POLICE BHAVAN KALABURAGI

POLICE BHAVAN KALABURAGI

07 March 2015

KALABURAGI DIST REPORTED CRIME

ಆಕ್ರಮವಾಗಿ  ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 06-03-2015 ರಂದು ಅಫಜಲಪೂರ ಆಶ್ರಯ ಕಾಲೋನಿಯಲ್ಲಿ ಪರಸಪ್ಪಾ ಕುಡಕಿ ರವರ ಮನೆಯ ಮುಂದೆ   ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆಶ್ರಯ ಕಾಲೋನಿಗೆ ಹೋಗಿ, ಪರಸಪ್ಪಾ ಕುಡಕಿ ರವರ ಮನೆಯಿಂದ ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ, ಪರಸಪ್ಪಾ ಕುಡಕಿ ರವರ ಮನೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ಪ್ಲಾಸ್ಟೀಕ ಚೀಲ ಇಟ್ಟುಕೊಂಡು ಹೋಗಿ ಬರುವ ಜನರಿಗೆ ಕರೆದು ಅವರಿಂದ ಹಣ ಪಡೆದು ಚೀಲದಲ್ಲಿದ್ದ ಮದ್ಯದ ಪೌಚಗಳನ್ನು ಕೊಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹತ್ತಿರ ಇದ್ದ ಪ್ಲಾಸ್ಟೀಕ ಚೀಲನ್ನು ಚೆಕ್ ಮಾಡಲಾಗಿ, ಸದರಿ ಚೀಲನಲ್ಲಿ ಓಲ್ಡ್ ಟವೇರನ್ ಕಂಪನಿಯ 180 ಎಮ್ ಎಲ್ ಅಳತೆಯ ಮದ್ಯ ತುಂಬಿದ ಒಟ್ಟು 36 ರಟ್ಟಿನ ಪೌಚಗಳು ಇದ್ದವು ಅ||ಕಿ|| 2016/- ರೂ. ಮತ್ತು ಹಾಯ ವರ್ಡ ಕಂಪನಿಯ 90 ಎಮ್.ಎಲ್ ಅಳತೆಯ ಮದ್ಯ ತುಂಬಿದ 72 ರಟ್ಟಿನ ಪೌಚಗಳು ಅ||ಕಿ|| 1,728/- ರೂ ರಷ್ಟು ದೊರೆತವು. ಸದರಿಯವನಿಗೆ ಮದ್ಯದ ಬಗ್ಗೆ ವಿಚಾರಿಸಲಾಗಿ ತಾನು ಯಾವುದೆ ಪರವಾನಿಗೆ ಇಲ್ಲದೆ ಮದ್ಯದ ಪೌಚಗಳನ್ನು ಅಕ್ರಮವಾಗಿ ರಸ್ತೆಯ ಮೇಲೆ ಇಟ್ಟುಕೊಂಟು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಫಕೀರಪ್ಪಾ ಯಮನಪ್ಪಾ ದೊಡಮನಿ ಅಂತಾ ತಿಳಿಸಿದ್ದು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 06-03-2015 ರಂದು ಶ್ರೀ ಮಳೆಪ್ಪಾ ತಂದೆ ಸಿದ್ದಪ್ಪ@ಹುಲೆಪ್ಪಾ ಡಾಂಗೆ ಸಾ|| ಮಲ್ಲಿಕಾರ್ಜುನ ಚೌಕ ಅಫಜಲಪೂರ ರವರು ಮತ್ತು ನಮ್ಮ ತಂದೆ ಹಾಗು ನಮ್ಮೋಣಿಯವರೆಲ್ಲರು ಸೇರಿಕೊಂಡು ಮಲ್ಲಿಕಾರ್ಜುನ ಗುಡಿಯಲ್ಲಿ ದಾಸೋಗ ಊಟ ಮಾಡುತ್ತಿದ್ದಾಗ ನಮ್ಮ ಅಣ್ಣತಮ್ಮಕಿಯವನಾದ ಬಸವರಾಜ ತಂದೆ ಮಳೆಪ್ಪಾ ಡಾಂಗೆ ಇವನು ಸರಾಯಿ ಕುಡಿದ ಅಮಲಿನಲ್ಲಿ ನಮ್ಮ ತಂದೆಗೆ ವಿನಾಕಾರಣ ಹೊಡೆಯಲು ಬಂದು ಬಾಯಿ ತಕರಾರು ಮಾಡಿಕೊಳ್ಳುತ್ತಿದ್ದನು, ಆಗ ಅಲ್ಲಿದ್ದ ಬಸವರಾಜ ತಂದೆ ಶಂಕ್ರೆಪ್ಪಾ ಹಳಿಮನಿ, ಹಣಮಂತ ತಂದೆ ಶಿವಣ್ಣಾ ಡಾಂಗೆ ರವರು ಬಿಡಿಸಿ ಕಳುಹಿಸಿರುತ್ತಾರೆ. ನಂತರ 10;15 ಪಿ.ಎಂ ಸುಮಾರಿಗೆ ನಾನು ಸದರಿ ಬಸವರಾಜ ಡಾಂಗೆ ರವರ ಮನೆಗೆ ಹೋಗಿದಾಗ ಮನೆಯ ಮುಂದೆ ಬಸವರಾಜನ ತಂದೆ ಮಳೆಪ್ಪಾ ತಂದೆ ಸಿದ್ದಪ್ಪಾ ಡಾಂಗೆ ರವರು ಇದ್ದರು ಸದರಿಯವರಿಗೆ ನಿಮ್ಮ ಮಗ ಬಸವರಾಜ ಇವನು ನಮ್ಮ ತಂದೆಯಿಂದಿಗೆ ಮಲ್ಲಿಕಾರ್ಜುನ ಗುಡಿಯಲ್ಲಿ ಸರಾಯಿ ಕುಡಿದ ಅಮಲಿನಲ್ಲಿ ವಿನಾಕಾರಣ ಯಾಕೇ ಜಗಳ ತೆಗೆದಿರುತ್ತಾನೆ ಅಂತಾ ಕೇಳಿದಾಗ ಮಳೆಪ್ಪಾ ಇವರು ನನಗೆ ಏ ಸೂಳಿ ಮಗನಾ ನಿಮ್ಮ ಸೊಕ್ಕೆ ಬಹಳ ಆದ ಸುಮ ಸುಮನೆ ನಮ್ಮೊಂದಿಗೆ ಜಗಳ ತೆಗೆಯಲು ಬರುತ್ತಿರಿ ಅಂತಾ ಅಂದು ನನಗೆ ಕೈಯಿಂದ ಕಪಾಳ ಮೇಲೆ ಹೊಡೆದನು, ಆಗ ಅಲ್ಲೆ ಇದ್ದ ಧರೆಪ್ಪಾ ತಂದೆ ಮಳೇಪ್ಪಾ ಡಾಂಗೆ ಇವನು ನನ್ನ ಹತ್ತಿರ ಬಂದು ನನ್ನ ಎಡಗಡೆ ಎದೆಯ ಮೇಲೆ ತನ್ನ ಹಲ್ಲಿಲೆ ಕಚ್ಚಿ ಗಾಯ ಪಡಿಸಿದನು. ಸದರಿ ಮಳೇಪ್ಪಾ ಡಾಂಗೆ ರವರ ಹೆಂಡತಿ ಮಹಾದೇವಿ ಇವರು ಇವತ್ತ ಈ ಮಗನಿಗಿ ಬಿಡಬ್ಯಾಡರಿ ಹೊಡೆದು ಖಲಾಸ ಮಾಡರಿ ಅಂತಾ ಅನ್ನುತ್ತಿದ್ದರು, ಬಸವರಾಜ ಮತ್ತು ರೇವಣಪ್ಪಾ ರವರು ಇಬ್ಬರು ಬಂದು ನನಗೆ ನೆಲದ ಮೇಲೆ ಹಾಕಿ ಕಾಲಿಲೆ ಒದೆಯುತ್ತದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಂತೋಷ ತಂದೆ ಹಣಮಂತರಾವ ದಿಗಸಂಗಿ ಸಾ: ದೇವಿ ಗುಡಿ ಹತ್ತಿರ ದೇವಿ ನಗರ ಕಲಬುರಗಿ  ರವರು ದಿನಾಂಕ 06-03-2015 ರಂದು ಮದ್ಯಾಹ್ನ 1-00 ಗಂಟೆಗೆ ಶಿವರಾಜ ಇವರು ಮೋ/ಸೈಕಲ ನಂಬರ ಕೆಎ-05 ಹೆಚ್.ಎನ್-2581 ರ ಮೇಲೆ ಹಿಂದುಗಡೆ ಕುಳಿತು ಶಹಾಬಜಾರ ನಾಕಾ ಲಾಲಗೇರಿ ಕ್ರಾಸ ಮುಖಾಂತರವಾಗಿ ಹೋಗುವಾಗ ಎಸ್.ಬಿ.ಟೆಂಪಲ ಹತ್ತಿರ ಬರುವ ನಾಗರಕಟ್ಟಾ ಕ್ರಾಸ ಹತ್ತಿರ ರೋಡ ಮೇಲೆ ಹಿಂದಿನಿಂದ ಯಾವುದೊ ಒಬ್ಬ ಮೋ/ಸೈಕಲ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋ/ಸೈಕಲ ಹಿಂದುಗಡೆ ಕುಳಿತ್ತಿದ್ದ ಫಿರ್ಯಾದಿಯ ಬಲಗಾಲಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ಮೋ/ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 06-03-2015 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ನನ್ನ ತಮ್ಮನಾದ ಕರಣಪ್ಪಾ ಇತನು ಮದ್ಯ ಸೇವನೆ ಮಾಡಿ ಅಟೋರಿಕ್ಷಾ ನಂಬರ ಕೆಎ-32 ಬಿ-8955 ನೇದ್ದನ್ನು ಆರ್.ಪಿ. ಸರ್ಕಲ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರೋಡ ಎಡಬಲ ಕಟ್ಟ ಹೊಡೆದು ಅಟೋ ಶೊ ರೂಮ ಹತ್ತಿರ ಒಮ್ಮೆಲೆ ಬ್ರೇಕ ಹಾಕಿ ಅಟೋರಿಕ್ಷಾ ಪಲ್ಟಿ ಮಾಡಿ ತಲೆಯ ಹಿಂದುಗಡೆ ರಕ್ತಗಾಯ, ಬಲಗಡೆ ರಿಸ್ಟ ಹತ್ತಿರ ರಕ್ತಗಾಯ, ಎಡಗಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯ, ಬಲಗಾಲು ಮೊಳಕಾಲಿಗೆ ತರಚಿದಗಾಯ, ಬಲಗಾಲು ರಿಸ್ಟ ಹತ್ತಿರ ರಕ್ತಗಾಯ, ಹೊಂದಿರುತ್ತಾನೆ ಅಂತಾ ದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಈರಮ್ಮಾ ಗಂಡ ರಮೇಶ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಗ್ರಾಮ ಸ್ವರಾಜ ಯೋಜನಾ ಕಛರಿ ಗ್ರಾಮೀಣಾಬಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ ಕಾರ್ಯಾಲಯ  ಬೆಂಗಳೂರ ರವರು ಗ್ರಾಮ ಸ್ವರಾಜ  ಕರ್ನಾಟಕ ಪಂಚಾಯತ ಸಬಲಿಕರಣ ಯೋಜನೆಯಾಗಿದ್ದು, ಈ ಯೋಜನೆಯು ಮಾರ್ಚ -2014 ಕ್ಕೆ ಮುಕ್ತಾಯಗೊಳ್ಳುತ್ತಿದ್ದ, ಅದರಂತೆ ತಮ್ಮ ತಾಲೂಕಾ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ 2011-12 ಮತ್ತು 2012-13 ನೇ ಸಾಲಿನಲ್ಲಿ ಬಿಡುಗಡೆಯಾದ ಹೆಚ್ಚುವರಿ ಅನುದಾನವನ್ನು ಅನುಸ್ಟಾನಗೊಳಿಸಲು ಸಾದ್ಯವಾಗದೆ ಇರುವುದರಿಂದ ಹಾಗೂ ಯೋಜನೆಯು ಮಾರ್ಚ 2014 ಕ್ಕೆ ಮುಕ್ತಾಯಗೊಳ್ಳುತ್ತಿದ್ದು ಉಳಿಕೆಯಾದ ಬಾಕಿ ಅನುದಾನವನ್ನು ಸರ್ಕಾರ  ಹಿಂಪೆಡೆಯಲು ತಿರ್ಮಾನಿಸಿದಂತೆ ಬಾಕಿ ಉಳಿದಿರುವ ಅನುದಾನದ ಮೊತ್ತವನ್ನು ಮುಖ್ಯಸ್ಥರು ಗ್ರಾಮ ಸ್ವರಾಜ ಯೋಜನೆ ಹೆಸರಿನಲ್ಲಿ ಚೆಕ್ ತಗೆದು, ಗ್ರಾಮ ಸ್ವರಾಜ ಯೋಜನಾ ಅನುದಾನವನ್ನು ದಿನಾಂಕ 15-08-2014 ರ ಒಳಗಾಗಿ ಸರ್ಕಾರಕ್ಕೆ  ಹಿಂದಿರುಗಿಸಲು ಸೂಚಿಸಿ ಮುಖ್ಯ ಕಚೇರಿಯಿಂದ ದಿನಾಂಕ 28-01-2014 ರಂದು ಈ ಮೇಲ್ ಮೂಖಾಂತರ ನಮ್ಮ ಕಾರ್ಯಾಲಯಕ್ಕೆ ಒಂದು ಪತ್ರ ಮತ್ತು ಅದಕ್ಕೆ ಒಂದು ಮಾದರಿ ನಮೂನೆ ಪತ್ರವನ್ನು ಲಗತ್ತಿಟ್ಟು ಪತ್ರವನ್ನು ಕಳುಹಿಸಿರುತ್ತಾರೆ. ಅದಲ್ಲದೆ ಮತ್ತೆ 3-4 ಸಲ ಸದರಿ ವಿಷಯವಾಗಿ ಬಾಕಿ ಹಣವನ್ನು ಸಂದಾಯ ಮಾಡುವಂತೆ ಪತ್ರವನ್ನು ನಮ್ಮ ಕಳುಹಿಸಿರುತ್ತಾರೆ, ಅದರಂತೆ ಆ ಸಮಯದಲ್ಲಿ ನಮ್ಮ ಕಾರ್ಯಾಲಯದಲ್ಲಿ ದಿನಗೂಲಿಯ ಮೇಲೆ ಕೆಲಸ ಮಾಡುವ ಗ್ರಾಮ ಸ್ವರಾಜ ಕಂಪ್ಯೂಟರ ಆಪರೇಟರ ಆದ ಬಸವರಾಜ ತಂದೆ ಸಿದ್ದಾರಾಮ ಅಲ್ಲಾಪೂರ ಸಾ|| ರಾಮನಗರ ಈತನು ನಮ್ಮ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಮುಖ್ಯ ಕಚೆರಿಯಿಂದ ಬಂದ ಪತ್ರ ಮತ್ತು ಮಾದರಿ ನಮೂನೆಯನ್ನು ಲಗತ್ತಿಟ್ಟ ಪತ್ರವನ್ನು ಕಳುಹಿಸಿರುತ್ತಾನೆ. ದಿನಾಂಕ 04-03-2015 ರಂದು ಬೆಂಗಳೂರಿನ ನಮ್ಮ ಇಲಾಖೆಯ ಮುಖ್ಯ ಕಚೇರಿಯಿಂದ ನಿಮ್ಮ ತಾಲೂಕ ಪಂಚಾಯತ ಕಾರ್ಯಲಯ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಂದ ಗ್ರಾಮ ಸ್ವರಾಜ ಯೋಜನೆಯ ಬಾಕಿ ಹಣ ಇನ್ನು ಸಂದಾಯ ವಾಗಿರುವುದಿಲ್ಲ ಎಂದು ಅದಿಕೃತವಾಗಿ ತಿಳಿಸಿದ ಮೇರೆಗೆ ನಾನು ಗ್ರಾಮ ಪಂಚಾಯತ ಅಬಿವೃದ್ದಿ ಅದಿಕಾರಿಗಳಿಗೆ ಗ್ರಾಮ ಸ್ವರಾಜ ಬಾಕಿ ಹಣವನ್ನು ಸಂದಾಯ ಮಾಡುವಂತೆ ಸೂಚಿಸಲು ತಿಳಿಸಿದಾಗ ಗ್ರಾಮ ಪಂಚಾಯತ ಪಿ.ಡಿ.ಓ ರವರುಗಳು ಮಾದರಿ ನಮೂನೆಯಲ್ಲಿದ್ದ 62115372832 ಈ ಖಾತೆಗೆ ಹಣ ಸಂದಾಯ ಮಾಡಿದ ಬಗ್ಗೆ ದಾಖಲಾತಿಗಳನ್ನು ಕೊಟ್ಟು ಸಂದಾಯ ಮಾಡಿರುತ್ತೆವೆ ಎಂದು ತಿಳಿಸಿರುತ್ತಾರೆ. ಅದರಂತೆ ನಾನು ಸದರಿ ಖಾತೆಯ ಬಗ್ಗೆ ವಿಚಾರ ಮಾಡಲಾಗಿ ಈ ಖಾತೆ ಅಫಜಲಪೂರ ಪಟ್ಟಣದ ಎಸ್,ಬಿ.ಹೆಚ್ ಬ್ಯಾಂಕ ಖಾತೆಯಿದ್ದು, ಆ ಬ್ಯಾಂಕಿಗೆ ಹೋಗಿ ಸದರಿ ಖಾತೆಯ ಬಗ್ಗೆ ಪರಿಶಿಲಿಸಿ ಬ್ಯಾಂಕ ತಕ್ತೆಯನ್ನು ಪಡೆದುಕೊಂಡು ನೋಡಲಾಗಿ ಅವ್ಯವಹಾರವಾಗಿರುವುದು ಕಂಡುಬಂದಿರುತ್ತದೆ. ಸದರಿ ಖಾತೆಯು ನಮ್ಮ ಈ ಹಿಂದೆ ನಮ್ಮ ಕಾರ್ಯಲಯದಲ್ಲಿ ದಿನಗೂಲಿ ಆದಾರದ ಮೇಲೆ ಕೆಲಸ ಮಾಡುತ್ತಿದ್ದ ಗ್ರಾಮ ಸ್ವರಾಜ ಕಂಪ್ಯೂಟರ ಆಪರೇಟರ ಆದ ಬಸವರಾಜ ತಂದೆ ಸಿದ್ದಾರಾಮ ಅಲ್ಲಾಪೂರ ರೆಂಜ ಫಾರೆಷ್ಟ ಆಫೀಸ್ ಎಂಬ ಈತನ ಖಾತೆಗೆ ಅಂದಾಜು 30,51,710/- ರೂ ಜಮಾ ಆಗಿರುವುದು ಗೊತ್ತಾಗಿರುತ್ತದೆ.  ಈ ಹಿಂದೆ ದಿನಗೂಲಿಯ ಮೇಲೆ ಗ್ರಾಮ ಸ್ವರಾಜ ಕಂಪ್ಯೂಟರ ಆಪರೇಟರ ಕೆಲಸ ಮಾಡುವ ಬಸವರಾಜ ತಂದೆ ಸಿದ್ದಾರಾಮ ಅಲ್ಲಾಪೂರ ಸಾ|| ರಾಮನಗರ ಈತನು ಮುಖ್ಯ ಕಚೇರಿಯಿಂದ ಬಂದ ಪತ್ರದ ಜೋತೆಗೆ ಲಗತ್ತಿಟ್ಟಿದ್ದ ಮಾದರಿ ನಮೂನೆಯ ಪತ್ರದಲ್ಲಿ ತನ್ನ ಸ್ವಂತ ಖಾತೆ ನಂಬರ 62115372832 ಎಸ್,ಬಿ,ಹೆಚ್ ಅಫಜಲಪೂರ ಬ್ಯಾಂಕಿನ ಖಾತೆ ನಂಬರ ಹಾಕಿ ಸೃಷ್ಟಿಸಿ ನಮ್ಮ ತಾಲೂಕಾ ಪಂಚಾಯತಿ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಗೆ ಈ ಪತ್ರವನ್ನು ಕಳುಹಿಸಿ 1) ಬಿದನೂರ 2) ಮಣೂರ 3) ಉಡಚಾಣ 4) ಅತನೂರ 5) ಕೋಗನೂರ 6) ಮಾಶಾಳ 7) ಚೌಡಾಪೂರ 8) ಅಳ್ಳಗಿ (ಬಿ) 9) ಬಂದರವಾಡ 10) ದೇವಲಗಾಣಗಾಪೂರ 11) ಬಳೂರ್ಗಿ ಗ್ರಾಮ ಪಂಚಾಯತಗಳಿಂದ ಅಂದಾಜು 30,51,710/- ರೂ ಹಣವನ್ನು ತನ್ನ ಸ್ವಂತಕ್ಕೆ ಪಡೆದು ಸರ್ಕಾರಕ್ಕೆ ಹಾಗೂ ತಾಲೂಕ ಪಂಚಾಯತಿಗೆ ಮತ್ತು ಇಲಾಖೆಗೆ ಹಾಗೂ ಪಿ.ಡಿ.ಓ ರವರುಗಳಿಗೆ ಮೋಸಮಾಡಿರುತ್ತಾನೆ ಅಂತಾ ಶ್ರೀ ರೇವಣಸಿದ್ದಪ್ಪ ಅಕಂಡೆ ಕಾರ್ಯನಿರ್ವಾಹಕ  ಅಧಿಕಾರಿ ತಾಲೂಕ ಪಂಚಾಯತ ಕಾರ್ಯಾಲಯ  ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 March 2015

Kalaburagi District Reported Crimes

ಕೊಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಜಗಪ್ಪ @ ಜಗನ್ನಾಥ ತಂದೆ ಭೀಮಶ್ಯಾ ಸನಗುಂದಿ ಸಾ; ಗೊಬ್ಬುರವಾಡಿ  ರವರು ದಿನಾಂಕ 05-03-2015 ರಂದು ಬೆಳಗ್ಗೆ ಎಂದಿನಂತೆ ನಮ್ಮ ಎತ್ತುಗಳನ್ನು ಹೊಡೆದುಕೊಂಡು ನಾನು ಪಾಲದಿಂದ ಮಾಡಿದ ರೇವಣಸಿದ್ದಯ್ಯ ಸ್ವಾಮಿ ಇವರ ಹೊಲದಲ್ಲಿ ಬಂದು ಗಳೆ ಹೊಡೆದು ನಂತರ ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಎತ್ತುಗಳ ಕೊಳ್ಳು ಹರಿದು ಅವುಗಳಿಗೆ ನೀರು ಕುಡಿಸುವ ಸಲುವಾಗಿ ನಮ್ಮ ಹೊಲದ ಪಕ್ಕದಲ್ಲಿ ಹರಿಯುವ ಗಂಗಮ್ಮನ ಹಳ್ಳಕ್ಕೆ ನೀರು ಕುಡಿಸಲು ಬಂದಿದ್ದು, ಆಗ ಹಳ್ಳದ ಆಚೆ ಕಡೆಗೆ ಒಬ್ಬ ಗಂಡು ಮನುಷ್ಯನ ಮೃತ ದೇಹವು ಬಿದ್ದಿತ್ತು, ಆಗ ನಾನು ಗಾಬರಿಗೊಂಡು ನನ್ನ ದನಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿ ನಮ್ಮ ಊರಿನಲ್ಲಿಯೇ ಹೋಗಿ ನಮ್ಮೂರ ಅಶೋಕ ಸ್ವಾಮಿ ಮತ್ತು ಮಲ್ಲಿನಾಥ ಗೌಡ ಪೊಲೀಸ  ಪಾಟೀಲ್ ಇವರಿಗೆ ವಿಷಯ ತಿಳಿಸಿ ಗ್ರಾಮಸ್ಥ ರೊಂದಿಗೆ ಮತ್ತು ಗಂಗಮ್ಮನ ಹಳ್ಳಕ್ಕೆ ಬಂದು ನೋಡಲಾಗಿ ಅಂದಾಜು 30-35 ವರ್ಷ ವಯಸ್ಸಿನಗಂಡು ಮನುಷ್ಯನ ಮೃತ ದೇಹವಿದ್ದು, ಮೃತ ದೇಹವನ್ನು ಯಾವುದೇ ವಾಹನದಲ್ಲಿ ಯಾವುದೋ ಕಾರಣಕ್ಕೆ ಎಲ್ಲಯೋ ಹೇಗೋ ಕೊಲೆ ಮಾಡಿ ಯಾವದೋ ವಾಹನದಲ್ಲಿ ಮೃತ  ದೇಹವನ್ನು ತಂದು ಇಲ್ಲಿ ಬಿಸಾಡಿ ಮೃತನ ಗುರುತು ಪತ್ತೆ ನಾಶಮಾಡುವ ಉದ್ದೇಶದಿಂದ ಮೃತ ದೇಹದ ಮೇಲೆ ಯಾವುದೋ ಎಣ್ಣೆ ಹಾಕಿ ಸುಟ್ಟು ಹಾಕಿ ಹೋಗಿರುತ್ತಾರೆ,  ಮೃತ ಅಪರಿಚಿತ ಗಂಡು ಮನುಷ್ಯನ ಬಲಗೈಯಲ್ಲಿ ಒಂದು ಖಡೆ ಮತ್ತು ಒಂದು ಉಂಗುರವಿದೆ  ಈ ವೃತ ವ್ಯಕ್ತಿಯು ಯಾರು ಅಂತ ಗೋತ್ತಾಗಿರುವದಿಲ್ಲ ಮತ್ತು ಈತನನ್ನು ಯಾರು ಕೊಲೆ ಮಾಡಿ ಬಿಸಾಡಿ ಹೋಗಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಠಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 05/03/2015 ರಂದು ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೂಸನೂರ ಗ್ರಾಮಕ್ಕೆ ಹೋಗಿ ಹಳೆ ಬಸ್ ಸ್ಟ್ಯಾಂಡ  ಹತ್ತಿರ ಇರುವ ಈರಣ್ಣ ಡಾಂಕೆ ಇವರ ಹೊಟೇಲ ಮರೆಯಲ್ಲಿ ನಿಂತು ನೋಡಲಾಗಿ ಹೋಟೇಲ ಮುಂದಿನ ಸಾರ್ವಜನಿಕ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಮಂಜೂನಾಥ ತಂದೆ ರೇವಪ್ಪ ಪೂಜಾರಿ ಸಾ: ಭೂಸನೂರ ಇತನ ಹತ್ತಿರ ಚಕ್ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 1110/-,  ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು  ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡಿದ್ದು  ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ: 05.03.2015 ರಂದು ಮುಂಜಾನೆ ಶ್ರೀ ಶಂಕರ ತಂದೆ ಸಿದ್ರಾಮಪ್ಪ ಮುತ್ತಕೋಡ ಸಾ : ಜನತಾ ಕಾಲೋನಿ ಜೇವರ್ಗಿ ಮತ್ತು ನಮ್ಮ ಓಣಿಯವನಾದ ದೌಲತರಾಯ ತಂದೆ ಮಲ್ಲಪ್ಪ ಸುಣುರ ಇಬ್ಬರು ಕೂಡಿಕೊಂಡು ಕುರಿ ಮರಿಗಳಿಗೆ ಹುಲ್ಲು ತರುವ ಕುರಿತು ನನ್ನ ಸೈಕಲ್‌ ಮೇಲೆ ನಮ್ಮ ಹೋಲಕ್ಕೆ ಹೋಗುವ ಕುರಿತು ಜೇವರ್ಗಿ ಕ್ರಿಡಾಂಗಣದ ಹತ್ತಿರ ಶಹಾಪುರ ಜೇವರ್ಗೀ ರಾಜ್ಯ ಹೆದ್ದಾರಿಯ ಮೇಲೆ ಹೋಗುತ್ತಿದ್ದಾಗ ಅದೇ ವೇಳೆಗೆ ನಮ್ಮ ಹಿಂದುಗಡೆಯಿಂದ ಅಂದರೆ ಜೇವರ್ಗಿ ಕಡೆಯಿಂದ ಬಂದ ಕಾರ್‌ ನಂ ಕೆ.ಎ32ಎಮ್.ಎ 0033 ನೇದ್ದರ ಚಾಲಕ ತನ್ನ ಕಾರ್‌ ಅನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾವು ಕುಳಿತು ಹೋಗುತ್ತಿದ್ದ ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಪಡಿಸಿ ನಮಗೆ ರೋಡಿನ ಮೇಲೆ ಬಿಳಿಸಿ ನನಗೆ ಮತ್ತು ಹಿಂದೆ ಕುಳಿತಿದ್ದ ದೌಲತರಾಯ ತಂದೆ ಮಲ್ಲಪ್ಪ ಸುಣುರ ರವರಿಗೆ ಸಾದಾ ಹಾಗು ಭಾರಿ ರಕ್ತಗಾಯಪಡಿಸಿ ತನ್ನ ಕಾರ್‌ಸಮೇತ ಓಡಿ ಹೋಗಿದ್ದು ಗಾಯಾಳು ದೌಲತರಾಯನಿಗೆ ಕಲಬುರಗಿಯ ಯುನೈಟೆಡ್‌ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲು ಮಾಡಿದ್ದು ನಂತರ ಹೆಚ್ಚಿನ ಉಪಚಾರ ಕುರಿತು ಸೋಲಾಪುರಕ್ಕೆ ಹೋಗುತ್ತಿದ್ದಾ ಮಾರ್ಗ ಮಧ್ಯ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 03-03-2015 ರಂದು ಸಾಯಂಕಾಲ ಶ್ರೀ ದೇವರಾಜ ತಂದೆ ಪರಮೇಶ್ವರರಾವ ಸಾ: ಶ್ರೀಹರಿ ನಗರ ಹಳೆ ಜೆವರ್ಗಿ ರೋಡ  ಕಲಬುರಗಿ ರವರ ಮಗನಾದ ನಿತೀನ ಇತನು ತಮ್ಮ  ಮನೆಯ ಎದುರಿನ ರೋಡ ಹತ್ತಿರ ಹೋಗಿ ನಿಂತಿದ್ದನ್ನು ಅದೇ ಸಮಯಕ್ಕೆ  ಕಾರ ನಂಬರ ಕೆಎ-32 ಟಿ.ಪಿ ನಂಬರ 30737 ರ ಚಾಲಕನು ಹಳೆ ಜೆವರ್ಗಿ ರೋಡದಿಂದ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗನಾದ ನಿತೀನ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನಿತೀನ ಇತನಿಗೆ ಬಲಗಡೆ ತಲೆಗೆ ಭಾರಿಪೆಟ್ಟು ಬಿದ್ದು ರಕ್ತ ಬರುತ್ತಿತ್ತು, ಬಲಗಲ್ಲದ ಮೇಲೆ ತರಚಿದಗಾಯ, ಬಲಗಾಲು, ಎಡಗಾಲು ಮೊಳಕಾಲಿಗೆ ತರಚಿದಗಾಯ, ಎಡಗೈ ಭುಜಕ್ಕೆ ತರಚಿದಗಾಯ ಮಾಡಿ ಕಾರ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ನಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 March 2015

Kalaburagi District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಸುಜಾತಾ ಗಂಡ ಮೊಗಲಪ್ಪ ಹಣಮನಳ್ಳಿ ಸಾ : ಸಣ್ಣ ಅಗಸಿ ಸೇಡಂ ಇವರ ಮದುವೆಯಾಗಿ 10 ವರ್ಷಗಳಾಗಿದ್ದು ಕಳೆದ 2 ವರ್ಷಗಳಿಂದ ನನ್ನ ಗಂಡನಾದ ಮೊಗಲಪ್ಪ ತಂದೆ ಕಾಶಣ್ಣ ಹಣಮನಳ್ಳಿ, ನಾಗಮ್ಮ ಗಂಡ ರಾಘಪ್ಪ ಬಟಗೀರಿ, ಮಲ್ಲಮ್ಮ ಗಂಡ ಸಾಬಣ್ಣ ಸೇಡಂ, ಶಾಣಮ್ಮ ಗಂಡ ಅಶೋಕ ಸೇಡಂ, ಮಲ್ಲಪ್ಪ ತಂದೆ ಶಿವರಾಯ ಹಣಮನಳ್ಳಿ,  ಅಂಬ್ರಿಷ ತಂದೆ ಶಿವರಾಯ ಹಣಮನಳ್ಳಿ, ಭೀಮು ತಂದೆ ಶಿವರಾಯ ಹಣಮನಳ್ಳಿ, ವೆಂಕಟಮ್ಮ ಗಂಡ ಶಿವರಾಯ ಹಣಮನಳ್ಳಿ, ಶಿವರಾಯ ತಂದೆ ಮೊಗಲಪ್ಪ ಹಣಮನಳ್ಳಿ, ತಿಮ್ಮಮ್ಮ ಗಂಡ ಕಾಶಣ್ಣ ಹಣಮನಳ್ಳಿ, ಸಾ : ಎಲ್ಲರು ಸೇಡಂ ಹಾಗೂ ಮುಧೋಳ ದವರು ಕೂಡಿಕೊಂಡು ನನಗೆ ನನ್ನ ಶಿಲದ ಬಗ್ಗೆ ಸಂಶಯ ವ್ಯಕ್ತಪಡಿಸಿ ಪ್ರತಿದಿವಸ ಜಗಳ ಮಾಡುವದು ಹೊಡೆಯುವದು ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ  ಕಿರುಕೂಳ ನೀಡಿದ್ದರಿಂದ ನಾನು ಆ ಕಿರುಕೂಳ ತಾಳಲಾರದೆ ನನ್ನ ತವರೂರಾದ ಕ್ಯಾತಗೀರ ಗ್ರಾಮಕ್ಕೆ ಹೊಗಿದ್ದೆನು. ದಿನಾಂಕ : 26-02-2015 ರಂದು ನನ್ನ ಗಂಡನಾದ ಮೊಗಲಪ್ಪ ತಂದೆ ಕಾಶಣ್ಣ ಹಣಮನಳ್ಳಿ ಇತನು ನನ್ನ ತವರು ಊರಿಗೆ ಬಂದು ನನ್ನ ಹೆಂಡತಿಗೆ ಸರಿಯಾಗಿ ಇಟ್ಟುಕೊಳ್ಳುತ್ತೆನೆ, ಬೇರೆ ಮನೆ ಮಾಡುತ್ತೆನೆ ಅಂತಾ ಹೇಳಿ ನನಗೆ ಸೇಡಂಕ್ಕೆ ಕರೆದುಕೊಂಡು ಬಂದು ನಾಗಪ್ಪ ಬಟ್ಟರ್ಗಿ ಇವರ ಮುಖಾಂತರ ಒಂದು ಬಾಡಿಗೆ ಮನೆ ಮಾಡಿ ಗಂಡ ಹೆಂಡತಿ ಊಳಿದಿದ್ದೆವು. ನಿನ್ನೆ ದಿನಾಂಕ : 27-02-2015 ರಂದು ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಹೊರಗಡೆಯಿಂದ ಮೇಲೆ ತೋರಿಸಿದ ಎಲ್ಲರು ಕುಡಿಕೊಂಡು ಬಂದವರೆ “ಏ ರಂಡಿ ಯಾಕ ಬಂದಿದಿ” ಅಂತಾ ಜಗಳ ತೆಗೆದು ನಮ್ಮ ನಾದನಿಯವರು ಜಗಳ ತೆಗೆದು ಹೊಡೆಹತ್ತಿದರು ನನ್ನ ಗಂಡ ಮೊಗಲಪ್ಪ ಇತನು “ಈ ರಂಡಿ ಅಲ್ಲದ ಕೆಲಸ ಮಾಡ್ಯಾಳ ಇವಳಿಗೆ ಕೊಲೆ ಮಾಡಿ ಮುಗಿಸಬೆಕೆಂದು ಪ್ಲಾನ ಮಾಡಿ ಕರೆದುಕೊಂಡು ಬಂದಿನಿ ಇವಳಿಗೆ ಬಿಡಬ್ಯಾಡ್ರಿ ಖಲಾಸ್ ಮಾಡ್ರಿ” ಅಂತಾ ಅಂದಿದ್ದೆ ತಡ ಅವರಲ್ಲಿಯ ಕೆಲವರು ಕೈಯಿಂದ ಹೊಡೆಯುತ್ತಿದ್ದರು. ಆಗ ನನ್ನ ಗಂಡನು ನನ್ನ ಮೈಮೆಲೆ ಸೀಮೆ ಎಣ್ಣೆ ಹಾಕಿ ನಿನಗೆ ಕೊಲೆಮಾಡಿ ಮುಗಿಸುತ್ತನೆ ಅಂತಾ ಅಂದು ಕಡ್ಡಿ ಕೊರೆದು ಮೈಗೆ ಊರಿಹಚ್ಚಿದ್ದರಿಂದ ನನ್ನ ಮೈ ಪೂರ್ತಿ ಸುಟ್ಟಿರುತ್ತದೆ. ನಂತರ ನನಗೆ ಅವರೇ ಉಪಚಾರದ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ಒಯ್ದಿದ್ದು ನಂತರ ಹೆಚ್ಚಿನ ಉಪಚಾರದ ಸಲುವಾಗಿ  ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದಾಗ ದಿನಾಂಕ : 04-03-2015 ರಂದು ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಂತೋಷ ತಂದೆ ದೊಡ್ಡಪ್ಪಗೌಡ ಬಿರಾದಾರ  ಸಾ: ಹನುಮಾನ ಟೆಂಪಲ ಹತ್ತಿರ ಓಂನಗರ ಕಲಬುರಗಿ  ರವರು ದಿನಾಂಕ 04-03-2015 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ನಾನು ಕೊರ ಮಂಡಲ ಸಿಮೆಂಟ ಅಂಗಡಿಯ ಮಾಲಿಕರಾದ ಮಲ್ಲಿಕಾರ್ಜುನ ಐನಾಪುರ ಇವರ ಹತ್ತೀರ ಭೆಟಿ ಆಗುವ ಸಲುವಾಗಿ ಶಹಾಬಜಾರ ನಾಕಾ ಮುಖಾಂತರವಾಗಿ ಆಳಂದ ಚೆಕ್ಕ ಪೋಸ್ಟ ಕಡೆಗೆ ನನ್ನ ಮೋಟಾರ ಸೈಕಲ ನಂಬರ ಕೆಎ-03-ಇಜಿ-9533 ನೆದ್ದನ್ನು ಚಲಾಯಿಸಿಕೊಂಡು ಹೋಗುವಾಗ ದಾರಿ  ಮದ್ಯ ಆಳಂದ ರೋಡ ನಲ್ಲಿ ಬರುವ  ಆರ್ಶಿವಾದ ಕಲ್ಯಾಣ ಮಂಟಪ ಹತ್ತಿರ ಬರುವ ಪೆಟ್ರೊಲ ಪಂಪ ಎದುರು ರೋಡ ಮೇಲೆ ಎದುರಿನಿಂದ ರಾಂಗ ಸೈಡ ಮೂಲಕವಾಗಿ ಯಾವುದೋ ಒಂದು  ಟಂಟಂ ಚಾಲಕನು ತನ್ನ ಟಂಟಂ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಫಘಾತ ಮಾಡಿ ನನ್ನ ಬಲ ಮೊಳಕಾಲಿಗೆ ಗುಪ್ತಪೆಟ್ಟು ಬಲಗಾಲು ಮೊಳಕಾಲ ಕೆಳೆಗೆ ಭಾರಿ ಪೆಟ್ಟು  ಬಿದ್ದು ರಕ್ತಗಾಯ . ಎರಡು ಕಣ್ಣುಗಳ ಮದ್ಯದಲ್ಲಿ ರಕ್ತಗಾಯ ಹಾಗೂ ಎಡ ಹುಬ್ಬಿನ ಮೇಲೆ ರಕ್ತಗಾಯ ಪಡಿಸಿ  ತನ್ನ ಟಂಟಂ ವಾಹನ ಚಲಾಯಿಸಿಕೊಂಡು ಓಡಿ ಹೋಗಿರುತ್ತಾರೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,