POLICE BHAVAN KALABURAGI

POLICE BHAVAN KALABURAGI

07 November 2015

KALABURAGI DISTRICT REPORTED CRIMES

ಕೊಲೆ ಯತ್ನ ಪ್ರಕರಣ:
ಚೌಕ ಪೊಲೀಸ್ ಠಾಣೆ : ಸತೀಶ ತಂದೆ ನರಸಿಂಗರಾವ ಪವಾರ ಸಾ: ಅಯ್ಯರ ವಾಡಿ ಕಲಬುರಗಿ ರವರು ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತಾನು ಪೆಂಟಿಂಗ ಮತ್ತು ಬಾಳೆ ದಿಂಡು & ಕಬ್ಬಿನ ವ್ಯಾಪಾರ ಮಾಡುತ್ತಿದ್ದು ಸಂಗಮ ಟಾಕೀಜ ಹತ್ತಿರ ಖಾನಾವಳಿ ಇಟ್ಟುಕೊಂಡಿರುವ  ಅಪ್ಪುಶಾ @ ಬಂಡಯ್ಯಾ ಸ್ವಾಮಿ ಸಾ: ಮಾಹಾದೇವ ನಗರ ಕಲಬುರಗಿ ಇತನು ನನಗೆ ಪರಿಚಯ ಇದ್ದು ಕಳೆದ 5-6 ತಿಂಗಳ ಹಿಂದೆ ಸಂಗಮ ಟಾಕೀಜ ಹತ್ತಿರ ಅಪ್ಪುಶಾ @ ಬಂಡಯ್ಯಾ ಸ್ವಾಮಿ ಈತನಬು ನನಗೆ ವಿನಾಃಕಾರಣ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಪಡಿಸಿ ಜೀವ ಭಯಹಾಕಿದ್ದು ನಾನು ಅಂದು ಯಾರಿಗೂ ಹೇಳದೇ ಮತ್ತು ಪೊಲಿಸ್ ಠಾಣೆಯಲ್ಲಿ ದೂರು ಸಹ ಕೊಟ್ಟಿರುವುದಿಲ್ಲಾ ಅಂದಿನಿಂದ ಇತನು ನನಗೆ ಆಗಾಗ್ಗೆ ಹೆದರಿಸುತ್ತಾ ಬಂದಿರುತ್ತಾನೆ.ಹೀಗಿದ್ದು ದಿನಾಂಕ 06/11/2015 ರಂದು ಸೂಪರ ಮಾರ್ಕೇಟ ಹನುಮಾನ ಗುಡಿಯ ಹತ್ತಿರ ರಸ್ತೆಯ ಬದಿಯಲ್ಲಿ ಬಾಳೆ ದಿಂಡು ಮತ್ತು ಕಬ್ಬಿನ ವ್ಯಾಪಾರ ಮಾಡುತ್ತಾ ಅಂದಾಜು ರಾತ್ರಿ 7-30 ಗಂಟೆ ಸುಮಾರಿಗೆ ಅಪ್ಪು ಶಾ @ ಬಂಡಯ್ಯಾ ಸ್ವಾಮಿ ಈತನು ದ್ವಿಚಕ್ರ ವಾಹನ ಮೇಲೆ ಬಂದು ಸ್ವಲ್ಪ ದೂರದಲ್ಲಿ ನಿಂತುಕೊಂಡು ನನಗೆ ನೋಡಿ ಅವಾಚ್ಯ ಶಬ್ದಗಳಿಂದ ಬಯ್ದ ಕಾರಣ ನನಗೇಕೆ ಈ ರೀತಿ ಬಯ್ಯುತ್ತಿ ಎಂದು ಕೇಳಿದಾಗ ತನ್ನ ಹತ್ತಿರ ಇದ್ದ ಚಾಕು ತೆಗೆದುಕೊಂಡು ಗಾಡಿಯ ಮೇಲಿಂದ ಇಳಿದು ಬಂದವನೇ ನನ್ನ ಹೊಟ್ಟೆಗೆ ಚಾಕುವನ್ನು ಜೊರಾಗಿ ಚುಚ್ಚಿ ಭಾರಿ ರಕ್ತಗಾಯ ಮಾಡಿದ್ದು ನಾನು ಚಿರುತ್ತಾ ಕೆಳಗಡೆ ಬಿದ್ದಾಗ ಅಲ್ಲಿಯ ವ್ಯಾಪಾರ ಮಾಡುತ್ತಿದ್ದ ದೈಯಿ ವಡಾ ವ್ಯಾಪಾರಿ ಮತ್ತು ಬಜಿ ಬಂಡಿ ವ್ಯಾಪಾರದವರು ಮತ್ತು ಅಲ್ಲಿಯೆ ಸ್ವಲ್ಪ ದೂರದಲ್ಲಿದ್ದ ನಮ್ಮ ಸಂಬಂಧಿಯಾಗಿರುವ ರವಿ ಅನ್ನುವವರು ಓಡಿ ಬರುವುದನ್ನು ನೋಡಿ ಅಪ್ಪು ಶಾ @ ಬಂಡಯ್ಯಾ ಸ್ವಾಮಿ ಇತನು ಓಡಿ ಹೋಗಿದ್ದು ಅಲ್ಲಿದ್ದ ಎಲ್ಲರೊ ನನಗೆ ಉಪಚಾರ ಕುರಿತು ಆಸ್ಪತ್ರೆಗೆ ಸೇರ್ಪಡೆ ಮಾಡಿದ್ದು. ಕಾರಣ ನನಗೆ ಹಳೆಯ ವೈಶಮ್ಯದಿಂದಲೇ ಕೊಲೆ ಮಾಡುವ ಉದ್ದೇಶ ಇಟ್ಟುಕೊಂಡು ಚಾಕುವಿನಿಂದ ಹೊಟ್ಟೆಗೆ ಚುಚ್ಚಿ (ತಿವಿದು) ಮರಣಾಂತೀಕ ಹಲ್ಲೆ ಮಾಡಿದ್ದ ನನಗೆ ಅಪ್ಪುಶಾ @ ಬಂಡಯ್ಯಾ ಸ್ವಾಮಿ ಇತನ ವಿರುದ್ದ ಕಾನೂನು ಕ್ರಮ ಜರಿಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಸಹಜ ಸಾವು ಪ್ರಕರಣ:

ನೆಲೋಗಿ  ಪೊಲೀಸ್ ಠಾಣೆ : ದಿನಾಂಕ:06/`11/2015 ರಂದು ಶ್ರೀಮತಿ ತಿಪ್ಪವ್ವ ಗಂಡ ಬಾಬು ಹವಾರಳ ಸಾ:ನೆಲೋಗಿ ಇವರು ಠಾಣೆಗೆ ಹಾಜರಾಗಿ ನನಗೆ ನನ್ನ ತವರು ಮನೆಯವರು 2 ಎಕರೆ ಜಮೀನು ಕೊಟ್ಟಿದ್ದು ಹೊಲ ಸರ್ವೇ ನಂ:113 ಇದ್ದು ನನ್ನ ಗಂಡ ಹಾಗೂ ಮಕ್ಕಳೊಂದಿಗೆ ನೆಲೋಗಿ ಗ್ರಾಮದಲ್ಲಿಯೇ ವಾಸವಾಗಿರುತ್ತೇವೆ .ನನಗೆ ಒಂದು ಗಂಡು 2 ಹೆಣ್ಣು ಮಕ್ಕಳಿದ್ದು  ನನ್ನ ಹೆಸರಿನಲ್ಲಿ ಇದ್ದ ಜಮೀನಿನ ಮೇಲೆ  ಕೆ.ಜಿ.ಬಿ. ಬ್ಯಾಂಕಿನಲ್ಲಿ ರೂ 50,000/- ಸಾಲ ಮಾಡಿದ್ದು ಮತ್ತು ಖಾಸಗಿಯಾಗಿ ರೂ 2 ಲಕ್ಷ ಸಾಲ ಮಾಡಿದ್ದು  ಮತ್ತು ಬೇರೆಯವರ ಹೊಲ ಕೂಡಾ ಪಾಲಿಗೆ ಮಾಡಿದ್ದು ಈ ವರ್ಷ ಮಳೆ ಸರಿಯಾಗಿ ಆಗದೆ ಬೇಳೆ ಸರಿಯಾಗಿ  ಬಂದಿರುವುದಿಲ್ಲ ಇದರ ಬಗ್ಗೆ ನನ್ನ ಗಂಡ ಹಲವಾರು ಬಾರಿ ನನ್ನೊಂದಿಗೆ ಹೊಲಕ್ಕಾಗಿ  ಮಾಡಿದ ಸಾಲ ಬ್ಯಾಂಕಿನ ಸಾಲ ಹೇಗೆ  ತಿರಿಸುವದು ಅಂತ ಚಿಂತೆ ಮಾಡುತ್ತಾ  ಇಂದು ದಿನಾಂಕ:06/11/2015 ರಂದು ಬೆಳಿಗ್ಗೆ  7-00 ಗಂಟೆ ಸುಮಾರಿಗೆ ನಾನು ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿರುವಾಗ ನನ್ನ ಗಂಡ ಮನೆಯಲ್ಲಿ ಇದ್ದ ಹತ್ತಿ ಬೇಳೆಗೆ ಹೊಡೆಯುವ ಕ್ರೀಮಿನಾಷಕ ಔಷದ ಕುಡಿದು ಒದ್ದಾಡುತ್ತಿರುವಾಗ ನಾನು ಮತ್ತು ನಮ್ಮ ಅಣ್ಣತಮ್ಮಂದಿರರು ಸರಕಾರಿ ಆಸ್ಪತ್ರೆ ನೆಲೋಗಿ ತಗೆದುಕೊಂಡು ಹೋಗುವಾಗ ಹಾದಿಯಲ್ಲಿ ಮೃತಪಟ್ಟಿದ್ದು.. ನನ್ನ ಗಂಡನು ನನ್ನ ಹೆಸರಿನಲ್ಲಿ ಇದ್ದ ಹೊಲದ ಮೇಲೆ ಮಾಡಿದ ಸಾಲ ಮತ್ತು ಊರಲ್ಲಿ  ಮಡಿದ ಸಾಲ ತಿರಿಸದೇ ಆಗದೇ ಇದ್ದುದಕ್ಕೆ ಮನಸ್ಸಿನ ಮೇಲೆ ಪರಣಾಮ ಮಾಡಿಕೊಂಡು ಮನೆಯಲ್ಲಿ ಇಟ್ಟಿದ ಕ್ರೀಮಿ ನಾಷಕ ಔಷದ ಸೇವನೆ ಮಾಡಿ ಮೃತಪಟ್ಟಿದ್ದು.  ಮಾನ್ಯರು ಮುಂದಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

06 November 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಚೌಕ ಠಾಣೆ : ದಿನಾಂಕ 05/11/2015 ರಂದು ಖಿಲ್ಲಾದ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ಹತ್ತಿರ ಕೆಲವು ಜನರು ಸಾರ್ವಜನಿಕರಿಂದ ಹಣ ಪಡೆದುಕೊಂಡು `1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ. ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಮೋಹನ ಮಾನೆ ಪಿ.ಎಸ್.ಐ (.ಅವಿ) ಚೌಕ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಖಿಲ್ಲಾದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚಿಟಿಗಳನ್ನು ಬರೆದುಕೊಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶೇಖ ಪೈಯಾಜ ತಂದೆ ಶೇಖ ಸಲೀಮ್ ತಾಂಬಡಿಗಡ ಸಾ: ಖಿಲ್ಲಾದ ಹತ್ತಿರ ಕಲಬುರಗಿ ಅಂತಾ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 2100 ರೂ, ಒಂದು ಮಟಕಾ ಚೀಟಿ, ಒಂದು ಬಾಲಪೆನ್ನು, ಒಂದು ಮೋಬಾಯಿಲ್ ಅ.ಕಿ. 00 ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ ಮುದ್ದೆ ಮಾಲು ಜಪ್ತಿ ಪಡಿಸಿಕೊಂಡು ಈ ಮಟಕಾ ಚೀಟಿಗಳನ್ನು ಯಾರಿಗೆ ಕೊಡುವುದಾಗಿ ವಿಚಾರಿಸಿದಾಗ ಸದರಿಯವನು ತಾನು ಈ ಮಟಕಾ ಚೀಟಿಗಳನ್ನು ಮಟಕಾ ಬುಕ್ಕಿಯಾದ ವಿಜಯಕುಮಾರ @ ಬುಕ್ಕಿ ವಿಜಯ ತಂದೆ ಹಣಮಂತರಾವ ಬೇಳಗೇರಿ ಸಾ: ಮಾಹಾದೇವ ನಗರ ಶೇಖ ರೋಜಾ ಕಲಬುರಗಿ ಅಂತಾ ಹೆಸರು ಹೇಳಿದ್ದು ಸದರಿ ಆರೋಪಿತನಿಗೆ ಸ್ಥಳದಲ್ಲಿ ದಸ್ತಗಿರಿ ಮಾಡಿಕೊಂಡು ಅವನೊಂದಿಗೆ ಮಟಕಾ ಬುಕ್ಕಿ ಇತನ ವಿಳಾಸಕ್ಕೆ ಹೊಗಿ ನೋಡಿದಾಗ ಸದರಿ ಮಟಕಾ ಬುಕ್ಕಿ ವಿಜಯಕುಮಾರ @ ಬುಕ್ಕಿ ವಿಜಯ ಇತನು ಅಲ್ಲಿಂದ ಓಡಿ ಹೋಗಿದ್ದು ಸದರಿ ಆರೋಪಿತನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಮಾಹಂತಪ್ಪ ತಂದೆ ಭೀಮರಾಯ ಬೂಸಗೊಂಡು ಸಾ- ಎಸ್.ಎನ್. ಹಿಪ್ಪರಗಾ ತಾ-ಜೇವರ್ಗಿ ಜಿ-ಕಲಬುರ್ಗಿ ಇವರಿಗೆ 3 ಜನ ಹೆಣ್ಣು ಮಕ್ಕಳು ಮತ್ತು ,ಒಬ್ಬ ಗಂಡಸ ಮಗನು ಇರುತ್ತಾನೆ. ನಿನ್ನ ದಿನಾಂಕ:05/11/2015 ರಂದು ಮುಂಜಾನೆ 11-00ಗಂಟೆಯ ಸುಮಾರಿಗೆ ನಮ್ಮ ಊರಿನಲ್ಲಿ ಇರುವ ಹೊಲ ಸರ್ವೇ ನಂ:48ಕ್ಕೆ ನಾನು ನನ್ನ ಹೆಂಡತಿ ಶ್ರೀದೇವಿ ನನ್ನ ಮಗಳಾದ ದಾನಮ್ಮ ಕೂಡಿ ಹೊಲಕ್ಕೆ ಹೋದೇವು ನಾನು ನನ್ನ ಹೆಂಡತಿ ಹೊಲದಲ್ಲಿ ಕಸ ತಗಿಯುತ್ತಿದ್ದೇವು ನನ್ನ ಮಗಳಾದ ದಾನಮ್ಮ ಇವಳು ಹೊಲದಲ್ಲಿ ನಮ್ಮ ಹಿಂದೆನೆ ಹತ್ತಿ ಬೆಳೆಯಲ್ಲಿ ತಿರುಗಾಡುತ್ತಿದ್ದಳು ನಂತರ ನಾವೆಲ್ಲರೂ ಊಟ ಮಾಡಿದೇವು ನಾವಿಬ್ಬರು ಹತ್ತಿ ಬೆಳೆಯಲ್ಲಿ  ತಿರುಗಾಡುತ್ತಿದ್ದಳು ನಂತರ ಸಾಯಂಕಾಲ 5-00 ಪಿ.ಎಂ.ದ ಸುಮಾರಿಗೆ ನನ್ನ ಮಗಳು ದಾನಮ್ಮ ನಮ್ಮ ಹೊಲದಲ್ಲಿನ ಗುಡಿಸಲು ಹತ್ತಿರ ಹೋಗಿ ಅಲ್ಲೆ  ಮುಂದೆ ಮಲಗಿಕೊಂಡಿದ್ದು ಅಷ್ಟರಲ್ಲಿ ಅವಳ ಎಡಗೈ ರಟ್ಟಿಗೆ  ಹಾವು ಕಡಿದಿದ್ದು ಏನು ಕಡತು ಅಂತ ಒದರಿದಾಗ ನಾವು  ಇಬ್ಬರು ಓಡುತ್ತಾ ಬಂದಾಗ ಅವಳ ಹತ್ತಿರ ಗುಡಿಸಲು ಮುಂದೆ ಹಾವು ಇದ್ದು ನಾವು ಬಂದ ನಂತರ ಒಳಗೆ ಹೊಯಿತು ನಂತರ ಅವಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದಾಗ ಹಾದಿಯಲ್ಲಿ  ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 November 2015

KALABURAGI DISTRICT REPORTED CRIMES

ಜೂಜುಕೋರರ ಬಂಧನ:
ಜೇವರ್ಗಿ ಪೊಲೀಸ ಠಾಣೆ  :  ದಿನಾಂಕ: 04-11-2015 ರಂದು ಜೇವರಗಿ ಪಟ್ಟಣದ ಎ.ಪಿ.ಎಮ್‌.ಸಿ ಆವರಣದ ಹನುಮಾನ ಗುಡಿಯ ಹತ್ತಿರ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮಾಹಿತಿ ಖಚಿತ ಪಡಿಸಿಕೊಂಡು ಠಾಣೆಯ ಶ್ರೀ. ಲಕ್ಷ್ಮಣ ಬಿರಾದಾರ್ ಎ.ಎಸ್.ಐ ರವರು ಸಿಬ್ಬಂದಿ ಜನರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ ಜೂಜಾಟಕ್ಕೆ ತೊಡಗಿಸಿದ್ದ 11.430/- ರೂ ಗಳು ನಗದು ಹಣ ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿಕೊಂಡು ಜಾಜಾಟದಲ್ಲಿ ತೊಡಗಿದ್ದ 1) ಬಸಯ್ಯ ತಂದೆ ಸಿದ್ರಾಮಯ್ಯ ಹಿರೆಮಠ ಸಾ:ಹರವಾಳ, 2) ದೇವಿಂದ್ರಪ್ಪ ತಂದೆ ಸಿದ್ದಣ್ಣ ಮಾಲಿ ಬಿರಾದಾರ್ ಸಾ:ಗುಳ್ಯಾಳ, 3) ಮಹಾಂತಗೌಡ ತಂದೆ ಸಂಗಣ್ಣಗೌಡ ಬಿರಾದಾರ್ ಸಾ:ಚೆನ್ನೂರ,  4) ಶಿವಶಂಕರ ತಂದೆ ಕಲ್ಲಪ್ಪಗೌಡ ಪಾಟೀಲ್ ಸಾ:ಬಸವೇಶ್ವರ ನಗರ ಜೇವರಗಿ, 5) ದೇವಿಂದ್ರಪ್ಪ ತಂದೆ ಭೀಮರಾಯ ಸುರಪುರ ಸಾ:ಶಾಂತ ನಗರ ಜೇವರಗಿ, 6) ಸಿದ್ರಾಮಯ್ಯ ತಂದೆ ದೊಡ್ಡಯ್ಯ ಸ್ವಾಮಿ ಸಾ:ವಿಧ್ಯಾ ನಗರ ಜೇವರಗಿ, 7) ಸಿದ್ರಾಮ ತಂದೆ ಸುಭಾಶ್ಚಂದ್ರ ಪೊಲೀಸ್ ಪಾಟೀಲ್ ಸಾ: ಟೀಚರ್ ಕಾಲೋನಿ ಜೇವರಗಿ ರವರನ್ನು ದಸ್ತಗೀರ ಮಾಡಿ ಅವರ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿ ಜಪ್ತಿ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:  ದಿನಾಂಕ:- 04/11/2015 ರಂದುಶ್ರೀ ಗೌಸೋದ್ದಿನ್ ತಹಶೀಲ್ದಾರರು, ಅಫಜಲಪೂರ ರವರು ಘತ್ತರಗಾ ರಸ್ತೆ ಲಕ್ಷ್ಮಿ ಗುಡಿ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಲಾರಿ ಸಂ. ಎಮ್.ಹೆಚ್-10 ಜೆಡ್-2381 ನೇದ್ದನ್ನು ಜಪ್ತಿ ಮಾಡಿ ಕಂದಾಯ ನಿರೀಕ್ಷಕರು ಅಫಜಲಪೂರ ರವರ ಮುಖಾಂತರ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಲಾರಿ ಮತ್ತು ಲಾರಿ ಚಾಲಕ ಗುರಪ್ಪ ಇವರನ್ನು ಹಾಜರುಪಡಿಸಿ ನೀಡಿದ ಪಂಚನಾಮೆಯ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸ ಇ ತನಿಖೇ ಕೈಕೊಳ್ಳಲಾಗಿದೆ.