POLICE BHAVAN KALABURAGI

POLICE BHAVAN KALABURAGI

30 October 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಚೌಕ ಠಾಣೆ : ದಿನಾಂಕ: 29.10.2015 ರಂದು ಖಾರಿಬೌಡಿ ಮೋಮಿನಪೂರ ಮಹಿಬೂಬ ಟೇಲರ ಅಂಗಡಿಯ ಹತ್ತಿರ ಇರುವ ಸಾರ್ವಜನಿಕ ರಸ್ತೆಯ ಹತ್ತಿರ ಕೆಲವು ಜನರು ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಉಮಾಶಂಕರ.ಬಿ. ಪಿ.ಐ ಚೌಕ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಖಾರಿಬೌಡಿ ಮೋಮಿನಪೂರ ಮಹಿಬೂಬ ಟೇಲರ ಅಂಗಡಿಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಇಬ್ಬರೂ ವ್ಯಕ್ತಿಗಳು ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ಒಮ್ಮೆಲೆ ಎಲ್ಲರೂ ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ಮೋದಲನೇಯವನು ತನ್ನ ಹೆಸರು ಮಹ್ಮದ ಶಮ್ಸ್ ಮೈನೋದ್ದಿನ @ ಮುನ್ನಾ ತಂದೆ ಮಹ್ಮದ ಹಸನ ಅಲಿ ಸಾ: ಖಾರಿಬೌಡಿ ಮೋಮಿನಪೂರ ಕಲಬುರಗಿ 2) ಮಹ್ಮದ ಜಾಫರ ತಂದೆ ಇಮಾಮ ಸಾಬ ಭಗವಾನ ಹಿಪ್ಪರಗಾ ಸಾ: ಖಾರಿಬೌರಿ ಮೋಮಿನಪೂರ ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 3300/- ರೂ  ಮಟಕಾ ಚೀಟಿಗಳು ಹಾಗು  ಬಾಲಪೆನ್ ವಶಪಡಿಸಿಕೊಂಡು ಈ ಮಟಕಾ ಚೀಟಿಯನ್ನು ಯಾರಿಗೆ ಕೊಡುವದಾಗಿ ವಿಚಾರಣೆಗೆ ಒಳಪಡಿಸಿದ್ದು ಸದರಿಯವರು ಇಬ್ಬರೂ ತಾವು ಈ ಮಟಕಾ ಚೀಟಿಗಳನ್ನು ಮಟಕಾ ಬುಕ್ಕಿಯಾದ ವಿಜಯಕುಮಾರ @ ಬುಕ್ಕಿ ವಿಜಯ ತಂದೆ ಹಣಮಂತರಾವ ಬೆಳಗೇರಿ ವ: 36 ಉ: ಮಟಕಾ ಬುಕ್ಕಿ & ವ್ಯಾಪಾರ ಸಾ: ಮಾಹಾದೇವ ನಗರ ಶೇಖ ರೋಜಾ ಕಲಬುರಗಿ ಅಂತಾ ಹೆಸರು ಹೇಳಿದ್ದು ಸದರಿ ಆರೋಪಿತರಿಗೆ ಸ್ಥಳದಲ್ಲಿಯೇ ದಸ್ತಗಿರಿ ಮಾಡಿಕೊಂಡು ಅವರೊಂದಿಗೆ ಮಟಕಾ ಬುಕ್ಕಿ ಇತನ ವಿಳಾಸಕ್ಕೆ ಹೋಗಿ ನೋಡಿದಾಗ ಸದರಿ ಮಟಕಾ ಬುಕ್ಕಿ ವಿಜಯಕುಮಾರ @ ಬುಕ್ಕಿ ವಿಜಯ ಇತನು ಇಲ್ಲಿಂದ ಓಡಿ ಹೋಗಿದ್ದು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ,
ಚೌಕ ಠಾಣೆ : ದಿನಾಂಕ: 29.10.2015 ರಂದು ಸಾಯಂಕಾಲ ಎಸ್.ಕೆ ಲಮಾಣಿ ಇವರ ಮನೆಯ ಹತ್ತಿರ ಪೂಲಿನ ಬದಿಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಹಸೇನ ಬಾಷಾ ಪಿ.ಎಸ್.ಐ (ಕಾ.ಸು)  ಚೌಕ ಪೊಲೀಸ್ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಎಸ್.ಕೆ ಲಮಾಣಿ ಇವರ ಮನೆಯ ಹತ್ತಿರ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ಒಮ್ಮೆಲೆ ಎಲ್ಲರೂ ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಗುಂಡಪ್ಪ ತಂದೆ ಶಂಕರ ನಾಟೀಕಾರ ಸಾ: ಕಾವೇರಿ ನಗರ  ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 2420/-ರೂಪಾಯಿ, ಒಂದು ಮಟಕಾ ಚೀಟಿ , ಒಂದು ಬಾಲಪೆನ್ , ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ ಮುದ್ದೆಮಾಲು  ವಶಪಡಿಸಿಕೊಂಡು ಈ ಮಟಕಾ ಚೀಟಿಯನ್ನು ಯಾರಿಗೆ ಕೂಡುವುದಾಗಿ ಕೇಳಿದಾಗ ಸದರಿಯವನು ತಾನು ಈ ಮಟಕಾ ಚೀಟಿಗಳನ್ನು ಮಟಕಾ ಬುಕ್ಕಿಯಾದ ರಾಜು @ ರಾಜಶೇಖರ ತಂದೆ ಮಲ್ಲಿಕಾರ್ಜುನ ಸಾ: ರಾಜುಗಾಂಧಿ ನಗರ ಕಲಬುರಗಿ ಅಂತಾ ಹೆಸರು ಹೇಳಿದ್ದು ಮಟಕಾ ಬುಕ್ಕಿ ಇತನ ವಿಳಾಸಕ್ಕೆ ಹೋಗಿ ನೋಡಿದಾಗ ಸದರಿ ರಾಜು @ ರಾಜಶೇಖರ ಇತನು ಅಲ್ಲಿಂದ ಓಡಿ ಹೋಗಿದ್ದು ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಂಕ್ರೆಪ್ಪ ತಂದೆ ಬಸಪ್ಪ ಸಾತನೂರ ಸಾ|| ಗೊರವಗುಂಡಗಿ ತಾ|| ಸಿಂದಗಿ ಇವರು ದಿನಾಂಕ 13-09-2015 ರಂದು ಬೆಳಿಗ್ಗೆ ನಮ್ಮೂರಿನಿಂದ ನಾನು ಮತ್ತು ನನ್ನ ಹೆಂಡತಿ ಈರಮ್ಮ ಹಾಗೂ ನನ್ನ ಮಗಳು ರೇಣುಕಾ ಹಾಗೂ ಅವಳ 2 ಹೆಣ್ಣು ಮಕ್ಕಳು ಎಲ್ಲರೂ ಕೂಡಿಕೊಂಡು ಶ್ರೀ ಘತ್ತರಗಾ ಭಾಗ್ಯವಂತಿ ದೇವಸ್ಥಾನಕ್ಕೆ ದೆವರ ದರ್ಶನಕ್ಕೆಂದು ಬಂದು ಶ್ರೀ ಭಾಗ್ಯವಂತಿ ದೇವಸ್ಥಾನದ ಹತ್ತಿರ ಇರುವ ಭೀಮಾನದಿಯಲ್ಲಿ ಸ್ನಾನ ಮಾಡುವ ಸಂಭದ ನಮ್ಮ ಬಟ್ಟೆಬರೆಗಳನ್ನು ಹಾಗೂ ನನ್ನ ಹೆಂಡತಿಯ ಮೈ ಮೇಲೆ ಇದ್ದ ಒಂದು ಬೋರಮಳ ಸರ ಹಾಗೂ ನನ್ನ ಮಗಳ ಮೈ ಮೇಲೆ ಇದ್ದ ಒಂದು ಬೋರಮಳ ಎಲ್ಲವುಗಳನ್ನು ನಾವು ತಗೆದುಕೊಂಡು ಹೋದ ಹಳೆಯ ಬಟ್ಟೆಯ ಚೀಲದಲ್ಲಿ ಹಾಕಿ ಹೊಳೆಯ ದಂಡೆಯ ಮೇಲೆ ಇಟ್ಟು, ಎಲ್ಲರೂ ಹೊಳೆಯಲ್ಲಿ ಸ್ನಾನ ಮಾಡಿದೆವು. ನಂತರ ಎಲ್ಲರೂ ಸ್ನಾನ ಮುಗಿಸಿಕೊಂಡು ನಾವು ಇಟ್ಟಿದ ಚೀಲದ ಹತ್ತಿರ ಬಂದು ನೋಡಲಾಗಿ ನಾವು ಬಂಗಾರದ ಸಾಮಾನುಗಳು ಇಟ್ಟ ಚೀಲವನ್ನು ಬಂಗಾರ ಸಾಮಾನುದೊಂದಿಗೆ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಂತರ ನಾವು ಎಲ್ಲಾ ಕಡೆ ಹುಡುಕಾಡಿ ಅಲ್ಲಿಗೆ ಬಂದ ಭಕ್ತಾದಿಗಳು ಸಹ ವಿಚಾರಿಸಿದೇವು. ಸದರಿ ನಮ್ಮ ವಡವೆಗಳು ಸಿಕ್ಕಿರುವುದಿಲ್ಲ. 2 ಬಂಗಾರದ ಬೋರಮಳ ಸರಗಳು ಅಂದಾಜು 42,000/- ರೂ ಕಿಮ್ಮತ್ತು ಆಗಬಹುದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 October 2015

Kalaburagi District Reported Crimes

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 15-10-2015 ರಂದು ಸಾಯಂಕಾಲ ಶ್ರೀಶೈಲ್ ಹಾಗು ನಮ್ಮೂರಿನ ರೇವಣಸಿದ್ದ ಇಬ್ಬರೂ ಕುಡಿಕೊಂಡು ಸಂಡಾಸಕ್ಕೆ ಜೇವಗರ್ಿ-ಯಡ್ರಾಮಿ ಮುಖ್ಯೆ ರಸ್ತೆಯ ಆಲೂರು ಕಡೆಯ ರೋಡಿಗೆ ಹೋಗಿ ಸಂಡಾಸ ಕುಳಿತು ನಾವಿಬ್ಬರೂ ಮರಳಿ ಮನೆಯ ಕಡೆಗೆ ಕಚ್ಚಾ ರಸ್ತೆಯಿಂದ ಬರುತ್ತಿದ್ದಾಗ ಆಲೂರು ಕಡೆಯಿಂದ ಒಬ್ಬ ಮೊಟರ್ ಸೈಕಲ್ ಸವಾರನು ತನ್ನ ಮೊಟರ ಸೈಕಲನ್ನು ನೆಡೆಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನಾನು ಮತ್ತು ಮೊಟರ್ ಸೈಕಲ್ ಸವಾರ ಇಬ್ಬರು ಕೆಳಗೆ ಬಿದ್ದೆವು. ಆಗ ನಮ್ಮಿಬ್ಬರಿಗೆ ನನ್ನೊಂದಿಗೆ ಇದ್ದ ರೆವಣಸಿದ್ದಪ್ಪ ಇತನು ಎಬ್ಬಿಸಿ ಕೂಡಿಸಿದನು. ನನಗೆ ತೆಲೆಗೆ ಭಾರಿ ಗುಪ್ತ ಪೆಟ್ಟಾಗಿದ್ದು ಬಲಗಣ್ಣಿಗೆ ಗಾಯವಾಗಿದ್ದು ಅಲ್ಲದೆ ಎಡ ಮೊಳಕಲಿನ ಕೇಳಗೆ ತೆರಚೀದ ಗಾಯವಾಗಿರುತ್ತದೆ. ಅಲ್ಲದೆ ನನಗೆ ಡಿಕ್ಕಿ ಪಡಿಸಿದ ಮೋಟರ್ ಸೈಕಲ್ ಸವಾರನಿಗೆ ಮುಖಕ್ಕೆ ಅಲ್ಲಲ್ಲಿ ಗಾಯಗಳಾಗಿದ್ದು ಅವನ ಹೇಸರು ಮಹಾದೇವಪ್ಪ ತಂದೆ ಶಿವರಾಯ ವರವಿ ಅಂತ ಗೊತ್ತಾಯಿತು. ಮೊಟರ್ ಸೈಕಲ್ ನಂಬರ ನೊಡಲಾಗಿ ಕೆ ಎ 28 ಇ ಎಫ್ 1298 ಇತ್ತು ಆಗ ಸಮಯ 7 ಪಿ ಎಂ ಆಗಿತ್ತು.  ನನಗೆ ಉಪಚಾರ ಕುರಿತು ನನ್ನ ತಂದೆ ಅಮೃತ ನನ್ನ ಮಾವ ಸಿದ್ದಪ್ಪ ಹರನಾಳ, ಹಲಕಟ್ಟೆಪ್ಪ ರೇವಣಸಿದ್ದಪ್ಪ ಇಗೆಲ್ಲರೂ ಕುಡಿಕೊಂಡು ಯಡ್ರಾಮಿಯಲ್ಲಿ ಖಾಸಗಿಯಾಗಿ ತೋರಿಸಿಕೊಂಡು ಹೆಚ್ಚಿನ ಉಪಚಾರ ಕುರಿತು ಸೇರಿಕೆ ಮಾಡಿದ್ದು ದಿನಾಂಕ 28-10-2015 ರಂದು ಮೃತ ಮಹಾದೇವಪ್ಪ ಇತನ ಅಣ್ಣನಾದ ಮಡಿವಾಳಪ್ಪ ತಂದೆ ಶಿವರಾಯ ದೊಡಮನಿ ಸಾ|| ವರವಿ ಇತನು ತನ್ನ ತಮ್ಮ ಮಹಾದೇವಪ್ಪ ಇತನು ಉಪಚಾರ ಪಡೆಯುತ್ತಿದ್ದ ಸೊಲ್ಲಾಪೂರ ಗಂಗಾಮಯ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ದಿನಾಂಕ 24-10-2015 ರಂದು ಮೃತಪಟ್ಟಿರುತ್ತಾನೆ. 
ದ್ವೀಚಕ್ರ ವಾಹನ ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 01.10.2015 ರ 23.30 ಗಂಟೆಯಿಂದ ದಿ|| 02.10.2015 ರ 05:00 ಗಂಟೆಯ ಮಧ್ಯದ ಅವಧಿಯಲ್ಲಿ ಜೇವರಗಿ ಪಟ್ಟಣದ ಶಾಸ್ತ್ರಿ ಚೌಕ್ ಹತ್ತಿರ ಇರುವ ಮಲ್ಲಿಕಾರ್ಜುನ ಇವರ ಮನೆಯ ಮುಂದೆ ನಿಲ್ಲಿಸಿದ್ದು ನನ್ನ ಮೋಟಾರು ಮೊಟಾರ್ ಸೈಕಲ್ ನಂ ಕೆ.ಎ.-21 ಹೆಚ್‌-4598 ಅಂ.ಕಿ 15.000=00 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಅಂತಾ ಶ್ರೀಶೈಲ ತಂದೆ ಬಸಣ್ಣ ಮೂಲಿಮನಿ ಸಾ|| ಸೊನ್ನ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

28 October 2015

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಮುನಪ್ಪ ತಂದೆ ಅಂಬಣ್ಣ ನಾಲ್ಕಮನ್ ಸಾ|| ಉಡಚಣ ಇದ್ದು ನಾವು ನಮ್ಮ ತಂದೆ ತಾಯಿಗೆ ನಾಲ್ಕುಜನ ಮಕ್ಕಳಿದ್ದು 1)ಪ್ರಭಾವತಿ,2)ನಾನೂ,3)ಮೃತ ನಿರ್ಮಲ ಅಂತ ಇದ್ದು ನಮ್ಮ ತಂಗಿಯಾದ ನಿರ್ಮಲಾ ಇವಳಿಗೆ 13 ವರ್ಷಗಳ  ಹಿಂದೆ ದಿಕ್ಸಂಗಾ (ಕೆ) ಗ್ರಾಮದ ಸುಖದೇವ ತಂದೆ ಖಾಜಪ್ಪ ಮ್ಯಾಕೆರಿ ಇವರ ಜೋತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ ಇಗ ನಮ್ಮ ತಂಗಿಗೆ ಮೂರುಜನ ಹೆಣ್ಣು ಮಕ್ಕಳು ಇರುತ್ತಾರೆ ನಮ್ಮ ತಂಗಿ ಆಗಾಗ ನಮ್ಮ ಮನೆಗೆ ಬಂದಾಗ ನನಗೆ ನಮ್ಮ ಅತ್ತೆಯಾದ ರುಕ್ಕವ್ವ.ಗಂಡ ಸುಖದೇವ ,ನಾದನಿಯರಾದ ಸತ್ಯವ್ವ, ಬಂಗರೇವ್ವ ಇವರೇಲ್ಲರು ರಂಡಿ ನಿನಗೆ ಗಂಡು ಮಕ್ಕಳು ಆಗುವದಿಲ್ಲ ಬರಿ ಹೆಣ್ಣೆ ಹಡದಿ ಅಂತ ಹೋಡೆ ಬಡೆ ಮಡುತ್ತಾರೆ ಅಂತಾ ಹೆಳುತಿದ್ದಳು ನಮ್ಮ ತಂದೆಯಾದ ಅಂಭಣ್ಣ ನಮ್ಮ ಗ್ರಾಮದ ಪ್ರಮುಖರು ಕೂಡಿ ದಿಕ್ಸಂಗಾ (ಕೆ) ಗ್ರಾಮದ ನಮ್ಮ ತಂಗಿಯ ಗಂಡನಿಗೆ ಹಾಗೂ ಅವರ ಮನೆಯವರಿಗೆ ತಿಳುವಳಿಕೆಯಿಂದ ಬುದ್ದಿಮಾತು ಹೇಳಿ ಬಂದಿರುತ್ತಾರೆ. ದಿನಾಂಕ 26-10-2015ರಂದು ನನ್ನ ತಂಗಿ ನನ್ನ ಮೊಬಾಯಿಲಗೆ ಪೋನ್ ಮಾಡಿ ನನಗೆ ನನ್ನ ಗಂಡ ಅತ್ತೆ,ನಾದನಿಯರಾದ ಸತ್ಯವ್ವವ ,ಬಂಗರವ್ವ ನನಗೆ ರಂಡಿ ಇವತ್ತು ನಿನಗೆ ಬಿಡಗಿಲ್ಲ ಇಲ್ಲಿ ಹೆಂಗ ಸಂಸಾರ ಮಾಡ್ತಿ ಮಾಡು ಏಣ್ಣಿ ಹಾಕಿ ಸುಡತಿವಿ ಬೋಸಡಿ ಅಂತ ಹೊಡೆ ಬಡೆ ಮಾಡುಕತ್ತಾರೆ ಅಂತ ತಿಳಿಸಿ ಪೋನ್ ಕಟ್ ಮಾಡಿದಳು ನಂತರ ನಾನು ಗಾಬರಿಯಾಗಿ ನಮ್ಮ ಗ್ರಾಮದವರಾದ ವಿಠ್ಠಲ ಕಡ್ಲಾಜಿ, ಶಿವಾನಂದ ಮೂಲಿಮನಿ, ನನ್ನ ಸಂಭಂದಿಕನಾದ ಸಂಜು ಗಾಯಕವಾಡ ಎಲ್ಲರಿಗೆ ವಿಷಯ ತಿಳಿಸಿ ಒಂದು ಖಾಸಗಿ ವಾಹಾನ ಮಾಡಿಕೊಂಡು ರಾತ್ರಿ 23:00ಗಂಟೆ ಸುಮಾರಿಗೆ ದಿಕ್ಸಂಗಾ ಗ್ರಾಮಕ್ಕೆ ನಮ್ಮ ತಂಗಿ ಮನೆಗೆ ಹೋಗಿ ನೋಡಲಾಗಿ ಮನೆಯ ಕೋಣೆಯಲ್ಲಿ ನಮ್ಮ ತಂಗಿಯ ಮೈಬೆಂಕಿಯಂದ ಸುಟ್ಟು ಬೆಂದಾದ ಸ್ಥಿತಿಯಲ್ಲಿ ಇದ್ದಳು ನಾವು ನಮ್ಮ ತಂಗಿಗೆಗೆ ವಿಚಾರಿಸಿದಾಗ ನನ್ನ ಗಂಡ ಅತ್ತೆ ನಾದನಿಯರಾದ ಸತ್ಯವ್ವ,ಬಂಗರವ್ವ ಇವರೆಲ್ಲರು ನನಗೆ ನಿನು ಜಿವಂತ ಇದ್ದರೆ ಬರಿ ಹೆಣ್ಣೆ ಹಡಿತಿ ಭೋಸಡಿ ಅಂತ ನನಗೆ ಹೊಡೆಬಡೆಮಾಡಿ ನನಗ ಕೋಣೆಯಲ್ಲಿ ಎಳೆದುಕೊಂಡು ಹೋಗಿ ನನ್ನ ಗಂಡ ಸೀಮೆಏಣ್ನೆ ನನ್ನ ಮೈಮೇಲೆ ಉಗ್ಗಿದಾಗ ನನ್ನ ನಾದನಿಯರು ಈ ರಂಡಿಗೆ ಇವತ್ತು ಸುಟ್ಟು ಖಲಾಸಮಾಡಮು ಅಂತ ಅಂದಾಗ ನಮ್ಮ ಅತ್ತೆ ಇವಳು ಬೆಂಕಿ ಕೊರೆದು ನನ್ನ ಮೈಮೇಲೆ ಒಗೆದು ನನಗೆ ಉರಿ ಹಚ್ಚಿ ಮನೆಯಿಂದ ಒಡಿಹೊಗಿರುತ್ತಾರೆ ಅಂತ ತಿಳಿಸಿದಳು ನಾವೇಲ್ಲರು ನಾವು ತಂದ ಖಾಸಗಿ ವಾಹನದಲ್ಲಿ ನಮ್ಮ ತಂಗಿಯನ್ನು ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ ಉಪಚಾರ ಫಲಕಾರಿಯಾಗದೆ ನಮ್ಮ ತಂಗಿ ನಿರ್ಮಲಾ ಇವಳು ಇಂದು ದಿನಾಂಕ 27-10-2015ರಂದು ಬೆಳಿಗ್ಗೆ ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಣಾಂತಿಕ ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸುಭಾಷ ತಂದೆ ಅಶೋಕ ಚಿಂತಪಳ್ಳಿ ಸಾ: ಮಲ್ಲಪ್ಪ ಪೇಂಟರ ಮನೆಯಲ್ಲಿ ಕಿರಾಯಿ ಮಾಣಿಕೇಶ್ವರಿ ಕಾಲನಿ ಕಲಬುರಗಿ  ರವರು ಕೆರೆ ಭೋಸಗಾ ಕ್ರಾಸ ದಾಟಿ ಇರುವ ದಾಬಾಕ್ಕೆ ಊಟ ಮಾಡಲು ಒಬ್ಬನೇ ಹೋಗಿ, ದಾಬಾದ  ಒಳಗಡೆ ಹೋಗುವ ಬಾಗಿಲಿನಲ್ಲಿ ನಿಂತಾಗ ಅಪರಿಚಿತ ಇಬ್ಬರು ಫಿರ್ಯಾದಿಗೆ  ದಾಬಾದ ಬಾಗಿಲಿನಿಂದ ಸರಿ ಅಲೇ ನಿನ್ನ ಅವ್ವನ ತುಲ್ಲ ಅಂತಾ ಬೈದ್ದಿದ್ದು, ಅವರಿಬ್ಬರಿಗೆ ಸಿದಾ ಮಾತಾಡರೋ ನಿಮ್ಮ ಅವ್ವ ತುಲ್ಲ ಅಂತಾ ಯಾರಿಗೆ ಬೈಯ್ಯತ್ತಿದ್ದಿರೀ ಅಂತಾ ಕೇಳಿದ್ದಕ್ಕೆ ಅವರಿಬ್ಬರು ಫಿರ್ಯಾದಿಗೆ  ಕೊಲೆ ಮಾಡುವ ಉದ್ದೇಶದಿಂದ ಯಾವುದೋ ಹರಿತವಾದ ಆಯುಧದಿಂದ ನನ್ನ ಎದೆಗೆ ಚುಚ್ಚಿ ಮರಣಾಂತಿಕ ಹಲ್ಲೆ ಮಾಡಿ ಭಾರಿ ರಕ್ತಗಾಯಗೊಳಿಸಿ, ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ರೋಜಾ ಠಾಣೆ : ಶ್ರೀಮತಿ ತಾಹೇರಾಬೇಗಂ ಗಂಡ ಶೇಖ ಮಹ್ಮದ ರಜಾಕ ಸಾ : ಮ.ನಂ 5449/3 ಬಿಬಿ ರಜಾ ಡಿಗ್ರಿ ಕಾಲೇಜ ಹತ್ತಿರ ಕಲಬುರಗಿ ರವರ ಗಂಡನಾದ ಶೇಖ ಮಹ್ಮದ ರಜಾಕ್ ಈತನು ಹೊರ ದೇಶದ ದುಬೈನಲ್ಲಿರುತ್ತಾರೆ. ಕಲಬುರಗಿಯಲ್ಲಿ ನಾನು ನನ್ನ ಮೂರು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಹೇಸರಿನಲ್ಲಿ ಮತ್ತು ನನ್ನ ಗಂಡನ ಹೆಸರಿನಲ್ಲಿ ಕಲಬುರಗಿಯ ದರ್ಗಾ ಎಸ್.ಬಿ.ಹೆಚ್. ಬ್ಯಾಂಕ ಶಾಖೆಯಲ್ಲಿ ಖಾತೆ ಇರುತ್ತವೆ. ಮತ್ತು ಎ.ಟಿ.ಎಮ್.ಕಾರ್ಡ ಕೂಡಾ ಇರುತ್ತವೆ. ನನ್ನ ಗಂಡನು ಆಗಾಗ ತನ್ನ ಅಕೌಂಟಗೆ ಹಣ ಕಳುಹಿಸುತ್ತಿದ್ದನು ಮತ್ತು ಕಳುಹಿಸಿದ ಬಗ್ಗೆ ನಮಗೆ ಫೋನ ಮೂಲಕ ತಿಳಿಸುತ್ತಿದ್ದನು. ದಿನಾಂಕ 19-10-2015 ರಂದು ರಾತ್ರಿ ಅಂ 8.30 ಗಂಟೆಯ ಸುಮಾರಿಗೆ ನಮ್ಮ ಮನೆಯ ಮೊಬೈಲ್ ಫೋನ ನಂ 9448577202 ಇದು ನನ್ನ ಮಗನಾದ ಮಹ್ಮದ ಶಹಬಾಜ ಈತನ ಹತ್ತಿರ ಇದ್ದು ಆತನಿಗೆ ಮೊಬೈಲ್ ಪೋನ ನಂ 7259636446 ಇದರಿಂದ ಫೊನ ಮಾಡಿ ಮೈ ಬೆಂಗಳೂರು ಎಸ.ಬಿ.ಹೆಚ್. ಬ್ಯಾಂಕ ಮ್ಯಾನೇಜರ್ ಬಾತರಕರಹಾಹು ಕರ್ನಾಟಕೆ ಪೂರೆ ಎ.ಟಿ.ಎಮ್. ಕಾರ್ಡ ಚೆಕ ಕರ ರಹಾಹು ಆಪಕೆ ಕಾರ್ಡ ಕಾ ನಂಬರ ಅಬ ಆಯಾ ತುಮ್ಹಾರಾ ಕಾರ್ಡ ನಂಬರ ಕ್ಯಾ ಹೈ ಅಂತಾ ಕೇಳಿದಾಗ ನನ್ನ ಮಗ ನನ್ನ ಗಂಡನ ಹೆಸರಿನಲ್ಲಿರುವ ಎ.ಟಿ.ಎಮ್. ಕಾರ್ಡ ನಂ 5044352063200005481 ಅಂತಾ ಹೇಳಿದೆನು. ನಂತರ ಆತನು ಮೆಸೆಜ ಆತಾ ಆಪ ಮೆಸೆಜ್ ಆನೆಕೆ ಬಾದ ಉಸಮೆ 6 ನಂಬರ ಆತಾ ಓ ಆಪ ಪಡಕೆ ಮರೆಕು ಬೋಲನಾ ಅಂತಾ ತಿಳಿಸಿದಾಗ ಮೆಸೆಜ ಮೆ ಆಯೇಸೊ ನಂಬರ ಮೇರಾ ಬೇಟಾ 6-7 ಬಾರ ಪಡಕೆ ಬೋಲಾ ಆತನು ಅಚ್ಛಿ ಬಾತಹೈ ಆಪಕಾ ಕಾಮ ಹುವಾ ಸುಬೆ ಆಪಕಾ ಕಾರ್ಡ ರಿನಿವಲ್ ಹೋತಾ ನಯಾ ಕಾರ್ಡ ಆತಾ ಅಂತಾ ತಿಳಿಸಿದನು. ನಂತರ ಮರುದಿವಸ ದಿನಾಂಕ 20-10-2015 ರಂದು ಪೀರ್ ಸುಬೆ 7.30 ಬಜೆ ಪಹಲೆ ಆಯೆಸೋ ನಂಬರಸೆ ಫೊನ ಆಯಾ ಮೇರಾ ಬೇಟಾ ಫೋನ ಉಟ್ಯಾ ಅಬ್ದುಲರಜಾಕ ಕಾ ಕಾರ್ಡ ರಿನಿವಲ್ ಹುವಾ ಇಸಕೆ ವಾಸ್ತೆ ಏಕ್ ಐ.ಡಿ. ಫ್ರೂಫ್ ಹೋನಾ ತುಮ್ಹಾರಾ ಅಮ್ಮಿ ತಾಹೇರಾಬೇಗಂ ಕಾ ಬಿ ಎ.ಟಿ.ಎಮ್.ಕಾರ್ಡ ಹೈನಾ ಉಸಕಾಬಿ ರಿನಿವಲ್ ಕರನೆಕಾ ಹೈ ಉಸಕಾ ಬಿ ನಂಬರ ಬೋಲೊ ಅಂತಾ ಕೇಳಿದಾಗ ನನ್ನ ಮಗ ಮೇರಾ ಕಾರ್ಡ ನಂಬರ 5044352063200047509 ಬಿ ಬೋಲಾಬೋಲನೆಕೆ ಬಾದ 2 ಮೆಸೆಜ್ ಆಯಾ ಮೆಸೆಜ ಮೆ ಆಯೆಸೊ ನಂಬರ ಮೇರೆ ಬೇಟಾ ಪಡಕೆ ಬೋಲಾ ಬಾದಮೆ ಇನ್ಹೋನೆ ಇಸಕಾ ಭಿ ಐ.ಡಿ.ಫ್ರೂಫ್ ಚಾಹಿಯೆ ಆಪ ಕೆ ಪಾಸ ಔರ ಎಕ್ ಕಾರ್ಡ ಹೈನಾ ಉಸಕಾ ನಂಬರ ಬೋಲೊ ಅಂತಾ ತಿಳಿಸಿದಾಗ ಮೈನೆ ಮೇರೆ ಬೇಟೆಕೊ ನಂಬರ ಮತ್ ಬೋಲೊಬೇಟಾ ಅಂತಾ ತಿಳಿಸಿದಾಗ ಆತನು ಆಪ ನಂಬರ ನಹಿ ಬೋಲೆತೊ ತುಮ್ಹಾರಾ ಪೂರೆ ಪೈಸಾ ಜಾತೆ ದೆಖೋ ಅಂತಾ ಹೇಳಿದನು. ಮೈ ಮೇರಾ ಬೇಟೆಕೊ ನಕೊ ಬೋಲೊ ದೇಖೆಂಗೆ ಕ್ಯಾ ಹೋತಾ ಅಂತಾ ತಿಳಿಸಿದೆನು.ನಂತರ ದುಪ್ಹಾರ 3.30 ಬಜೆ ಫಿರ್ ಪಹಲೆಕಾ ನಂಬರಕಾ ಫೋನ ಆಯಾ ಮೇರೆಕು ಡೌಟ ಆಕೆ ಮೈ ಮೇರಾ ಬೇಟೆಕು ಬ್ಯಾಂಕ ಚಲೋ ದೇಖೇಂಗೆ ಅಂತಾ ಐಸಿಚ್ ಬಾತಕರ್ತೆ ಬ್ಯಾಂಕ ಕು ಆಕೆ ಬ್ಯಾಂಕ ಮೆ ಏಕ ನೌಕರಕು ಫೋನ ದಿಯಾ ಉನೊನೆ ಉಸಕೆ ಸಾಥ ಬಾತ್ ಕರ್ತೆ ವಕ್ತ ಫೋನ್ ಕಟ್ ಕರ್ದಿಯಾ ಬಾದಮೇ ಮೇರಾ ಅಕೌಂಟಮೇ ಔರ್ ಮೇರಾ ಶೊಹರ ಶೇಖ ಅಬ್ದುಲ ರಜಾಕ ಕೆ ಅಕೌಂಟಮೆ ಬ್ಯಾಂಕ ಮೇ ಪೈಸಾ ದೇಖೆತು ಮೇರಾ ಅಕೌಂಟಸೆ ದಿನಾಂಕ 20-10-2015 ಕು 5.000=00 ರೂ, ದಿನಾಂಕ 19-10-2015 ಕು 50.975=00 ರೂ,ಹೀಗೆ ಒಟ್ಟು 55.975=00 ರೂಪಾಗಳನ್ನು ನಮ್ಮ ಅಕೌಂಟನಿಂದ ನಮಗೆ ಮೋಸಮಾಡಿ ಫೋನ ನಂಬರ 7259636446 ರ ವ್ಯಕ್ತಿ ತನ್ನ ಹೆಸರು ಮತ್ತು ವಿಳಾಸ ಮರೆಮಾಚಿ ದೂರವಾಣಿ ಸಂಪರ್ಕ ಹೊಂದಿ ನಮ್ಮ ಕಾರ್ಡ ನಂಬರ ಬಳಸಿ ಹಣ ದೋಚಿರುತ್ತಾನೆ. ಅಲ್ಲದೆ ಇಂದು ದಿನಾಂಕ 27-10-2015 ರಂದು ಮದ್ಯಾಹ್ನ 4.50 ಗಂಟೆಗೆ ಮತ್ತೊಂದು ಫೊನ ನಂಬರ 7808334135 ಇದರಿಂದ ನಮ್ಮ ಫೊನ ನಂಬರ 9448577202 ಗೆ ಫೋನ ಮಾಡಿ ಆಪಕಾ ಎ.ಟಿ.ಎಮ್. ಕಾರ್ಡ ಬ್ಲಾಕ್ ಹೋಗಯಾ ಓ ಒಪನ ಕರನೆಕಾ ಹೈಕ್ಯಾ ಅಂತಾ ಕೇಳಿದಾಗ ನಾವು ಫೋನ ಕಟ್ ಮಾಡಿರುತ್ತೇವೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.