POLICE BHAVAN KALABURAGI

POLICE BHAVAN KALABURAGI

03 April 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-04-2015 ರಂದು ಅಫಜಲಪೂರ ಪಟ್ಟಣದ ಪಾಲ್ಟೆಕ್ನಿಕ್ ಕಾಲೇಜ ಮುಂದೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣಹಚ್ಚಿ ಇಸ್ಪೇಟ ಏಲೆಗಳ ಸಾಹಾಯದಿಂದ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿ.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಪಾಲ್ಟೆಕ್ನಿಕ ಕಾಲೇಜದಿಂದ ಸ್ವಲ್ಪ ದೂರು ಹೋಗಿ, ಮರೆಯಾಗಿ ನಿಂತು ನೊಡಲು ಪಾಲ್ಟೆಕ್ನಿಕ್ ಕಾಲೇಜ ಮುಂದೆ ಲೈಟಿನ ಬೆಳಕಿನಲ್ಲಿ 05 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ನಮ್ಮ ಸಿಬ್ಬಂದಿ ಜನರು ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ,  05 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಸಂತೋಶ ತಂದೆ ಶಂಕರ ಚಲವಾದಿ 2) ಸಂತೋಶ ತಂದೆ ಸಿದ್ದಣ್ಣಾ ಬಿಲ್ಯಾಡ 3) ದತ್ತು ತಂದೆ ಹಣಮಂತ ಕೋರಿ 4) ಶಿವಪ್ಪಾ ತಂದೆ ಭೀಮಶಾ ಸಿಂಗೆ 5) ಲಕ್ಷ್ಮೀಪುತ್ರ ತಂದೆ ಪರೆಪ್ಪಾ ಬಳೂರಗಿ ಸಾ|| ಎಲ್ಲರು ಅಫಜಲಪೂರ ಅಂತಾ ತಿಳಿಸಿದ್ದು  ಸದರಿಯವರಿಂದ ಜೂಜಾಟಕ್ಕೆ ಬಳಸಿದ  52 ಇಸ್ಪೆಟ ಎಲೆಗಳು ನಗದು ಹಣ 3860/- ರೂ ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. .
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಧರ್ಮಣ್ಣಾ ತಂದೆ ಭೀಮಶ್ಯಾ ಭೀಮಳ್ಳಿ ಸಾ:ಪಟ್ಟಣ ತಾ:ಜಿ:ಕಲಬುರಗಿ  ಇವರು ದಿನಾಂಕ:-02/03/2015 ರಂದು ರಾತ್ರಿ ಪಟ್ಟಣ ಗ್ರಾಮದ ಬಸವಂತರಾಯ ಇವರ ಹೋಲದಲ್ಲಿ ಫಿರ್ಯಾದಿ ಹೆಂಡತಿ ಮತ್ತು ತಾಯಿ ಇಬ್ಬರು ಕೂಡಿಕೊಂಡು ಸಂಡಾಸಕ್ಕೆ ಹೋಗುತ್ತಿದ್ದಾಗ ಆಗ ಲಕ್ಷಿಕಾಂತ ಇತನು ನಮ್ಮ ಮಾಲಿಕರ ಹೋಲದಲ್ಲಿ ಸಂಡಾಸಕ್ಕೆ ಯಾಕೇ ಬಂದಿದಿರಿ ಅಂತಾ ಬಾಯಿ ಮಾತಿನ ತಕರಾರು ಮಾಡುತ್ತಿದ್ದಾಗ ಆಗ ಫಿರ್ಯಾದಿ ವಿಚಾರಿಸಲು ಹೋದಾಗ 1. ಲಕ್ಷ್ಮಿಕಾಂತ ತಂದೆ ಮಾರುತಿ ನಾಯಿಕೋಡಿ 2. ರಾಚಣ್ಣಾ ತಂದೆ ಶಿವಶರಣಪ್ಪ ನಾಯಿಕೋಡಿ 3. ಚಂದ್ರು ತಂದೆ ಶರಣಪ್ಪ ನಾಯಿಕೋಡಿ 4. ಮಹಾದೇವಪ್ಪ ತಂದೆ ಸಿದ್ದಣ್ಣಾ ನಾಯಿಕೋಡಿ 5. ಶರಣಬಸಪ್ಪ ತಂದೆ ಸಿದ್ದಣ್ಣಾ ನಾಯಿಕೋಡಿ ಸಾ: ಎಲ್ಲರು ಪಟ್ಟಣ ತಾ:ಜಿ:ಕಲಬುರಗಿ ಎಲ್ಲರು  ಕೂಡಿಕೊಂಡು ಜಗಳ ತೆಗದು ಮಾದಿಗ ಸೂಳೇ ಮಕ್ಕಳದು ಬಹಳ ಆಗಿದೆ ಅಂತಾ ಜಾತಿ ಎತ್ತಿ ಬೈಯ್ದ ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡುತ್ತಿದ್ದಾಗ ಬೀಡಿಸಲು ಬಂದ ಫಿರ್ಯಾದಿ ತಾಯಿಗೆ ಕೈ ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಹೊಡೆ ಬಡೆ ಮಾಡಿ ಜಗಳ ನಂತರ ಸದರಿ ಆರೋಪಿತರೆಲ್ಲರೂ ಇನ್ನೊಮ್ಮೆ ಈ ಹೋಲಕ್ಕೆ ಸಂಡಾಸಕ್ಕೆ ಬಂದರೇ ನಿಮಗೆ ಗಳ್ಯಾದ ದಿಂಡಿಗೆ ಹಚ್ಚಿ ಕೊಡಲಿಯಿಂದ ಕಡಿಯುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಬಸಪ್ಪ ತಂದೆ ಪರಮೇಶ್ವರ ಮೇಳಕುಂದಿ  ಸಾ: ಕೊಳಕೂರ ತಾ: ಜೇವರ್ಗಿ ಜಿ: ಕಲಬುರಗಿ ರವರು ದಿನಾಂಕ 02-04-2015 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನನ್ನ ಹೆಂಡತಿ ವಿಜಯಲಕ್ಷ್ಮಿ ಇವಳಿಗೆ ಕಲಬುರಗಿ ಚಿಣಮಗೇರಿ ಆಸ್ಪತ್ರೆಯಲ್ಲಿ ತೋರಿಸುವ ಸಲುವಾಗಿ ನಮ್ಮೂರಿನಿಂದ ನಾನು ಚಲಾಯಿಸುತ್ತಿರುವ ಮೋಟಾರ ಸೈಕಲ ನಂಬರ ಕೆಎ-32 ಇಎಫ-8417 ನೇದ್ದರ ಮೇಲೆ ಕೂಡಿಸಿಕೊಂಡು ಕಲಬುರಗಿ ರಾಮ ಮಂದಿರ ರಿಂಗ ರೋಡ ಮುಖಾಂತರವಾಗಿ ಆರ್.ಪಿ. ಸರ್ಕಲ ಕಡೆಗೆ ಹೋಗುವಾಗ ದಾರಿ ಮದ್ಯ ಬಂಜಾರ ಕ್ರಾಸ್ ಸಮೀಪವಿರುವ ಪೆಟ್ರೊಲ ಪಂಪ ಎದುರಿನ ರೋಡ ಮೇಲೆ ಹಿಂದಿನಿಂದ ಸಂಜಯ ಇತನು ತಾನು ಚಲಾಯಿಸುತ್ತಿರುವ ಎನ್.ಈ.ಕೆ.ಆರ್.ಟಿ.ಸಿ ಬಸ ನಂಬರ ಕೆಎ-32 ಎಫ-1546 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ನನ್ನ ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಬಸ ಮುಂದಿನ ಗಾಲಿಯು ನನ್ನ ಎಡಗಾಲಿಗೆ ಹಾಯಿಸಿ ನನ್ನ ಎಡಗಾಲಿನ ಮೊಳಕಾಲ ಕೆಳಗೆ ಭಾರಿಗುಪ್ತಪೆಟ್ಟು ತರಚಿದಗಾಯ, ಹಾಗು ಎಡ ತೊಡೆಗೆ ಗುಪ್ತಗಾಯ, ಎಡಗಾಲ ರಿಸ್ಟ ಹತ್ತಿರ ತರಚಿದಗಾಯ, ಹಾಗು ನನ್ನ ಹೆಂಡತಿಗೆ ಎಡ ಟೊಂಕಿಗೆ ಮತ್ತು ಎಡತೊಡೆಗೆ ಗುಪ್ತಪೆಟ್ಟುಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

02 April 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಶರಣಬಸಪ್ಪ ತಂದೆ ಹಣಮಂತ ಗೊಬ್ಬುರೆ ಸಾ:ಕಡಗಂಚಿ ತಾ:ಆಳಂದ ಇವರು  ದಿನಾಂಕ:-01/04/2015 ರಂದು ಬೆಳಿಗ್ಗೆ ಫಿರ್ಯಾದಿ ಶರಣಬಸಪ್ಪ ಹಾಗು ಮೃತ ಮಹೇಶ ತಂದೆ ಕಾಳಪ್ಪ ಚೆಂಗಟಿ ಇಬ್ಬರು ಕೂಡಿಕೊಂಡು ಮೋಟಾರ ಸೈಕಲ್ ನಂ ಎಂ.ಎಚ್-14 ಕ್ಯೂ-6108 ನೇದ್ದರ ಮೇಲೆ ಕಡಗಂಚಿಯಿಂದ ಸುಂಟನೂರಕ್ಕೆ ಸೆಂಟ್ರಿಂಗ ಕೆಲಸ ಕುರಿತು ಹೋಗುವಾಗ ಬೆಳಿಗ್ಗೆ 09:30 ಗಂಟೆಗೆ ಮೃತ ಮಹೇಶ ಇತನು ಸುಂಟನೂರ ಕ್ರಾಸ ಹತ್ತಿರ ತನ್ನ ಮೋಟಾರ ಸೈಕಲ್ ತಿರುಗಿಸುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಆಳಂದ ಕಡೆಯಿಂದ ಅರ್ಜುನ ತಂದೆ ಲಕ್ಷ್ಮಣ ಸಿಂಗೆ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನಂ ಎಂ.ಎಚ್-12 ಎಪ್.ಜೆ-2843 ನೇದ್ದನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ಕುಳಿತುಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಪಡಿಸಿದ ಪರಿಣಾಮ ಮಹೇಶ ಇತನಿಗೆ ತಲೆಗೆ ಭಾರಿ ಒಳಪೆಟ್ಟಾಗಿ ಮೂಗಿನಿಂದ ಕಿವಿಯಿಂದ ಬಾಯಿಯಿಂದ ರಕ್ತ ಬಂದು ಬೇಹೊಸ ಆಗಿದ್ದು ಫಿರ್ಯಾದಿ ಹಾಗು ಆಪಾದಿತ ಅರ್ಜುನ ಇಬ್ಬರಿಗು ಕೂಡಾ ಗಾಯಗಳಾಗಿದ್ದು ಸದರಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದಾಗ ವೈದ್ಯಾದಿಕಾರಿಗಳು ಮಹೇಶನಿಗೆ ನೋಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 31-03-2015 ರಂದು 10-30 ಗಂಟೆಗೆ ನಗರದ ಮುಸ್ಲಿಂ ಚೌಕ ಸನಾ ಹೋಟೆಲ ಹತ್ತಿರ ರೋಡಿನ ಮೇಲೆ ಮಹ್ಮದ ಇಲಿಯಾಸ ತಂದೆ ಅಬ್ದುಲ ವಾಹಿದ ಇತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಸಿ 5537 ನೇದ್ದರ ಮೇಲೆ ಹಿಂದೆ ತನ್ನ ಅಕ್ಕನಾದ ರೇಷ್ಮಾಭಾನು ಇವಳನ್ನು ಕೂಡಿಸಿಕೊಂಡು ಮಿಜಗುರಿ ರೋಡಿನ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ರೋಡ ದಾಟುತ್ತಿದ್ದ ಮಸ್ತಾಕ ಅಹ್ಮದ ತಂದೆ ಬಸೀರ ಅಹ್ಮದ, ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತಾನು ಸಹ ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದಿರುತ್ತಾನೆ. ಅಪಘಾತದಲ್ಲಿ ಮಸ್ತಾಕ ಅಹ್ಮದ ಈತನಿಗೆ ತೆಲೆಗೆ ಭಾರಿ ಪೆಟ್ಟಾಗಿದ್ದು, ಆರೋಪಿತನಿಗೆ ಸಹ ಪೆಟ್ಟಾಗಿದ್ದು ದಿನಾಂಕ 31-03-2015 ರಂದು ರಸ್ತೆ ಅಪಘಾತದಲ್ಲಿ ಭಾರಿಗಾಯಹೊಂದಿದ ಮಸ್ತಾಕ ಅಹ್ಮದ ತಂದೆ ಬಸೀರ ಅಹ್ಮದ ಈತನು ಕಲಬುರಗಿ ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಇಂದು ದಿನಾಂಕ 01-04-2015 ರಂದು 09-10 ಎ.ಎಮ್ ಕ್ಕೆ ಉಪಚಾರ ಫಲಕಾರಿ ಆಗದೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ ೦1.04.2015 ರಂದು ಜೇವರಗಿ ಪಟ್ಟಣದ ಅಗ್ನಿ ಶಾಮಕ ಠಾಣೆಯ ಮುಂದುಗಡೆ ಜೇವರ್ಗಿ ಶಹಾಪುರ ಮೇನ್‌ ರೋಡ್‌ನಲ್ಲಿ ಮಾರುತಿ ಸುಝಕಿ ರಿಟ್ಜ ಕಾರ್ ಟಿ.ಪಿ ನಂ ಕೆ.ಎ28ಎನ್.ಟಿ21215 ನೇದ್ದರ ಚಾಲಕನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಕಾರ್‌ ಅನ್ನು ಚಾಲಯಿಸಿ ಒಮ್ಮಲೆ ಯಾವುದೆ ಮುನ್ಸುಚನೆ ಇಲ್ಲದೆ ಬ್ರೇಕ್‌ ಹಾಕಿದ್ದರಿಂದ ಅವನ ಹಿಂದೆ ಬರುತ್ತಿದ್ದ ಮೋಟಾರು ಸೈಕಲ್‌ ನಂ ಕೆ.ಎ32ಇಸಿ 5083 ನೇದ್ದರ ಸವಾರನು ತನ್ನ ಬೈಕ್‌ ಅನ್ನುಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೇಲೆ ನಮೂದಿಸಿದ ಕಾರಿಗೆ ಡಿಕ್ಕಿ ಪಡಿಸಿ ಶಾಂತಾಬಾಯಿ ಮತ್ತು ಮೌನೇಶ ಇವರಿಗೆ ಸಾಧಾ ಮತ್ತು ಭಾರಿ ರಕ್ತ ಗಾಯಪಡಿಸಿರುತ್ತಾನೆ ಅಂತಾ ಶ್ರೀ ಶರಣಪ್ಪ ತಂದೆ ನಾಗಪ್ಪ ಹೊನಗುಂಟಿ ಸಾ|| ಹಸನಾಪುರ ತಾ|| ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಪವನ ತಂದೆ ಮಲ್ಲಿನಾಥ ರೇವೂರ, ಆಳಂದ ಕಾಲೂನಿ, ಆಳಂದ ರೋಡ ಕಲಬುರಗಿ  ರವರು ದಿನಾಂಕ 01-04-2015 ರಂದು ಮುಂಜಾನೆ ಆಳಂದ ರೋಡಿನಲ್ಲಿ ಬರುವ ಶೇಟ್ಟಿಕಾಂಪ್ಲೆಕ್ಸ ಎದರುಗಡೆ ರೋಡಿನ ಮೇಲೆ ಫಿರ್ಯಾದಿಯು ತನ್ನ ಮೋಟಾರ ಸೈಕಲ ನಂ ಕೆ.ಎ 32 ಜೆ 4782 ನೇದ್ದನ್ನು ಚಲಾಯಿಸಿಕೊಂಡು ಶಹಾಬಜಾರ ನಾಕಾ ಕಡೆ ಬರುತ್ತಿದ್ದಾಗ ಆಳಂದ ಚೆಕ್ ಪೊಸ್ಟ ಕಡೆಯಿಂದ ಒಂದು ಅಟೋರಿಕ್ಷಾ ಚಾಲಕ ತನ್ನ ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಹಿಂದಿನಿಂದ ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 30.03.2015 ರಂದು ಮುಂಜಾನೆ ಶ್ರೀ ಭೀಮಣ್ಣ ತಂದೆ ಹಣಮಂತ ದೊಡ್ಡಮನಿ  ರವರು ತಮ್ಮ ಮನೆಯ ಮುಂದೆ ನಿಂತಾಗ ನನ್ನ ಮಗ ರಾಜಕುಮಾರ ಮತ್ತು ನನ್ನ ಹೆಂಡತಿ ಮಹಾದೇವಿ ಇವರು ಕೂಡಿ ನನಗೆ ನೀನು ಈ ಮನೆಯಲ್ಲಿ ಬರಬೇಡ ಅಂತ ತಡೆದು ನಿಲ್ಲಿಸಿ ಕೈಯಿಂದ ಬಡಿಗೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಆತ್ಮಹತ್ಯಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಲಕ್ಷ್ಮೀ ಗಂಡ ಅಂಜಲಪ್ಪ ವಡ್ಡರ, ಸಾ:ಮಾದವಾರ ಗ್ರಾಮ ಇವರಿಗೆ ತಂದೆ-ತಾಯಿಯವರು ಮಾದವಾರ ಗ್ರಾಮದ ಅಂಜಲಪ್ಪ ತಂದೆ ಹಣಮಂತ ವಡ್ಡರ ಇತನೊಂದಿಗೆ 9 ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದು ಎರಡು ಗಂಡು ಮಕ್ಕಳಿರುತ್ತಾರೆ. ಒಂದು ವರ್ಷದವರೆಗೆ ಅತ್ತೆ-ಮಾವ & ಗಂಡ ಚೆನ್ನಾಗಿ ನೋಡಿಕೊಂಡು, ನಂತರ ನನ್ನ ಗಂಡ ಅಂಜಲಪ್ಪ ಮತ್ತು ಅತ್ತೆಯಾದ ವೆಂಕಟಮ್ಮ, ಮಾವನಾದ ಹಣಮಂತ ಇವರು ನನಗೆ ಅಡುಗೆ ಮಾಡಲು ಬರುವದಿಲ್ಲ, ನೀನು ಚೆನ್ನಾಗಿ ಇಲ್ಲ, ಮನೆಗೆಲಸ ಮಾಡಲು ಬರುವದಿಲ್ಲ, ರಂಡಿ ಭೋಸಡಿ, ಅಂತ ಬೈದು ಮಾನಸೀಕಿ ಹಾಗೂ ದೈಹಿಕ ಕಿರುಕುಳ ನೀಡಿದ್ದಲ್ಲದೇ, ಸುಟ್ಟುಕೊಂಡು ಸಾಯಿ ರಂಡಿ ಅಂತ ಪದೇ-ಪದೇ ಬೈದು, ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ.ಈ ವಿಷಯ ನಮ್ಮ ತವರು ಮನೆಯಲ್ಲಿ ನನ್ನ ತಂದೆ-ತಾಯಿಗೆ ತಿಳಿಸಲು ಸದರಿಯವರು ಸಂಸಾರ ಇದ್ದ ಮೇಲೆ ಸಣ್ಣಪುಟ್ಟ ಜಗಳಗಳು ನಡೆಯುತ್ತವೆ ಅಂತ ಬುದ್ದಿ ಹೇಳಿ ಕಳೂಹಿಸಿ, ನನ್ನ ಮಗಳಿಗೆ ಬೈಯುವದು, ಹೊಡೆಬಡೆ ಮಾಡಬೇಡಿರಿ ಅಂತ ಕೈ ಮುಗಿದು ಕೇಳಿಕೊಂಡಿದ್ದರೂ ಸಹಾ ನನಗೆ ಹಾಗೇಯೇ ದೈಹಿಕ ಮತ್ತು ಮಾನಸೀಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ದಿ:29-03-2015 ರಂದು 10-00 ಎ.ಎಮ್.ಕ್ಕೆ ನಾನು ನನ್ನ ಗಂಡನ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದಾಗ   ನನ್ನ ಗಂಡ ಅತ್ತೆ-ಮಾವ ಇವರು ನನಗೆ ಅಡುಗೆ ಮಾಡಲು ಬರುವದಿಲ್ಲ, ನೀನು ಚೆನ್ನಾಗಿ ಇಲ್ಲ, ಮನೆಗೆಲಸ ಮಾಡಲು ಬರುವದಿಲ್ಲ, ಅಂತ ಹೇಳಿ ತಲೆಯ ಕೂದಲು ಹಿಡಿದು ಹೊಡೆಬಡೆ ಮಾಡಿರುತ್ತಾರೆ. ನಮ್ಮ ಅತ್ತೆ ನೀನು ಬೆಂಕಿ ಹಚ್ಚಿಕೊಂಡು ಸಾಯಿ ರಂಡಿ ಅಂತ ಬೈದಳು. ಸದರಿಯವರ ಕಿರುಕುಳ ತಾಳಲಾರದೇ ನಾನು ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಕಡ್ಡಿ ಕೊರೆದು ಸುಟ್ಟುಕೊಂಡಿದ್ದು ಇರುತ್ತದೆ ನಂತರ ನನ್ನ ಗಂಡ ಹಾಗೂ ಓನಿಯವರು ಕೂಡಿ ಬೆಂಕಿ ಆರಿಸಿದ್ದು ನನ್ನ ಮೈಗೆ ಎದೆಗೆ, ಟೊಂಕಕ್ಕೆ, ಹೊಟ್ಟೆಗೆ, ಗುಪ್ತಾಂಗಕ್ಕೆ, ಕೈಗಳಿಗೆ ಸುಟ್ಟಗಾಯಗಳಾಗಿದ್ದರಿಂದ, ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ಕಾರಣ ನನಗೆ ಮಾನಸೀಕ ಹಾಗೂ ದೈಹಿಕ ಕಿರುಕುಳ ನೀಡಿ, ಮೈಸುಟ್ಟುಕೊಂಡು  ಉಪಚಾರ ಪಡೆಯುತ್ತಾ ದಿನಾಂಕ 01-04-2014 ರಂದು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-04-2015 ರಂದು ಘತ್ತರಗಾ ಗ್ರಾಮದ ಅಂಬೆಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಘತ್ತರಗಾ ಗ್ರಾಮದ ಅಂಬೆಡ್ಕರ ಸರ್ಕಲದಿಂದ ಸ್ವಲ್ಪ ದೂರು ಮರೆಯಾಗಿ ನಿಂತು ನೋಡಲು ಅಂಬೆಡ್ಕರ ಸರ್ಕಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ದರೇಪ್ಪ ತಂದೆ ಭೀಮರಾಯ ಸಾಲುಟಗಿ ಸಾ: ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 480/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು  ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ದ್ವೀ ಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 27/03/2015 ರಂದು ರಾತ್ರಿಶ್ರೀ ಆನಂದ ರೆಡ್ಡಿ ತಂದೆ ಭೀಮರೆಡ್ಡಿ ರೆಡ್ಡಿ ಸಾ: ಮನೆ ನಂ. 11-1041/114/39ಬಿ ವಿಜಯನಗರ ಕಾಲೋನಿ ಬ್ರಹ್ಮಪೂರ  ಕಲಬುರಗಿ ರವರು ತಮ್ಮನ ಮೋಟರ ಸೈಕಲ್ ಕೆಎ- 33 ಎಚ್- 8708 ಇದರ ಇಂಜಿನ ನಂ.AF5C61329855 ಚೆಸ್ಸಿ ನಂ. MD625KF5561CO3473 ಪರಪಲ್ ಕಲರ ಮಾಡೆಲ್ 2006 ಅ.ಕಿ. 20000/- ರೂ. ನೇದ್ದನ್ನು ತೆಗೆದುಕೊಂಡು ನ್ಯೂ ತ್ರಿಶೂಲ್ ಬಾರ ಮುಂದುಗಡೆ ನಿಲ್ಲಿಸಿ ಪೋನ ಬಂದಿದ್ದರಿಂದ ಮಾತನಾಡುತ್ತಾ ಸ್ವಲ್ಪ ದೂರದಲ್ಲಿ ಹೋಗಿ ಬಂದು 9-40 ಪಿ.ಎಂ.ಕ್ಕೆ ನೋಡಲು ನಾನು ನಿಲ್ಲಿಸಿದ ಸ್ಥಳದಲ್ಲಿ ಟಿವಿಎಸ್ ಸ್ಟಾರ ಸೀಟಿ ಮೋಟಾರ ಸೈಕಲ್ ಇರಲಿಲ್ಲ. ಇದರ ಬಗ್ಗೆ ಎಲ್ಲಾ ಕಡೆ ಮಾಹಿತಿ ತಿಳಿಸಿ ಮತ್ತು ನನ್ನ ಸಂಬಂಧಿಕರಲ್ಲಿ ಮನೆಯ ಅಕ್ಕಪಕ್ಕದವರಲ್ಲಿ ಗೆಳೆಯರಲ್ಲಿ ಮೊಟರ ಸೈಕಲ್ ಬಗ್ಗೆ ವಿಚಾರಿಸಲಾಗಿ ನನ್ನ ಮೊಟರ ಸೈಕಲ್ ಎಲ್ಲಿ ಸಿಗಲಿಲ್ಲಾ ನಂತರ ನ್ಯೂ ತ್ರಿಶೂಲ್ ಬಾರದಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾ ನೋಡಲು ಯಾರೋ ಇಬ್ಬರೂ ಅಪರಿಚಿತರು ನಮ್ಮ ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

01 April 2015

Kalaburagi District Reported Crimes

ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 28.03.2015 ರಂದು 20:45 ಗಂಟೆಯಿಂದ 29.03.2015 ರಂದು 06:00 ರ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ರೇವನೂರ ಸಿಮಾಂತರದ ಹೊಲ ಸರ್ವೇ ನಂ 42/2 ನೇದ್ದರಲ್ಲಿನ ವೊಡಾಫೋನ್ ಟಾವರಿನ ಸೆಲ್ಟರ್‌ ರೂಮ್‌ ನ ಬಾಗಿಲ ಚಾವಿ ಮುರಿದು ಒಳಗೆ ಹೋಗಿ ಒಳಗಡೆ ಇದ್ದ ಒಟ್ಟು 24 ಬ್ಯಾಟರಿಗಳು ಅಂ.ಕಿ 24.000/ರೂ ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ  ಮಲ್ಲಿಕಾರ್ಜುನ. ತಂದೆ ಶಿವಶರಣಪ್ಪ ಕಲಬುರಗಿ ಸಾ|| ಕಾವೇರಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 31-03-2015 ರಂದು 10-30 ಎ ಎಮ್ ಕ್ಕೆ ಮುಸ್ಲಿಂ ಚೌಕ ಸನಾ ಹೋಟೆಲ ಹತ್ತಿರ ರೋಡಿನ ಮೇಲೆ  ಮುಸ್ತಾಕ ಅಹಮದ ಇತನು ನಡೆದುಕೊಂಡು ಹೋಗುತಿದ್ದಾಗ ಆರೋಪಿ ತನ್ನ ಮೋ,ಸೈ ನಂ ಕೆ ಎ 32 ಇಸಿ 5537 ನೇದ್ದನ್ನು ಮಿಜಗುರಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಡಿಕ್ಕಿ ಪಡಿಸಿ ಅಪಘಾತಮಾಡಿದ್ದು ಅಪಘಾತದಲ್ಲಿ ತಾನು ಸಹ ಗಾಯ ಹೋಂದಿ ಮಹ್ಮದ ಮುಸ್ತಾಕ ಇತನಿಗು ಸಹ ಭಾರಿ ಗಾಯಗೋಳಿಸಿರುತ್ತಾನೆ ಅಂತಾ ಶ್ರೀ ಅಜಮ ಪಟೇಲ ತಂದೆ ಮಹ್ಮದ ಅಲಿ ಸಾ: ಇಸ್ಲಾಮಾಬಾದ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 30.03.2015 ರಂದು ನನ್ನ ಮಗ ರವಿಕುಮಾರ  ಈತನು ನಡೆಸುತ್ತಿದ್ದ ನಮ್ಮ ಬುಲೇರೋ ವಾಹನ ನಂ ಕೆ.ಎ32ಎನ್.5722 ನೇದ್ದರಲ್ಲಿ ನಾನು ಮತ್ತು ನನ್ನ ಗಂಡ ಗಂಗಯ್ಯ ಕುಳಿತುಕೊಂಡು ಕೆಲಸದ ನಿಮಿತ್ಯ ಜೇವರ್ಗಿಗೆ ಬರುವಾಗ ಜೈನಾಪುರ ಕ್ರಾಸ್‌ ಹತ್ತಿರ ಆಂದೋಲಾ ಕೆಲ್ಲೂರು ರಸ್ತೆಯ ಮೇಲೆ ಬರುತ್ತಿದ್ದಾಗ ರಸ್ತೆಯ ಮೇಲೆ ದನಗಳು ಅಡ್ಡ ಬಂದಿದ್ದರಿಂದ ನನ್ನ ಮಗ ರವಿಕುಮಾರನು ಬುಲೇರೊ ಜೀಪ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನಿಂದ ನಡೆಸಿ ದನಗಳಿಗೆ ಉಳಿಸಲು ಹೋಗಿ ಒಮ್ಮೆಲೆ ಜೀಪ್‌ನ್ನು ಕಟ್ ಹೋಡೆದು ರೋಡಿನ ಪಕ್ಕದ ಗಿಡಕ್ಕೆ ಡಿಕ್ಕಿ ಪಡಿಸಿ ನನಗೆ ಮತ್ತು ನನ್ನ ಗಂಡನಿಗೆ ಸಾಧಾ ಮತ್ತು ಭಾರಿ ರಕ್ತ ಗಾಯ ಪಡಿಸಿರುತ್ತಾನೆ ಅಂತಾ ಶ್ರೀಮತಿ ಶಾಂತಾಬಾಯಿ ಗಂಡ ಗಂಗಯ್ಯ ಗುತ್ತೆದಾರ ಸಾ|| ಆಂದೋಲಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 14-03-2015 ರಂದು ಬೆಳಿಗ್ಗೆ 04-00 ಗಂಟೆ ಸುಮಾರಿಗೆ ಎಸ.ವಿ.ಪಿ. ಸರ್ಕಲ ಹತ್ತೀರ ಮಲಗಿದ್ದವನು ಎದ್ದುಕೊಂಡು ರೈಲ್ವೇ ಸ್ಟೇಷನ ಕಡೆಗೆ ಚಹಾ ಕುಡಿಯುವ ಸಲುವಾಗಿ ನಡೆದುಕೊಂಡು ಹೋಗುವಾಗ ಎಸ.ವಿ.ಸರ್ಕಲ ಹತ್ತೀರ ರೋಡ ಮೇಲೆ ಯಾವುದೋ ಒಂದು  ಕಾರ ಚಾಲಕನು ತನ್ನ ಕಾರನ್ನು ಕೇಂದ್ರ ಬಸ ನಿಲ್ದಾಣ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು  ಜಗತ ಸರ್ಕಲ ರೋಡ ಕಡೆ ಹೋಗುವ ಕುರಿತು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಬಲಗಾಲ ತೊಡೆಗೆ ಪೆಟ್ಟುಗೊಳಿಸಿ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಚಂದ್ರಶೇಖರ ತಮದೆ ಅಪ್ಪಣ್ಣಾ ರಾಮಗೊಂಡ ಸಾ: ಮುತ್ತಗಿ ಗ್ರಾಮ ತಾ: ಚಿತ್ತಾಪೂರ  ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.