POLICE BHAVAN KALABURAGI

POLICE BHAVAN KALABURAGI

09 March 2015

Kalaburagi District Reported Crimes

ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ರಾಜಮಹೇಂದ್ರ ತಂದೆ ದಿಗಂಬರರಾವ ಪುಲೆ ಉಃ ಎಸ,ಬಿ,ಎಮ್, ಬ್ಯಾಂಕ ಮ್ಯಾನೇಜರ ಸೇಡಂ ಸಾಃ ಬಿದ್ದಾಪೂರ ಕಾಲೋನಿ ಕಲಬುರಗಿ ಹಾಃ ವಃ ಯಶೋಧ ಟಾವರ ಸೇಡಂ ಇವರು  ದಿನಾಂಕ 07-03-2015 ರಂದು 2-45 ಪಿ,ಎಮ್,ಕ್ಕೆ ನಾನು ಮತ್ತು ಸಿಬ್ಬಂದಿಯವರು ಕೂಡಿ ಬ್ಯಾಂಕಿನ ಸೆಟರಿನ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕ 08-03-2015 ರಂದು 10-15 ಎ,ಎಮ್,ಕ್ಕೆ ನಾನು ಮನೆಯಲ್ಲಿದ್ದಾಗ ನಮ್ಮ ಬ್ಯಾಂಕಿನ ಬಿಲ್ಡಿಂಗ ಮಾಲಿಕನಾದ ವಿಜಯಕುಮಾರ ತಂದೆ ವೆಂಕಟೇಶರಾವ ಇವರು ಪೋನ ಮಾಡಿ ತಿಳಿಸಿದೆನೆಂದರೆ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡುವ ಉದ್ದೇಶದಿಂದ  ನಿಮ್ಮ ಬ್ಯಾಂಕಿನ ಕಿಟಕಿಯ ರಾಡ್ ಮುರಿದು ಒಳಗಡೆ ಹೊದ ಬಗ್ಗೆ ಕಂಡುಬರುತ್ತದೆ. ಅಂತ ಪೋನ ಮಾಡಿ ತಿಳಿಸಿದಾಗ ನಾನು ಮತ್ತು ಪ್ರಾದೇಶಿಕ ಕಛೇರಿಯ ಸಹಾಯಕ ವ್ಯವಸ್ಥಾಪಕರಾದ ಶ್ರೀ ನೀಲಕಂಠ ಬಾಬು ಹಾಗೂ ಪ್ರವೀಣಕುಮಾರ ಎಲ್ಲರೂ ಕೂಡಿ ಸೇಡಂ ಶಾಖೆಗೆ ಬಂದು ನೋಡಲಾಗಿ ವಿಜಯಕುಮಾರ ಇವರು ಪೋನ ಮಾಡಿ ತಿಳಿಸಿದ ವಿಷಯ ನಿಜವಿತ್ತು. ನಾವು ಪರಿಶಿಲಿಸಿದಾಗ ಕಳ್ಳರು ಕಿಟಕಿಯಿಂದ ನುಗ್ಗಿದಾಗಿ ತೊರಿ ಬರುತ್ತದೆ. ಮತ್ತು ಕಪಾಟಿನಲ್ಲಿದ್ದ ಸೇಪ್ ಡೆಪಾಜಿಟ್ ವಾಲ್ಟ್ (ಭದ್ರತಾ ಕಪಾಟು) ಕೀಯನ್ನು ತಗೆದುಕೊಂಡು ಭದ್ರಾತಾ ಕಪಾಟನ್ನು ತಗೆಯಲು ಪ್ರಯತ್ನಿಸಿರುವುದಾಗಿ ನಂತರ ಬೀಗ ಬರದ ಕಾರಣ 2 ಫೀಟಿನ ರೈಲ್ವೆ ಕಬ್ಬಿಣದ ಪಟ್ಟಿ ಉಪಯೋಗಿಸಿ ತಗೆಯಲು ಪ್ರಯತ್ನ ಮಾಡಿರುತ್ತಾರೆ. ಭದ್ರತಾ ಕಪಾಟಿಗೆ ಹಾನಿವುಂಟಾಗಿರುತ್ತದೆ. ಆದರೆ ಯಾವುದೇ ಆರ್ಥೀಕ ಹಾನಿವುಂಟಾಗಿರುವುದಿಲ್ಲಾ ಹಿಂದಿನ ಬಾಗಿಲಿನ ಬೀಗವನ್ನು ಒಳಗಡೆಯಿಂದ ಹಾಕಿರಲಾಗಿರುತ್ತದೆ. ಅದರ ಕೀಯನ್ನು ದುರಪಯೋಗಪಡಿಸಿಕೊಂಡು ಬಾಗೀಲು ತಗೆದು ಮತ್ತೆ ಹೊರಗಡೆ ಹೋಗಿರುವುದಾಗಿ ಕಂಡುಬಂದಿರುತ್ತದೆ. ಸದರ ಘಟನೆಯು ದಿನಾಂಕ 07-03-2015 ರಂದು 2-45 ಪಿ,ಎಮ್,ದಿಂದ ದಿನಾಂಕ 08-03-2015 ರಂದು 10-15 ಎ,ಎಮ್,ದವರೆಗೆ ಜರುಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ:
ಸಂಚಾರಿ ಠಾಣೆ : ದಿನಾಂಕ 08-03-2015 ರಂದು ಸುಪರ ಮಾರ್ಕೆಟ  ಎರಿಯಾದಲ್ಲಿರುವ ಬಿ.ಎಸ್.ಎನ್.ಎಲ್. ಆಫಿಸ್ ಹತ್ತಿರ ಪ್ರಭುಕಾಂತ ತಂದೆ ಗುರುಶಾಂತಪ್ಪಾ ಬುಜುರುಕ್ಕೆ ಈತನು ತನ್ನ ಕಾರ ನಂ ಕೆ ಎ 32. ಎನ್ 5069 ನೇದ್ದನ್ನು ಮದನ ಟಾಕಿಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಿ.ಎಸ್.ಎನ್.ಎಲ್. ಆಫೀಸ್ ಒಳಗಡೆ ಇರುವ ಗಿಡ ಬಿಳುವುದನ್ನು ನೋಡಿ ಒಮ್ಮೆಲೆ ಬ್ರೆಕ್ ಹಾಕಿ ಬಿ.ಎಸ್.ಎನ್.ಎಲ್. ಆಫೀಸ್ ಕಂಪೌಂಡ ಗೋಡೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಕಾರಿನ ಮುಂದಿನ ಎಡಭಾಗ ಸಂಪೊರ್ಣ ಜಖಂಗೊಂಡಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 06.03.2015 ರಂದು ಶ್ರೀ ಮಾನಪ್ಪ ತಂದೆ ಚಂದಪ್ಪ ಮ್ಯಾಗೇರಿ ಸಾ|| ಮಲ್ಲಾ ಕೆ ಗ್ರಾಮ ರವರು ತಮ್ಮ ಊರಿನ ಬಸ್‌ ನಿಲ್ದಾಣದ ಹತ್ತಿರ ಚಿಕನ್‌ ತರಲು ಹೋದಾಗ ಹಣಮಂತ ತಂದೆ ಸಾಯಬಣ್ಣ ಕೇಳಗೇರಿ ಸಂಗಡ 6 ಜನರು ಸಾ|| ಎಲ್ಲರು ಮಲ್ಲಾ ಕೆ ಎಲ್ಲರು  ಕೂಡಿಕೊಂಡು ಬಂದು ಹಳೆಯ ದ್ವೇಷದಿಂದ ನನ್ನೊಂದಿಗೆ ಜಗಳ ಮಾಡಿ ಅವಾಚ್ಯಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಡಿ ಕಾಲಿನಿಂದ ಒದ್ದು ಮತ್ತು ನನಗೆ ಮುಂದಕ್ಕೆ ಹೋಗದಂತೆ ತಡೆದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 March 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಜೇವರ್ಗಿ ಠಾಣೆ : ದಿನಾಂಕ 06.03.2015 ರಂದು ರದ್ದೆವಾಡಗಿ ಕ್ರಾಸ್‌ ಹತ್ತಿರ ಜೇವರ್ಗಿ ಕೋಳಕೂರ ರೋಡ್‌ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರ್ಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಿ ಇಸ್ಪೀಟ ಜೂಜಾಟದ ಬಗ್ಗೆ  ಖಚಿತ ಪಡಿಸಿಕೊಂಡು ದಾಳಿ ಮಾಡಿ ಪೀರ್‌ ಅಹ್ಮದ್ ತಂದೆ ಮಹಿಬೂಬ ಸಾಬ್‌ ಲೋಹಾರ್‌ ಸಂಗಡ 6 ಜನರು ಸಾ|| ಎಲ್ಲರು ಜೇವರ್ಗಿ  ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರ ವಶದಿಂದ ಜೂಜಾಟಕ್ಕೆ ಸಂಬಂಧಿಸಿದ  ನಗದು ಹಣ 9200/- ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 07/03/15 ರಂದು ಸಂಜೆ ಶ್ರೀ ಸಾತಲಿಂಗ ತಂದೆ ವಿನಾಯಕರಾವ ಪಾಸೋಡಿ ಸಾ : ಪಟ್ಟಣ ತಾ:ಜಿ: ಕಲಬುರಗಿ ತನ್ನ ಗೆಳೆಯರೊಂದಿಗೆ ಪಟ್ಟಣ ಗ್ರಾಮದ ಅಗಸಿ ಹತ್ತಿರ ಇರುವ ಸಿದ್ದಾರೂಢ ಹಡಪದ ಇವರ ಹೋಟಲಕ್ಕೆ ಚಹಾ ಕುಡಿಯಲು ಹೋಗಲು  ಅಲ್ಲಿಗೆ ಆರೋಪಿತರಾದ ಮಲ್ಲಪ್ಪ ಬಿಸಗೊಂಡ ಮತ್ತು ರೇವಣಸಿದ್ಧಪ್ಪ ಮತ್ತಿಮೂಡ ಇವರಿಬ್ಬರು ಫಿರ್ಯಾದಿ ನಮ್ಮ ಜಾತಿ ಹುಡುಗಿಗೆ ಬಣಿಜಗೆ ಹುಡುಗನೊಂದಿಗೆ ಮದುವೆ ಮಾಡಿಸಿ, ಸಾಕ್ಷಿ ಅಂತಾ ಯಾಕೇ ಸಹಿ ಮಾಡಿದ್ದೀ, ಎಂಬ ದ್ವೇಷದಿಂದ ಸೆಂಟ್ರಿಂಗ ಬಡಿಗೆಯಿಂದ ಮಲ್ಲಪ್ಪ ಫಿರ್ಯಾದಿ ತಲೆಯ ಮೇಲೆ  ಹೊಡೆದು ಭಾರಿ ರಕ್ತಗಾಯಗೊಳಿಸಿ ಮತ್ತು ರೇವಣಸಿದ್ಧಪ್ಪ ಫಿರ್ಯಾದಿ  ಎಡಗೈ ಮೇಲೆ ಹೊಡೆದು ಭಾರಿ ಗುಪ್ತಗಾಯಗೊಳಿಸಿ ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಜೇವರ್ಗಿ ಠಾಣೆ : ದಿನಾಂಕ 06.03.2015 ರಂದು ಶ್ರೀ ಭೀಮಪ್ಪ ತಂದೆ ಪೋತಪ್ಪ ತಳಕೇರಿ ಸಾ|| ಮಲ್ಲಾ (ಕೆ)  ರವರು ತಮ್ಮ ಮನೆಯಲ್ಲಿದ್ದಾಗ ಮಾನಪ್ಪ ತಂದೆ ಚಂದಪ್ಪ ಮ್ಯಾಗೇರಿ ಸಂಗಡ 3 ಜನರು ಸಾ|| ಎಲ್ಲರು ಮಲ್ಲಾ ಕೆ ರವರು  ಕೂಡಿಕೊಂಡು ಬಂದು ಹಳೆಯ ದ್ವೇಷದಿಂದ ನನ್ನೊಂದಿಗೆ ಜಗಳ ಮಾಡಿ ಅವಾಚ್ಯಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯಪಡಿಸಿರುತ್ತಾರೆ. ಮತ್ತು ನನಗೆ ಮುಂದಕ್ಕೆ ಹೋಗದಂತೆ ತಡೆದು ಕೈಯಿಂದ ಹೊಡೆದು ಕಾಲಿನಿಂದ ಒದ್ದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 March 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 07-03-2015 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಸ್ವಲ್ಪ ದೂರು  ಮರೆಯಾಗಿ ನಿಂತು ನೋಡಲು ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಬಸವರಾಜ ತಂದೆ ಚನ್ನವೀರಪ್ಪಾ ಮಲಗಾಣ ಸಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 315/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರಾಜಶ್ರೀ ಗಂಡ ಶೀಶೈಲ ಇಬೂತಿ ಇವರ ಗಂಡ ಶ್ರೀಶೈಲ ಇವರು ಸುಮಾರು 2 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ನನ್ನ ಗಂಡನಿಗೆ ಶರಣಪ್ಪಾ ಮತ್ತು ದೇವಾ ಅಂತಾ 2 ಜನ ತಮ್ಮಂದಿರರು ಇರುತ್ತಾರೆ. ನಾವೆಲ್ಲರು ಬೇರೆ ಬೇರೆಯಾಗಿ ಸಂಸಾರ ಮಾಡುತ್ತಿರುತ್ತೇವೆ. ನನ್ನ ಮೈದುನ ದೇವಾ ಮತ್ತು ಅವನ ಹೆಂಡತಿ ಜೋತಿ ರವರು ಮನೆ ಕೆಲಸದ ವಿಷಯಕ್ಕೆ ಸುಮಾರು ಸಲ ನನ್ನೊಂದಿಗೆ ತಕರಾರು ಮಾಡಿಕೊಳ್ಳುತ್ತಾ ಬಂದಿರುತ್ತಾರೆ.   ದಿನಾಂಕ 04-03-2015 ರಂದು ಜೋತಿ ಇವಳು 1;00 ಪಿ.ಎಂ ಸುಮಾರಿಗೆ ತಮ್ಮ ಮನೆ ಸ್ವಚ್ಚ ಮಾಡಿ ಮನೆಯಲ್ಲಿದ್ದ ಹಳೆ ಸಾಮಾನುಗಳನ್ನು ನಮ್ಮ ಮನೆಯಲ್ಲಿ ತಂದು ಇಡುತ್ತಿದ್ದಾಗ ನಾನು ಜೋತಿ ಇವಳಿಗೆ ಈ ಸಾಮಾನುಗಳನ್ನು ನಮ್ಮ ಮನೆಯಲ್ಲಿ ಯಾಕ ತಂದು ಇಟ್ಟಿದಿ ಅಂತಾ ಕೇಳಿದ್ದಕ್ಕೆ ನಾನು ತಂದು ಇಡಕ್ಕಿನೆ ನೀ ಏನ ಮಾಡಕೋತಿ ಮಾಡಕು ಅಂತಾ ಅಂದಳು ಆಗ ನಾನು ನಿಮ್ಮ ಮನೆ ಸ್ವಚ್ಚ ಇಟ್ಟುಕೊಂಡು ನಮ್ಮ ಮನೆ ಯಾಕ ಹೊಲಸ ಮಾಡತಿರಿ ನಿಮಗ ನಾಚೀಕೆ ಬರಲ್ಲಾ ಅಂತಾ ಅಂದಿದ್ದಕ್ಕೆ ಜೋತಿ ಇವಳು ಏನೆ ರಂಡಿ ನನಗೆ ಎದುರು ಮಾತಾಡತಿಯಾ ಅಂತಾ ಅಂದು ನನಗೆ ಕೈಯಿಂದ ಕಪಾಳ ಮೇಲೆ ಹೊಡೆದಳು, ನಂತರ ಅಲ್ಲೆ ಇದ್ದ ಅವಳ ಗಂಡ ದೇವಾ ಇವನು ನನ್ನ ಹತ್ತಿರ ಬಂದು ನನಗೆ ಕೈ ಹಿಡಿದು ಎಳೆದು ಏನೇ ರಂಡಿ ನನ್ನ ಹೆಂಡತಿಗೆ ಬೈತಿಯಾ ಅಂತಾ ಅಂದು ಅಲ್ಲೆ ಬಿದ್ದಿದ್ದ ಬಡಿಗೆಯಿಂದ ನನ್ನ ಎಡಗಡೆ ತೊಡೆಯ ಮೇಲೆ ಜೋರಾಗಿ ಹೊಡೆದು ಭಾರಿ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಂಬಾಜಿ ಇವರಿಗೆ ನೋಡಲು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಅವರ ಜೊತೆಯಲ್ಲಿದ್ದ ಲೋಕಪ್ಪ ತಂದೆ ರಾವತಪ್ಪ ಇವರನ್ನು ವಿಚಾರಿಸಲು ದಿನಾಂಕ:28/02/2015 ರಂದು ಸಾಯಂಕಾಲ ಫಿರ್ಯಾದಿಯ ಮತ್ತು ಸೋಮಲಿಂಗ ತಂದೆ ವಿಠಲ ಬುರಾವ ಬಸ್ ನಿಲ್ದಾಣದ ಒಳಗಡೆ ನಿಂತಿರುವಾಗ  ಶಂಬಾಜಿ ಇವರು  ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಒಳಗೆ ಇರುವ ಶೌಚಾಲಯಕ್ಕೆ ಏಕಿ (ಒಂದಕ್ಕೆ) ಮಾಡುವ ಸಲುವಾಗಿ ನಡೆದುಕೊಂಡು ಹೋಗುತ್ತಿದ್ದಾಗ ನೃಪ ತುಂಗಾ ಬಸ್ ನಿಲ್ಲುವ ಸ್ಥಳದ ಕಡೆಯಿಂದ ಎನ್.ಇ. ಕೆ.ಆರ್.ಟಿ.ಸಿ. ಬಸ್ ನಂ:  ಕೆಎ 32 ಎಫ್ 1910 ರ ಚಾಲಕನು ತನ್ನ ಬಸ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶಂಬಾಜಿಗೆ  ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ರಕ್ತ ಗಾಯಗೊಳಿಸಿ ಬಸ್ ಸಮೇತ ಹೊರಟು ಹೋಗಿದ್ದು  ಈ ಬಗ್ಗೆ ಪ್ರಕರಣ ದಾಖಲಾಗಿದ್ದು  ಶ್ರೀ ಸುರೇಶ ತಂದೆ ಸಂಬಾಜಿ ಮಾನೆ ರವರು ಇಂದು ದಿನಾಂಕ: 04/03/2015 ರಂದು ಠಾಣೆಗೆ ಬಂದು ಹೇಳಿಕೆ ನೀಡ್ಡಿದ್ದೆನೆಂದರೆ ದಿನಾಂಕ:28/02/2015 ರಂದು ಎನ್.ಈ.ಕೆ.ಆರ್.ಟಿ.ಸಿ ಬಸ ನಂಬರ ಕೆಎ-32 ಎಫ-1910 ರ ಚಾಲಕನಾದ ಜಹಾಂಗೀರಮಿಯಾ ಇತನು  ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿರುವ ನನ್ನ ತಂದೆಯಾದ ಸಂಬಾಜಿ ಇವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿದರಿಂದ ದಿನಾಂಕ 28.02.2015 ರಂದು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಸೊಲಾಪೂರ ಯಶೋದರಾ ಆಸ್ಪತ್ರೆಗೆ ಹೋಗುವಾಗ ದಾರಿ ಮದ್ಯ ಅಂಬುಲೇನ್ಸ ವಾಹನದಲ್ಲಿ ರಾತ್ರಿ ನನ್ನ ತಂದೆಯಾದ ಸಂಬಾಜಿ ಇತನು ಮೃತಪಟ್ಟಿದ್ದು ಮೃತ ಪಟ್ಟ ದು:ಖದಲ್ಲಿ ನಮಗೆ ಯಾವುದು ಗೊತ್ತಾಗದೆ ಆತನ ಮೃತ ದೇಹವನ್ನು ನಮ್ಮೂರಿಗೆ ತೆಗೆದುಕೊಂಡು ಹೋಗಿ ನನ್ನ ತಂದೆಯ  ಮೃತ ದೇಹವನ್ನು ನಮ್ಮ ಧಾರ್ಮಿಕ ವಿಧಿ ವಿಧಾನದ ಪ್ರಕಾರ ದಹನ ಮಾಡಿದ್ದು ನಮ್ಮ ತಂದೆ ಸತ್ತ ದು:ಖದಲ್ಲಿ ಪೊಲೀಸ್ ನವರಿಗೆ ಮಾಹಿತಿ ನೀಡಲು ಆಗಿರುವದಿಲ್ಲಾ. ಇಂದು ತಡವಾಗಿ ಠಾಣೆಗೆ ಬಂದಿದ್ದು ತಾವು ಮುಂದಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.