಗಂಟೆಗೆ ಮನೆಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ಶ್ರೀ ರವಿ ತಂದೆ ನಿಂಗಪ್ಪಾ ತಳಕೇರಿ ಸಾ:ತೊನ್ಸನಳ್ಳಿ(ಟಿ) ಇವರು ದಿನಾಂಕ:20/01/16  ರಂದು 11 ಎಎಂಕ್ಕೆ ಟೆಂಗಳಿ ಗ್ರಾಮಕ್ಕೆ ಖಾಸಗಿ ಕೆಲಸದ ನಿಮಿತ್ಯ ಹೋಗಿ ಬರಲೆಂದು ಟೆಂಗಳಿ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗಲೆಂದು ಟೆಂಗಳಿ ಬಸ್ಟ್ಯಾಂಡ ಹತ್ತಿರ 1-30 ಪಿಎಂದ ಸುಮಾರಿಗೆ ಬಂದು ನಿಲಲ್ಲು ನಮ್ಮ ಗ್ರಾಮದ ಪರಿಚಯದವನಾದ ಗುಡುಸಾಬ ತಂದೆ ಹುಸೇನಸಾಬ ಮುಲ್ಲಾ ಇವರೂ ಸಹ ಊರಿಗೆ ಹೋಗುವ ಸಲುವಾಗಿ ಬಸ್ ಕಾಯುತ್ತಾ ನಿಂತಿದ್ದು ಅಷ್ಟರಲ್ಲಿ ಕಾಳಗಿ ಕಡೆಯಿಂದ ಒಂದು ಮ್ಯಾಕ್ಸಿಕ್ಯಾಬ ಬಂತು. ನಾನು ಮತ್ತು ನಮ್ಮ ಗ್ರಾಮದ ಗುಡುಸಾಬ ಇಬ್ಬರೂ ಊರಿಗೆ ಹೋಗಲು ಹತ್ತಿದೇವು. ಮ್ಯಾಕ್ಸಿಕ್ಯಾಬ ಟೆಂಗಳಿ ಗ್ರಾಮದಿಂದ ಹೊರಟು 2ಕಿ.ಮೋ ದಾಟಿ ಸ್ವಲ್ಪ ದೂರದಲ್ಲಿ ಮ್ಯಾಕ್ಸಿಕ್ಯಾಬ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ತನ್ನ ವಾಹನವನ್ನು ಬಲ ಭಾಗಕ್ಕೆ ಕಟ್ ಮಾಡಲು ಹೋಗಿ ಧನಂಜಯ ಕುಲಕರ್ಣಿ ಇವರ ಹೋಲದ ಸೀಮಾಂತರದ ರೋಡಿನ ಮೇಲೆ ಪಲ್ಟಿ ಮಾಡಿಸಿದ ಪ್ರಯುಕ್ತ ಒಳಗಡೆ ಕುಳಿತ್ತಿದ್ದ ಪ್ರಯಾಣಿಕರಿಗೆ ಹಾಗೂ ನನಗೆ ಮ್ಯಾಕ್ಸಿಕ್ಯಾಬಿನ ರಾಡ ಹಾಗೂ ಸೀಟಗಳು ಹತ್ತಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು ಗಾಭರಿಗೊಂಡು ಮ್ಯಾಕ್ಸಿಕ್ಯಾಬನ ಗ್ಲಾಸ ಒಡೆದು ಒಬ್ಬೊಬ್ಬರಾಗಿ ಮ್ಯಾಕ್ಸಿಕ್ಯಾಬಿನಿಂದ ಹೊರಗಡೆ ಬಂದೇವು. ನನ್ನ ಜೊತೆ ಹೊರಟ ನಮ್ಮ ಗ್ರಾಮದ ಗುಡುಸಾಬ ಮುಲ್ಲಾ ಇವರಿಗೆ ನೋಡಲು ಮ್ಯಾಕ್ಸಿಕ್ಯಾಬಿನ ಡೋರಿನ ಒಳಗಡೆ ಸಿಕ್ಕಿ ಹಾಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮ್ಯಾಕ್ಸಿಕ್ಯಾಬಿನಲ್ಲಿದ ನನ್ನಂತೆ ಕೇಲವು ಜನರಿಗೆ ಗುಪ್ತಗಾಯ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು ಇರುತ್ತದೆ. ನಂತರ ನಾನು ಜಿವಿಆರ ಅಂಬುಲೇನ್ಸಕ್ಕೆ ಫೋನ ಮಾಡಿ ಸ್ಥಳಕ್ಕೆ ಕರೆಯಿಸಿ ಎಲ್ಲರಿಗೂ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಕಳುಹಿಸಿಕೊಟ್ಟೇನು. ರಸ್ತೆ ಅಪಘಾತ ಪಡಿಸಿದ ಮ್ಯಾಕ್ಸಿಕ್ಯಾಬ ನಂಬರ ನೋಡಲು ಕೆಎ-38 945 ಇರುತ್ತದೆ. ಸದರಿ ವಾಹನದ ಚಾಲಕನು ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ಭೀಮಶ್ಯಾ ಸಾ : ಕಟ್ಟೋಳ್ಳಿ ಇವರು ನ್ಯಾಯಾಲಯದ ಖಾಸಗಿ ದೂರು ಮಹಾಗಾಂವ ಪೊಲೀಸ್ ಠಾಣೆ ಗುನ್ನೆ ನಂ:94/2014 ನೇದ್ದರಲ್ಲಿ ಫಿರ್ಯಾದಿದಾರರ ಸರ್ವೆ ನಂ:94/1 ನೇದ್ದರಲ್ಲಿ 15 ಎಕರೆ 1 ಗುಂಟೆ ಜಮೀನಿನ ಮಾಲೀಕರಿದ್ದು ಈ ಪ್ರಕರಣದ ಆರೋಪಿ ನಂ:1 ರಿಂದ 4 ರವರು ಜಮೀನು ಪಾಲು ಮಾಡುವಾಗ ಫಿರ್ಯಾದಿಗೆ ಗೊತ್ತಿರದಂತೆ ಹಿಸ್ಸಾ ಬದಲಾವಣೆ ಮಾಡಲು ಅರ್ಜಿ ಸಲ್ಲಿಸಿದ್ದು ಇದೇ ಪ್ರಕರಣದಲ್ಲಿ 5 ರಿಂದ 7 ಆರೋಪಿಗಳು ಕಂದಾಯ ಅಧಿಕಾರಿಗಳಿದ್ದು ಆರೋಪಿ 1 ರಿಂದ 4 ರ ಇವರ ಯಾವುದೋ ಶಕ್ತಿಗೆ ಬಲಿಯಾಗಿ ಜಮೀನಿನ ಸರ್ವೆ ನಂಬರನ ಹಿಸ್ಸಾಗಳು ಅದಲು ಬದಲು ಮಾಡಿರುತ್ತಾರೆ. ಫಿರ್ಯಾದಿದಾರರಿಗೆ ಸರಕಾರಿ ಅಧಿಕಾರಿಗಳು ಹಾಗು ತನಿಖಾಧಿಕಾರಿಗಳು ಮೋಸ, ವಂಚನೆ ಮಾಡುವ ಉದ್ದೇಶದಿಂದ ಸುಳ್ಳು ಮಾಹಿತಿ ಹಾಗು ಸುಳ್ಳು ದಸ್ತಾವೇಜು ಬರೆದು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದರಿಂದ ಇವರ ಮೇಲೆ ಖಾಸಗಿ ಫಿರ್ಯಾದಿ ಮಹಾಗಾಂವ ಪೊಲೀಸ್ ಠಾಣೆ ಗುನ್ನೆ ನಂ:98/2015 ನೇದ್ದರಲ್ಲಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ. ಗುನ್ನೆ ನಂ:99/2014 ಮತ್ತು 98/2015 ರಲ್ಲಿನ ತನಿಖಾಧಿಕಾರಿಗಳಾಗಿದ್ದ ಶ್ರೀ ವಿಜಯ ಪಿ. ಅಂಚಿ ಪೊಲೀಸ್ ಉಪಾಧೀಕ್ಷಕರು ಗ್ರಾಮೀಣ ಉಪವಿಭಾಗ ಕಲಬುರಗಿ ಇವರು ಈ ಎರಡು ಗುನ್ನೆಯಲ್ಲಿ ಆರೋಪಿಗಳು ಫೀದಿದಾರರ ಜಮೀನನ್ನು ಅಕ್ರಮವಾಗಿ ಪ್ರವೇಶ ಮಾಡಿಲ್ಲ. ಹಾಗು ಯಾವುದೇ ಕಂದಾಯ ಅಧಿಕಾರಿಗಳು ಹಾಗು ಇತರೆ ಅಧಿಕಾರಿಗಳು ಯಾವುದೇ ನಕಲಿ ಮತ್ತು ಸುಳ್ಳು ದಆಖಲೆಗಳು ಬರೆದಿಲ್ಲ, ಸೃಷ್ಟಿ ಮಾಡಿಲ್ಲ, ಅನುಸೂಚಿ ಜಾತಿ ಸದಸ್ಯರ ಮೇಲೆ ದೌರ್ಜನ್ಯವೆಸಗಿಲ್ಲವೆಂದು ಸುಳ್ಳು ವರದಿ ಸಲ್ಲಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಚೌಕ ಠಾಣೆ : ಶ್ರೀ ಅಂಬಾರಾಯ ತಂದೆ ಸಿದ್ದಪ್ಪ ಗೊಂಗಡೆ ಸಾ: ಪ್ಲಾಟ ನಂ. 27 ಮಾಹಾದೇವ ನಗರ ಶೇಖ ರೋಜಾ  ಕಲಬುರಗಿ ಇವರ ಅಣ್ಣನಾದ ಶ್ರೀ ಅಣ್ಣಪ್ಪ ತಂದೆ ಸಿದ್ದಪ್ಪ ಗೊಂಗಡೆ ವ: 63 ಉ: ನಿವೃತ್ತ ನೌಕರ ಇವರು ಮನೆಯಿಂದ ಕಟ್ಟಿಂಗ ಮಾಡಿಸಲು ಹೋಗಿ ಬರುತ್ತೇನೆ ಅಂತಾ ಮನೆಯಿಂದ ದಿನಾಂಕ 18/01/2016 ರಂದು ಮುಂಜಾನೆ 8 ಗಂಟೆಗೆ ಹೋದವರು ಇನ್ನೂ ಬಂದಿಲ್ಲಾ ಆದ ಕಾರಣ ದಯಾಳುಗಳಾದ ತಾವು ನನ್ನ ಅಣ್ಣನ್ನು ಹುಡುಕಿ ಕೊಡಬೇಕಾಗಿ ವಿನಂತಿ. ನನ್ನ ಅಣ್ಣ ಮಾನಸಿಕವಾಗಿ ಅಸ್ವಸ್ಥನಾಗಿರುತ್ತಾನೆ. ಮೈಮೇಲೆ ಬಿಳಿಯ ಚಕ್ಸ ಶರ್ಟ, ಕರಿಯ ಪ್ಯಾಂಟ, ಕರಿಯ ಕ್ಯಾನವಸ್ ಬೂಟ ಧರಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 January 2016

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 18.01.2016 ರಂದು ಜೇವರಗಿ ಪಟ್ಟಣದ ಬಿ.ಸಿ.ಮ್ ವಸತಿ ಗೃಹದ ಹತ್ತಿರ ಬಿಲಾಲ ಕಾಲೋನಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ವಿಧ್ಯಾಸಾಗರ ಎ.ಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ 5 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1. ಮಲ್ಲು @ ಮಲ್ಲಿಕಾರ್ಜುನ ತಂದೆ ಈರಣ್ಣ ತಳವಾರ ಸಾ : ಬುಟ್ನಾಳ   2. ಮಹ್ಮದ್ ಪಟೇಲ್ ತಂದೆ ಖಾಸೀಂ ಪಟೇಲ್ ಸಾ : ಜೇವರಗಿ  3. ಸಿದ್ದಣ್ಣಗೌಡ ತಂದೆ ಬಸಣ್ಣಗೌಡ ಬುಟ್ನಾಳ ಸಾ : ಬುಟ್ನಾಳ  4. ಸುಲ್ತಾನ ತಂದೆ ಅಮೀನಸಾಬ್ ಇಜೇರಿ ಸಾ : ಕಟ್ಟಿ ಸಂಗಾವಿ  5. ಭೀಮರಾಯಗೌಡ ತಂದೆ ಸಂಗಣ್ಣಗೌಡ ಪೊಲೀಸ್ ಪಾಟೀಲ ಸಾ : ಬುಟ್ನಾಳ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 4.010/- ರೂ ಗಳು ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ನನ್ನ ಗಂಡ ಗಾಲಿಬಸಾಬ ಈತನು ಈಗ ಸುಮಾರು 7 ತಿಂಗಳಿಂದ ನಮಗೆ ಪರಿಚಯದವರಾದ ನಮ್ಮೋರಿನ ಮರೆಪ್ಪಾ ತಂದೆ ಶಿವಶರಣಪ್ಪಾ ಬರಾಟಿ ಇವರು ತಮ್ಮ ಒಕ್ಕಲತನ ಕೆಲಸಕ್ಕೆ ಮಲ್ಲಿಕಾರ್ಜುನ ಸ್ವಾಮಿ ಮಳಖೇಡ ಇವರ ಕಡೆಯಿಂದ ಫರ್ಗೊಶನ್ ಕಂಪನಿಯ ಟ್ರಾಕ್ಟರ್ ನಂಬರ ಕೆಎ-32 ಟಿಎ-0761 ನೇದ್ದನ್ನು ಖರೀದಿಸಿಕೊಂಡು ಸದರಿ ಟ್ರಾಕ್ಟರ ಮೇಲೆ ನನ್ನ ಗಂಡ ಚಾಲಕ ಅಂತಾ ಕೆಲಸ ನಿರ್ವಹಿಸಿಕೊಂಡಿರುತ್ತಾನೆ. ಹೀಗಿದ್ದು ಇಂದು ದಿನಾಂಕ-18/01/2016 ರಂದು ಬೆಳ್ಳಿಗೆ 11 ಗಂಟೆ ಸುಮಾರಿಗೆ ನನ್ನ ಗಂಡ ಚಲಾಯಿಸುತ್ತಿದ್ದ ಟ್ರಾಕ್ಟರ ಮಾಲಿಕರಾದ ನಮ್ಮೋರಿನ ಮರೆಪ್ಪಾ ತಂದೆ ಶಿವಶರಣಪ್ಪಾ ಇವರು ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ಹೇಳಿದ್ದೇನೆಂದರೆ ಟ್ರಾಕ್ಟರ ತೆಗೆದುಕೊಂಡು ನಡಿ ನಮ್ಮ ಹೊಲದಲ್ಲಿ ಟ್ರಾಕ್ಟರ ನೆಗಿಲು ಹೊಡೆಯುವುದಿದೆ ಅಂತಾ ಹೇಳಿ ನನ್ನ ಗಂಡ ಮತ್ತು ಟ್ರಾಕ್ಟರ ಮಾಲಿಕರು ತಮ್ಮ ಟ್ರಾಕ್ಟರ ತೆಗೆದುಕೊಂಡು ಹೊಲಕ್ಕೆ ಹೋದರು. ನಂತರ ನಾನು ಮತ್ತು ನನ್ನ ಮಕ್ಕಳು ಮದ್ಯಹ್ನ 2-30 ಪಿ.ಎಮ್ ಕ್ಕೆ ಮನೆಯಲ್ಲಿದ್ದಾಗ ಟ್ರಾಕ್ಟರ ಮಾಲಿಕರಾದ ಮರೆಪ್ಪಾ ಇವರು ನಮ್ಮ ಮನೆಗೆ ಬಂದು ವಿಷಯ ತಿಳಿಸಿದೆನೆಂದರೆ ನಿನ್ನ ಗಂಡನಿಗೆ ನಮ್ಮ ದಂಡೋತಿ ಗ್ರಾಮದ ಸಿಮಾಂತರದಲ್ಲಿದ ನಮ್ಮ ಹೊಲದಲ್ಲಿ ಮದ್ಯಹ್ನ ವೇಳೆಗೆ ಟ್ರಾಕ್ಟರ ನೆಗಿಲು ಹೊಡೆದುಕೊಂಡು ನಂತರ ನಮ್ಮ ಹೊಲದ 2-3 ಹೊಲ ಬಿಟ್ಟು ರಶೀದ ಯಾದಗಿರ ಇವರ ಹೊಲದ ಸಿಮಾಂತರದಲ್ಲಿರುವ ಕಾಗಿಣಾ ಹಳ್ಳಕ್ಕೆ ಹೋಗಿ ನೀರು ತೆಗೆದುಕೊಂಡು ಬರುತ್ತೇನೆ ಅಂತಾ ಟ್ರಾಕ್ಟರ ಚಲಾಯಿಸಿಕೊಂಡು ಹೋದನು. ನಂತರ ಅಲ್ಲೆ ಹಳ್ಳದ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಜಗನಾಥ ತಂದೆ ನಾಗಣ್ಣಾ ಇವರು ನನಗೆ ಓಡಿ ಬಂದು ತಿಳಿಸಿದೆನೆಂದರೆ. ಗಾಲಿಬಸಾಬ ಈತನು ಟ್ರಾಕ್ಟರ ಸಮೇತ ಹಳ್ಳದ ದಡೆಯ ಮೇಲಿಂದ ಕೆಳಗೆ ಬಿದ್ದು ಇಂಜನಲ್ಲಿ ಸಿಕ್ಕಾಕ್ಕಿಕೊಂಡು ಒದ್ದಾಡುತ್ತಿದ್ದಾನೆ ಆತನಿಗೆ ಹೊರಗಡೆ ತಗೆಯುವುದಿದೆ ಬೇಗನೆ ನಡಿ ಅಂತಾ ತಿಳಿಸಿದ ಮೇರಗೆ ನಾವುಬ್ಬರೂ ಸೇರಿ ಹಳ್ಳಕ್ಕೆ ಹೋಗಿ  ನೋಡಿ ಗಾಲಿಬಸಾಬ ಈತನಿಗೆ ಇಂಜನ ಒಳಗಡೆಯಿಂದ ಹೊರಗೆ ತೆಗೆಯಲು ಸದರಿಯವನಿಗೆ ಬಾಯಿ ಹಾಗೂ ಮುಗಿಗೆ ಭಾರಿರಕ್ತಗಾಯವಾಗಿದ್ದು ದೇಹದ ಇತರ ಕಡೆ ತರಚಿದ ಗಾಯಗಳಾಗಿದ್ದು ಚಿಕಿತ್ಸೆ ಕುರಿತು ನಾನು ಮತ್ತು ಜಗನಾಥ ಇಬ್ಬರೂ ಕೂಡಿ ಒಂದು ಮೋಟಾರ ಸೈಕಲ ಮೇಲೆ ಹಾಕಿಕೊಂಡು ದಂಡೋತಿ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ತೆಗೆದುಕೊಂಡು ಬರುತ್ತಿರುವಾಗ ಮಾರ್ಗಮದ್ಯದಲ್ಲಿ ಗಾಲಿಬಸಾಬ ಈತನು ಮೃತ ಪಟ್ಟಿದ್ದು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಗೊಂಡು ನನ್ನ ಮಕ್ಕಳಾದ ಶಮಶೇರ ಮತ್ತು  ಆಶಪಾಕ್ ಹಾಗೂ ನನ್ನ್ ಮಾವ ಮಹೆಬೂಬ ಅಲಿ , ಭಾವ ಮಹ್ಮದ ಹನೀಫ್ ಇವರಿಗೆ ತಿಳಿಸಿ ನಾವೆಲ್ಲರೊ ಆಸ್ಪತ್ರೆಗೆ ಹೋಗಿ ನನ್ನ ಗಂಡನಿಗೆ ನೋಡಲು ಬಾಯಿ ಹಾಗೂ ಮೂಗಿಗೆ ಭಾರಿರಕ್ತಗಾಯವಾಗಿ ಇತರ ಕಡೆ ತರಚಿದ ಗಾಯವಾಗಿ ಮೃತ ಪಟ್ಟಿದ್ದು ನಿಜವಿರುತ್ತದೆ ಅಂತಾ ಶ್ರೀಮತಿ ಜರಿನಾಬೇಗಂ ಗಂಡ ಗಾಲಿಬಸಾಬ ಸಾ: ದಂಡೋತಿ ತಾಃ ಚಿತ್ತಾಪುರ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕವಾಗಿ ಬೆಂಕಿ ತಗುಲಿ ಮಹಿಳೆ ಸಾವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ :- 17-01-2016 ರಂದು ಸಾಯಂಕಾಲ ನಮ್ಮ ಅಕ್ಕನ ಮಗನಾದ ನಾಗರಾಜ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ನಮ್ಮ ತಾಯಿ ಮನೆಯಲ್ಲಿ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಸೀರಿಯ ಸೇರಗಿಗೆ ಬೆಂಕಿ ತಗುಲಿ ಮೈ ಸುಟ್ಟಿರುತ್ತದೆ ಈಗ ಚಿಕಿತ್ಸೆಗಾಗಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಬಂದು ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತೇವೆ ಅಂತ ತಿಳಿಸಿದರ ಮೇರೆಗೆ ನಾನು ಮತ್ತು ನನ್ನ ತಮ್ಮನಾದ ಶಿವರಾಜ ಇಬ್ಬರು ಆಸ್ಪತ್ರೆಗೆ ಹೋಗಿ ನಮ್ಮ ಅಕ್ಕಳಿಗೆ ನೋಡಲಾಗಿ ನಮ್ಮ ಅಕ್ಕಳ ಮೈ ಸಂಪೂರ್ಣ ಸುಟ್ಟಿದ್ದು ಸದರಿ ಘಟನೆ ಬಗ್ಗೆ ನಮ್ಮ ಅಕ್ಕಳಿಗೆ ವಿಚಾರಿಸಿದಾಗ ತಿಳಿಸಿದ್ದೇನೆಂದರೆ ನಾನು ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದಿರುವಾಗ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ನನ್ನ ಸಿರೆಯ ಸೇರಗಿಗೆ ಆತಸ್ಮಿಕವಾಗಿ ಬೆಂಕಿ ಹತ್ತಿ ಸದರಿ ಬೆಂಕಿ ಒಮ್ಮೆಲೆ ನನ್ನ ಮೈಗೆ ಹತ್ತಿದಾಗ ನಾನು ಚಿರಾಡುತ್ತಾ ಮನೆಯಿಂದ ಬಂದಾಗ ಚನ್ನಣಗೌಡ ಪಾಟೀಲ, ಚನ್ನಬಸಪ್ಪ ಶೇಖದಾರ ಇವರು ಬಂದು ಬೆಂಕಿ ನಂದಿಸಿದರು ನಂತರ ವಿಷಯ ತಿಳಿದು ನಾಗರಾಜ ಬಸವರಾಜ ಬಂದು ಎಲ್ಲರು ಕೂಡಿ ನನಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿರುತ್ತಾರೆ ಅಂತ ತಿಳಿಸಿದ್ದು ನಂತರ ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ  18-01-2016 ರಂದು ಬೆಳಗಿನ ಜಾವ 05:00 ಗಂಟೆಗೆ ಮೃತಪಟ್ಟಿರುತ್ತಾರೆ. ಅಂತಾ ಶ್ರೀ ವಿಜಯಕುಮಾರ ತಂದೆ ಮಾಣಿಕರಾವ ಪಾಟೀಲ ಸಾ : ದೇಸಾಯಿ ಕಲ್ಲುರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.