POLICE BHAVAN KALABURAGI

POLICE BHAVAN KALABURAGI

14 September 2015

Kalaburagi District Reported Crimes.

ಗ್ರಾಮೀಣ ಠಾಣೆ : ದಿನಾಂಕ: 13/09/2015 ರಂದು 12-30 ಪಿಎಮ್ ಕ್ಕೆ ಅರ್ಜಿದಾರರು ಠಾಣೆಗೆ ಹಾಜರಾಗಿ ನೀಡಿದ ಒಂದು ಲಿಖಿತ ದೂರಿನ ಸಾರಾಂಶವೆನೆಂದರೆ, ಮನೆಯಲ್ಲಿ ನನ್ನ ಹೆಂಡತಿ ಈಗ್ಗೆ 4-5 ದಿವಸಗಳಿಂದ ತವರು ಮನೆಗೆ ಹೋಗಿದ್ದು ಮನೆಯಲ್ಲಿ ನಾನು ನನ್ನ ತಾಯಿ ಹಾಗೂ ಅಳಿಯ ಇರುತ್ತೇವೆ. ಹೀಗಿದ್ದು ದಿನಾಂಕ: 12/09/2015 ರಂದು ರಾತ್ರಿ 10-00 ಪಿಎಮ್ ವರೆಗೆ ನಾನು ಮೇಲಗಡೆ ಅಂತಸ್ತಿನ ಮನೆಯಲ್ಲಿದ್ದು ನಂತರ ಮನೆ ಬಾಗಿಲು ಕೀಲಿ ಹಾಕಿಕೊಂಡು ಕೆಳಗಿನ ಮನೆಗೆ ಬಂದು ಅಮ್ಮ ಅಳಿಯನೊಂದಿಗೆ ಮಲಗಿರುತ್ತೇನೆ. ನಂತರ ದಿನಾಂಕ: 13/09/2015 ರಂದು ಬೆಳಿಗ್ಗೆ 7-00 ಎಎಮ್ ಗಂಟೆಗೆ  ಎದ್ದು ಮನೆಯ ಬಾಗಿಲು ತೆಗೆಯಲು ಬಾಗಿಲು ತೆರೆಯದ ಕಾರಣ ನಾನು ಅಳಿಯ ಮಹಮ್ಮದ ಮೊಹತೆಶಮನೊಂದಿಗೆ ಹಿಂದಿನ ಬಾಗಿಲಿನಿಂದ ಬಂದು ನೋಡಲು ನಾವಿದ್ದ ಮನೆಯ ಬಾಗಿಲ ಹೊರಗಿನ ಕೊಂಡಿಹಾಕಿದ್ದು ನಾವು ಅನುಮಾನ ಬಂದು ಮೇಲಗಡೆ ಮಾನೆಯ ಹತ್ತಿರ ಬಂದು ನೋಡಲು ಮೇಲಗಡೆ ಮನೆಯ ಬಾಗಿಲ ಕೊಂಡು ಮುರಿದಿದ್ದು ನಾನು ಗಾಬರಿಯಿಂದ ಬಾಗಿಲು ತೆಗೆದು ಒಳಗೆ ಬಂದು ನೋಡಲು ಬೆಡರೂಮನ ಅಲಮಾರಾದ ಲಾಕ ಮುರಿದಿದ್ದು ಅಲಮಾರಾದ ಬಾಗಿಲು ತೆರೆದಿರುತ್ತದೆ. ಮತ್ತು ಅಲಮಾರಾದಲ್ಲಿದ್ದ ಬಟ್ಟೆ ಬರೆ ಸಾಮಾನುಗಳೆಲ್ಲ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಾನು ಗಾಬರಿಯಿಂದ ಅಲಮಾರಾದಲ್ಲಿ ನೋಡಲು ಅಲಮಾರಾದಲ್ಲಿಟ್ಟಿದ್ದ 1) 20 ಗ್ರಾಂ ಬಂಗಾರದ ನೆಕಲೆಸ್ ಅ.ಕಿ= 48000/-ರೂ. 2) 10 ಗ್ರಾಂ ಬಂಗಾರದ ಲಾಕೇಟ ಅ.ಕಿ= 24000/-ರೂ. 3) 10 ಗ್ರಾಂ ಬಂಗಾರದ ಲಾಕೇಟ ಅ.ಕಿ= 24000/-ರೂ. 4) ಪ್ರತಿ 3 ಗ್ರಾಂ ಬಂಗಾರದ ಒಟ್ಟು 15 ಗ್ರಾಂನ 5 ಉಂಗುರಗಳು  ಅ.ಕಿ= 36000/-ರೂ 5) 05 ಗ್ರಾಂ ಬಂಗಾರದ ಕಿವಿಯೋಲೆ ಅ.ಕಿ= 12000/-ರೂ ಹಿಗೆ ಒಟ್ಟು 60 ಗ್ರಾಂ ಬಂಗಾರದ ಅ.ಕಿ= 1,44,000/-ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ: 12/09/2015 ರಂದು ರಾತ್ರಿ 10-00 ಪಿಎಮ್ ದಿಂದ ದಿನಾಂಕ: 13/09/2015 ರಂದು ಬೆಳಿಗ್ಗೆ 7-00 ಎಎಮ್ ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಬಾಗಿಲ ಕೊಂಡಿ ಮುರಿದು ಅಲಮಾರಾದ ಲಾಕರ್ ಮುರಿದು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಕಾರಣ ಕಳ್ಳತನವಾದ ನಮ್ಮ ಬಂಗಾರದ ಆಭರಣಗಳನ್ನು ಪತ್ತೆ ಹಚ್ಚಿ ವಾಪಸ್ಸು ಕೊಡಿಸಬೇಕು ಮತ್ತು ಕಳ್ಳತನ ಮಾಡಿದ ಆರೋಫಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ ವಗೈರೆ ಕೊಟ್ಟ ಅರ್ಜಿಯ ಸಾರಾಂಶದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. 
ಆಫಜಲಪೂರ ಠಾಣೆ : ದಿನಾಂಕ 12/09/2015ರಂದು 6.15¦.JªÀiï ಕ್ಕೆ ಮಾನ್ಯ ನ್ಯಾಯಲಯ ಕರ್ತವ್ಯ ನಿರ್ವಹಿಸುವ ನಮ್ಮ ಠಾಣೆಯ ಸಿ.ಪಿ.ಸಿ. 596 ರಮೇಶ ಇವರು ಶ್ರೀ ಮಂಜೂರ ಅಹ್ಮದ ತಂದೆ ಅಬ್ದುಲ ಕರೀಮ ಅಗರಖೇಡ ಸಾ|| ಅಫಜಲಪೂರ  ಇವರು ಮಾನ್ಯ ನ್ಯಾಯಲಯದಲ್ಲಿ ಮಾಡಿದ ದೂರು ¦.¹.£ÀA. 26/2015ನೇದ್ದು ತಂದು ಹಾಜರು ಪಡಿಸಿದ್ದ ದಿನಾಂಕ 14/8/2015ರಂದು 12¦.JªÀiï.ಕ್ಕೆ ಆರೋಪಿತರು ಫಿರ್ಯಾಧಿಯ J.PÉ.mÁAiÀÄgÀ ಶೋ ರೋಮಗೆ ನುಗ್ಗಿ ಫಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು ಶೋ ರೋಮನಲ್ಲಿದ್ದ ಹೊಸ ಟೈಯರಗಳನ್ನು ಸುಟ್ಟು ಫಿರ್ಯಾಧಿ ಹಾಗೂ ಫಿರ್ಯಾಧಿಯ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿರುತ್ತಾರೆ ಅಂತ ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ನಿಂಬರ್ಗಾ ಠಾಣೆ : ದಿನಾಂಕ 12/09/2015 ರಂದು 0930 ಗಂಟೆಗೆ ಫಿರ್ಯಾದಿ ಶ್ರೀಮತಿ ಸಂಗೀತಾ ಗಂಡ ಶಿವಾನಂದ ಮದರಿ ವ|| 28 ವರ್ಷ, ಜಾ|| ಮರಾಠಾ, || ಮನೆಕೆಲಸ, ಸಾ|| ಮಾಡಿಯಾಳ ಇವಳು ಠಾಣೆಗೆ ಬಂದು ಒಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತನ್ನ ಗಂಡನಾದ ಶಿವಾನಂದ ತಂದೆ ಕೃಷ್ಣಪ್ಪ ಮದರಿ ವ|| 30 ವರ್ಷ, ಜಾ|| ಮರಾಠಾ, || ಒಕ್ಕಲುತನ, ಇವರು ಹೊಲದಲ್ಲಿನ ಲಾಗೋಡಿ ಮತ್ತು ಬೆಳೆ ಸಂಭಂಧ ರೂಪಾಯಿ 2,00,000/- ( ಎರಡು ಲಕ್ಷ ರೂಪಾಯಿ ) ಪ್ರಗತಿ ಕೃಷ್ಣಾ ಬ್ಯಾಂಕ ಮಾಡಿಯಾಳ ಮತ್ತು ಊರಲ್ಲಿ ಕೈಗಡ ಅಂತ ರೂಪಾಯಿ 2,00,000/- ( ಎರಡು ಲಕ್ಷ ರೂಪಾಯಿ ) ಸಾಲ ಪಡೆದು ಮಾಡಿಯಾಳ ಗ್ರಾಮದ ಹೊಲ ಸರ್ವೆ ನಂ. 322 ನೇದ್ದರಲ್ಲಿ ಮೆಣಸಿನಕಾಯಿ, ಉಳ್ಳಾಗಡ್ಡಿ, ಟೊಮಾಟೊ ಬೇಳೆ ಬೆಳೆದಿದ್ದು ಸಕಾಲಕ್ಕೆ ಮಳೆ ಬರದಿದ್ದರಿಂದ ಬೋರವಲನಲ್ಲಿ ನೀರು ಕಡಿಮೆಯಾಗಿ ಮತ್ತು ಇಚ್ಚಿಚೆಗೆ ಸುರಿದ ಭಾರಿ ಮಳೆಯಿಂದಾಗಿ ಬೆಳೆಗೆ ರೋಗ ಬಿದ್ದು ಬೆಳೆ ನಾಶವಾಗಿದ್ದರಿಂದ ತಾನು ಮಾಡಿದ ಸಾಲದ ಬಗ್ಗೆ ಮನನೊಂದು ದಿನಾಂಕ 12/09/2015 ರಂದು ಬೆಳಿಗ್ಗೆ 0600 ಗಂಟೆಗೆ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತ ಸುಳ್ಳು ಹೇಳಿ ಹೊಲಕ್ಕೆ ಹೋಗಿ ಹೋಲದಲ್ಲಿನ ವಿದ್ಯೂತ ತಂತಿ ಹಿಡಿದು ಆತ್ಮ ಹತ್ಯೆ ಮಾಡಿಕೊಂಡಿರುತ್ತಾನೆ. ಇದರ ಬಗ್ಗೆ ನನಗೆ ಯಾರ ಮೇಲೂ ಸಂಶಯ ವಗೈರೆ ಇಲ್ಲ ಮುಂದಿನ ಕ್ರಮ ಕೈಕೊಳ್ಳಲು ಕೊಟ್ಟ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಯು.ಡಿ.ಆರ್ ನಂ. 09/2015 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಚೌಕ ಠಾಣೆ : ದಿನಾಂಕ: 12.09.2015 ರಂದು 1300 ಗಂಟೆಗೆ ಶ್ರೀಮತಿ. ಸುನೀತಾಬಾಯಿ ಗಂಡ ತುಕಾರಾಮ ಕಾಂಬಳೆ ವಯ: 48 ವರ್ಷ ಸಾ: ಶಹಾಬಾದ ಇವರು ಚೌಕ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಫಿರ್ಯಾದು ಸಲ್ಲಿಸಿದ್ದು, ಸದರಿ ಫಿರ್ಯಾದಿಯನ್ನು ಠಾಣೆಯಲ್ಲಿ ಸ್ವೀಕೃತವಾಗಿದ್ದು, ಸದರಿ ಫಿರ್ಯಾದಿಯ ಅರ್ಜಿಯ ಸಾರಾಂಶವೇನೆಂದರೆ, ನಾನು ಶ್ರೀಮತಿ. ಸುನೀತಾ ಗಂಡ ದಿ,.ತುಕಾರಾಮ ಕಾಂಬಳೆ ವಯ; 48 ವರ್ಷ ಉದ್ಯೋಗ : ಸಫಾಯಿ  ಜಾತಿ : ಪರಿಶಿಷ್ಟ ಜಾತಿ ಮಾದಿಗ ಸಾ: ಸ್ಟೇಷನ ಹತ್ತಿರ ಇಂಜೀನ್ ಪೈಲ್  ಶಹಾಬಾದ ತಾ:ಚಿತ್ತಾಪೂರ ಜಿ: ಕಲಬುರಗಿ ಇದ್ದು , ಈ ದೂರಿನ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾನು ಸಫಾಯಿ ಕೆಲಸ ಮಾಡಿಕೊಂಡು ಮೂರು ಮಕ್ಕಳೊಂದಿಗೆ ಶಹಾಬಾದದಲ್ಲಿ ವಾಸವಾಗಿರುತ್ತೇನೆ. ನನ್ನ ಗಂಡ ತುಕಾರಾಮ ಇವರು 20 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ನನಗೆ ಒಟ್ಟು ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಾದ ಶೋಭಾ ಇವಳಿಗೆ 2009 ನೇ ವರ್ಷದಲ್ಲಿ ಆಶ್ರಯ ಕಾಲೂನಿಯ ಕಲಬುರಗಿ ನಗರದ ಆನಂದ ಕಾಂಬಳೆ ಇವರ ಮಗನಾದ ವಿನೋದ ತಂದೆ ಆನಂದ ಕಾಂಬಳೆ ಇವರೊಂದಿಗೆ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟಿರುತ್ತೇವೆ. ನನ್ನ ಮಗಳು ಶೋಭಾ ಗಂಡ ವಿನೋದ ವಯ:  26 ವರ್ಷ ಇವಳಿಗೂ ಸಹ ಸದ್ಯ ಮೂರು ಜನ ಮಕ್ಕಳಿರುತ್ತಾರೆ.  ಇವಳು ಕಲಬುರಗಿಯಲ್ಲಿ ತನ್ನ ಗಂಡನ ಮನೆ ಆಶ್ರಯ ಕಾಲೂನಿಯಲ್ಲಿ ( ಮಹಾತ್ಮಾ ಗಾಂಧಿ ಲಾರಿ ತಂಗುದಾಣ ) ಮಕ್ಕಳೊಂದಿಗೆ ವಾಸವಾಗಿರುತ್ತಾಳೆ. ಹೀಗಿರುವಾಗ ಇಂದು ದಿನಾಂಕ: 12.09.2015 ರಂದು ಬೆಳೆಗ್ಗೆ  06-30 ಗಂಟೆ ಸುಮಾರಿಗೆ ನಾನು ಶಹಾಬಾದ ನನ್ನ ಮನೆಯಲ್ಲಿದ್ದಾಗ ನನ್ನ ತಂಗಿಯ ಮಗ ಅನೀಲ ತಂದೆ ಧನರಾಜ ಇವರು ನನ್ನ ಮಗ ಗಣಪತಿ ಇವರ ಮೊಬೈಲಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಿನ್ನ ಮಗಳು ತೀರಿಕೊಂಡಿದ್ದಾಳೆಂದು ನನ್ನ ಮಗನಿಗೆ ಫೋನ್ ಮಾಡಿರುವುದರಿಂದ ನಾನು ಗಾಬರಿಗೊಂಡು ನನ್ನ ಮಗ ಗಣಪತಿ ಮತ್ತು ನನ್ನ ಇತರೆ ಸಂಭಂದಿಕರಿಗೆ ವಿಷಯ ತಿಳಿಸಿ ನಾವು ಎಲ್ಲರೂ ಕೂಡಿಕೊಂಡು ಕಲಬುರಗಿಗೆ ಬೆಳೆಗ್ಗೆ 08-30 ಗಂಟೆಗೆ ಬಂದು ಆಶ್ರಯ ಕಾಲೂನಿಯಲ್ಲಿರುವ ನನ್ನ ಮಗಳು ವಾಸವಿದ್ದ ಮನೆಗೆ ಬಂದು ನೋಡಿದಾಗ ನನ್ನ ಮಗಳಿಗೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿರುತ್ತಾರೆ. ನಾನು ನನ್ನ ಮಗಳ ಕತ್ತಿನ ಮೇಲಿನ ಗಾಯಗಳಿರುವುದನ್ನು ನೋಡಿರುತ್ತೇನೆ. ನನ್ನ ಮಗಳ ಶವವನ್ನು ನೆಲದ ಮೇಲೆ ಹಾಕಿರುತ್ತಾರೆ. ಈ ಘಟನೆಯನ್ನು ನನ್ನ ಅಳಿಯ ವಿನೋದ ತಂದೆ ಆನಂದ ಕಾಂಬಳೆ ಸಾ; ಆಶ್ರಯ ಕಾಲೂನಿ ಕಲಬುರಗಿ (ಲಾರಿ ತಂಗುದಾಣ) ಈತನು ದಿನಾಂಕ: 11.09.2015 ರಂದು ರಾತ್ರಿಯಿಂದ 12.09.2015 ರ ಬೆಳಗಿನ ಜಾವದ ಅವಧಿಯಲ್ಲಿ ನನ್ನ ಮಗಳಾದ ಶೋಭಾ ಇವಳಿಗೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿರುತ್ತಾರೆ ಹಾಗೂ ಶೋಭಾಳ ಅತ್ತೆ ಮತ್ತು ಮಾವ ಇವರ ವಿಪರೀತ ಕಿರುಕುಳ ನೀಡಿರುವುದು ನನ್ನ ಮಗಳು ಆಗಾಗ ತಿಳಿಸಿರುತ್ತಿದ್ದಳು. (ಕಿರುಕುಳ ಗಂಭೀರವಾಗಿತ್ತು ) ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಲಿಖಿತ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 158/2015 ಕಲಂ  498 [ಎ] , 302, ಸಂಗಡ  34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ಆಫಜಲಪೂರ ಠಾಣೆ  : ನಾನು ಮಾಹಾದೇವಪ್ಪ ತಂದೆ ಲಗಮಣ್ಣ ಬಳಗಾರ ವ|| 35 ವರ್ಷ ಜಾ|| ಕುರುಬರು ಉ|| ಒಕ್ಕಲುತನ ಸಾ|| ಕರಜಗಿ ಗ್ರಾಮ ತಾ|| ಅಫಜಲಪೂರ. ವಿಳಾಸದವನಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿದ್ದೆನೆ. ನನ್ನ ಹೊಲ ಸರ್ವೆ ನಂಬರ 234 ನೇದ್ದಕ್ಕೆ ಹೊಂದಿ ನಮ್ಮೂರ ಅಮೋಗಿ ತಂದೆ ಸಿದ್ರಾಮ ಕಾಮನಕೇರಿ ಇವರ ಹೊಲ ಇರುತ್ತದೆ. ಸದರಿ ಅಮೋಗಿ ಈತನು ಗಳೆ ಹೊಡೆದಾಗೊಮ್ಮೆ ನನ್ನ ಹೊಲ ಹೊಡೆಯುತ್ತಾ ಬರುತ್ತಿರುತ್ತಾನೆ. ನಾನು ಅಮೋಗಿ ಈತನಿಗೆ ನನ್ನ ಹೊಲದಲ್ಲಿ ಹೆಚ್ಚಿಗೆ ಹೊಡೆಯಬೇಡ ನಿನ್ನ ಹೊಲ ಎಷ್ಟು ಇರುತ್ತೊ ಅಷ್ಟು ಹೊಡೆ ಅಂತಾ ಹೇಳಿದಕ್ಕೆ ಅವನಿಗೂ ನನಗು ಜಗಳ ಆಗುತ್ತಾ ಬಂದಿರುತ್ತದೆ.ಇಂದು ದಿನಾಂಕ 11-09-2015 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ಹೊಲದಲ್ಲಿದ್ದಾಗ ಸದರಿ ಅಮೊಗಿ ಈತನಿಗೂ ನನಗು ಬಾಯಿ ಬಾಂದಾರಿ ಸಂಭಂದ ಜಗಳ ಆಗಿರುತ್ತದೆ. ಸಂಜೆ 7:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಿಂದ ಹೊರಗೆ ಹೊಗುತ್ತಿದ್ದಾಗ ನಮ್ಮೂರ ಸಾಯಬಣ್ಣ ಮಗಿ ಇವರ ಮನೆಯ ಮುಂದೆ ಹೊಗುತ್ತಿದ್ದಾಗ ಅಮೋಗಿ ತಂದೆ ಸಿದ್ರಾಮ ಕಾಮನಕೇರಿ ಮತ್ತು ಅವನ ಅಣ್ಣ ತುಕಾರಾಮ ತಂದೆ ಸಿದ್ರಾಮ ಕಾಮನಕೇರಿ ಮತ್ತು ಅವನ ತಂಗಿಯ ಗಂಡ ಭೀಮಶಾ ತಂದೆ ಬಸಣ್ಣ ಹಾದಿಮನಿ ಮೂರು ಜನರು ನನ್ನ ಎದುರಿಗೆ ಬಂದು, ಅವರಲ್ಲಿ ಅಮೋಗಿ ಈತನು ಏನೊ ಭೋಸಡಿ ಮಗನೆ ಹೊಲದಲ್ಲಿ ನನ್ನ ಜೋತೆನೆ ಜಗಳ ಮಾಡುತ್ತಿ ಅಂತಾ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಏಳೆದಾಡಿ ಕೈಯಿಂದ ಹೊಡೆದನು ತುಕಾರಮ ಈತನು ಕಾಲಿನಿಂದ ಒದ್ದನು. ಆಗ ನನಗು ಅವರಿಗೂ ತೆಕ್ಕ ಮುಸ್ತಿ ಆಗುತ್ತಿದ್ದಾಗ ಭೀಮಶಾ ಈತನು ನನ್ನನ್ನು ಹಿಡಿದುಕೊಂಡಾಗ ಅಮೋಗಿ ಈತನು ಅಲ್ಲೆ ಸಾಯಬಣ್ಣ ಮಗಿ ಇವರ ಮನೆಯ ಮುಂದೆ ಕಟ್ಟಿಗೆ ಒಡೆಯಲು ಇಟ್ಟಿದ ಕೊಡಲಿಯನ್ನು ತಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದನು. ಆಗ ನಾನು ಕೆಳಗೆ ಬಿದ್ದಾಗ ಮೂರು ಜನರು ಕೂಡಿಕೊಂಡು ನನಗೆ ಕಾಲಿನಿಂದ ಒದ್ದಿರುತ್ತಾರೆ. ಸದರಿಯವರು ನನಗೆ ಹೊಡೆಯುತ್ತಿದ್ದಾಗ ಶರಣಪ್ಪ ಭೋರಟ್ಟಿ, ಧರೇಪ್ಪ ಬಂಕಲಗಿ, ಸಾಯಬಣ್ಣ ಪೂಜಾರಿ ಹಾಗೂ ಹಣಮಂತ ಮಿರಗಿ ಇವರು ಬಂದು ಜಗಳ ಬಿಡಿಸಿದರು, ಆಗ ಅಮೋಗಿ ಈತನು ಕೊಡಲಿಯನ್ನು ಸಾಯಬಣ್ಣ ಇವರ ಮನೆಯ ಮುಂದೆ ಬಿಸಾಕಿ ಎಲ್ಲರೂ ಕೂಡಿ ಅಲ್ಲಿಂದ ಹೊದರು. ನಂತರ ನನ್ನ ಅಣ್ಣ ಜಾನಪ್ಪ ಮತ್ತು ಶರಣಪ್ಪ ಇಬ್ಬರು ಕೂಡಿ ಜೀಪಿನಲ್ಲಿ ಅಫಜಲಪೂರ ಸರ್ಕಾರಿ  ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಸದರಿಯವರು ನನಗೆ ಹೊಡೆದರಿಂದ ನನ್ನ ತಲೆಗೆ ಬಾರಿ ರಕ್ತಗಾಯ ಮತ್ತು ಮೈ ಕೈಗೆ ಗುಪ್ತಗಾಯವಾಗಿರುತ್ತದೆ. 1)ಅಮೋಗಿ ತಂದೆ ಸಿದ್ರಾಮ ಕಾಮನಕೇರಿ 2) ತುಕಾರಾಮ ತಂದೆ ಸಿದ್ರಾಮ ಕಾಮನಕೇರಿ 3) ಭೀಮಶಾ ತಂದೆ ಬಸಣ್ಣ ಹಾದಿಮನಿ ಸಾ|| ಎಲ್ಲರೂ ಕರಜಗಿ ಇವರಿಗೂ ನನಗೆ ಹೊಲದ ಬಾಂದಾರಿ ಸಂಭಂದ ತಕರಾರು ಇದ್ದು, ಅದೆ ದ್ವೇಷದಿಂದ ಮೂರು ಜನರು ನನಗೆ ಇಂದು ದಿನಾಂಕ 11-09-2015 ರಂದು ಸಾಯಂಕಾಲ 7:00 ಗಂಟೆ ಸುಮಾರಿಗೆ ನಮ್ಮೂರ ಸಾಯಬಣ್ಣ ಮಗಿ ಇವರ ಮನೆಯ ಮುಂದೆ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿ ಹಾಗೂ ನನಗೆ ಹಿಡಿದುಕೊಂಡು ಕೊಡಲಿಯಿಂದ ಹೊಡೆದು ತಲೆಗೆ ಬಾರಿ ರಕ್ತಗಾಯ ಪಡಿಸಿ ದುಖಾಪತ ಪಡಿಸಿರುತ್ತಾರೆ ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೆಕೆಂದು ಗುನ್ನೆ  ದಾಖಲಾಗಿರುತ್ತದೆ.

12 September 2015

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಾಹಾದೇವಪ್ಪ ತಂದೆ ಲಗಮಣ್ಣ ಬಳಗಾರ ಸಾ|| ಕರಜಗಿ ಗ್ರಾಮ ತಾ|| ಅಫಜಲಪೂರ ರವರ  ಹೊಲ ಸರ್ವೆ ನಂಬರ 234 ನೇದ್ದಕ್ಕೆ ಹೊಂದಿ ನಮ್ಮೂರ ಅಮೋಗಿ ತಂದೆ ಸಿದ್ರಾಮ ಕಾಮನಕೇರಿ ಇವರ ಹೊಲ ಇರುತ್ತದೆ. ಸದರಿ ಅಮೋಗಿ ಈತನು ಗಳೆ ಹೊಡೆದಾಗೊಮ್ಮೆ ನನ್ನ ಹೊಲ ಹೊಡೆಯುತ್ತಾ ಬರುತ್ತಿರುತ್ತಾನೆ. ನಾನು ಅಮೋಗಿ ಈತನಿಗೆ ನನ್ನ ಹೊಲದಲ್ಲಿ ಹೆಚ್ಚಿಗೆ ಹೊಡೆಯಬೇಡ ನಿನ್ನ ಹೊಲ ಎಷ್ಟು ಇರುತ್ತೊ ಅಷ್ಟು ಹೊಡೆ ಅಂತಾ ಹೇಳಿದಕ್ಕೆ ಅವನಿಗೂ ನನಗು ಜಗಳ ಆಗುತ್ತಾ ಬಂದಿರುತ್ತದೆ. ದಿನಾಂಕ 11-09-2015 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ಹೊಲದಲ್ಲಿದ್ದಾಗ ಸದರಿ ಅಮೊಗಿ ಈತನಿಗೂ ನನಗು ಬಾಯಿ ಬಾಂದಾರಿ ಸಂಭಂದ ಜಗಳ ಆಗಿರುತ್ತದೆ. ಸಂಜೆ 7:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಿಂದ ಹೊರಗೆ ಹೊಗುತ್ತಿದ್ದಾಗ ನಮ್ಮೂರ ಸಾಯಬಣ್ಣ ಮಗಿ ಇವರ ಮನೆಯ ಮುಂದೆ ಹೊಗುತ್ತಿದ್ದಾಗ ಅಮೋಗಿ ತಂದೆ ಸಿದ್ರಾಮ ಕಾಮನಕೇರಿ ಮತ್ತು ಅವನ ಅಣ್ಣ ತುಕಾರಾಮ ತಂದೆ ಸಿದ್ರಾಮ ಕಾಮನಕೇರಿ ಮತ್ತು ಅವನ ತಂಗಿಯ ಗಂಡ ಭೀಮಶಾ ತಂದೆ ಬಸಣ್ಣ ಹಾದಿಮನಿ ಮೂರು ಜನರು ನನ್ನ ಎದುರಿಗೆ ಬಂದು, ಅವರಲ್ಲಿ ಅಮೋಗಿ ಈತನು ಏನೊ ಭೋಸಡಿ ಮಗನೆ ಹೊಲದಲ್ಲಿ ನನ್ನ ಜೋತೆನೆ ಜಗಳ ಮಾಡುತ್ತಿ ಅಂತಾ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಏಳೆದಾಡಿ ಕೈಯಿಂದ ಹೊಡೆದನು ತುಕಾರಮ ಈತನು ಕಾಲಿನಿಂದ ಒದ್ದನು. ಆಗ ನನಗು ಅವರಿಗೂ ತೆಕ್ಕ ಮುಸ್ತಿ ಆಗುತ್ತಿದ್ದಾಗ ಭೀಮಶಾ ಈತನು ನನ್ನನ್ನು ಹಿಡಿದುಕೊಂಡಾಗ ಅಮೋಗಿ ಈತನು ಅಲ್ಲೆ ಸಾಯಬಣ್ಣ ಮಗಿ ಇವರ ಮನೆಯ ಮುಂದೆ ಕಟ್ಟಿಗೆ ಒಡೆಯಲು ಇಟ್ಟಿದ ಕೊಡಲಿಯನ್ನು ತಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದನು. ಆಗ ನಾನು ಕೆಳಗೆ ಬಿದ್ದಾಗ ಮೂರು ಜನರು ಕೂಡಿಕೊಂಡು ನನಗೆ ಕಾಲಿನಿಂದ ಒದ್ದು ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 08-09-2015 ರಂದು  ಸೊನ್ನ ಗ್ರಾಮದ ಹತ್ತಿರ ಭೀಮಾನದಿಯಿಂದ ಅಕ್ರಮವಾಗಿ ಕಳ್ಳತನದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತಿದ್ದಾನೆ. ಅಂತಾ ಬಾತ್ಮಿ ಬಂದಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮತ್ತು ಮಾನ್ಯ ತಹಸಿಲ್ದಾರ ಅಫಜಲಪೂರ ಸಾಹೇಬರೊಂದಿಗೆ ಸೊನ್ನ ಗ್ರಾಮದ ಹೊಸ ಊರ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟಿಪ್ಪರ ಬರುತ್ತಿದ್ದು ನೋಡಿ ನಾವು ಸದರಿ ಟಿಪ್ಪರಗಳನ್ನು ನಿಲ್ಲಿಸಿ  ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಬಸವರಾಜ ತಂದೆ ಮಲ್ಲಿಕಾರ್ಜುನ ಹೂಗಾರ ವ||27 ವರ್ಷ ಜಾ|| ಹೂಗಾರ ಉ|| ಟಿಪ್ಪರ ಚಾಲಕ ಸಾ|| ಅರಳಗುಂಡಗಿ ತಾ||ಜೇವರ್ಗಿ  ಅಂತಾ ತಿಳಿಸಿದ್ದು  ಪಂಚರ ಸಮಕ್ಷಮ ನಾನು ಹಾಗೂ ಮಾನ್ಯ ತಹಸಿಲ್ದಾರ ಸಾಹೇಬರು ಟಿಪ್ಪರನ್ನು  ಚಕ್ಕ ಮಾಡಲು, ಅಶೋಕ ಲ್ಯಾಲೆಂಡ್‌ ಕಂಪನಿಯ  ಟಿಪ್ಪರ ಇದ್ದು ಅದರ ನಂ ಕೆಎ-32 ಸಿ-0238 ಅಂತ ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧೀಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು, ಸದರಿಯವನು ನಾನು ಈಗಾಗಲೆ ಒಂದು ಟ್ರಿಪ್ ಮರಳನ್ನು ಸಾಗಾಣಿಕೆ ಮಾಡಿರುತ್ತೆನೆ, ಈಗ ಎರಡನೆ ಟ್ರಿಪ್ಪ ತುಂಬಿಕೊಂಡು ಹೋಗುತ್ತಿದ್ದೆನೆ ಅಂತಾ ಹೇಳಿ ತನ್ನ ಹತ್ತಿರ ಇದ್ದ ರಾಯಲ್ಟಿಯನ್ನು ತೋರಿಸಿದನು, ಸದರಿ ರಾಯಲ್ಟಿಯನ್ನು  ತಹಸಿಲ್ದಾರ ಸಾಹೇಬರು ಹಾಗೂ ನಾನು ಪಂಚರ ಸಮಕ್ಷಮದಲ್ಲಿ  ಪರಿಶಿಲಿಸಿ ನೋಡಲು ರಾಯಲ್ಟಿ ಮೇಲೆ ಟಿಪ್ಪರ ನಂ ಕೆಎ-32 ಸಿ-0238 ನೇದ್ದರಲ್ಲಿ ದಿನಾಂಕ 08-09-2015 ರಂದು ಬೆಳಿಗ್ಗೆ 06.00 ಗಂಟೆಯಿಂದ ದಿನಾಂಕ 08-09-2015 ರಂದು ಸಾಯಂಕಾಲ 6:00 ಗಂಟೆಯ ಒಳಗೆ ಅಫಜಲಪೂರ  ಸ್ಟಾಕ ನಿಂದ ಚವಡಾಪೂರ ಮಾರ್ಗವಾಗಿ ಕಲಬುರಗಿ ಸಾಗಾಟ ಮಾಡಬೇಕು ಅಂತಾ ನಮೂದಿಸಿದ್ದು ಇತ್ತು, ಸದರಿ ಟಿಪ್ಪರ ಚಾಲಕನು ರಾಯಲ್ಟಿಯ ಪ್ರಕಾರ  ಮರಳು ಸಾಗಣಿಕೆ ಮಾಡದೇ  ಅನದಿಕೃತವಾಗಿ ಕಳ್ಳತನದಿಂದ ಸೋನ್ನ ಭಿಮಾನದಿಯಿಂದ ಟಿಪ್ಪರದಲ್ಲಿ  ಮರಳು ಸಾಗಾಣಿಕೆ ಮಾಡುತ್ತಿದ್ದರಿಂದ, ಸದರಿ ಟಿಪ್ಪರಿನ ರಾಯಲ್ಟಿಯನ್ನು ಹಾಗೂ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಣಿಕೆ ಮಾಡುತ್ತಿದ್ದ ಮರಳು ತುಂಬಿದ ಟಿಪ್ಪರನ್ನು   ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ನಂದು ಪ್ರಕರಣ ದಾಖಲಿಸಲಾಗಿದೆ.
ಅಫಜಪೂರ ಠಾಣೆ : ದಿನಾಂಕ 07-09-2015 ರಂದು ಅಫಜಲಪೂರದ ಕಲಬುರಗಿ ರೋಡಿನ ಲಕ್ಷ್ಮಿ ಗುಡಿ ಹತ್ತಿರ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿದ ಒಂದು ಟಿಪ್ಪರ ಕಲಬುರಗಿ ಕಡೆ ಹೊರಟಿರುತ್ತದೆ  ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ನೀರಾವರಿ ಆಫಿಸ್  ಹತ್ತಿರ ಹೊಗುತಿದ್ದಾಗ ಒಂದು ಟಿಪ್ಪರ ಕಲಬುರಗಿ ಕಡೆ ಹೊರಟಿದ್ದು ನಾವು ಅದರ ಹತ್ತಿರ ಹೋಗಿ ಕೈ ಸೊನ್ನೆ ಮಾಡಿ ಚಾಲಕನಿಗೆ ನಿಲ್ಲಿಸುವಂತೆ ಸೂಚನೆ ಕೊಟ್ಟಾಗ ಸದರಿ ಟಿಪ್ಪರ ಚಾಲಕನು ನಮಗೆ ಮತ್ತು ನಮ್ಮ ಪೊಲೀಸ್ ಜೀಪ ನೋಡಿದ ತಕ್ಷಣ ತನ್ನ ಟಿಪ್ಪರನ್ನು ನಿಲ್ಲಿಸಿ ಕತ್ತಲಲ್ಲಿ  ಓಡಿ ಹೋದನು. ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು  ಚಕ್ಕ ಮಾಡಲು, ASHOK LEYLAND  ಕಂಪನಿಯ ಟಿಪ್ಪರ ನಂ ಕೆಎ-32 ಬಿ-8050 ಅಂತ ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಟಿಪ್ಪರನಲಿದ್ದ ಮರಳಿನ ಅಂದಾಜು ಕಿಮ್ಮತ್ತು 5000/- ರೂ ಇರಬಹುದು. .ನಂತರ ಸದರಿ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

11 September 2015

Kalaburagi District Reported Crimes.

ಜೇವರ್ಗಿ  ಠಾಣೆ : ದಿನಾಂಕ: 10.09.2015 ರಂದು 17:00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿ: 30-08-2015 ರಂದು ಮುಂಜಾನೆ ನಾನು ಕಿರಕುಳ ರಜೆ ಮೇಲೆ ಮನೆಯಲ್ಲಿ ಇದ್ದಾಗ ನಮ್ಮ ಆಸ್ಪತ್ರೆಯ ಸ್ಟಾಪ್ ನರ್ಸ ಸಾಜೀಯಾ ಫರವೀನ್ ಇವರು ಪೊನ ಮಾಡಿ ದಿ: 29-08-15 ರಂದು ರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ನಮ್ಮ ಆಸ್ಪತ್ರೆಯ ಬಾಗಿಲ ಕೊಂಡಿ ಮುರಿದು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಹೇಳಿ ನನಗೆ ಬರಲು ತಿಳಿಸಿದರು. ವಿಷಯ ಗೊತ್ತಾದ ಕೂಡಲೇ ನಾನು ಮತ್ತು ನಮ್ಮ ಆಸ್ಪತ್ರೆಯ ಮಹ್ಮ,ದ್ ಅಬ್ದುಲ್ ಖದೀರ ಕೂಡಿಕೊಂಡು ಬಿರಾಳ [ಬಿ] ಆಸ್ಪತ್ರೆಗೆ ಹೋಗಿ ನೋಡಲಾಗಿ ಆಸ್ಪತ್ರೆ ಬಾಗಿಲ ಕೊಂಡಿ ಮುರಿದ್ದಿತ್ತು, ಓಳಗೆ ಹೋಗಿ ನೋಡಲಾಗಿ ಆಸ್ಪತ್ರೆಯಲ್ಲಿನ 1. ಒಂದು ವಾಷೀಂಗ್ ಮಸ್ಸಿನ ಅ.ಕಿ. 8000=00 ರೂ. 2. ಒಂದು ಪ್ರೀಜ್ ಅ.ಕಿ. 6000=00 ರೂ  3. ಒಂದು ಏರಕೂಲರ್ ಅ.ಕಿ. 2500=00 ರೂ, 4. ಸೊಲಾರ್ ಬ್ಯಾಟರಿ ಅ.ಕಿ. 5000=00 ರೂ. 5. ಬಿ.ಪಿ. ಆಫರೇಟರ್ ಅ.ಕಿ. 2000=00 ಹಿಗೆ ಒಟ್ಟು 23.500/- ರೂ ಕೀಮ್ಮತಿನ ವಸ್ತುಗಳು ಕಳುವಾಗಿದ್ದವು. ಅಲ್ಲಿಯೇ ಇದ್ದ ನಮ್ಮ ಆಸ್ಪತ್ರೆಯ ಸ್ಟಾಪ್ ನರ್ಸ ಸಾಜೀಯಾ ಫರವೀನ್ ಇವರು ಹೇಳಿದ್ದೆನೆಂದರೆ ನೀನ್ನೆ ಅಂದರೆ ದಿನಾಂಕ 29-08-2015 ರಂದು ಮುಂಜಾನೆ ನಮ್ಮ ಆಸ್ಪತ್ರೆಯ ಸಿಬ್ಬಂದಿಯವರು ಆಸ್ಪತ್ರೆಗೆ ಬಂದು ಕೆಲಸ ಮುಗಿಸಿಕೊಂಡು ಸಾಯಂಕಾಲ 7.00 ಗಂಟೆಯ ಸುಮಾರಿಗೆ  ಆಸ್ಪತ್ರೆಯ ಬಾಗಿಲ ಮುಚ್ಚಿ ಕೀಲಿ ಮತ್ತು ಸರಪಳಿ ಹಾಕಿ ಮನೆಗೆ ಬಂದಿರುತ್ತೆವೆ. ಇಂದು ಮುಂಜಾನೆ 6.00 ಗಂಟೆಯ ಸುಮಾರಿಗೆ ಆಸ್ಪತ್ರೆಯ ಪಕ್ಕದ ಹೊಲದವರಾದ ಶಂಕರೇಪ್ಪ ಹೊಸಮನಿ ಇವರು  ನಮ್ಮ ಆಸ್ಪತ್ರೆಯ ನೀಲಮ್ಮ ಇವರಿಗೆ ಆಸ್ಪತ್ರೆ ಕಳುವಾದ ಬಗ್ಗೆ ಹೇಳಿದ ಕೂಡಲೆ ನಾವು ಆಸ್ಪತ್ರೆಗೆ ಬಂದು ನೋಡಲಾಗಿ ಆಸ್ಪತ್ರೆ ಕಳುವಾಗಿದ್ದು ನಿಜವಿತ್ತು. ಅಂತಾ ನನಗೆ ತಿಳಿಸಿದರು. ನಾನು ಮತ್ತು ನಮ್ಮ ಆಸ್ಪತ್ರೆಯ ಸಿಬ್ಬಂದಿಯವರು ಕೂಡಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಮತ್ತು ಈ ವಿಷಯ ನಾನು ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ ಇಂದು ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸುತ್ತಿದ್ದು ಮುಂದಿನ ಕ್ರಮ ಕೈಕೊಳ್ಳಬೇಕುಅಂತ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 242/15 ಕಲಂ 457.380 ಐ.ಪಿ.ಸಿ. ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.

ಆಳಂದ  ಠಾಣೆ  : ದಿನಾಂಕ:10/09/2015 ರಂದು 07:00 ಪಿ.ಎಮ್.ಕ್ಕೆ ಗಂಟೆಗೆ ಫಿರ್ಯಾದಿ  ಮಹ್ಮದ ಯೂನುಸ ತಂದೆ ಮಹ್ಮದ ಮುಸಾ ವಯಾ: 45 ವರ್ಷ ಜಾ: ಮುಸ್ಲಿಂ ಉ: ಲಾರಿ ಚಾಲಕ & ಮಾಲೀಕ ಸಾ: ಮುಸ್ಲಿಂ ಚೌಕ್ ದರ್ಗಾ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಒಂದು ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೆನೆಂದರೆ ನನ್ನದೊಂದು ಲಾರಿ ನಂ:ಕೆ.ಎ:32 ಎ:6724 ನೇದ್ದರಲ್ಲಿ ಮಾಲು ಬಾಡಿಗೆಯಿಂದ ತರುವದು ಹಾಗೂ ತಗೆದುಕೊಂಡು ಹೋಗುವದು ಮಾಡುತ್ತಾ ಬಂದಿರುತ್ತೆನೆ. ನಮ್ಮ ಲಾರಿಯ ಮೇಲೆ ದಸ್ತಗಿರ ತಂದೆ ಬಡೇಸಾಬ ಸಾ:ಮಿಲತ್ ನಗರ ರಿಂಗ್ ರೋಡ ಕಲಬುರಗಿ ಇತನು ಸುಮಾರು 2 ವರ್ಷದಿಂದ ಕ್ಲೀನರ್ ಕೆಲಸ ಮಾಡುತ್ತಾ ಬಂದಿರುತ್ತಾನೆ. ದಿನಾಂಕ:04/09/2015 ರಂದು ನಮ್ಮ ಲಾರಿಯಲ್ಲಿ ಮಾಲು ತುಂಬಿಕೊಂಡು ಲಾತೂರಕ್ಕೆ ತಗೆದುಕೊಂಡು ಹೋಗಿ ಅಲ್ಲಿ ಖಾಲಿ ಮಾಡಿ ಮರಳಿ ಕಲಬುರಗಿಗೆ ಬರುವ ಕುರಿತು ದಿನಾಂಕ:05/09/2015 ರಂದು ನಮ್ಮ ಲಾರಿ ನಂ:ಕೆ.:32 :6724 ನೇದ್ದರಲ್ಲಿ 50 ಕೆ.ಜಿ. 60 ಪಾಕೀಟ್ ಜಿಂದಲ್ ಕಂಪನಿಯ ಶೇಂಗಾ ಬೀಜದ ಚೀಲಗಳು ಹಾಗೂ ಮನೆಯ ಬಾಗಿಲದ ಕಟ್ಟಿಗೆ ಸಾಮಾನುಗಳು ತುಂಬಿಕೊಂಡು ಮೇಲೆ ತಾಡಪತ್ರಿ ಮುಚ್ಚಿಕೊಂಡು ಉಮರ್ಗಾ ಮಾರ್ಗವಾಗಿ ಆಳಂದಕ್ಕೆ ಬರುವಾಗ ದಿನಾಂಕ:06/09/2015 ರಂದು ಬೆಳಗಿನ ಜಾವ 04:15 ಗಂಟೆ ಸುಮಾರಿಗೆ ಚಿತಲಿ ಕ್ರಾಸ ಹತ್ತಿರ ಚಡೌನದಲ್ಲಿ ಲಾರಿ ಸಾವಕಾಶವಾಗಿ ಹೋಗುವಾಗ ಲಾರಿಯ ಹಿಂದುಗಡೆ ಸಪ್ಪಳವಾಗಿದ್ದು  ನಂತರ ಆಳಂದ ಚಕ್ಕಪೋಸ್ಟ್ ಹತ್ತಿರ ಲಾರಿ ನಿಲ್ಲಿಸಿ ನೋಡಲಾಗಿ ಸದರಿ ಲಾರಿಯ ಮೇಲೆ ಮುಚ್ಚಿದ ತಾಡ ಪತ್ರಿ ಹರಿದಿದ್ದು ಅದರಲ್ಲಿದ 50 ಕೆ.ಜಿ. 05 ಪಾಕೀಟ್ ಜಿಂದಲ್ ಕಂಪನಿಯ ಶೇಂಗಾ ಬೀಜದ ಪಾಕೀಟ್ ,ಕೀ.18,500/-ರೂ ಕಿಮ್ಮತಿನ ಮಾಲನ್ನು ಚಿತಲಿ ಚಡೌನ ಹತ್ತಿರ ಲಾರಿ ನಿಧಾನವಾಗಿ ಹೋಗುವಾಗ ಲಾರಿ ಹಿಂಭಾಗದಿಂದ ಯಾರೋ ಕಳ್ಳರು ಲಾರಿಯ ಮೇಲೆ ಹತ್ತಿ ತಾಡಪತ್ರಿ ಹರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ನಂತರ ನಾನು ಸದರಿ ವಿಷಯವನ್ನು ಮಾಲಿನ ಮಾಲೀಕರಿಗೆ ತಿಳಿಸಿ ವಿಚಾರಿಸಿಕೊಂಡು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.ಕಾರಣ ಸದರಿ ನಾನು ಚಲಾಯಿಸುತ್ತಿದ್ದ ಲಾರಿ ನಂ: ಕೆ.:32 :6724 ನೇದ್ದರಲ್ಲಿದ 50 ಕೆ.ಜಿಯ   05 ಪಾಕೀಟ್ ಜಿಂದಾಲ್ ಕಂಪನಿಯ ಶೇಂಗಾ ಬೀಜ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:145/2015 ಕಲಂ:379 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದ.