POLICE BHAVAN KALABURAGI

POLICE BHAVAN KALABURAGI

04 January 2015

KALABURAGI DIST REPORTED CRIMES

ಸ್ಪಂದನ (ಮಹಿಳಾ ಮತ್ತು ಮಕ್ಕಳ ಸಹಾಯ ವಾಣಿ)  ಕೇಂದ್ರ ಕಲಬುರಗಿ ಉದ್ಘಾಟನೆ : .


       
  ಇಂದು ದಿನಾಂಕ 04-01-2014 ರಂದು ಮಹಿಳಾ ಪೊಲೀಸ ಠಾಣೆ ಕಲಬರುಗಿಯಲ್ಲಿ (ಸ್ಪಂದನ) ಮಹಿಳಾ ಮತ್ತು ಮಕ್ಕಳ ಸಹಾಯ ವಾಣಿ ಕೇಂದ್ರವನ್ನು ನೂತನವಾಗಿ ಮಾನ್ಯ ಶ್ರೀ ಸುರೇಶ ಮೊಹ್ಮದ ಕುನ್ನಿ   ಪೊಲೀಸ ಮಹಾ ನಿರೀಕ್ಷಕರು ಈಶಾನ್ಯ ವಲಯ ಕಲಬುರಗಿ ರವರು ಉದ್ಘಾಟನೆ ಮಾಡಿರುತ್ತಾರೆ ಹಾಗೂ ಮಾನ್ಯ ಶ್ರೀ ಅಮೀತ ಸಿಂಗ್ ಜಿಲ್ಲಾ ಪೊಲೀಸ ಅಧೀಕ್ಷಕರು ಕಲಬುರಗಿ ಹಾಗೂ ಮಾನ್ಯ ಶ್ರೀ ಮಹಾಂತೇಶ ಅಪರ ಜಿಲ್ಲಾ ಪೊಲೀಸ ಅಧೀಕ್ಷಕರು ಕಲಬುರಗಿರವರು ಮತ್ತು ಶ್ರೀ ಮಹಾನಿಂಗ .ಬಿ. ನಂದಗಾಂವಿ ಪೊಲೀಸ ಉಪಾಧೀಕ್ಷಕರು (ಎ) ಉಪ ವಿಭಾಗ ಕಲಬುರಗಿರವರು  ಸದರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಸಮಾಲೋಚನೆ ಕುರಿತು ಈ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. 
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ :ದಿನಾಂಕ 02-01-2015 ರಂದು ಶ್ರೀ ಪ್ರಭಾಕರ ತಂದೆ ಚಿದಾನಂದ ಹೊಸಳ್ಳಿ ಸಾ: ಝಳಕಿ[ಬಿ] ರವರು ರಸ್ತೆಯಲ್ಲಿನ ಪುಲಿನ ಮೇಲೆ ಹೋಗುತ್ತಿದ್ದಾಗ  1] ಮಲ್ಲಿನಾಥ ತಂದೆ ಬೋಗಣ್ಣಾ ಹೋಸಳ್ಳಿ 2]ಯಲ್ಲಮ್ಮ ಗಂಡ ಭೋಗಪ್ಪ ಹೊಸಳ್ಳಿ ವ: 47 ವರ್ಷ 3] ಶ್ರೀಶೈಲ ಹೋಸಳ್ಳಿ 4]ಸಿದ್ದಾರಾಮ ಹೊಸಳ್ಳಿ ರವರೆಲ್ಲರು ಕುಡಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಅಂಗಿ ತೋಳ ಹಿಡಿದು ಜಗ್ಗಿ ಹರಿದು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿರುತ್ತಾರೆ ಮತ್ತು ಬಿಡಿಸಲು ಬಂದ  ಅಣ್ಣ ಮಧುಕರ ಹೊಸಳ್ಳಿ, ನನ್ನ ತಂದೆ ಚಿದಾನಂದ ಇವರಿಗೂ ಮಕ್ಕಳೇ ನಿಮಗೆ ನೀಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಬೇದರಿಕೆ ಹಾಕುತ್ತಿರುವಾಗ ನಮ್ಮೂರಿನ ಪ್ರಕಾಶ ಹೊಸಳ್ಳಿ, ಶಾಂತಪ್ಪ ಹೊಸಳ್ಳಿ ಇತರರೂ ಜಗಳವನ್ನು ನೋಡಿ ಬಿಡಿಸಿರುತ್ತಾರೆ ಕಾರಣ ತಡೆದು ನಿಲ್ಲಿಸಿ, ಹೊಡೆಬಡೆ ಮಾಡಿ ಅವಾಚ್ಚಶಬ್ದಗಳಿಂದ ಬೈದು ಜೀವದ ಹೇದರಿಕೆ ಹಾಕಿದವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜುಕೋರನ ಬಂಧನ:
ನಿಂಬರ್ಗಾ ಠಾಣೆ:- ದಿನಾಂಕ 03/01/2015  ರಂದು ಶ್ರೀ ದತ್ತಾತ್ರೇಯ ಎ.ಎಸ್.ಐ ಡಿ.ಸಿ.ಐ.ಬಿ ಘಟಕ ಕಲಬುರಗಿ ರವರು ಕರೆ ಮಾಡಿ ಧುತ್ತರಗಾಂವ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಕೊಟ್ಟ ಮೇರೆಗೆ ಇಬ್ಬರು ಪಂಚರು ನಾನು ಹಾಗೂ ಸಿಬ್ಬಂಧಿ ಶ್ರೀ ಹಜರತ ಅಲಿ ಸಿಪಿಸಿ 154, ಕೂಡಿ ಠಾಣೆಯ  ಧುತ್ತರಗಾಂವ ಗ್ರಾಮಕ್ಕೆ ಹೋಗಿ ಶ್ರೀ ಧತ್ತಾತ್ರೇಯ ಎ.ಎಸ್.ಐ ರವರನ್ನು ಬರಮಾಡಿಕೊಂಡಿದ್ದು ಅವರ ಸಂಗಡ ಡಿ.ಸಿ.ಐ.ಬಿ ಘಟಕದ ಸಿಬ್ಬಂದಿಯವರಾದ  1) ಅಣ್ಣಾರಾಯ ಹೆಚ್.ಸಿ 332,   2) ಶೀವಯೋಗಿ ಹೆಚ್.ಸಿ 220, 3) ಚಂದ್ರಕಾಂತಹೆಚ್.ಸಿ 287, 4) ಅಂಬಾರಾಯ ಹೆಚ್.ಸಿ 54, 5) ಮಲ್ಲಿಕಾರ್ಜುನ ಹೆಚ್.ಸಿ 58 ರವರು ಇವರೊಂದಿಗೆ ಪಿ.ಐ ಡಿ.ಸಿ.ಐ.ಬಿ ಕಲಬುರಗಿ ರವರ  ಮಾರ್ಗದರ್ಶನದಲ್ಲಿ ದಾಳಿ ಮಾಡಿ ಆತನನ್ನು ಹಿಡಿದು ವಿಚಾರಿಸಲು ತನ್ನ ಹೆಸರು ಸಿದ್ದಲಿಂಗಯ್ಯ ತಂದೆ ಗುರುಮೂರ್ತಯ್ಯ ಮಠಪತಿ ಸಾ:ಧುತ್ತರಗಾಂವ ಅಂತಾ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 6550/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ, ಈ ಬಗ್ಗೆ 1345 ಗಂಟೆಯಿಂದ 1435 ಗಂಟೆಯವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಆತನ ವಿರುದ್ದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಟ್ರ್ಯಾಕ್ಟರ ಚಾಲಕನ ಬಂಧನ:
ಜೇವರ್ಗಿ ಪೊಲೀಸ : ದಿನಾಂಕ 03.01.2015 ರಂದು ಪಿ.ಎಸ್.ಐ ಜೇವರ್ಗಿ ಪೊಲೀಸ್ ಠಾಣೆರವರು ಪಎಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ಟ್ರ್ಯಾಕ್ಟರ್ ನಂ ಕೆ.ಎ32ಟಿ5642 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರ್ ನಲ್ಲಿ ಟೇಪು ರಿಕಾರ್ಡ ಹಚ್ಚಿಕೊಂಡು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ವಾಹನವನ್ನು ಚಲಾಯಿಸುತ್ತಿರುವಾಗ ಚಾಲಕನ್ನು ನಿಲ್ಲಿಸಿ ಹಾಗೆ ಬಿಟ್ಟಲ್ಲಿ ಮುಂದೆ ಅಪಘಾತಪಡಿಸುವ ಸಂಭವ ಕಂಡುಬಂದಿದ್ದರಿಂದ ಇಬ್ಬರು ಪಂಚರನ್ನು ಕರೆಯಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರ್ ನ್ನು ಜಪ್ತಿ ಮಾಡಿದ್ದು ಟ್ರ್ಯಾಕ್ಟರ್ ಮತ್ತು ಚಾಲಕನ ವಿರುಧ್ಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

03 January 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ: 01-01-2015 ರಂದು ಸಾಯಾಂಕಾಲ ಅಬ್ದುಲ್ ರಹೀಮ್ ತಂದೆ ಅಬ್ದುಲ್ ಖಾದರ ದಫೇದಾರ ಸಾ: ಸಾದತ್ತ ನಗರ ಸೇಡಂ ಮಗನಾದ ಅಬ್ದುಲ್ ಕರೀಮ ಇಬ್ಬರೂ ಕೂಡಿಕೊಂಡು ಕೆಲಸದ ನಿಮಿತ್ಯ ಮುಧೊಳಕ್ಕೆ ಕಾರ ನಂ ಕೆಎ-36- ಎಮ್- 5590 ನ್ನೇದ್ದರಲ್ಲಿ  ಹೋರಟಿದೆವು ಕಾರ, ನಮ್ಮ ಮಗನು ಚಲಾಯಿಸುತಿದ್ದನು ನಾವು ರಂಜೋಳ ಕ್ರಾಸ್  ಹತ್ತಿರ ಹೋಗುತ್ತಿದ್ದಂತೆ ಎದುರುಗಡೆಯಿಂದ ಒಬ್ಬ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರ ಚಲಾಯಿಸಿಕೊಂಡು ಬರುತ್ತಿದ್ದನು ಮತ್ತು ನಮ್ಮ ಸಮೀಪ ಬರುತ್ತಿದ್ದಂತೆ ಟ್ರ್ಯಾಕ್ಟರಿಗೆ ಹಿಂದಿನಿಂದ ಇನ್ನೊಬ್ಬ ಕಾರ ಚಾಲಕನು ಟ್ರ್ಯಾಕ್ಟರ ಟ್ರ್ಯಾಲಿಗೆ ಹಾಯಿಸಿದ್ದರಿಂದ ಅದರ ಇಂಜಿನ್ ರೋಡಿನ ಬಲಕೆ ತಿರುಗಿಸಿದಾಗ ನನ್ನ ಮಗನು ನಮ್ಮ ಕಾರ ನಿಯಂತ್ರಣಕ್ಕೆ ತಗೆದುಕೊಂಡರೂ ಸಹ ಟ್ರ್ಯಾಕ್ಟರ ಇಂಜಿನ್ ನಮ್ಮ ಕಾರಿಗೆ ಡಿಕ್ಕಿ ಹೊಡೆಯಿತು ಅಷ್ಟರಲ್ಲಿ ಟ್ರ್ಯಾಕ್ಟರ ಟ್ರ್ಯಾಲಿ ಪಲ್ಟಿಯಾಗಿ ರೋಡಿನ ಮೇಲೆ ಬಿದ್ದಿದ್ದರಿಂದ ಅಪಘಾತ ಮಾಡಿದ ಇಂಡಿಕಾ ಕಾರಿನಲ್ಲಿಯೂ ಜನರಿದ್ದರು ಈ ಘಟನೆಯಿಂದ ನನಗೆ ಭಾರಿ ರಕ್ತ ಗಾಯವಾಗಿರುತ್ತದೆ  ಮತ್ತು ನನ್ನ ಮಗನಿಗೆ ಬಾಯಿಗೆ ಗುಪ್ತ ಪೆಟ್ಟಾಗಿರುತ್ತದೆ.  ಮತ್ತು ಟ್ರ್ಯಾಯಿಲಿ ಕುಳಿತವರಿಗೆ ಸಾದಾ ಹಾಗು ರಕ್ತ ಗಾಯಗಳಾಗಿರುತ್ತವೆ.  ಮತ್ತು ಅಪಘಾತ ಮಾಡಿದ ಇಂಡಿಕಾ ಕಾರಿನಲ್ಲಿದ್ದ  ಅಶ್ವನಿ ಎನ್ನುವಳಿಗೆ ತಲೆಗೆ ಭಾರಿ ರಕ್ತ ಗಾಯ, ಶ್ರೀ ಎನ್ನವು 7 ತಿಂಗಳ ಮಗುವಿಗೆ ತಲಗೆ ಹಾಗು ಮುಖದ ಎಡಭಾಗಕ್ಕೆ ಭಾರಿ ರಕ್ತ ಗಾಯಗಳಾಗಿರುತ್ತವೆ, ಮತ್ತು ರವಿ ಮತ್ತು ಓಂ ಎನ್ನುವರಿಗೆ ಸಾದಾ ಗಾಯಗಳಾಗಿರುತ್ತವೆ  ಈ ಘಟನೆ ನಡೆದಾಗ ಅಂದಾಜು 7-45   ಪಿ ಎಮ್ ಆಗಿರಬಹುದು ಟ್ರ್ಯಾಕ್ಟರ ನಂಬರ ನೊಡಲಾಗಿ ಎಪಿ-25- ಆರ್- 1858 ಇದ್ದು ಟ್ರ್ಯಾಲಿ ನಂಬರ ಇರುವುದಿಲ್ಲಾ  ಅಪಘಾತ ಮಾಡಿದ ಕಾರ ನಂಬರ  ಕೆಎ-32- ಎಮ್- 9061 ಇರುತ್ತದೆ ನಂತರ ನಾವು ಬೇರೆ ಬೇರೆ ವಾಹನದಲ್ಲಿ ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ಬಂದಿರುತ್ತೆವೆ  ಈ ಘಟನೆಗೆ ಇಂಡಿಕಾ ಕಾರಚಾಲಕನೇ ಕಾರಣನಾಗಿದ್ದು ಶ್ರೀ ತಂದೆ ರವಿಕುಮಾರ ಸಾ:2-908/ಎಲ್.ಐ.ಜಿ/90, ಫಸ್ಟ್ ಫೇಸ್ ಆದರ್ಶ ನಗರ, ಬ್ರಹ್ಮಕುಮಾರಿ ಆಶ್ರಮ ಹತ್ತಿರ, ಗುಲಬರ್ಗಾ, ಇವಳಿಗೆ ತಲೆಗೆ ಹಾಗೂ ಮುಖದ ಎಡಭಾಗಕ್ಕೆ ಭಾರಿ ರಕ್ತಗಾಯವಾಗಿದ್ದರಿಂದ ಸೇಡಂ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ವೈದ್ಯರ ಸಲಹೆಯಂತೆ ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ದಿನಾಂಕ 01-01-2015 ರಂದು ಬಳೆಗೆ 9 ಎ,ಎಂ,ಕ್ಕಹೋಲಕ್ಕ  ಹೋಗಿ ಮರಳಿ ನಾನು ಹಾಗು ನನ್ನ ಎತ್ತನ ಬಂಡೆ ತೆಗೆದುಕೊಂಡು ಮುಂದೆ ಬರುತ್ತಿದ್ದು ಹಿಂದೆ ನನ್ನ ಹಂಡೆತಿ ಹಾಗು ನನ್ನ ತಮ್ಮನ ಹಂಡತಿಯಾದ ಜಗದೇವಿ ಇಬ್ಬರು ನಡೆದುಕೊಂಡು ಬರುತ್ತಿದ್ದರು ಹೋಸ ಕಲ್ಲಗುರ್ತಿ ಗ್ರಾಮದ ರಾಮಶೇಟ್ಟಿಯವರ ಮನೆ ಮುಂದೆ ಹೋಗುತ್ತಿದ್ದಾಗ ನಮ್ಮ ಗ್ರಾಮದ ದರ್ಮರಾಜ ತಂದೆ ಬಸವರಾಜ ಕೋರಬಾ ಇತನು ಓಡಿಬಂದು ನನಗೆ ತಿಳಿಸಿದೆನ್ನಂದೆರೆ ನಿನ್ನ ಹಂಡತಿ ಸುಲೋಚನಾಗೆ ನಮ್ಮ ಗ್ರಾಮದ ಪಾಂಡುರಂಗ ತಂದೆ ಹಣಮಂತ ವಾಲಿಕಾರ ಇತನು ಮೊಟಾರ ಸ್ಯಕಲ ನಂ ಕೆ,,37,ಅರ,4814 ನದ್ದನ್ನು ಚಲಾಯಿಸಿಕೊಂಡು ನಿನ್ನ ಡಿಕ್ಕಿ ಹೊಡೆದಿರುತ್ತಾನೆ ಅವಳು ಅಲ್ಲಿಯೇ ಬಿದ್ದಿರುತ್ತಾಳೆ ಅಂತಾ ತಿಳಿಸಿದೆನು ಅಗ ನಾನು ಹೋಗಿ ನೊಡಲಾಗಿ  ನನ್ ಹಂಡತಿಯ ಬಲ ಕೀವಿ ಸಪೊರ್ಣವಾಗಿ ಚಪ್ಪಟೆಯಾಗಿದ್ದು ಹಾಗು ಬಲ ಮಲಕಿಗೆ ಗುಪ್ತಗಾಯವಾಗಿರುವಂತೆ ಕಂಡುಬಂದಿರುವುದರಿಂದ ನನ್ನ ಹಂಡತಿ ನಾನು ನನ್ನ ಮಗನಾದ ದೇವಿಂದ್ರಪ್ಪಾ ಹಾಗು ನಮ್ಮ ಸಂಭಂದಿ ರಾಮು ಮೊರು ಜನ ಕೊಡಿ ಖಾಸಗಿ ವಾಹನದಿಂದ  ಕೋರವಾರ ಸರಕಾರಿ ದವಾಖಾನೆಗೆ ಕರೆದುಕೊಂಡು ಹೊದಾಗ ಅವರು ಹಚ್ಚನ ಉಪಚಾರಕ್ಕಾಗಿ ಜಿ,ಜಿ,ಎಚ, ಗುಲಬರ್ಗಾಕ್ಕ ಕಳುಹಿಸಿದ್ದು ಮಾರ್ಗ ಮಧ್ಯದಲ್ಲಿ  ಮಧ್ಯದಲ್ಲಿ ನನ್ನ ಹಂಡತಿಯಾದ ಸುಲೋಚನಾ ಇವಳು ಮೃತ ಪಟ್ಟಿರುತ್ತಾಳೆ ಅಂತಾ ಶ್ರೀ ಶಿವಶರಣಪ್ಪಾ ತಂದೆ ದೇವಿಂದ್ರಪ್ಪಾ ಚಿನ್ನಾವರ ಸಾ; ಕಲ್ಲಗುರ್ತಿ ಇವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

02 January 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ರಾಕೇಶ ತಂದೆ ದೇವಿಂದ್ರ ಮಡಿವಾಳ ಸಾ: ಸ್ಷೇಷನ ಏರಿಯಾ ಶಹಾಬಾದ ಇವರು ದಿನಾಂಕ: 31-12-2014 ತನ್ನ ಗೆಳೆಯನಾದ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಸಾ: ಮಡ್ಡಿ ಏರಿಯಾ ಶಹಾಬಾದ ಇತನ ಮೊ/ಸೈ ನಂ: ಕೆ.ಎ-29/ಎಲ್-7034 ನೇದ್ದನ್ನು ತೆಗೆದುಕೊಂಡು ನನ್ನ ಹತ್ತಿರ ಬಂದು ಹೊಸ ವರ್ಷ ಆಚರಣೆ ಮಾಡೊಣ ಬಾ ಅಂತಾ ನನ್ನ ಜೊತೆಗೆ ಕರೆದುಕೊಂಡು ತಮ್ಮ ಮನೆಗೆ ಹೋಗಿ ಆತನ ಸಂಬಂದಿಕನಾದ ಮಲ್ಲಿಕಾರ್ಜುನ ರಾಜಾಪೂರ ಇತನನ್ನು ಕಲಬುರಗಿಗೆ ಬಿಟ್ಟು ಬರೊಣ ಅಂತಾ ಹೇಳಿ ಸದರಿ ಮೊ/ಸೈ ನನ್ನು ಮಲ್ಲಿಕಾರ್ಜುನ ಇತನು ಚಲಾಯಿಸಿಕೊಂಡು ಅದರ ಹಿಂದೆ ನಾನು ಮತ್ತು ಮಲ್ಲಿಕಾರ್ಜುನ ರಾಜಾಪೂರ ಕೂಡಿ ಸದರಿ ಮೊ/ಸೈ ಹಿಂದೆ ಕುಳಿತು ಕಲಬುರಗಿಯಲ್ಲಿ ಮಲ್ಲಿಕಾರ್ಜುನ ರಾಜಾಫೂರ ಇತನಿಗೆ ಬಿಟ್ಟು ಮರಳಿ ಶಹಾಬಾದಕ್ಕೆ 8.30 ಪಿಎಮ್ ಸುಮಾರಿಗೆ  ಸಣ್ಣೂರ ಕ್ರಾಸ ಮಾರ್ಗವಾಗಿ ಮುಗಳ ನಾಗಾಂವ ಕ್ರಾಸ ಹತ್ತಿರ ಸದರಿ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಇತನು ತನ್ನ ಮೊ/ಸೈ ಅತೀವೇಗ ಮತ್ತು ನಿಷ್ಕಾಳಜಿ ತನಿಂದ ಚಲಾಯಿಸಿಕೊಂಡು ಮುಗಳನಾಗಾಂವ ಕ್ರಾಸ ಹತ್ತಿರ ಬ್ರೀಜಿನ ಕೆಳಗೆ ಒಂದು ಕಲ್ಲಿಗೆ ಡಿಕ್ಕಿ ಹೊಡೆದು ಕೆಳಗೆ ಬಿಳಿಸಿದ್ದರಿಂದ ನನಗೆ ಎಡಗಣ್ಣಿನ ಕೆಳಗೆ ರಕ್ತಗಾಯ , ಎಡ ಕಪಾಳಕ್ಕೆ ಗುಪ್ತ ಗಾಯ ಬಲಗೈ ಮುಂಗೈ ಹತ್ತಿರ ತರಚಿತ ರಕ್ತಗಾಯವಾಗಿ ಬೇವುಸ್ ಆಗಿ ಸ್ಥಳದಲ್ಲಿಯೇ ಬಿದ್ದೇನು. ನಂತರ ದಿನಾಂಕ: 01-01-2015 ರಂದು ಬೆಳ್ಳಿಗ್ಗೆ 6.30 ಗಂಟೆಗೆ ನನಗೆ ಎಚ್ಚರಾದಗ ಎದ್ದು ನೋಡಲು ಮಲ್ಲಿಕಾರ್ಜುನ ತಂದೆ ಶರಣಪ್ಪಾ ಇತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಕಿವಿಗಳಿಂದ ಭಾಯಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.       
ಜೇವರ್ಗಿ ಠಾಣೆ : ದಿನಾಂಕ: 01.01.2015 ರಂದು ಶಿವರಾಜ ಕಟ್ಟಿಮನಿ ಈತನು ಮೋಟಾರ ಸೈಕಲ್‌ ನಂ ಕೆ.ಎ32ಇ.ಎಫ್‌9625 ನೇದ್ದರ ಮೇಲೆ ಜೇವರ್ಗಿಯಿಂದ ಊರಿಗೆ ಬರುತ್ತಿದ್ದಾಗ ಬಾಪುಗೌಡ ಹತ್ತಿ ಮಿಲ್‌ ಹತ್ತಿರ ಜೇವರ್ಗಿ ಶಹಾಪುರ ರೋಡಿನಲ್ಲಿ ಲಾರಿ ನಂ ಕೆಎ01ಎ2836 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಹಿಂದುಗಡೆ ವಾಹನಗಳು ಬರುವದನ್ನು ನೋಡದೆ ಹತ್ತಿ ಮಿಲ್‌ ಒಳಗಡೆ ಲಾರಿಯನ್ನು ತೆಗೆದುಕೊಂಡು ಹೋಗಲು ಒಮ್ಮೆಲೆ ಲಾರಿಯನ್ನು ಹೊರಳಿಸಿದಾಗ ನಮ್ಮ ಅಣ್ಣನ ಮೋಟಾರ ಸೈಕಲ್‌ ಲಾರಿಗೆ ಡಿಕ್ಕಿಯಾಗಿ ಭಾರಿ ರಕ್ತಗಾಯ ವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಬಸಪ್ಪ ತಂದೆ ಪೀರಪ್ಪ ಕಟ್ಟಿಮನಿ ಸಾ : ಮುದಬಾಳ ಕೆ ತಾ : ಜೇವರ್ಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಜೇವರ್ಗಿ ಠಾಣೆ : ದಿನಾಂಕ 29.12.2014 ರಂದು ರಾತ್ರಿ ಜೇವರ್ಗಿ ಪಟ್ಟಣದ ರೈಸ ಧಾಬಾ ಹತ್ತಿರ ಜೇವರ್ಗಿ ಕಲಬುರಗಿ ಹೈವೆ ರೋಡಿನ ಮೇಲೆ ಶ್ರೀ ಚೆನ್ನನಗೌಡ ತಂದೆ ಸಿದ್ದಣ್ಣಗೌಡ ಸಿರವಾಳ ಸಾ : ಸಿರವಾಳ ತಾ : ಶಹಾಪುರ ರವರ ಟಿಪ್ಪರ್ ನಂ ಕೆ.ಎ33ಎ2754 ನೇದ್ದರ ಚಾಲಕನು ಟಿಪ್ಪರ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರೊಡಿನ ಮೇಲೆ ಹೋಗಿತ್ತಿದ್ದ ಎಮ್ಮೆಗಳಿಗೆ ಡಿಕ್ಕಿ ಪಡಿಸುವದನ್ನು ತಪ್ಪಿಸಲು ಹೋಗಿ ಟಿಪ್ಪರ್‌ ಅನ್ನು ಪಲ್ಟಿ ಮಾಡಿ ಅಪಘಾತ ಮಾಡಿ ವಾಹನ ಜಖಂ ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.