POLICE BHAVAN KALABURAGI

POLICE BHAVAN KALABURAGI

30 January 2015

Kalburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 29-01-15 ರಂದು ಬೆಳಿಗ್ಗೆ ಶ್ರೀ ವೇದಮೂರ್ತಿ ತಂದೆ ಶರಣಯ್ಯ ಮಠ  ಸಾ: ನಾಗನಹಳ್ಳಿ ತಾ:ಜಿ: ಕಲಬುರಗಿ ಇವರ ಹೆಂಡತಿ ಪಾರ್ವತಿ ಇವಳು ತನ್ನ ಅಕ್ಕನ ಮನೆಯಾದ ಜಂಬಗಾ (ಬಿ) ಗ್ರಾಮದಲ್ಲಿ  ಕಾರ್ಯಕ್ರಮ ಇದ್ದ ಪ್ರಯುಕ್ತ ತನ್ನ ಮಗನೊಂದಿಗೆ ಬಜಾಜ ಪಲ್ಸರ ಕೆಎ 32 ಯು 8291 ನೇದ್ದರ ಹಿಂದೆ ಕುಳಿತುಕೊಂಡು ಜಂಬಗಾ (ಬಿ) ಗ್ರಾಮಕ್ಕೆ ಹೋಗಿ ಮರಳಿ, ಅದೇ ಮೋಟಾರ ಸೈಕಲ ಹೊರಟಿದ್ದು, ಮಧ್ಯಾಹ್ನ 4-30 ಗಂಟೆ ಸುಮಾರಿಗೆ ಮಾಹಾದೇವ ಇತನು ತನ್ನ ವಶದಲ್ಲಿದ್ದ ಬಜಾಜ ಪಲ್ಸರಮೋಟಾರ ಸೈಕಲ ಕೆಎ 32 ಯು 8291 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಮದ ಚಲಾಯಿಸಿ, ಹಿಂದೆ ಕುಳಿತ ತನ್ನ ಹೆಂಡತಿ ಪಾರ್ವತಿಯನ್ನು ಲೆಕ್ಕಿಸದೇ ಮತ್ತು ಯಾವುದೇ ರೀತಿಯಿಂದ ನೋಡದೇ ತನ್ನ ಮೋಟಾರ ಸೈಕಲ ಚಲಾಯಿಸಿದ್ದರಿಂದ ಹಿಂದೆ ಕುಳಿತ ತನ್ನ ಹೆಂಡತಿ ಸೀರೆ ಸೆರಗವು ಮೊಟಾರ ಸೈಕಲದ ಹಿಂದಿನ ಚಕ್ರದಲ್ಲಿ ಸಿಲುಕಿ ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದು ತಲೆ ಹಾಗೂ ಇತರೇ ಭಾಗದಲ್ಲಿ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಮತ್ತು ಮಗ ಮಾಹಾದೇವನಿಗೂ ಸಹಾ ಗಾಯಾಗಳು ಆಗಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ:- 12/12/2014 ರಂದು ಜೇವರ್ಗಿ(ಕೆ) ಸಿಮೆಯಲ್ಲಿರುವ ಫಿರ್ಯಾದಿ ಹೊಲ ಸರ್ವೆ ನಂ- 63/1, 63/2 ನೇದ್ದರಲ್ಲಿ ಬಾಬುರಾವ ತಂದೆ ಸಿದ್ರಾಮಪ್ಪ ಚಿಂಚೋಳಿ, ಪ್ರಕಾಶ ತಂದೆ ಶಾಮರಾವ ಚಿಂಚೋಳಿ ಮತ್ತು ಬಸವರಾಜ ತಂದೆ ಶಾಮರಾವ ಚಿಂಚೋಳಿ ಸಾ : ಎಲ್ಲರು ಜೇವರ್ಗಿ (ಕೆ)   ರವರು  ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಬೆಳೆದ ಸೂರ್ಯಪಾನ ಬೆಳೆಯನ್ನು ಅಂದಾಜು 10 ಚೀಲದಷ್ಟು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ  ಶ್ರೀ ಶಾಮರಾವ ತಂದೆ ಸಿದ್ರಾಮಪ್ಪಾ ಚಿಒಂಚೋಳಿ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ ಬಸವರಾಜ ತಂದೆ ಲಕ್ಷ್ಮಣ ಮದಗುಣಕಿ ಸಾ; ಝಳಕಿ (ಕೆ) ರವರು ದಿನಾಂಕ 28/01/2015 ರಂದು ರಾತ್ರಿ ನಾನು ಮತ್ತು ನನ್ನ ಚಿಕ್ಕಪ್ಪ ಶ್ರೀಶೈಲ ತಂದೆ ಗುರುಶಾಂತಪ್ಪಾ ಮದಗುಣಕಿ ನಮ್ಮ ಹೊಲದಲ್ಲಿನ ಕಡಲೆಯನ್ನು ಕಿತ್ತಿ ಲಕ್ಷ್ಮಿದೇವರ ಪಟ್ಟಿಯಲ್ಲಿ ತಂದು ಬಡೆಯುತ್ತಾ ಇದ್ದಾಗ ನನ್ನ ದೊಡ್ಡಪ್ಪನ ಮಗನಾದ 1) ಭೊಗೇಶ ತಂದೆ ಶಿವಶರಣಪ್ಪ ಮದಗುಣಕಿ 2) ಶಿವಶರಣಪ್ಪ ತಂದೆ ಗುರುಶಾಂತಪ್ಪ ಮದಗುಣಕಿ 3) ಮಹಾದೇವಿ ಗಂಡ ಶಿವಶರಣಪ್ಪ ಮದಗುಣಕಿ 4) ಈರಣ್ಣಾ ತಂದೆ ಶಿವಶರಣಪ್ಪ ಮದಗುಣಕಿ ಇವರೆಲ್ಲರೂ ಬಂದು ನನಗೆ ಮುಂದಕ್ಕೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ನನಗೆ ಮತ್ತು ಬಿಡಿಸಲು ಬಂದ ನನ್ನ ಚಿಕ್ಕಪ್ಪ ಶ್ರೀಶೈಲ ಇವರಿಗೆ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿ ನಮ್ಮ ಹೊಲದಲ್ಲಿನ ನೀರಿನ ವಿಷಯದಲ್ಲಿ ವಿನ: ಕಾರಣ ತೊಂದರೆ ಕೊಡುತ್ತಿದ್ದಾರೆ ಇವರಿಗೆ ಖಲಾಸ ಮಾಡಬೇಕು ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಕ್ಕಳಿಗೆ ಚುಡಾಯಿಸಿದ ಪ್ರಕರಣ :
ಜೇವರ್ಗಿ ಠಾಣೆ : ಕುಮಾರಿ ವಿಜಯಲಕ್ಷ್ಮಿ ತಂದೆ ಸೋಮಣ್ಣ ಕುಳಗೇರಿ ಸಾ: ಬಿರಾಳ ಬಿ ಗ್ರಾಮ ತಾ : ಜೇವರ್ಗಿ ಇವರು ಈಗ 3-4 ತಿಂಗಳಿಂದ ನಮ್ಮೂರ 1) ಸಿದ್ರಾಮ ತಂದೆ ಹಣಮಂತ ಜೀರ  2) ಮಹೇಶ ತಂದೆ ಭೀಮಣ್ಣ ಗಯನವರ್ 3) ಭಾಗಪ್ಪ ತಂದೆ ಸಿದ್ದಪ್ಪ ಹೊನ್ನಾಳ  4) ಮಾನಪ್ಪ ತಂದೆ ತಿಪ್ಪಣ್ಣ ಮಾಚಾ ಸಾ|| ಎಲ್ಲರು ಬಿರಾಳ ಬಿ ಗ್ರಾಮ ಇವರೇಲ್ಲರು ಕೂಡಿಕೊಂಡು ಪ್ರತಿ ದೀನ ನನಗೆ ಮತ್ತು ನನ್ನ ಗೆಳತಿ ಮರೆಮ್ಮ ಶಹಾಪುರ ಇಬ್ಬರು ಕುಡಿಕೊಂಡು ಪ್ರತಿ ದಿನ ಶಾಲೆಗೆ ಮತ್ತು ಬಟ್ಟೆ ತೊಳೆಯಲು ಮತ್ತು ಇನ್ನಿತರೆ ಕಡೆಗೆ ಹೋಗಿ ಬರುವಾಗ ಆರೋಪಿತರೆಲ್ಲರು ಕೂಡಿಕೊಂಡು ಚುಡಾಯಿಸುವದು, ಅಶ್ಲೀಲ ಶಬ್ದಗಳಿಂದ ಕರೆಯುವದು, ಮತ್ತು ಒಬ್ಬರಿಗೊಬ್ಬರು ತಮ್ಮ ಮೇಲೆ ಬೈದಂತೆ ನಮಗೆ ಕರೆಯುವದು ಮಾಡುತ್ತಿದ್ದು ಅಲ್ಲದೆ ಇನ್ನಿತರೆ ರೀತಿಯಿಂದ ಚುಡಾಯಿಸುವದು ಮಾಡುತ್ತ ಬಂದಿದ್ದಲ್ಲದೆ ದಿನಾಂಕ 26.01.2015 ರಂದು ಮಧ್ಯಾಹ್ನ 01:30 ಗಂಟೆಯ ಸುಮಾರಿಗೆ ನನಗೆ ಮತ್ತು ನನ್ನ ಗೆಳತಿ ಮರೆಮ್ಮ ಹಾಗು ವೈನಿ ರೇಣುಕಾ ಎಲ್ಲರು ಕೂಡಿಕೊಂಡು ಊರ ಹೋರಗೆ ಇರುವ ಹಳ್ಳಕ್ಕೆ ಬಟ್ಟೆ ತೊಳೆಯಲು ಹೋದಾಗ ಆರೋಪಿತರೆಲ್ಲರು ಕೂಡಿಕೊಂಡು ನಮ್ಮಲ್ಲಿಗೆ ಬಂದು ನನಗೆ ಮತ್ತು ನನ್ನ ಗೇಳತಿಗೆ “ಫೀಗರು ಐಶ್ವರ್ಯ ಅಮೂಲ್ಯ” ಅಂತ ಚುರಾಯಿಸಿದ್ದು ಮತ್ತು ನಮಗೆ “ನಮ್ಮ ಜೋಡಿ ಬರ್ತಿರಾ” ಅಂತ ಚುಡಾಯಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :

ಕಮಲಾಪೂರ ಠಾಣೆ : ಶ್ರೀಮತಿ ಮನೀಷಾ ಗಂಡ ದಿನೇಶ ಪವಾರ ಸಾ: ಮರಮಂಚಿ ತಾಂಡಾ  ತಾ:ಜಿ: ಕಲಬುರಗಿ ಇವರನ್ನು ಸುಮಾರು  5 ವರ್ಷಗಳ ಹಿಂದೆ ನನಗೆ  ನಮ್ಮ  ತಂದೆ-ತಾಯಿಗಳು  ಗುರು ಹಿರಿಯರ ಸಮಕ್ಷಮದಲ್ಲಿ ಮರಮಂಚಿ  ತಾಂಡಾದಲ್ಲಿ  ಶ್ರೀ. ದಿನೇಶ  ತಂದೆ ಗೋಪಾಲ  ಪವಾರ  ಸಾ: ಮರಮಂಚಿ  ತಾಂಡಾ  ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು,  ಮದುವೆ ಸಮಯದಲ್ಲಿ ನನ್ನ  ಗಂಡನಿಗೆ ನನ್ನ  ತಂದೆ  ತಾಯಿಗಳು  ಗುರು ಹಿರಿಯರ ಸಮಕ್ಷಮದಲ್ಲಿ ನಾಲ್ಕುವರೆ ತೋಲೆ ಬಂಗಾರ  ಮತ್ತು  51000/-  ರೂಪಾಯಿ  ನಗದು ಹಣವನ್ನು  ವರದಕ್ಷಿಣೆ  ರೂಪದಲ್ಲಿ  ಕೊಟ್ಟಿರುತ್ತಾರೆ. ಮದುವೆಯಾಗಿ  ಸ್ವಲ್ಪ ದಿವಸಗಳ ಕಾಲ  ಚೆನ್ನಾಗಿ ನೋಡಿಕೊಂಡಿದ್ದು ನಂತರ ತವರು ಮನೆಯಿಂದ  ಇನ್ನಷ್ಟು ವರದಕ್ಷಿಣೆ  ಹಣ  ತರುವಂತೆ  ನನ್ನ ಗಂಡ ದಿನೇಶ  , ಅತ್ತೆ ಸೋನಾಬಾಯಿ ನಾದಿನಿ, ಇನ್ನು ಹಾಗೂ ರಮಾಬಾಯಿ  ಭಾವಂದಿರುರಾದ  ಹಣಮಂತ  ಮತ್ತು ಶ್ರೀಮಂತ [ ಆರೋಪಿತರು ] ಮಾನಸಿಕವಾಗಿ ಮತ್ತು  ದೈಹಿಕವಾಗಿ  ಕಿರುಕುಳ ಕೊಡುತ್ತಿದ್ದರು  ನಾನು  ಸಹಿಸಿಕೊಂಢು ಬಂದಿದ್ದು, ಮುಂಬೈದಲ್ಲಿ  ನನ್ನ  ಗಂಡ  ಮನೆ  ಕಟ್ಟುವಾಗ ನನಗೆ  ಒತ್ತಾಯ ಮಾಡಿಸಿ ನನ್ನ  ತಂದೆಯಿಂದ ಮತ್ತೆ   60, 000/- ರೂಫಾಯಿ ತರಿಸಿಕೊಟ್ಟಿರುತ್ತೇವೆ. ಅಲ್ಲದೇ  ನನಗೆ  ಐದು  ವರ್ಷಗಳಿಂದ  ಮಕ್ಕಳಾಗದೇ  ಇರುವುದರಿಂದ ನನ್ನ ಅತ್ತೆ  ನನ್ನ  ಗಂಡನಿಗೆ  ಬೇರೆ  ಮದುವೆ ಮಾಡಲು ಯತ್ನಿಸುತ್ತಿದ್ದು, ನೀನು ನಮ್ಮ  ಮನೆಯಲ್ಲಿ  ಇರಬೇಕಾದರೆ ನಿನ್ನ  ತವರು ಮನೆಯಿಂದ ಇನ್ನೂ 2 ಲಕ್ಷ ಹಣ  ತಂದು  ಕೊಡು ಇಲ್ಲದಿದ್ದರೆ ನಮ್ಮ  ಮನೆ ಬಿಟ್ಟು  ಹೋಗು  ಅಂತಾ ದೈಹಿಕ  ಮತ್ತು  ಮಾನಸಿಕ ಕಿರುಕುಳ  ನೀಡುತ್ತಿದ್ದಾರೆ. ದಿನಾಂಕ: 12/01/2015 ರಂದು  ರಾತ್ರಿ  01-30  ಗಂಟೆಯ  ಸುಮಾರಿಗೆ  ನಾನು ಮರಮಂಚಿಯ   ನನ್ನ ಗಂಡನ  ಮನೆಯಲ್ಲಿದ್ದಾಗ  ನನ್ನ ಗಂಡ ದಿನೇಶ  ಈತನು  ಕುಡಿದು ಬಂದು ನನಗೆ  ಉಸಿರುಗಟ್ಟಿಸಿ ಕೊಲೆ ಮಾಡಲು  ಪ್ರಯತ್ನ ಪಟ್ಟಿದ್ದು,ಆಗ  ನಾನು  ಆತನಿಂದ  ಬಿಡಿಸಿಕೊಂಡಿರುತ್ತೇನೆ. ಈ ವಿಷಯವನ್ನು ನಾನು ನನ್ನ ತಂದೆ-ತಾಯಿಗೆ  ಫೋನಿನಲ್ಲಿ  ತಿಳಿಸಿರುತ್ತೇನೆ. ನಂತರ  ದಿನಾಂಕ: 20-01-2015 ರಂದು ಮತ್ತೆ  ನನ್ನ  ಗಂಡ , ಅತ್ತೆ ಕೂಡಿಕೊಂಢು ನನಗೆ  ತವರು  ಮನೆಗೆ  ಹೋಗು ಅಂತಾ  ಹೇಳಿ   ನನಗೆ ಮನೆಯಿಂದ ಹೊರಗೆ  ಹಾಕಿರುತ್ತಾರೆ. ನನಗೆ  ಮೇಲೆ  ತಿಳಿಸಿದ ಜನರು  ದಿನಾಲು  ಮಕ್ಕಳಾಗಿಲ್ಲವೆಂದು  ಹಿಯಾಳಿಸುತ್ತಾ  ತವರು ಮನೆಯಿಂದ  ಇನ್ನಷ್ಟು  ಹಣ  ತೆಗೆದುಕೊಂಡು  ಬಾ  ಅಂತಾ  ಹೇಳಿ ನನಗೆ ದೈಹಿಕವಾಗಿ  ಮತ್ತು  ಮಾನಸಿಕವಾಗಿ  ಕಿರುಕುಳ  ನೀಡುತ್ತಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 January 2015

Kalaburagi District Reported Crimes

ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 27.01.2015 ರಂದು ಶ್ರೀಮತಿ ಚೆನ್ನಮ್ಮ ಗಂಡ ಜಗದೀಶ ಭೈರಾಮಡಗಿ ಸಾ : ಶಿವಶಕ್ತಿ ನಗರ ಕಲಬುರಗಿ ರವರ ಗಂಡನಾದ ಜಗದೀಶ ತಂದೆ ಸುಭಾಶ ಭೈರಾಮಡಗಿ ಈತನು ಮತ್ತು ಅಶೋಕ ಇಬ್ಬರು ಕೂಡಿಕೊಂಡು ಪೆಂಟಿಂಗ್ ಕೆಲಸದ ನಿಮಿತ್ತ ಮುದಬಾಳ ಕೆ ಗ್ರಾಮಕ್ಕೆ ಬಂದು ಕೆಲಸ ಮುಗಿಸಿಕೊಂಡು ಜೇವರ್ಗಿ ತಾಲ್ಲೂಕಿನ ಮುದಬಾಳ ಕೆ ಗ್ರಾಮದ ಹತ್ತಿರ ಇರುವ ಮುಖ್ಯ ನೀರಿನ ಕಾಲುವೆಯಲ್ಲಿ ಕೈ ಕಾಲು ಮುಖ ತೊಳೆದುಕೊಳ್ಳಲು ಮಧ್ಯಾಹ್ನ ೦3:30 ಗಂಟೆಯ ಸುಮಾರಿಗೆ ಹೋಗಿ ಸದರಿ ಮುಖ್ಯ ಕಾಲುವೆಯಲ್ಲಿ ಕೈ ಕಾಲು ತೊಳೆದುಕೊಳ್ಳುತ್ತಿದ್ದಾಗ ಜಗದೀಶ ಈತನು ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಯ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದು ಸದರಿಯವನ ಮೃತ ದೇಹವು ಇಂದು ದಿನಾಂಕ 29.01.2015 ರಂದು ಮುಂಜಾನೆ 09:00 ಗಂಟೆಯ ಸುಮಾರಿಗೆ ಕೇನಾಲ್‌ ಗೇಟಿನ ಹತ್ತಿರ ನೀರಿನಲ್ಲಿ ತೆಲಿದ್ದು ಸದರಿ ಮೃತನು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ಹಣಮಂತ್ರಾಯ ತಂದೆ ಮಲ್ಲೆಶಪ್ಪಗೌಡ ಆಲೂರು ಸಾ : ಲಕ್ಷ್ಮಿಚೌಕ್‌ ಜೇವರ್ಗಿ  ದಿನಾಂಕ 25.01.2015 ರಂದು ಸಾಯಂಕಾಲ ಕಂಕರ್ ಮಷೀನ್‌ ನರಿಬೋಳಿ ಜೇವರ್ಗಿ ರೋಡ ಹತ್ತಿರ ನಮ್ಮ ತಂದೆ ಮಲ್ಲೆಶಪ್ಪಗೌಡ ಇವರು ರೋಡಿನ ಸೈಡಿನಿಂದ ಜೇವರ್ಗಿ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಆ ವೇಳೆಗೆ ಹಿಂದಿನಿಂದ ಅಂದರೆ ಚೆನ್ನುರು ಕಡೆಯಿಂದ ಬಂದ  ಮೋಟಾರು ಸೈಕಲ್‌ ನಂ ಕೆಎ32ಈಬಿ9632 ನೇದ್ದರ ಚಾಲಕನು ತನ್ನ ಮೊಟಾರು ಸೈಕಲ್‌ ಅನ್ನು ಭಹಳ ಸ್ಪೀಡಾಗಿ ಮತ್ತು ಅಡ್ಡದಿಡ್ಡಿಯಾಗಿ ನಡೆಸಿಕೊಂಡು ಬಂದು ನಮ್ಮ ತಂದೆಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅವರಿಗೆ ಗಾಯಗೊಳಿಸಿ ತನ್ನ ಮೋಟಾರು ಸೈಕಲ್‌ ನೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 28.01.2015 ರಂದು ಶ್ರೀ ಯಮನಪ್ಪ ತಂದೆ ಭೀಮರಾಯ ನಾಯಕೋಡಿ ಸಾ : ಮಾರಡಗಿ ರವರು  ಟಾಟಾ ಎಸ್ ವಾಹನ ನಂ ಕೆ.ಎ 27 9819 ನೇದ್ದರದಲ್ಲಿ ಕುಳಿತುಕೊಂಡು ಮಾರಡಗಿ ಗ್ರಾಮದಿಂದ ಜೇವರ್ಗಿ ಕಡೆಗೆ ಬರುತ್ತಿದ್ದಾಗ  ಅವರಾದ್‌ ಕ್ರಾಸ್‌ ಹತ್ತಿರ ಜೇವರ್ಗಿ ಶಹಾಪುರ ಮೇನ್‌ ರೋಡಿನಲ್ಲಿ ಬರುತ್ತಿದ್ದಾಗ ಮಧ್ಯಾಹ್ನ 02:30 ಗಂಟೆಗೆ ಶಹಾಪುರ ಕಡೆಯಿಂದ ಬರುತ್ತಿದ್ದ ಲಾರಿ ಟ್ಯಾಂಕರ್ ನಂ ಕೆ.ಎ32ಎ6363 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನಲ್ಲಿ ಹೋಗುತ್ತಿದ್ದ ಮೋಟಾರು ಸೈಕಲ್‌ ನಂ ಎಮ್.ಹೆಚ್13 ಬಿ.ಎಪ್‌ 0544 ನೇದ್ದಕ್ಕೆ ಡಿಕ್ಕಿ ಪಡಿಸಿ ಮುಂದೆ ಬಂದು ಫಿರ್ಯಾದಿ ದಾರನು ಕುಳಿತುಕೊಂಡು ಹೊಗುತ್ತಿದ್ದ ಟಾಟಾ ಎಸ್ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿ ದ್ವಿಚಕ್ರ ವಾಹನ ಸವಾರ ಮತ್ತು ಹಿಂದೆ ಕುಳಿತನಿಗೆ ಹಾಗು ಫಿರ್ಯಾದಿದಾರನಿಗೆ ಹಾಗು ಟಾಟಾ ಎಸ್‌ ವಾಹನದಲ್ಲಿದ್ದ ಮಲ್ಲಪ್ಪ ಮತ್ತು ಚಾಲಕ ನಿಗೆ ಭಾರಿ ಮತ್ತು ಸಾದಾ ರಕ್ತ ಗಾಯಗೊಳಿಸಿ ಆರೋಪಿ ಲಾರಿ ಚಾಲಕ ತನ್ನ ಲಾರಿಯನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಮನುಷ್ಯ ಕಾಣೆಯಾದ ಪ್ರಕರಣ :
ರೋಜಾ ಠಾಣೆ : ದಿನಾಂಕ: 10/11/2014 ರಂದು ಬೆಳಿಗ್ಗೆ 05:30 ಎ.ಎಮ್ ದಿಂದ 06:00 ಎ.ಎಮ್ ದ ಅವಧಿಯಲ್ಲಿ  ನನ್ನ ಗಂಡ ಶರಣಪ್ಪಾ ತಂದೆ ಸಾಯಿಬಣ್ಣ ನಿಪ್ಪಾಣಿ ಇವರು ನಮಗೆ ಮನೆಯಲ್ಲಿ ಏನು ಹೇಳದೆ-ಕೇಳದೆ ಮನೆಯಿಂದ ಹೊರ ಹೋದವರು ಇಲ್ಲಿಯವರೆಗೆ ಹಿಂತಿರುಗಿ ಬಂದಿರುವುದಿಲ್ಲಾ. ನಮ್ಮ ಎಲ್ಲಾ ಸಂಭಂಧಿಕರ ಮನೆಯಲ್ಲಿ ಹಾಗೂ ಅವರ ಮಿತ್ರರು ಮತ್ತು ಗುತ್ತೇದಾರರ ಹತ್ತಿರ ಹೋಗಿ ವಿಚಾರಿಸಿದರು ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ. ಅಂತಾ  ಶ್ರೀಮತಿ ಭಾರತಿಬಾಯಿ ಗಂಡ  ಶರಣಪ್ಪಾ ನಿಪ್ಪಾಣಿ ಸಾ|| ರಾಮಜೀ ನಗರ ರೋಜಾ [ಕೆ] ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 January 2015

Kalaburagi District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 26-01-2015 ರಂದು ಬೆಳಿಗ್ಗೆ ಶ್ರೀ ಸೋಮಶೇಖರ ತಂದೆ ಬಾಬಾಸಾಹೇಬಗೌಡ ಮಾಲೀಪಾಟೀಲ  ಸಾ: ನಗರ ಗುಡಿ ಹತ್ತಿರ ಮಾಣೆಕೇಶ್ವರಿ  ಕಾಲೋನಿ ಕಲಬುರಗಿ ರವರು ಮತ್ತು ತನ್ನ ಮೊಮ್ಮಗ ನಾದ ಆಕಾಶ ಮತ್ತು ಜಗತ ಓಣಿಯ ನನ್ನ ಮೊಮ್ಮಗನ ಗೆಳಯ ಪ್ರತಾಪರೆಡ್ಡಿ ಮೂರು ಜನರು ಕೂಡಿಕೊಂಡು ಡಿ.ಎ.ಆರ್. ಪರೇಡ ಮೈದಾನದಲ್ಲಿ ಗಣರಾಜೋತ್ಸ ನೋಡಿಕೊಂಡು ಹಾಗೇ ಏಷಿಯನ ಮಹಲ ನೋಡುವ ಸಲುವಾಗಿ ಮೂರು ಜನರು ಹಳೆ ಡಿಪಿಓ ಕ್ರಾಸದಿಂದ ಏಷಿಯನ ಮಹಲ ಕಡೆಗೆ ನಡೆದುಕೊಂಡು ಹೋಗುವಾಗ ಏಷಿಯನ ಮಹಲ ಎದುರಿನ ರೋಡ ಮೇಲೆ ಎದುರಿನಿಂದ ಮೋ/ಸೈಕಲ ನಂಬರ ಕೆಎ-32 ಕೆ-9707 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆಕಾಶ ಮತ್ತು ಪ್ರತಾಪರೆಡ್ಡಿ ಇಬ್ಬರಿಗೂ ಅಪಘಾತ ಪಡಿಸಿ ಭಾರಿಗಾಯಗೊಳಿಸಿ ಮೋ/ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ  : ಶ್ರೀ ಈಶ್ವರ ತಂದೆ ಕೈಲಾಸ ಜಾಧವ ಸಾ|| ಕಿಷನ್ ನಾಯಕ ತಾಂಡಾ ತಾ|| ಉದನೂರ ಜಿಲ್ಲಾ|| ಅದಿಲಾಬಾದ ರವರು  ಎರಡು ತಿಂಗಳ ಹಿಂದೆ ಕಬ್ಬು ಕಡಿಯಲು ಕಲಬುರ್ಗಿ ಜಿಲ್ಲೆಯ ಅಫಜಲಪೂರ ತಾಲೂಕಿಗೆ ಬಂದಿದ್ದು ನನ್ನಂತೆ ನಮ್ಮ ಮಾವ ಸವಾಯಿರಾಮ ರಾಠೋಡ, ಹಾಗು ನಮ್ಮ ತಾಂಡಾದವರಾದ ಸಂತೋಷ ರಾಠೋಡ, ಇಂದರ ರಾಠೋಡ, ಗಣೇಶ ರಾಠೋಡ ಹಾಗು ಇತರರು ಬಂದಿದ್ದು ದಿನಾಂಕ 27-01-2015 ರಂದು ಅಫಜಲಪೂರ ತಾಲೂಕಿನ ಶಂಕರ ಸೋಬಾನಿ ರವರ ಹೊಲದಲ್ಲಿ ಕಬ್ಬು ಕಡಿಯುತ್ತಿದ್ದೇವು. ನಂತರ ನಾನು 12;00 ಪಿ.ಎಂ ಸುಮಾರಿಗೆ ಅಫಜಲಪೂರ ಹತ್ತಿರ ಇರುವ ಶ್ರೀಗಿರಿ ಧಾಬಾಕೆ ಹೋಗಿ ಅಲ್ಲಿ ಧಾಬಾ ಮಾಲಕರಾದ ಸೋಮು ಶ್ರೀಗಿರಿ ರವರಿಗೆ ನಾನು ಕಬ್ಬು ಕಡಿಯವ ಕೆಲಸ ಮಾಡುತ್ತೇನೆ. ನಿಮ್ಮ ಹೊಲದಲ್ಲಿ ಕಬ್ಬು ಇದ್ದರೆ ಹೇಳಿ ನಮ್ಮ ಟೋಳಿ ಮಾಲಕರಿಗೆ ಹೇಳಿ ಆದಷ್ಟು ಬೇಗನೆ ಕಬ್ಬು ಕಟಾವ ಮಾಡುತ್ತೇವೆ ಅಂತಾ ಹೇಳಿ ಅಲ್ಲೆ ಧಾಬಾದಲ್ಲೆ ಊಟಾ ಮಾಡಿದೆನು, ನಾನು ಊಟಾ ಮಾಡಿದ ಬಿಲ್ಲು ತೆಗೆದುಕೊಂಡಿರುವುದಿಲ್ಲಾ. ನಂತರ ನಮ್ಮ ಟೋಳಿ ಮಾಲಿಕರಿಗೆ ಬೇಟಿಯಾಗಲು ಸೋಮು ಮತ್ತು  ಅವರ ತಮ್ಮ ಚಂದು ಶ್ರೀಗಿರಿ ಹಾಗು ಇನ್ನು ಒಬ್ಬನನ್ನು ಕರೆದುಕೊಂಡು ನಾವು ಕೆಲಸ ಮಾಡುತ್ತಿದ್ದ ಶಂಕರ ಸೋಬಾನಿ ರವರ ಹೊಲಕ್ಕೆ ಹೋದೆವು. ಆಗ ಸೋಮು ರವರು ನಮ್ಮ ಟೋಳಿದವರಿಗೆ ವಿಚಾರಿಸಿದಾಗ ಇನ್ನು ಇಲ್ಲಿ ಕೆಲಸ ಬಹಳ ಇದೆ ನಿಮ್ಮ ಹೊಲದ ಕಬ್ಬು ಕಟಾವ ಮಾಡುವುದಿಲ್ಲಾ ಅಂತಾ ಅಂದರು, ಅದಕ್ಕೆ ಸೋಮು ಇವನು ನನ್ನ ಮೇಲೆ ಸಿಟ್ಟಿಗೆ ಬಂದು ನನಗೆ ಏ ಸೂಳಿ ಮಗನಾ ಲಮಾಣ್ಯಾ ನಮಗೇ ಮೋಸಮಾಡತಿಯಾ ಮಗನಾ ಅಂತಾ ಅಂದು ಅಲ್ಲೆ ಬಿದ್ದಿದ ಒಂದು ಬಡಿಗೆ ತೆಗೆದುಕೊಂಡು ನನ್ನ ಎಡಗಡೆ ಕುತ್ತಿಗಿಯ ಮೇಲೆ ಜೋರಾಗಿ ಹೊಡೆದು ಭಾರಿ ಗುಪ್ತ ಪೆಟ್ಟು ಪಡಿಸಿದನು, ಆಗ ನಾನು ಒಮ್ಮೇಲೆ ನೆಲದ ಮೇಲೆ ಬಿದ್ದಾಗ ಅದೆ ಬಡಿಗೆಯಿಂದ ನನ್ನ ಎಡಗಾಲ ಮೊಳಕಾಲ ಕೆಳಗೆ ಹೊಡೆದು ರಕ್ತಗಾಯ ಪಡಿಸಿದನು. ಆಗ ಅವನೊಂದಿಗೆ ಇದ್ದ ಎರಡು ಜನರು ನನ್ನ ಹೊಟ್ಟೆಯ ಮೆಲೆ ಒದ್ದು ಗಾಯಗೊಳಿಸಿ ಜಾತಿ ನಿಂದನೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.