POLICE BHAVAN KALABURAGI

POLICE BHAVAN KALABURAGI

17 November 2015

KALABURAGI DISTRICT REPORTED CRIMES

ವರದಕ್ಷಿಣಿ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ ಠಾಣೆ : ದಿನಾಂಕ: 16.11.2015 ರಂದು ಶ್ರೀಮತಿ ಜರೀನಾ ಗಂಡ   ಸ್ಮಾಯಿಲ್ ಸಾಬ ಖಾದ್ರಿ  ಸಾ: ಹರನೂರ ತಾ:ಜೆವರ್ಗಿ ಜಿ: ಕಲಬುರಗಿ ಹಾ:ವ: ಖಾಜಾ ಕಾಲೋನಿ ಜೇವರ್ಗಿ  ಇವರು ಠಾಣೆ ಹಾಜರಾಗಿ ಸುಮಾರು 6 ವರ್ಷಗಳ ಹಿಂದೆ ಹರನೂರ ಗ್ರಾಮದ ಇಸ್ಮಾಯಿಲ್ ಸಾಬ ತಂದೆ ಅಲ್ಲಾವುದ್ದಿನ್ ಸಾಬ ಖಾದ್ರಿ ಇವರ ಜೊತೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ವರದಕ್ಷಿಣೆ ರೂಪದಲ್ಲಿ 25 ಸಾವಿರ ರೂಪಾಯಿ ನಗದು ಹಣ 3 ತೊಲೆ ಬಂಗಾರ ಮತ್ತು ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು. ನನಗೆ ಒಂದು ಹೆಣ್ಣು, ಒಂದು ಗಂಡು ಮಗು ಇದ್ದು. ಮದುವೆ ಆದಾಗಿನಿಂದ ನನ್ನ ಗಂಡ ಇಸ್ಮಾಯಿಲ್ ಸಾಬನು ನನಗೆ ತವರು ಮನೆಯಿಂದ 2 ಲಕ್ಷ ರೂಪಾಯಿ ಮತ್ತು 2 ತೊಲೆ ಬಂಗಾರ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿದ್ದು. ನನ್ನ ನಾದಿನಿ ಫರೀದಾಬೇಗಂ ಅತ್ತೆಯಾದ ಸೋಫನಬಿ ಮಾವ ಅಲ್ಲಾವುದ್ದೀನ, ನೆಗೆಣಿ ನಸೀಮಾ ಇವರು ಕೂಡ 2 ಲಕ್ಷ ರೂಪಾಯಿ  2 ತೊಲೆ ಬಂಗಾರ ತೆಗೆದುಕೊಂಡು ಬಂದರೆ ಮಾತ್ರ ನಮ್ಮ ಮನೆಯಲ್ಲಿ ನಿಗೆ ಜಾಗವಿದೆ ಇಲ್ಲವಾದರೆ ನಿನಗೆ ಜೀವ ಸಹಿತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನನ್ನ ಗಂಡ ನನಗೆ ಗೊತ್ತಿಲ್ಲದ ಹಾಗೆ ಮತ್ತೊಂದು ಮದುವೆ ಸಹ ಕೂಡ ಮಾಡಿಕೊಂಡಿರುತ್ತಾನೆ. ದಿ. 26-07-2015 ರಂದು 11 ಗಂಟೆಯ ಸುಮಾರಿಗೆ ನಾನು ನನ್ನ ಎರಡು ಮಕ್ಕಳು ಹಾಗೂ ನನ್ನ ತಂದೆ ಸಿಕಂದರ ರವರೊಂದಿಗೆ ನನ್ನ ಗಂಡನ ಮನೆಯಾದ ಹರನೂರ ಗ್ರಾಮಕ್ಕೆ ಹೋದಾಗ ಆಗ ಮೇಲೆ ನಮೂದಿಸಿದವರರೆಲ್ಲರೂ ಕೂಡಿ ನೀನು ನಮ್ಮ ಮನೆಗೆ ಏಕೆ ಬಂದಿದ್ದಿ ಒಂದು ವೇಳೆ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ 2 ಲಕ್ಷ ರೂಪಾಯಿ 2 ತೊಲೆ ಬಂಗಾರ ತಂದರೆ ನಿನಗೆ ನಮ್ಮ ಇಟ್ಟುಕೊಳ್ಳುತ್ತೇವೆ. ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಬೈದು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಾನು ಗಂಡನ ಜೊತೆಗೆ ಜೀವನ ಮಾಡಬೇಕು ಅಂತಾ ಅವರು ಕೊಟ್ಟ ಹಿಂಸೆಯನ್ನು ಸಹಿಸಿಕೊಂಡು ಬಂದಿರುತ್ತೇನೆ ಇಷ್ಟು ದಿವಸ ಕಳೆದರು ಕೂಡ ಅವರು ನನ್ನೊಂದಿಗೆ ಜೀವನ ಮಾಡಲು ಸಿದ್ದವಿಲ್ಲ ಆದ್ದರಿಂದ ನನಗೆ ಮದುವೆ ಆದಾಗಿನಿಂದ ತವರು ಮನೆಯಿಂದ ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟ ನನ್ನ ಗಂಡ ಹಾಗೂ ಅವರ ಮನೆಯವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ

14 November 2015

Kalaburagi District Reported Crimes

ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 13-11-2015 ರಂದು ಬೇಳಿಗ್ಗೆ 10 ಗಂಟೆಗೆ ನಾನು ಮನೆಯಲ್ಲಿದ್ದಾಗ ಯಾಳಗಿ ಗ್ರಾಮದ ನಬಿಸಾಬ ಎಂಬುವವರು ನಮ್ಮ ಮನೆಗೆ ಫೊನ್ ಮಾಡಿ ತಿಳಿಸಿದ್ದೆನೆಂದರೆ ಕುಳಗೇರಾ ಸೀಮೇಯಲ್ಲಿರುವ ಬಸವರಾಜ ಸಜ್ಜನ ಎಂಬುವವರ ಹೊಲದ ಬಾಂದಿಗೆ ಇರುವ ಬೇವಿನ ಗಿಡಕ್ಕೆ ನಿಮ್ಮ ತಂದೆ ತನ್ನ ಉಟ್ಟ ಪಾಲಿಸ್ಟರ್ ದೋತರದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ. ಅಂತಾ ತಿಳಿಸಿದ ಕೂಡಲೆ ಗಾಭರಿಗೊಂಡು ನಾನು ನನ್ನ ಗಂಡ ಸುಭಾಷ್ಚಂದ್ರ ಮಾವ ತಮ್ಮಣ್ಣ ರಾಮಪೂರಕರ್ ಅತ್ತೆಯಾದ ಶಾಂತಬಾಯಿ ಮತ್ತು ನನ್ನ ತಂಗಿಯಂದಿರರು ಕೂಡಿಕೊಂಡು ಕುಳಿಗೇರಾ ಸಿಮಾಂತರದ ಬಸವರಾಜ ಸಜ್ಜನ ಎಂಬುವವರ ಹೊಲಕ್ಕೆ ಬಂದು ನೋಡಲಾಗಿ ಹೊಲದ ಬಾಂದಿಗೆ ಇರುವ ಬೇವಿನ ಗಿಡಕ್ಕೆ ತನ್ನ ಉಟ್ಟ ದೋತರದಿಂದ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ನನ್ನ ತಂದೆಯಾದ ಸಿದ್ದಪ್ಪ ಇತನು ಖಾಸಗಿಯಾಗಿ ಕೃಷಿ ಸಾಲ ಮತ್ತು ನನ್ನ ತಂಗಿಯ ಮದುವೆಗೆ ಸಾಲ ಮಾಡಿಕೊಂಡಿದ್ದೂ ಸಾಲ ಹೇಗೆ ತೀರಿಸುವದು ಅಂತಾ ಜೀವನದಲ್ಲಿ ಜಿಗುಪ್ಸೆ ಹೊಂದಿ ನಿನ್ನೆ ದಿನಾಂಕ 12-11-2015 ರಂದು ಸಾಯಂಕಾಲ 6 ಪಿ ಎಂ ದಿಂದ ದಿನಾಂಕ 13-11-2015 ರಂದು ಬೇಳಿಗ್ಗೆ 8 ಗಂಟೆಯ ಅವದಿಯಲ್ಲಿ ನನ್ನ ತಂದೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆ. ಅಂತಾ ಶ್ರೀಮತಿ ರೇಣುಕಾ ಗಂಡ ಸುಭಾಶ್ಚಂದ್ರ ರಾಮಪೂರಕರ್ ಸಾ|| ಬಸವೆಶ್ವರ ನಗರ  ಶಹಾಪೂರ ಜಿ|| ಯಾದಗಿರ  ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಅನಿಲ ತಂದೆ ಧೇನು ಜಾಧವ ಸಾ//ಭರತನಗರ ತಾಂಡಾ ಸೇಡಂ ರೋಡ ಕಲಬುರಗಿ ಇವರ ಮಗಳಾದ ಆರತಿ ವಯ;16ವರ್ಷ ಇವಳು ದಿನಾಂಕ 23-10-2015 ರಂದು ಬೆಳಗ್ಗೆ 9-30 ಗಂಟೆಯ ಸುಮಾರಿಗೆ ಮನೆಯಿಂದ ಹೊರಗಡೆ ಹೋದವಳು ರಾತ್ರಿಯಾದರು ಮರಳಿ ಮನೆಗೆ ಬಂದಿರುವುದಿಲ್ಲಾ ಅಲ್ಲಿಂದ ಇಲ್ಲಿಯವರೆಗೆ ,ನಾವು ಎಲ್ಲಾ ಕಡೆ ಹುಡುಕಾಡಿದರೂ ನನ್ನ ಮಗಳು ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.