POLICE BHAVAN KALABURAGI

POLICE BHAVAN KALABURAGI

04 November 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀ ವಿಜಯಾನಂದ ತಂದೆ ಗುಂಡೇರಾವ ಮಾಣಿಕ ಸಾ: ಗೊಳಾ [ಕೆ] ರವರು ದಿನಾಂಕ:22/09/2014 ರಂದು 8.30 ಪಿಎಮ್ ಕ್ಕೆ ಪಿರ್ಯಾದಿಯ ಅಣ್ಣನಾದ ದಯಾನಂದ ಮಾಣಿಕ ಇತನು ಮನೆಯಿಂದ  ಮೊ/ಸೈ ನಂ; ಕೆ.ಎ-32/ಇಎಫ್-9636 ನೇದ್ದರ ಮೇಲೆ ಕೆಲಸದ ನಿಮತ್ಯಾ ಶಹಬಾದಕ್ಕೆ ಹೋಗಿ ಬರುತ್ತೇನೆ ಅಂತಾ ಪಿರ್ಯಾದಿಗೆ ಮತ್ತು ಪಿರ್ಯಾದಿಯ ತಂದೆಗೆ ಹೇಳಿ ಸದರಿ ಮೊ/ಸೈ ನ್ನು ಪಿರ್ಯಾದಿಯ ಅಣ್ಣನ ಮಗನಾದ ಗುರು ಇತನು ಚಲಾಯಿಸಿಕೊಂಡು ಅದರ ಹಿಂದೆ ಪಿರ್ಯಾದಿಯ ಅಣ್ಣ ದಯಾನಂದ ಇತನು ಕುಳಿತಿ ಶಹಾಬಾದ ಕಡೆಗೆ ಹೋದರು. ನಂತರ ಪಿರ್ಯಾದಿಯ ತಂದೆಗೆ ದಯಾನಂದ ಇತನ ಮಗ ಗುರು ಇತನು ಪೊನ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನನ್ನ ತಂದೆ ಕೂಡಿ ಶಹಾಬಾದ ಕಡೆಗೆ ಅಶೊಕ ನಗರದ ಮೊದಲನೆ ಜಂಪಿನಲ್ಲಿ ನನ್ನ ಮೊ/ಸೈ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸದರಿ ಮೊ/ಸೈ ಸ್ಲೀಪ್ ಬಿದ್ದಿದ್ದರಿಂದ ನನ್ನ ತಂದೆಯ ತಲೆಗೆ ಭಾರಿ ಒಳಪೆಟ್ಟಾಗಿ ರಕ್ತಗಾಯವಾಗಿ ಮೂರ್ಚೇ ಹೋಗಿರುತ್ತಾನೆ.  ಮತ್ತು ನನಗೆ ಅಲಲ್ಲಿ ತರಚಿದ ಗಾಯವಾಗಿರುತ್ತದೆ. ಅಂತಾ ಪಿರ್ಯಾದಿಯ ತಂದೆಗೆ ತಿಳಿದ ಮೇರೆಗೆ ಪಿರ್ಯಾದಿ ಮತ್ತು ಪಿರ್ಯಾದಿ ತಂದೆ ಹಾಗೂ ಇತರರು ಕೂಡಿ ಸದರಿ ಸ್ಥಳಕ್ಕೆ ಹೋಗಿ ನೋಡಿದ್ದು ಸದರಿ ಘಟನೆ ನಿಜವಿದ್ದು ನಂತರ ಗಾಯಾಳು ದಯಾನಂದ ಇತನಿಗೆ ಉಪಚಾರ ಕುರಿತು ಗುಲ್ಬರ್ಗಾ ಮೇಡಿಕೇರ ಆಸ್ಪತ್ರೆಗೆ ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಸೊಲ್ಲಾಪೂರದ ಗಂಗಾಮಾಯಿ ಆಸ್ಪ್ರೆಗೆ ಸೇರಿಕೆ ಮಾಡಿ ಉಪಚಾರ ಹೊಂದುತ್ತಾ ದಿನಾಂಕ;10/10/2014 ರಂದು 8.00 ಎಎಮ್ ಸುಮಾರಿಗೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 03-11-2014 ರಂದು 08-45 ಎ.ಎಮ್ ಕ್ಕೆ ಶ್ರೀ ಶ್ರೀಕಾಂತ ತಂದೆ ಚಂದ್ರಶೇಖರ ನಾಟಿಕಾರ, ಸಾಃ ಪ್ಲಾಟ ನಂ. 77 ತಿಲಕನಗರ ಕುಸನೂರ ರೋಡ ಕಲಬುರ್ಗಿ ರವರ ಅಣ್ಣನಾದ ವಿಜಯಕುಮಾರ ಈತನು ಗುಬ್ಬಿ ಕಾಲೂನಿಯಲ್ಲಿ ಕೆಲಸ ಇರುವುದರಿಂದ ಮನೆಯಲ್ಲಿದ್ದ ತನ್ನ ಮೋಟಾರ ಸೈಕಲ ನಂ. ಕೆ.ಎ 32 ಕ್ಯೂ 1319 ನೇದ್ದನ್ನು ತೆಗೆದುಕೊಂಡು ಗುಬ್ಬಿ ಕಾಲೂನಿ ಕ್ರಾಸ್ ಕಡೆ ಬರುವ ಸಲುವಾಗಿ ತನ್ನ ಬಲಗೈ ತೋರಿಸಿ ಸಾವಕಾಶವಾಗಿ ಮೋಟಾರ ಸೈಕಲ ತಿರುಗಿಸುತ್ತಿರುವಾಗ ಆರೋಪಿ ಅಮೀರ ಹುಸೇನ ತಂದೆ ಅಲ್ತಾಫ ಹುಸೇನ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಡಬ್ಲು 1746 ನೇದ್ದನ್ನು ಸೇಡಂ ರಿಂಗ ರೋಡ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಇದನ್ನು ನೋಡಿದ ಅಲ್ಲಿಯೇ ಇದ್ದ ರಾಹುಲ ಮತ್ತು ಅಲ್ಲಿದ್ದ ಜನರು ನೋಡಿ ಎಬ್ಬಿಸಿದ್ದು ಅಪಘಾತದಲ್ಲಿ ವಿಜಯಕುಮಾರ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕೊಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಮಧುಕರ ತಂದೆ ಶಿವಾಜಿರಾವ ತರಮುಡೆ ಸಾ: ಸಂಗೋಳಗಿ(ಸಿ) ತಾ: ಆಳಂದ ಜಿ: ಕಲಬುರ್ಗಿ ಇವರು ಕಿರಿಯ ಮಗನಾದ ಅನೀಲಕುಮಾರ ತುಮಕೂರಿನ ಸಿದ್ದಗಂಗಾ ಮಠದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು ಇವನು ಕೆಲವೊಂದು ವಿಷಯದಲ್ಲಿ ಫೇಲಾಗಿದ್ದಕ್ಕಾಗಿ ಅಲ್ಲೆ ಅಭ್ಯಾಸ ಮಾಡುತ್ತಾ ಸಾಯಿ ರೆಡಿಮೆಟ್ ಗಾರಮೇಂಟ್ಸಕೆಲಸ ಮಾಡುತ್ತಿದ್ದ ಇವನಿಗೆ ನಮ್ಮ ಗ್ರಾಮದವರೆ ಆದ ಚಂದ್ರಕಾಂತ @ ಕಾಂತಪ್ಪಾ ತಂದೆ ರುಕ್ಮಣ್ಣ ಇವರ ಮಗಳಾದ  ಪಂಚಮ್ಮಾ ಇವಳು ಪ್ರತಿಸುತ್ತಿದ್ದು ಅವರ ಮನೆಯಲ್ಲಿ ಆಕೆಯನ್ನು ಬೇರೆಯವರೊಂದಿಗೆ ಮದುವೆ ಮಾಡಲು ವಿಚಾರ ಮಾಡುತ್ತಿದ್ದಾಗ ಆಕೆಯು ತಮ್ಮ ಮನೆಯಲ್ಲಿ ಹೇಳೆದ ಕೇಳದೆ ಮಾರ್ಚ ತಿಂಗಳಲ್ಲಿ ನನ್ನ ಕಿರಿಯ ಮಗನಾದ ಅನೀಲಕುಮಾರ ಇವನು ತೂಮಕೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಪಂಚಮ್ಮಾ ಇವಳು ನೇರವಾಗಿ ತೂಮಕೂರಿಗೆ ಹೋಗಿ ನನ್ನ ಮಗ ಅನೀಲಕುಮಾರನಿಗೆ ತಮ್ಮ ಮನೆಯಲ್ಲಿ ತನಗೆ ಬೇರೆಯವರ ಜೋತೆ ಲಗ್ನ ಮಾಡಿಕೊಡಲು ಮಾತನಾಡುತ್ತಿದ್ದಾರೆ ತಾನು ಅನೀಲಕುಮಾರನಿಗೆ ಪ್ರೀತಿಸುತ್ತಿದ್ದ ಕಾರಣ ಮನೆಯವರಿಗೆ ಯಾರಿಗೂ ಹೇಳದೆ ಬಂದಿರುವದಾಗಿ ಹೇಳಿ ನನ್ನ ಮಗ ಅನೀಲಕುಮಾರನೊಂದಿಗೆ ತೂಕಮೂರ ಸಮೀಪದಲ್ಲಿಯ ಗೌರವ್ವನ ಹಳ್ಳಿಯ ಆಂಜನೆಯ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ಅವನ ಜೋತೆಗೆ ಇರುವ ವಿಷಯ ನನ್ನ ಹಿರಿಯ ಮಗನಾದ ಸುನೀಲಕುಮಾರನಿಗೆ ತಿಳಿಸಿದ್ದು ಪಂಚಮ್ಮನ ತಂದೆಯಾದ ಚಂದ್ರಕಾಂತ ಇವರು ನಮ್ಮ ಮನೆಗೆ ಬಂದು ನನ್ನ ಮಗಳು ಮನೆ ಬಿಟ್ಟು ಓಡಿ ಹೋಗಿದ್ದಾಳೆ ಇವಳು ಅನೀಲಕುಮಾರನ್ನು ಪ್ರೀತಿಸುತ್ತದ್ದಳು ಅಲ್ಲಿಗೆ ಹೋಗಿರಬಹುದು ಅವರ ಪತ್ತೆ ಹಚ್ಚಿ ಎಂದು ನಮಗೆ ಹೇಳಿದ ಆಗ ಪಂಚಮ್ಮಳು ಅನೀಲನ ಹತ್ತಿರ ಇದ್ದ ಸುದ್ದಿ ಅನೀಲನೆ ಫೋನ ಮುಖಾಂತರ ತಿಳಿಸಿರುತ್ತಾನೆ ಅಂತಾ ನಾವು ಅವರಿಗೆ ಹೇಳಿದೆವು. ಅಲ್ಲದೆ ಮರುದಿವಸ ನಾನು ಮತ್ತು ನನ್ನ ಮಗ ಸುನೀಲಕುಮಾರ ಮತ್ತು ನನ್ನ ಹೆಂಡತಿ ತಮ್ಮ ಬಾಬುರಾವ ಹುಡಗಿಯ ಸಹೋದರಮಾವ ನಾಗಣ್ಣ ಜಮಗಿ, ಸಿದ್ದಣ್ಣ ಜಮಗಿ, ಅನೀಲಕುಮಾರನ ಬಳಿ ಹೋಗಿ ಪಂಚಮ್ಮಳಿಗೆ ಮತ್ತು ಅನೀಲಕುಮಾರನಿಗೆ ಬುದ್ದಿವಾದ ಹೇಳಿ ಊರಿಗೆ ಕರೆದುಕೊಂಡು ಬಂದೆವು ಊರಲ್ಲಿ ಪಂಚಾಯಿತಿ ಮಾಡಿ ಹುಡಗಿಯನ್ನು ಅವಳ ತಂದೆ ಸಂಗಡ ಮನೆಗೆ ಕಳುಹಿಸಿದೆವು. ನಮ್ಮ ಹುಡಗನಿಗೆ ಸಹ ಬುದ್ದಿವಾದ ಹೇಳಿ ಪಂಚಮ್ಮಳಿಗೆ ತಂಟೆಗೆ ಹೋಗಬೇಡಾ ಅಂತಾ ಹೇಳಿದೆವು. ಅಂದಿನಿಂದ  ಮೇಲ್ಕಂಡ ಎಲ್ಲರೂ ಅನೀಲಕಮಾರನಿಗೆ ಹೊಡೆಯುತ್ತೆವೆ ಬಡೆಯುತ್ತೆವೆ ಅಂತಾ ಜೀವದ ಭಯ ಹಾಕಿದೇವು ನಂತರ ಚಂದ್ರಕಾಂತ ಮತ್ತು ಆತನ ಸಹೋದರ ಸಂಬಂದಿ ಮಹಾಂತಪ್ಪ  ಬಿರದಾರ ಇವರು ಕೂಡಿ ನನ್ನ ಮಗ ಅವರ ಮನೆ ಮರಿಯಾದೆ ತೆಗೆದಿರುತ್ತಾನೆ ಅವನಿಗೆ ಮುಗಿಸಿಯೆ ಬಿಡುಬೇಕೆಂದು ವಿಷಯದಲ್ಲಿ ನಮೂದಿಸಿದ ಜನರು ದ್ವೇಷ ಸಾಧಿಸುತ್ತಿದ್ದರು ದಿನಾಮಕ: 18/04/2014 ರಂದು ನಾನು ಸಾಯಾಂಕಾಲ ಹೊಲದಿಂದ ಮನೆಗೆ ಬಂದು ಬುತ್ತಿ ತೆಗೆದುಕೊಂಡು ಮರಳಿ ಹೊಲಕ್ಕೆ ಹೋದಾಗ ನನ್ನ ಮಗ ಸುನೀಲ ಕುಮಾರನು ಕಾಣಲಿಲ್ಲಾ ಆಗ ಅನೀಲಕುಮಾರನಿಗೆ ವಿಚಾರಿಸಲು ತಾನು ಇಲ್ಲಯೆ ಹುಣಸಿಗಿಡದ ಕೆಳಗಡೆ ಮಲಗಿದ್ದೆ ಸುನೀಲನು ಎತ್ತುಗಳಿಗೆ ಮೇವು ಹಾಕಲು ಕೊಟ್ಟಿಗೆ ಬಳಿ ಹೋಗಿರಬಹುದು ಅಂತಾ ಹೇಳಿದಾಗ ನಾನು ಮತ್ತು ಅನೀಲಕುಮಾರ ಕೂಡಿ ಎಲ್ಲಾಕಡೆ ಹುಡುಕಾಡಿದರೂ ಸುನೀಲಕುಮಾರ ಇರಲಿಲ್ಲಾ ಅವನ ಫೋನಗೆ ಕಾಲ್ ಮಾಡಿದಾಗ ಅವನ ಫೋನ ಸ್ವಕರಿಸಲಿಲ್ಲಾ ರಾತ್ರಿ 12:00 ಗಂಟೆಯವರೆಗೆ ಫೊನ ಮಾಡಿದರೂ ಯಾರು ಫೊನ ಎತ್ತರಲಿಲ್ಲಾ ಮರುದಿವಸ ದಿನಾಂಕ; 19/04/2014 ರಂದು ನಮ್ಮ ಮನೆಯವರೆಲ್ಲರೂ ಕೂಡಿ ಸುನೀಲನಿಗೆ ಹುಡುಕಾಡಿದರೂ ಸಿಗಲಿಲ್ಲಾ ಅಂದು ಮುಂಜಾನೆ ಚಂದ್ರಕಾಂತ @ ಕಾಂತಪ್ಪಾ, ಮಂಜುನಾಥ, ಮಹಾದೇವಪ್ಪಾ, ಸಿದ್ದಣ್ಣನಾಗಣ್ಣ, ಹಾಗೂ ಬಸಲಿಂಗಪ್ಪಾ ಇವರು ಫೋನ ಮಾಡಿ ನನಗೆ ಗುಲಬರ್ಗಾಕ್ಕೆ ತಕ್ಷಣ ಬರಲು ತಿಳಿಸಿದರು. ಆಗ ನಾನು ನಮ್ಮ ಭಾವ ಮೈದುನ ಬಾಬುರಾವ ಸೇರಿ ಗುಲಬಗಾಕ್ಕೆ ಬಂದು ಚಂದ್ರಕಾಂತನ ಮನೆಗೆ ಹೋಗಿ ಭೇಟಿಯಾಗಿ ಯಾಕೆ ಬರಲು ತಿಳಿಸಿದ್ದಿರಿ ಅಂತಾ ಕೇಳಿದೆವು ಅಲ್ಲದೆ ನನ್ನ ಮಗನು ಸುನೀಲಕುಮಾರನು ಕಾಣೆಯಾಗಿದ್ದಾನೆ ಅವನನ್ನು ಹುಡುಕುತ್ತಿದ್ದೆವೆ ಎಂದು ಸಹ ಹೇಳಿದ್ದೆವೆ ಅದಕ್ಕೆ ಅವಳು ತಮ್ಮ ಮಗಳಾದ ಪಂಚಮ್ಮಳಿಗೆ ಡಿ.ಈಡ್ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಪಡೆಯುತ್ತಿದ್ದೆವೆ ನಿನ್ನ ಮಗ ಏನಾದರೂ ನನ್ನ ಮಗಳ ತಂಟೆಗೆ ಬಂದರೆ ಅವನಿಗೆ ಒಂದು ಗತೀ ಕಾಣಿಸುತ್ತೆವೆ ಅಂತಾ ಹೇಳಿದರು. ಆಗ ನಾನು ಮತ್ತು ಮಕ್ಕಳು ಕೂಡಿ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತವೆ ನೀವು ಪದೆ ಪದೆ ಕರೆದು ಜೀವದ ಬೆದರಿಕೆ ಹಾಕಬೇಡಿ ಹಾಗೂ ನಮ್ಮ ಮಕ್ಕಳ ತಂಟೆಗೆ ಬರಬೇಡಿ ಅಂತಾ ಹೇಳಿದೆವು  ನಾವು ಗುಲಬರ್ಗಾದಲ್ಲಿಯೆ ಇದ್ದಾಗ ಚಂದ್ರಕಾಂತನ ಸಂಬಂದಿಕರಾದ ಮಹಾಂತಪ್ಪಾ ಎಂಬುವವನು ನನಗೆ ಫೋನ ಮಾಡಿ ನಮ್ಮ ಹಂಗರಗಿ ಗ್ರಾಮದ ಸಂಬಂದಿಕರಾದ ಮಲ್ಕಪ್ಪಾ ರವರಿಗೆ ಕಟ್ಟಿಗೆಗಳು ಬೇಕಾಗಿವೆ ಅವರು ಊರಿಗೆ ಬಂದಿದ್ದಾರೆ ನಿಮ್ಮ ಹೊಲದಲ್ಲಿರುವ ಗೀಡಗಳು ಮಾರಟಕ್ಕಿವೆ ಅಂತಾ ಕೇಳಿದ್ದೆವೆ. ನಮಗೆ ಗೀಡಗಳು ತೋರಿಸಿ ಅಂತಾ ಕೇಳಿದಾಗ ಅದಕ್ಕೆ ನಾನು ಊರಲ್ಲಿ ಇಲ್ಲಾ ನಮ್ಮ ಸಂಬಂದಿಕರಾದ ರತ್ನಾಕರ್ ಮತ್ತು ನನ್ನ ಮಗ ಊರಲ್ಲಿ ಇರುತ್ತಾರೆ ನೀವು ಅವರನ್ನು ಕರೆದುಕೊಂಡು ಹೋಗಿ ಗೀಡಗಳು ನೋಡಿಕೊಂಡು ಬನ್ನಿ ಅಷ್ಟರಲ್ಲಿ ನಾವು ಗುಲಬರ್ಗಾದಿಂದ ಬರುತ್ತವೆ ಅಂತಾ ಹೇಳಿದ್ದೆವು. ಅಂದೆ ಮದ್ಯಾಹ್ನ ನಾನು ಮತ್ತು ಬಾಬುರಾವ ಊರಿಗೆ ಬಂದು ನನ್ನ ಮಗನಾದ ಅನೀಲಕುಮಾರ ಮತ್ತು ರತ್ನಾಕರ ಇವರಿಗೆ ಗೀಡಗಳು ತೋರಿಸುವದಾಗಿ ಹೇಳಿದಾಗ ಅವರು ನನಗೆ ಹೇಳಿದ್ದೆನೆಂದರೆ ಮಹಾಂತಪ್ಪಾ ಬಿರದಾರ ಮತ್ತು ಮಲ್ಕಪ್ಪಾ ಎಂಬುವವರು ಹೊಲದಲ್ಲಿದ್ದ ಎಲ್ಲಾ ಗೀಡಗಳನ್ನು ನೋಡಿ ಕಾಲೂ ದಾರಿಗಳು ಹೇಗೆ ಬರುತ್ತವೆ ಬಂಡಿದಾರಿಗಳು ಎಲ್ಲಿ ಬರುತ್ತವೆ ಎಂದು ಎಲ್ಲಾ ನೋಡಿ ಕೊನೆಗೆ ನಮಗೆ ಗೀಡಗಳು ಪಸಂದ ಬಂದಿರುವುದಿಲ್ಲಾ ಅಂತಾ ಹೇಳಿ ಹೋಗಿರುತ್ತಾರೆ ಅಂತಾ ತಿಳಿಸಿದರು. ಮರುದಿವಸ ಅಂದರೆ ದಿನಾಂಕ: 20/04/2014 ರಂದು ಸಾಯಾಂಕಾಲ ನಮ್ಮ ಪಕ್ಕದ ಹೊಲದವರಾದ ಅಣ್ಣಪ್ಪಾ ತಂದೆ ಶಿವಪ್ಪಾ ವಾಗ್ದರ್ಗಿ ಇವರು ನಮ್ಮ ಹೊಲಕ್ಕೆ ಬಂದು ತಿಳಿಸಿದ್ದೆನೆಂದರೆ ನನ್ನ ಮಗ ಸುನೀಲಕುಮಾರನ ಶವವು ನಮ್ಮ ಪಕ್ಕದಲ್ಲಿರುವ ಶಾಂತಬಾಯಿ ಬಾಪುರಾವ ತರಮಡೆ ಇವರ ಬಿಳು ಜಮೀನಿನಲ್ಲಿ ಬಿದ್ದಿರುತ್ತದೆ ಎಂದು ತಿಳಿಸಿದನು. ಆಗ ನಾನು ಮತ್ತು ನನ್ನ ಹೆಂಡತಿ ಮಗ ಸುನೀಲಕುಮಾರ ಕೂಡಿ ಅಣ್ಣಪ್ಪನೊಂದಿಗೆ ಅಲ್ಲಿಗೆ ಹೋಗಿ ಶವ ನೋಡಿದಾಗ ಅಲ್ಲಿ ಗೀಡಗಂಟಿಗಳ ಪಕ್ಕದಲ್ಲಿ ನನ್ನ ಮಗ ಸುನೀಲಕುಮಾರ ಶವ ಬಿದ್ದಿದ್ದು ಅದು ಉಬ್ಬಿ ಹೋಗಿತ್ತು ಅಲ್ಲಲ್ಲಿ ಚರ್ಮ ಸುಲಿದಿತ್ತು, ಹೊಟ್ಟೆ ಕರಳು ಹೊರಗೆ ಬಂದಿದ್ದವು ಮತ್ತು ಶವದ ಮುಖ ಹಾಗೂ ಮೈ ನೀಲಿಯಾಗಿತ್ತು. ನಾವು ಫೊಟೊಗಳನ್ನು ತೆಗೆಯಿಸಿ ತಮಗೆ ಕೊಟ್ಟಿರುತ್ತವೆ.  ಆರೋಪಿತರಾದ ಚಂದ್ರಕಾಂತ, ಮಂಜುನಾಥ, ಮಹಾದೇವಪ್ಪಾ, ಸಿದ್ದಾರೂಢ, ನಾಗಣ್ಣ ಜಮಗಾ, ಬಸಲಿಂಗಪ್ಪಾ, ಮಹಾಂತಪ್ಪಾ ಹಾಗೂ ಮಲ್ಕಪ್ಪಾ ಎಲ್ಲರೂ ಕೂಡಿ ನನ್ನ ಮಗ ಸುನಿಲಕುಮಾರನಿಗೆ ಕೊಲೆ ಮಾಡಲು ಸಂಚು ಹಾಕಿ ರಾತ್ರಿ ವೇಳೆಯಲ್ಲಿ ಕೊಲೆ ಮಾಡಲು ಅಪಹರಿಸಿಕೊಂಡು ಹೋಗಿ ಯಾವುದೊ ಸ್ಥಳದಲ್ಲಿ ಕೊಲೆ ಮಾಡಿ ಗೀಡಗಳನ್ನು ಖರಿದಿಸುವ ನೆಪದಲ್ಲಿ ನನ್ನ ಅಕ್ಕಪಕ್ಕದ ಸ್ಥಳಗಳನ್ನು ನೋಡಿ ಹೋಗಿದ್ದು ಅದೇ ರೀತಿ ಎಲ್ಲರೂ ಕೂಡಿ ನನ್ನ ಸುನೀಲಕುಮಾರನಿಗೆ ಎಲ್ಲಿಯೋ ಕೊಲೆ ಮಾಡಿ ಹೆಣವನ್ನು ತಂದು ನಮ್ಮ ಹೊಲದ ಪಕ್ಕದಲ್ಲಿ ಬಿಸಾಕಿ ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

03 November 2014

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ. 02.11.2014 ರಂದು ಸ್ಟೆಷನ ರಸ್ತೆಗಿರುವ ನ್ಯೂ ಜಗದಂಬಾ ಮರಾಠಾ ಖಾನಾವಳಿಯ ಪಕ್ಕದಲ್ಲಿರುವ ಹೆಚ್.ಕ್ಯೂ.ಹೊಟೇಲ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಸುಮಾರು 6-7 ಜನರು ಗುಂಪಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಹಾರ ಎಂಬ ನಸೀಬದ ಜೂಜಾಟ ಆಡುತ್ತಿದ್ದ ಬಗ್ಗೆ  ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ಸ್ಟೇಷನ ಬಜಾರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಖಚಿತಪಡಿಸಿಕೊಂಡು ದಾಳಿ ಮಾಡಿ ಆರೋಪಿತರಾದ 1) ಪ್ರತಾಪರೆಡ್ಡಿ ತಂದೆ ಶ್ರೀನಿವಾಸರೆಡ್ಡಿ ಮಾಲಿಪಾಟೀಲ ಸಾ|| ಕಡಬೂರ ತಾ|| ಚಿತ್ತಾಪೂರ, 2) ನಿಂಗಾರೆಡ್ಡಿ ತಂದೆ ಬಸವರಾಜಪ್ಪ ಆಲೂರ ಸಾ|| ಆಲೂರ ತಾ|| ಚಿತ್ತಾಪೂರ 3) ಶಿವಶರಣಪ್ಪಾ ತಂದೆ ಬಸವಣತರಾಯ ಗರೂರ ಸಾ|| ನಾಲವಾರ ತಾ|| ಚಿತ್ತಾಪೂರ 4) ವಿರೇಶ ತಂದೆ ಸಿದ್ದಣ್ಣಾ ನಾಲವಾರ ಸಾ|| ನಾಲವಾರ ತಾ|| ಚಿತ್ತಾಪೂರ 5) ಖಾಸೀಂ ತಂದೆ ಅಬ್ದುಲ ಸುಗೂರ ಸಾ|| ಸುಗೂರ ತಾ|| ಚಿತ್ತಾಪೂರ 6) ಮಲ್ಲನಗೌಡ ತಂದೆ ಸಿದ್ದನಗೌಡ ನಾಲವಾರ ಸಾ|| ನಾಲವಾರ ತಾ|| ಚಿತ್ತಾಪೂರ 7) ಬನಶಂಕರಯ್ಯಸ್ವಾಮಿ ತಂದೆ ಸೋಮಯ್ಯಸ್ವಾಮಿ ಮಲ್ಲಿನಾಥ ಸಾ|| ಎಲೇರಿ ತಾ|| ಯಾದಗೀರ  ಇವರನ್ನು ಹಿಡಿದು ಅವರ ತಾಬೆಯಲ್ಲಿದ್ದ ಒಟ್ಟು 26,420/- ರೂ ನಗದು ಹಣ ಹಾಗೂ 52 ಇಸ್ಪೆಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 02-11-2014 ರಂದು 07-30 ಪಿ.ಎಮ್ ಕ್ಕೆ ಶ್ರೀ ಸಂತೋಷ ತಂದೆ ಜಗಮೋಹನ ತಿವಾರಿ, ಸಾಃ ಮ. ನಂ. 9-214 ಕಟಗರಪೂರ ಶಹಾಬಜಾರ ಕಲಬುರ್ಗಿ, ಮತ್ತು ಗೆಳೆಯರಾದ ಹನುಮಾನಸಿಂಗ ತಂದೆ ಪ್ರದೀಪಸಿಂಗ ಠಾಕೂರ ಇಬ್ಬರು ಮದನ ಟಾಕೀಜ ದಿಂದ ಚೌಕ ಸರ್ಕಲ ಕಡೆಗೆ ನಡೆದುಕೊಂಡು ಹೋಗಲು ರೋಡ ದಾಟುತ್ತಿದ್ದಾಗ ಮಹೇಶ ತಂದೆ ಚಂದ್ರಪ್ಪಾ ಪೂಜಾರಿ ಸಾಃ ದೇಶಮುಖಗಲ್ಲಿ ಈತನು ಮದ್ಯಪಾನ ಸೇವನೆ ಮಾಡಿ ತನ್ನ ಮೋಟಾರ ಸೈಕಲ ಕೆ.ಎ 32 ಇ.ಬಿ 0319 ನೇದ್ದನ್ನು ಹುಮನಾಬಾದ ಬೇಸ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ್ದ ಫಿರ್ಯಾದಿ ಎಡಗಾಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಎಡಗಾಲು ಮೊಳಕಾಲಿಗೆ ಭಾರಿ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 02-11-2014 ರಂದು ಶ್ರೀ ಭಿಮರಾಯ ತಂದೆ ಸಿದ್ರಾಮಪ್ಪಾ ಕನ್ನೂರ  ಸಾ: ಕರಣೇಶ್ವರ ನಗರ  ಕಲಬುರ್ಗಿ ರವರು  ಸರ್ವಜ್ಞ ಕಾಲೇಜ ಎದುರಿನಲ್ಲಿರುವ ನನ್ನ ಹೊಟೇಲ ಬಂದ ಮಾಡಿ ನಾನು ಮನೆಗೆ ಹೋಗುವ ಸಲುವಾಗಿ 3 ಚಕ್ರ ಯಳ್ಳ ಸೈಕಲ ಚಲಾಯಿಸಿಕೊಂಡು ಹೋಗುವಾಗ ರಿಂಗ ರೋಡ ಕರಣೇಶ್ವರ ನಗರ ಕ್ರಾಸ ಹತ್ತೀರ ಹಿಂದಿನಿಂದ ಮೊ/ಸೈ ನಂ ಕೆಎ-32-ಇಬಿ-4148 ರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೊ/ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಎಡ ಟೊಂಕಕ್ಕೆ ಗುಪ್ತಪೆಟ್ಟು ಬಲ ಎದೆಗೆ ಗುಪ್ತ ಪೆಟ್ಟು ಹಾಗೂ ಹೊಟ್ಟೆಗೆ ಗುಪ್ತ ಪೆಟ್ಟು ಗೊಳಿಸಿ ತನ್ನ ಮೊ/ಸೈ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮಲ್ಲಿಕಾರ್ಜೂನ ತಂದೆ ವೀರಣ್ಣಾ ದುತ್ತರಗಾಂವ  ಸಾ: ಹನುಮಾನ ಗುಡಿ ಹತ್ತೀರ ಬಿದ್ದಾಪೂರ ಕಾಲೋನಿ  ಕಲಬುರ್ಗಿ ರವರು ದಿನಾಂಕ 02-11-2014 ರಂದು ಬೆಳಿಗ್ಗೆ 8-15 ಗಂಟೆ ಸುಮಾರಿಗೆ ಕಣ್ಣಿ ಮಾರ್ಕೆಟನಲ್ಲಿ ತರಕಾರಿ ಖರೀದಿ ಮಾಡಿಕೊಂಡು ಮನಗೆ ಹೋಗುವ ಸಲುವಾಗಿ ಕಣ್ಣಿ ಮಾರ್ಕೆಟ ಕ್ರಾಸ್ ಹತ್ತಿರ ಅಟೋ ನಿಲ್ಲುವ ಸ್ಥಳಕ್ಕೆ ನಡೆದುಕೊಂಡು ರೋಡ ಎಡಗಡೆಯಿಂದ ಹೋಗುತ್ತಿರುವಾಗ ಹಿಂದಿನಿಂದ ಮೋ/ಸೈಕಲ ನಂಬರ ಕೆಎ-33 ಕ್ಯೂ-3003 ನೇದ್ದರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಎಡಗಾಲು ಮೊಳಕಾಲ ಕೆಳಗೆ ಭಾರಿ ಗುಪ್ತಪೆಟ್ಟು ಮತ್ತು ರಕ್ತಗಾಯ, ಬಲಗಡೆ ಎದೆಗೆ ಗುಪ್ತಪೆಟ್ಟು, ಬಲ ಮೆಲಕಿಗೆ ಹಾಗು ಬಲ ಕಿವಿಗೆ ಗುಪ್ತಪೆಟ್ಟುಗೊಳಿಸಿ ತನ್ನ ಮೋ/ಸೈಕಲ ಅಲ್ಲೆ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ : 
ಸ್ಟೇಷನ ಬಜಾರ ಠಾಣೆ : ಶ್ರೀ ಬಸಲಿಂಗಪ್ಪ ತಂದೆ ಶಿವರಾಜ ದುತ್ತುರಗಾಂವ ವಿಳಾಸಃ ಮನೆ ನಂ; 11-940 ಜಿಲಾನಾಬಾದ ಅಶೋಕ ನಗರ ಕಲಬುರ್ಗಿ ಇವರು ದಿನಾಂಕ 27/10/2014 ರಂದು 9;30 ಎಎಮ್‌ ಕ್ಕೆ ತನ್ನ  ದ್ವಿಚಕ್ರ ವಾಹನ ಹಿರೋ ಹೊಂಡಾ ಸ್ಪ್ಲಂಡರ್‌ ಪ್ಲಸ್  ನಂಕೆಎ 32 ಡಬ್ಲೂ 4122 ನೇದ್ದು    ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬರುವ ಮಾನ್ಯ 1 ನೇ ಹೆಚ್ಚುವರಿ ಜೆ ಎಮ್‌ ಎಫ್ ಸಿ ನ್ಯಾಯಾಲಯದ ಹಿಂದುಗಡೆ ನಿಲುಗಡೆ ಮಾಡಿ ನ್ಯಾಯಾಲಯದಲ್ಲಿ ಕೆಲಸ ಮುಗಿಸಿಕೊಂಡು ಮರಳಿ  6;00 ಪಿಎಮ್‌ಕ್ಕೆ  ಬಂದು ನೋಡಲಾಗಿ ನನ್ನ ವಾಹನ ಇರಲಿಲ್ಲಾ ನನ್ನ ವಾಹನವನ್ನು ಇಲ್ಲಿಯ ವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಆದ್ದರಿಂದ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ದ್ವಿಚಕ್ರ ವಾಹನ ಹಿರೋ ಹೊಂಡಾ ಸ್ಪ್ಲಂಡರ್‌ ಪ್ಲಸ್  ನಂಕೆಎ 32 ಡಬ್ಲೂ 4122  ಇಂಜಿನ್ ನಂ.HA10EAAHA82055, ಚೆಸ್ಸಿ ನಂ. MBLHA10EJAHA23070  ||ಕಿ|| 35,000/- ರೂ ನೇಧ್ದನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

02 November 2014

Gulbarga District Reported Crimes

ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮೋಹನ ತಂದೆ ಬಸವಣಪ್ಪಾ ಢೋಲೆ ಸಾಃ ಡಿಪೋ ನಂ. 3, ವಿಭಾಗ ನಂ. 3, ಎನ್.ಈ.ಕೆ.ಎಸ್.ಆರ್.ಟಿ.ಸಿ ಗುಲಬರ್ಗಾ ಇವರು ದಿನಾಂಕಃ 27/10/2014 ರಂದು ಸುಪರ ಮಾರ್ಕೆಟದಿಂದ ಪಾಳಾ ಗ್ರಾಮದ ಮಾರ್ಗದಲ್ಲಿ ಬಸ್ ನಂ. ಎಫ್ 1389 ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಅಂದು ಸುಪರ ಮಾರ್ಕೆಟದಿಂದ ಪಾಳಾ ಗ್ರಾಮದ ಮಾರ್ಗದಲ್ಲಿ ಹೋಗುವಾಗ ಸದರಿ ನಮ್ಮ ವಾಹನ ಸರಡಗಿ ದಾಟಿ ಅರ್ದ ಕಿ.ಮೀ ದಾಟಿದ ಮೇಲೆ ಇನ್ನೂ 03 ಕಿ.ಮೀ ಇರುವಾಗ 1) ಶ್ರೀ ರಾಘವೇಂದ್ರ ಎ.ಟಿ.ಐ ಹಾಗು 2) ಹಣಮಂತ ಎ.ಟಿ.ಐ ತನಿಖಾಧಿಕಾರಿಗಳು ಬಂದು ನಮ್ಮ ಬಸ್ ತಡೆದು ಕೂಡಲೇ ಬಸ್ಸಿನಲ್ಲಿ ಹತ್ತಿ ನನ್ನ ಹತ್ತಿರ ಇರುವ ಟಿಕೆಟ್ ವಿತರಣೆ ಮಶೀನ್ ನೀಡುವಂತೆ ಕೇಳಿದರು. ಆಗ ನಾನು ಅವರಿಗೆ ಸದರಿ ಮಶೀನ್ ಕೊಟ್ಟೆ ಇನ್ನೂ ಟಿಕೆಟ್ ಕೊಡುತ್ತಿದ್ದೇನೆ ಅಂದರೂ ಕೂಡ ಸದರಿ ಅಧಿಕಾರಿಗಳು ಕೇಳದೇ ಮಶಿನ್ ನನ್ನ ಹತ್ತಿರ ತೆಗೆದುಕೊಂಡರು. ಆಗ ಸಮಯ ಅಂದಜು 01 ಗಂಟೆಯಾಗಿತ್ತು. ನೀನು ಟಿಕೆಟ್ ಇನ್ನೂ ವಿತರಣೆ ಮಾಡಿರುವುದಿಲ್ಲ ಎಂದು ಹೇಳಿ ನಿನಗೆ ಮೆಮೋ ನೀಡುತ್ತೇವೆಂದು ಹೇಳಿದರು. ಆಗ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರೂ ಅವರು ಕೇಳದೇ ಪಾಳಾ ಗ್ರಾಮದವರೆಗೆ ಬಂದರು. ಅಲ್ಲಿಯೇ ಸುಮಾರು 01 ಗಂಟೆಯವರೆಗೆ ನಮ್ಮ ಅವರ ಮಧ್ಯೆ ವಾದ ವಿವಾದ ನಡೆಯಿತು. ಆವಾಗ ಗ್ರಾಮದ ನಾಗರೀಕರು ಸಮಕ್ಷಮದಲ್ಲಿ ಇದ್ದ ಸ್ಥಿತಿ ಮೆಮೋ ನೀಡುತ್ತೇವೆಂದು ಹೇಳಿ ಒಂದು ಮೆಮೋ ಸುಳ್ಳು ಬರೆದು ಕೊಟ್ಟರು. ಅದಕ್ಕೆ ನಾನು ಒಪ್ಪುವುದಿಲ್ಲವೆಂದು ಸಹಿ ಮಾಡಿರುತ್ತೇನೆ. ನಂತರ ನಾನು ಸಾರ್ವಜನಿಕರು ಬಸ್ ತಡವಾಗಿದೆ ನಡೆರಿ ಎಂದು ಒತ್ತಾಯ ಮಾಡುತ್ತಿರುವುದರಿಂದ ಸದರಿ ಬಸ್ಸನ್ನು ಗುಲಬರ್ಗಾಕ್ಕೆ ಬರುವಾಗ ಸದರಿ ರಾಘವೇಂದ್ರ ಎ.ಟಿ.ಐ ಸಾಹೇಬರು ಹಾಗು ಹಣಮಂತ ಎ.ಟಿ.ಐ ಸಾಹೇಬರು ಅವರ ಕಾರ್ ಡ್ರೈವರ ಪುನಃ ನಮ್ಮ ಬಸ್ ಸರಡಗಿ ಕ್ರಾಸ್ ಹತ್ತಿರ ನಿಲ್ಲಿಸಿ ನೀನು ಹಳೆ ನಿರ್ವಾಹಕಕನಾಗಿದ್ದು ನಿನಗೆ ಅನ್ಯಾಯವಾಗುತ್ತದೆ ನಿನಗೆ ಇನ್ನೊಂದು ಮೆಮೋ ಬರೆದುಕೊಡುತ್ತೇವೆ ಈಗ ಬರೆದು ಕೊಟ್ಟ ಮೊಮೊ ಕೊಡಿ ಎಂದು ನನ್ನಿಂದ ವಾಪಸ್ಸು ಪಡೆದುಕೊಂಡು, ನಂತರ ನೀನು ಗುಲಬರ್ಗಾಕ್ಕೆ ಬನ್ನಿರಿ ಎಂದು ಅಲ್ಲಿಯೇ ಮೆಮೊ ಬರೆದುಕೊಡುತ್ತೇವೆ. ಈಗ ಪ್ಯಾಸಿಂಜರಗೆ ತಡವಾಗುತ್ತದೆ ನಡೆ ಎಂದು ಹೇಳಿದ್ದರಿಂದ ನಾನು ಖರ್ಗೆ ಪೆಟ್ರೋಲ್ ಪಂಪ್ ಹತ್ತಿರ ಬಂದು ಮಾನ್ಯರು ನನಗೆ ಮೆಮೊ ನೀಡಲು ಕೋರಿದೆ. ಆಗ ಸದರಿಯವರು ನನಗೆ ನಾನು ಯಾವುದೇ ತಪ್ಪು ಮಾಡಿದಿದ್ದಾಗ್ಯೂ ಪುನಃ ಹೆಚ್ಚಿನ ಟಿಕೆಟ್ ಹೊಡೆಯಲಾಗಿದೆ ಎಂದು ಸುಳ್ಳು ಮೆಮೊ ನೀಡಿದರು. ಆಗ ನಾನು ತಾವು ಇದ್ದ ಸ್ಥಿತಿ ಬರೆಯಬೇಕು ಒಂದು ವೇಳೆ ಹೆಚ್ಚಿಗೆ ಬರೆದರೆ ಅನ್ಯಾಯವಾಗು ವುದೆಂದು ಅಂದಾಗ ಮಗನೆ ನಾವು ಹೇಳಿದಹಾಗೆ  ಕೇಳಬೇಕೆಂದು ನನಗೆ ಹೆದರಿಸಿದರು. ನಾನು ಅವರಿಗೆ ಹೆದರದೇ ಇದ್ದಾಗ ಮಾತಿಗೆ ಮಾತು ಬೆಳೆದು ಸದರಿ ಇಬ್ಬರೂ ಎ.ಟಿ.ಐ ಹಾಗು ಅವರ ಕಾರ್ ಚಾಲಕರು ಸೇರಿ ನನಗೆ ಬಸ್ಸಿನಿಂದ ಅಂಗಿ ಹಿಡಿದು ಎಳೆದಾಡಿ  ಮಗನೆ ಸಹಿ ಮಾಡು ಎಂದು ನನಗೆ ಸಿಕ್ಕಾಪಟ್ಟೆ ಹೊಡೆ ಬಡೆ ಮಾಡಿದ್ದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಾನು ಸಹಿ ಮಾಡುವುದಿಲ್ಲ ಎಂದಿದಕ್ಕೆ ಸದರಿಯವರು ನನಗೆ ಎಳೆದಾಡಿ ಹೊಡೆ ಬಡೆ ಮಾಡಿ ಸಹಿ ಮಾಡಿಕೊಂಡಿದ್ದು ನೀನು ಹೇಗೆ ನೌಕರಿ ಮಾಡುತ್ತಿ ಮಗನೇ ಎಂದು ನನಗೆ ಸದರಿಯವರು ಜೀವಕ್ಕೆ ಭಯ ಹಾಕಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿಗಳ ಕತ್ತು ಕೊಯಿದು ಸಾಯಿಸಿದ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ. ಶರಣಪ್ಪ ತಂದೆ ಸಂಗಪ್ಪ ದಂಡಗುಂಡ ವಯ|| 45, ಸಾ|| ನೃಪತುಂಗ ಕಾಲೋನಿ ಹತ್ತಿರ ಇರುವ ಅಶೋಕ ಹೊನ್ನಳಿ ರವರ ಹೊಲದಲ್ಲಿ ತಾ||ಜಿ|| ಕಲಬುರ್ಗಿ ಇವರಿಗೆ 5 ಜನ ಮಕ್ಕಳಿದ್ದು ಮಗಳಾದ ಅಂಬಿಕಾ ಇವಳೊಂದಿಗೆ ಶಕ್ತಿ ನಗರದಲ್ಲಿ ವಾಸವಾಗಿರುವ ರವಿ ತಂದೆ ಚೋಕ್ಲು ರಾಠೋಡ ಈತನು ಪ್ರೀತಿಸುತ್ತಿದ್ದು ಈ ಬಗ್ಗೆ ಅವರ ತಂದೆ-ತಾಯಿಗೆ ಕರೆಯಿಸಿ ಇನ್ನೊಮ್ಮೆ ನಮ್ಮ ಮಗಳ ತಂಟೆಗೆ ಬಾರದಂತೆ ಬುದ್ದಿವಾದ ಹೇಳಿ ಕಳುಹಿಸಿದ್ದು ದಿನಾಂಕ: 31/10/2014 ರಂದು ರಾತ್ರಿ 9:00 ಗಂಟೆಗೆ ನನ್ನ ಕುರಿಗಳನ್ನು ಹಾಗೂ ಪಕ್ಕದ ಮನೆಯ ಆಶಪ್ಪ ತಂದೆ ಸಾಯಿಬಣ್ಣ ದೊಡ್ಡಮನಿ, ಇವರ ಕುರಿಗಳನ್ನು ಕೂಡಿಸಿ ರಾತ್ರಿ ಶೆಡ್ಡಿನಲ್ಲಿ ಹಾಕಿ ನಾನು ಮನೆಯಲ್ಲಿ ಮಲಗಿಕೊಂಡಿದ್ದು.  ದಿನಾಂಕ: 01/11/2014 ರಂದು 12:30 ಎ.ಎಮ್ ಕ್ಕೆ ಸುಮಾರಿಗೆ ಕುರಿಗಳು ಚೀರಾಡುವ ಸಪ್ಪಳ ಕೇಳಿ ನಾನು ಮತ್ತು ಆಶಪ್ಪ ಎದ್ದು ಹೊರಗೆ ಬಂದು ಬ್ಯಾಟರಿ ಹಾಕಿ ನೋಡಲಾಗಿ ರವಿ ತಂದೆ ಚೋಕ್ಲು ಮತ್ತು ಆತನ ಗೆಳೆಯ ಗುಂಡು ಇಬ್ಬರು ನಾವು ಕುರಿಗಳು ಹಾಕಿರುವ ಶೆಡ್ಡನಲ್ಲಿ ನಿಂತಿದ್ದು ನಾವು ಹಿಡಿಯಲು ಹೋದರೆ ಓಡಿ ಹೋಗಿದ್ದು, ಶೆಡ್ಡಿನಲ್ಲಿ ಹೋಗಿ ನೋಡಲಾಗಿ ಶೆಡ್ಡನಲ್ಲಿ ಹಾಕಿರುವ 19 ಕುರಿ ಮರಿಗಳ ಕುತ್ತಿಗೆ ಕೊಯ್ದು ಸಾಯಿಸಿ ಬಿಟ್ಟಿದ್ದರು. ರವಿ ಈತನು ನನ್ನ ಮಗಳಿಗೆ ಪ್ರೀತಿಸಿದ್ದರಿಂದ ಅವನಿಗೆ ಬುದ್ದಿವಾದ ಹೇಳಿದ್ದಕ್ಕೆ ಅದೇ ವೈಷ್ಯಮ್ಯವಿಟ್ಟುಕೊಂಡು ರಾತ್ರಿ ವೇಳೆಯಲ್ಲಿ ಶೆಡ್ಡದಲ್ಲಿ ಹಾಕಿರುವ 19 ಕುರಿ ಮರಿಗಳನ್ನು ಚಾಕುವಿನಿಂದ ಕತ್ತು ಕೊಯ್ದು ಸಾಯಿಸಿದ್ದು ಅಂದಾಜು 50,000/- ರೂ. ಹಾನಿ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಜೀವನ ಬಸವರಾಜ ಐ.ಎಸ್.ಎಸ್ ಅಧೀಕಾರಿ ಅಸಿಸ್ಟೆಂಟ ಕಮಿಷನರ್ ನಗಾಂವ ಆಸ್ಸಾಂ ರಾಜ್ಯ ಹಾ;ವ: ಮ.ನಂ. 1711/73 ಸರಸ್ವತಿ ನಗರ ದಾವಣಗೇರೆ ಇವರು ದಿನಾಂಕ 31/10/2014 ರಂದು ಹೈದ್ರಾಬಾದ ಪೊಲೀಸ ಅಕಾಡಮಿಯಲ್ಲಿ ಗೆಳೆಯರೊಂದಿಗೆ ಭೇಟ್ಟಿಯಾಗಿ ನನ್ನ ಸ್ವಗ್ರಾಮ ದಾವಣಗೇರೆ ಹೊಗಲು  ಗುಲಬರ್ಗಾ ಬಸ ಸ್ಟ್ಯಾಂಡಕ್ಕೆ ಬಂದು ಇಳಿದು, ರಾತ್ರಿ 9 ಗಂಟೆ ಸುಮಾರಿಗೆ  ಸ್ಲೀಪರ ಕೊಚ ಬಸ್‌ನಲ್ಲಿ ನನ್ನ ಲಗೇಜ ಬ್ಯಾಗ ಹಾಗು  ಹೆಚ್‌ಪಿ ಮಿಡಿಯಾ ಸೆಂಟರ ಲ್ಯಾಪಟಾಪ ಮತ್ತು  ಐ-ಪ್ಯಾಡ ಮಿನಿ ಸಿಮ್‌ ನಂ. 08135024475 ಹಾಗು ಹಾರ್ಡ ಡಿಸ್ಕವುಳ್ಳ ಬ್ಯಾಗನ್ನು  ಬಸ್ಸಿನ ಸೀಟಿನ ಮೇಲೆ ಇಟ್ಟಿದ್ದು ಕಂಡಕ್ಟರ ಹತ್ತಿರ ಟಿಕೇಟ ತೆಗೆದುಕೊಳ್ಳುತ್ತಿರುವಾಗ  2 ನಿಮಿಷಯದಲ್ಲಿ  ಯಾರೋ ಕಳ್ಳರು  ಲ್ಯಾಪಟಾಪ ಮತ್ತು ಐ-ಪ್ಯಾಡ ಹಾಗು ಹಾರ್ಡ ಡಿಸ್ಕವುಳ್ಳ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅದರ ಮೌಲ್ಯ  1 ಲಕ್ಷ ರೂಪಾಯಿ  ಇರುತ್ತದೆ.  ಐ-ಪ್ಯಾಡಿನ  ಜಿ.ಪಿ.ಎಸ್‌ ಲೋಕೇಶನ ಪರಿಶೀಲಿಸಿದಾಗ ರಾತ್ರಿ 10 ಗಂಟೆ ಸುಮಾರಿಗೆ ಜಿಲಾನಾಬಾದ  ಗೊಚರಿಸಿರುತ್ತದೆ.  ನನ್ನ ಹೆಚ್‌ಪಿ ಮಿಡಿಯಾ ಸೆಂಟರ ಲ್ಯಾಪಟಾಪ ಮತ್ತು  ಐ-ಪ್ಯಾಡ ಮಿನಿ ಹಾಗು ಹಾರ್ಡ ಡಿಸ್ಕನಲ್ಲಿ ಜಿಲ್ಲಾ ಆಡಳಿತಕ್ಕೆ ಸಂಬಂಧಪಟ್ಟ ದೈನಂದಿನ ಡಾಟಾ ಹಾಗೂ ಲಾಲಬಹಾದ್ದೂರ ಶಾಸ್ತ್ರಿ ಐಎಎಸ್ ಅಕ್ಯಾಡಮಿಗೆ ಸಂಬಂಧಪಟ್ಟ ಸಂಪೂರ್ಣ ಡಾಟಾ ಇರುತ್ತದೆ. ಆದ್ದರಿಂದ ಕಳುವಾದ ಲ್ಯಾಪಟಾಪ ಮತ್ತು ಐ-ಪ್ಯಾಡ ಬ್ಯಾಗನ್ನು ಪತ್ತೆ ಹಚ್ಚಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.