POLICE BHAVAN KALABURAGI

POLICE BHAVAN KALABURAGI

14 September 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಯ ಬಂಧಣ :
ಅಫಜಲಪೂರ ಠಾಣೆ : ದಿನಾಂಕ 13-09-2014 ರಂದು ಅಫಜಲಪೂರ ಪಟ್ಟಣದ ಬಸ್ಸ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ, ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ  ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸಿದ್ದು ತಂದೆ ಹಣಮಂತ ಗಾಯಕವಾಡ ಸಾ|| ಇಂದಿರಾ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 325/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 13-09-2014 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಚೌಕ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ನಜೀರ ಅಹ್ಮದ ಎ.ಎಸ್.ಐ ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಯಾಕೂಬ ತಂದೆ ಅಬ್ದುಲಸಾಬ ಕಡಿ ಸಾ|| ನೀಚೆ ಗಲ್ಲಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 416/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು  ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 13-09-2014 ರಂದು ಅಫಜಲಪೂರ ಪಟ್ಟಣದ ಅಫಜಲಖಾನ ಚೌಕ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಹೆಚ್.ಸಿ 110 ರಾಮಚಂದ್ರ, ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶ್ರೀಮಂತ ರಂದೆ ಶಂಕ್ರೆಪ್ಪಾ ಶಿರಶ್ಯಾಡ ಸಾ|| ಮರಗಮ್ಮ ಗುಡಿ ಹತ್ತಿರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 285/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು  ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀಮತಿ ತಂಗಮಣಿ ಗಂಡ ಶಾಮರಾಮ ಹೆಗಡೆ ಸಾ|| ಚೆಂಗಟಾಹಾ|||| ಮಾಡಿಯಾಳ. ದಿನಾಂಕ 13/09/2014 ರಂದು 1030 ಗಂಟೆಗೆ ಫಿರ್ಯಾದಿಯು ಗುಲಬರ್ಗಾಕ್ಕೆ ಮೀಟಿಂಗ ಕುರಿತು ಹೋಗಲು ಮಾಡಿಯಾಳ ಗ್ರಾಮದ ಬಸ ನಿಲ್ದಾಣದ ನೀರಿನ ಗುಮ್ಮಿಯ ಹತ್ತಿರ ಹೊರಟಾಗ ಹಿಂದಿನಿಂದ ಒಂದು ಬಿಳಿ ಬಣ್ಣದ ಗೂಡ್ಸ ಪಿಕ ಅಪ ನಂ. ಕೆ.ಎ 32, ಡಿ 6719 ನೇದ್ದರ ಚಾಲಕ ವಾಹನವನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಹೊಡಿಸಿದ್ದು ಇದರಿಂದ ಫಿರ್ಯಾದಿಗೆ ಕಾಲಿಗೆ, ಮುಖಕ್ಕೆ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿತ್ರಣಾಚಾರ್ಯಾ ತಂದೆ ಈಶ್ವರಪ್ಪ ರವರು .ದಿನಾಂಕ 13-09-2014 ರಂದು ಮದ್ಯಾಹ್ನ 1-30 ಗಂಟೆಗೆ ನಾನು ಮತ್ತು ವಿಜಯಕುಮಾರ ಹಾಗು ಪೀರಪ್ಪ ಬಡಿಗೆರ ಮೂರು ಜನರು ನಮ್ಮ ಬಸ ಡಿಪೊದಿಂದ ಸಂತೋಷ ಟಾಕೀಜ ಎದುರುಗಡೆ ಬರುವ ಬಸವ ಭವನ ಖಾನಾವಳಿಗೆ ಊಟ ಮಾಡುವ ಸಲುವಾಗಿ ನಡೆದುಕೊಂಡು ಹೋಗಿ ಜನತಾ ಹೋಟಲ ಮತ್ತು ನಬಿ ಲಾಡ್ಜ ಮದ್ಯದ ರೋಡಿನ ಬಲ ರೋಡಿನಿಂದ ಎಡ ರೋಡ ಕಡೆಗೆ ರಸ್ತೆ ದಾಟುತ್ತಿರುವಾಗ ಕೇಂದ್ರ ಬಸ್ ನಿಲ್ದಾಣದ ಕಡೆಯಿಂದ ಮೋ/ಸೈಕಲ ನಂಬರ ಕೆಎ-32 ಎಲ್-3132 ರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಎಡಗಾಲ ಮೊಳಕಾಲ ಕೆಳಗೆ ಭಾರಿ ಗುಪ್ತಪೆಟ್ಟು ಕಿರುಬೆರಳಿಗೆ ರಕ್ತಗಾಯ ಪಡಿಸಿ ಮೋ/ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಪುತಲಿಬೇಗಂ ಗಂಡ ಬಾಸುಮಿಯಾ ಪ್ಯಾಟಿ ಸಾ: ಮದರಿ ಇವರ ಮಗಳಾದ ಶಾಹೀದಾ ಬೇಗಂ ವಯಾ: 16 ವರ್ಷ  ಇವಳಿಗೆ ದಿನಾಂಕ: 3-9-2014 ರಂದು ಸಾಯಾಂಕಾಲ 5-30 ಗಂಟೆಗೆ ಮದರಿ ಗ್ರಾಮದ ಹೆಣ್ಣುಮಕ್ಕಳ ಶೌಚಾಲಯಕ್ಕೆ ಹೋದ ಫಿರ್ಯಾದಿಯ ಅಪ್ರಾಪ್ತ ವಯಸ್ಸಿನ ಮಗಳಿಗೆ ಬಾಬು ತಂದೆ ಬಸವಂತಪ್ಪ ಆಲಗೂರ ಸಾ|| ಮದರಿ ಇತನು ಪುಸಲಾಯಿಸಿ ಅಥವಾ ಜಬರದಸ್ತಿಯಿಂದ ಅಪಹರಣ ಮಾಡಿಕೊಂಡು ತನ್ನ ಮೊಟಾರು ಸೈಕಲ್ ಮೇಲೆ ಕರೆದುಕೊಂಡು ಹೊಗಿದ್ದು  ನನ್ನ ಮಗಳಿಗೆ ಎಲ್ಲಾ ಕಡೆ ಹುಡಾಕಾಡಿದರು ಸಿಕ್ಕಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಕಾಟ್ರೇಜ ಮಾರಾಟ ಮಾಡುತ್ತಿದ್ದವನ ಬಂಧನ :
ಸ್ಟೇಷನ ಬಜಾರ ಠಾಣೆ :  ದಿನಾಂಕ 13/09/2014 ರಂದು ಶ್ರೀ ಕೆವಿನ ಜಾನ ತಂದೆ ಸ್ಟೇನ್ ಲೆ ಜಾನ ಉಃ ರಿಜನಲ ಮ್ಯಾಜೇಜರ EIPR ಸಾಃ ಡಿ-0 ಸಾಯಿ ತೇಜಾ ಶೆರುಡ 1 ನೇ ಮೇನ್ 16 ನೇ ಕ್ರಾಸ್ ಪೈ ಲೇಔಟ ಹಳೆ ಮದ್ರಾಸ ರಸ್ತೆ ಕೆ.ಆರ್ ಪೂರಂ ಬೆಂಗಳೂರು-16 ರವರು, ಐವನ ಶಾಯಿ ಏರಿಯಾದ ಮಹಾರಾಜಾ ಹೊಟೇಲ ಪಕ್ಕದಲ್ಲಿರುವ ಅಂಬಿಕಾ ಸ್ಟೇಷನರಿ ಅಂಗಡಿಯ ಮಾಲಕ ಗೊವಿಂದ ತಂದೆ ಗಣೇಶ ಮಾಲ ಇವರು ನಕಲಿ ಹೆಚ್.ಪಿ ಕಂಪನಿಯ ಟೂನರ್ ಕಾಟ್ರೇಜ ಮಾರಾಟ ಮಾಡುತ್ತಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 September 2014

Gulbarga District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಶ್ರೀ ಅಬ್ದುಲ್ ಮಜೀದ ಖಾನ ತಂದೆ ಅಬ್ದುಲ್ ಅಜೀಜ ಖಾನ ಸ್ಟೇಷನ ಎರಿಯಾ ಹಾಗು ಮಹಮ್ಮದ ಅಹೆಮ್ಮದುಲ್ಲಾ  ಶೌಕತ ನವಾಜ ಹಿರೋ ಹೊಂಡಾ ಪ್ಯಾಶನ ಮೋಟಾರ ಸೈಕಲ್ ನಂ ಕೆಎ-32 ವ್ಹಾ-205 ನೇದ್ದರ ಮೇಲೆ ಸಲಾಮ ಟೇಕಡಿಯಿಂದ ಗುಲಬರ್ಗಾಕ್ಕೆ  ಬರುವಾಗ ಸದರ ಮೋಟಾರ ಸೈಕಲನ್ನು ಮಹಮ್ಮದ ಅಹೆಮ್ಮದುಲ್ಲಾ  ಶೌಕತ ನವಾಜ  ಚಲಾಯಿಸುತ್ತಿದ್ದು ರೋಡಿನ ಎಡಗಡಯಿಂದ ಬರುವಾಗ ಉಪಳಾಂವ ಕ್ರಾಸ ಹತ್ತಿರ ಎದುರಗಡೆಯಿಂದ ಕ್ರೋಜರ ಜೀಪ ನಂ ಕೆಎ-32-9347 ನೇದ್ದರ ಚಾಲಕನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೇ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ ಸಮೇತ ರೋಡಿನ ಮೇಲೆ ಬಿದ್ದಾಗ ಫಿರ್ಯಾದಿಗೆ ಎಡ ಮೋಳಕಾಲಿಗೆ ಭಾರಿ ರಕ್ತಗಾಯ ಹಾಗು ಇತರೇ ಭಾಗಕ್ಕೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿದ್ದು. ಹಾಗು ಮಹಮ್ಮದ ಅಹೆಮ್ಮದುಲ್ಲಾ  ಶೌಕತ ನವಾಜ ಇತನಿಗೆ ತಲೆಗೆ, ಹಣೆಗೆ, ಎಡ ಹೊಟ್ಟೆಗೆ ಬಲಹುಬ್ಬಿನ ಮೇಲೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತಸ್ರಾವವಾಗಿದ್ದು ಉಪಚಾರ ಕುರಿತು ಕೆ.ಬಿ.ಎನ್ ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ ಸದರಿಯವನು ದಾರಿಯ ಮದ್ಯ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ವಿಶ್ವವಿದ್ಯಾಲಯ ಠಾಣೆ : ಶ್ರೀ ಶರಣಬಸಪ್ಪ ತಂದೆ ಹಣಮಂತರಾಯ ಹೂಗಾರ ಸಾ : ರಾಜಾಪೂರ ಗುಲಬರ್ಗಾ ರವರು ದಿನಾಂಕ:12/09/14 ರಂದು ನಮ್ಮ ಸಂಬಂಧಿಕರು ಮೃತಪಟ್ಟಿದ್ದರಿಂದ ಶವ ಸಂಸ್ಕಾರ ಕುರಿತು ನಾನು ಮತ್ತು ರವಿ ತಂದೆ ಗುರುಶಾಂತಪ್ಪ ಹೂಗಾರ ಇಬ್ಬರೂ ಮೊಟಾರ ಸೈಕಲ ಮೇಲೆ ಸೇಡಂಕ್ಕೆ ಬಂದಿದ್ದು. ನಮ್ಮಂತೆ ಮಾವ ಮಲ್ಲಿಕಾರ್ಜುನ ತಂದೆ ವೀರಣ್ಣ ಹೂಗಾರ ಸಾ:ರಾಜಾಪೂರ ಇವರು ತನ್ನ ಮೊಟಾರ ಸೈಕಲ ಮೇಲೆ ಸೇಡಂಕ್ಕೆ ಬಂದಿದ್ದು. ನಂತರ ಸೇಡಂದಲ್ಲಿ ಶವ ಸಂಸ್ಕಾರ ಮುಗಿಸಿ ನಾನು ಮತ್ತು ರವಿ ಇಬ್ಬರು ನನ್ನ ಮೊಟಾರ ಸೈಕಲ ಮೇಲೆ ಗುಲಬರ್ಗಾಕ್ಕೆ ಹೊರಟಿದ್ದು. ನಮ್ಮ ಮುಂದೆ ನಮ್ಮ ಮಾವ ಮಲ್ಲಿಕಾರ್ಜುನ ಇತನು ತನ್ನ ಮೊಟಾರ ಸೈಕಲ ನಂ. ಕೆಎ-32-ಇಡಿ-7042 ನೇದ್ದರ ಮೇಲೆ ಹೊರಟಿದ್ದು. ಅಂದಾಜು 8:00 ಪಿಎಮ ಸುಮಾರಿಗೆ ಸೇಡಂ ಗುಲಬರ್ಗಾ ರಸ್ತೆಯ ಅಜಾದಪೂರ ಕ್ರಾಸ ಹತ್ತಿರ ನಿಧಾನವಾಗಿ ಹೊರಟಾಗ ಆಗ ಸೇಡಂ ಕಡೆಯಿಂದ ಒಂದು ವಾಹನ ಚಾಲಕ ತನ್ನ ವಾಹನವನ್ನು ಅತಿವೇಗದಿಂದ ಅಡ್ಡಾತಿಡ್ಡಿ ಚಲಾಯಿಸಿಕೊಂಡು ಬಂದು ನಮಗೆ ಸೈಡ ಹೊಡೆದು ನಮ್ಮ ಮುಂದೆ ಹೊರಟಿದ್ದ ಮಾವ ಮಲ್ಲಿಕಾರ್ಜುನ ಇತನ ಮೊಟಾರ ಸೈಕಲಗೆ ಡಿಕ್ಕಿಪಡಿಸಿ ವಾಹನ ಸಮೇತ ಗುಲಬರ್ಗಾ ಕಡೆ ಹೋದನು. ಆಗ ಮಾವ ಮಲ್ಲಕಾರ್ಜುನ ಇತನು ಮೊಟಾರ ಸೈಕಲ ಸಮೇತ ರಸ್ತೆಯ ಮೇಲೆ ಬಿದ್ದನು. ಆಗ ನಾನು ಮತ್ತು ರವಿ ಹೋಗಿ ನೋಡಲಾಗಿ ಗದ್ದಕ್ಕೆ ಬಲಗಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯ ಮತ್ತು ಎದೆಗೆ ರಕ್ತಗಾಯ, ಎಡ ಭುಜಕ್ಕೆ ತರಚಿದ ಗಾಯ, ತಲೆಗೆ ಗುಪ್ತಗಾಯವಾಗಿದ್ದು. ಮಲ್ಲಿಕಾರ್ಜುನ ಇತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಅಷ್ಟೊತ್ತಿಗೆ ಸುದ್ದಿ ತಿಳಿದು ಬಂದಿದ್ದ ಪೊಲೀಸರು ತಮ್ಮ ವಾಹನದಲ್ಲಿ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀಮತಿ ಮಾಹಾನಂದ ಗಂಡ ಶಾಮರಾಯ ಪೂಜಾರಿ ಸಾ: ದಂಗಾಪೂರ ಇವರು ದಿನಾಂಕ 12-09-2014 ರಂದು ತನ್ನ ಸಣ್ಣವ್ವನ ಮಗಳಾದ ಜಗದೇವಿ ಇವಳು ಭಾಳಿ ಗ್ರಾಮದಲ್ಲಿ ಮೃತ ಪಟ್ಟಿದ್ದರಿಂದ ನಾನು ಹಾಗೂ ನಮ್ಮೂರಿನ ಸೂರಮ್ಮದೇವಿ, ನಾಗಮ್ಮ, ಭಾಗಮ್ಮ, ಮಾಹಾದೆವಿ, ಲಕ್ಷ್ಮಿಬಾಯಿ, ಶರಣಮ್ಮ, ಸುವರ್ಣ, ಅಂಬವ್ವ, ಎಲ್ಲರೂ ಸೇರಿ ಬಾಬು ತಂದೆ ಗದಿಗೆಪ್ಪ ಜಳಕಿ ಇತನ ಟಂ-ಟಂ ಬಾಡಿಗೆ ಮಾಡಿಕೊಂಡು ಮಣ್ಣು ಕೊಡುವ ಕಾರ್ಯಕ್ರಮಕ್ಕೆ ಹೋಗಿ ಮರಳಿ ದಂಗಾಪೂರ ಗ್ರಾಮಕ್ಕೆ ಬರುವಾಗ ದಂಗಾಪೂರ ಗ್ರಾಮದ ಪಂಚಾಯತಿ ಎದುರಿಗೆ ಇಳಿಕಲಿನಲ್ಲಿ ಸಾಯಂಕಾಲ 04:15 ಗಂಟೆಗೆ ಟಂ-ಟಂ ಚಾಲಕನಾದ ಮಹೇಶಕುಮಾರ ತಂದೆ ಮಲ್ಲಿಕಾರ್ಜುನ ಮಣ್ಣೂರ ಇತನು ಟಂ-ಟಂ ಅನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿ ರೋಡಿನ ಎಡ ಮಗ್ಗಲಿನಲ್ಲಿ ಪಲ್ಟಿ ಹೊಡೆಸಿರುತ್ತಾನೆ ಸದರಿ ಅಫಘಾತದಲ್ಲಿ ನನಗೂ ಹಾಗೂ  ನಮ್ಮೂರಿನ ಸೂರಮ್ಮದೇವಿ, ನಾಗಮ್ಮ, ಭಾಗಮ್ಮ, ಮಾಹಾದೆವಿ, ಲಕ್ಷ್ಮಿಬಾಯಿ, ಶರಣಮ್ಮ, ಸುವರ್ಣ, ಅಂಬವ್ವ, ಎಲ್ಲರಿಗೂ ಸಾದಾ, ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀ.ಯಶ್ವಂತರಾವ ತಂದೆ ಶ್ರೀಮಂತರಾವ ನಂದೇಣಿ ಸಾ:ನಿಂಬಾಳ ಇವರು ದಿನಾಂಕ:12/09/2014 ರಂದು 04:30 ಪಿ.ಎಂ.ಸುಮಾರಿಗೆ ನಿಂಬಾಳ ಗ್ರಾಮದ ಶ್ರೀಮಂತ ಹೊನ್ನಳ್ಳಿಯವರ ಅಂಗಡಿ ಮುಂದಿನ ರಸ್ತೆಯ ಮೇಲಿನಿಂದ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ನಮ್ಮೂರಿನ ಮಲ್ಲಿನಾಥ ತಂದೆ ಲಕ್ಷ್ಮಣ ಗದ್ದೆ ಇತನು ನನ್ನ ಎದುರಿಗೆ ಬಂದು ನನಗೆ ಮುಂದಕ್ಕೆ ಹೋಗದಂತೆ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ನಾನು ಎದುರಿಗೆ ಬರುವಾಗ ನಿನ್ನು ನನಗೆ ಮರ್ಯಾದೆ ಕೊಡದೆ ನನ್ನ ಎದುರಿನಿಂದ ಎದೆ ಉಬ್ಬಿಸಿ ಹೋಗಿದಿ ಇವತ್ತು ಸಹ ಹಾಗೇ ಬರತ್ತಾಯಿದ್ದಿ ನಿನ್ನಲ್ಲಿ ಬಹಳ ಸೊಕ್ಕು ಇದೆ ನಿನಗೆ ಇವತ್ತು ನೋಡೆ ಬೀಡುತ್ತೆನೆ ಬೋಸಡಿ ಮಗಾ ಅಂತಾ ಕೈಯಿಂದ ನನ್ನ ಕಪಾಳಕ್ಕೆ ಹೋಡೆದು ಗಾಯಪಡಿಸಿ ಜೀವದ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಫಜಲಪೂರ ಠಾಣೆ : ದಿನಾಂಕ 12-09-2014 ರಂದು ಬೆಳಿಗ್ಗೆ 08;30 ಗಂಟೆಗೆ ಶ್ರೀಮತಿ ಮಲ್ಲಮ್ಮ ಗಂಡ ಸಿದ್ದರಾಮ ಪೂಜಾರಿ ಸಾ : ಮಾತೋಳಿ ಹಾಗು  ನೆಗ್ಯಾಣಿ ದೇವಕ್ಕಿ ರವರು ಕೂಡಿಕೊಂಡು ನಮ್ಮ ಹೋಲಕ್ಕೆ ಹೋಗಿದ್ದು ಹೊಲದಲ್ಲಿ ನಮ್ಮ ಅಣ್ಣತಮ್ಮಕಿಯವರಾದ ಆನಂದ ತಂದೆ ಪಾಂಡುರಂಗ ಪೂಜಾರಿ, ರಮೇಶ ಪಾಂಡುರಂಗ ಪೂಜಾರಿ, ಶ್ರೀಮಂತ ಪಾಂಡುರಂಗ ಪೂಜಾರಿ ರವರು ಸಾಂಡ ಮುಚ್ಚುತ್ತಿದ್ದರು. ಆಗ ನಾವು ಅವರಲ್ಲಿ ಹೋಗಿ ನ್ಯಾಯಾಲಯದ ತೀರ್ಪು ಆಗುವವರೆಗೆ ಸಾಂಡ ಮುಚ್ಚಬ್ಯಾಡರಿ ಅಂತಾ ಹೇಳಿದೆವು ಆಗ ಅವರು ನಮಗೆ ತಡೆದು ನಿಲ್ಲಿಸಿ ಅವಾಚ್ಯವಾ ಬೈಯುತ್ತಿದ್ದರು ನಂತರ ನಾವು ಈ ವಿಷಯವನ್ನು ನಮ್ಮ ಮನೆಯವರಿಗೆ ಹೇಳಿ ಊರಿಗೆ ಬಂದಿರುತ್ತೇವೆ. ನಂತರ 09;30 .ಎಂ ಕ್ಕೆ ನಮ್ಮ ಮನೆಯ ಮುಂದೆ ನಡೆದ ವಿಷಯವನ್ನು ನನ್ನ ಗಂಡನಿಗೆ ಹೇಳುತ್ತಿದ್ದಾಗ ಅದೇ ಸಮಯಕ್ಕೆ ಸದರಿ ಆನಂದ ತಂದೆ ಪಾಂಡುರಂಗ ಪೂಜಾರಿ, ರಮೇಶ ಪೂಜಾರಿ, ಶ್ರೀಮಂತ ಪೂಜಾರಿ ರವರು ಬಂದು ಏನರೋ ಸುಳಿ ಮಕ್ಕಳ್ಯಾ ನಮ್ಮ ಹೊಲದಾಗ ಅರನಿ ಹಾಕಿದರೆ ನಿಮಗೇನಾಗತಾದು ಅಂತಾ ಅನ್ನುತ್ತಿದ್ದಾಗ ನನ್ನ ಗಂಡ ನ್ಯಾಯಾಲಯದ ತೀರ್ಪು ಆಗುವವರೆಗೆ ಅರನಿ ಹಾಕಬ್ಯಾಡರಿ ಅಂತಾ ಹೇಳುತ್ತಿದ್ದಾಗ ಆನಂದ ಇವನು ತನ್ನ ಕೈಯಿಂದ ನನ್ನ ಗಂಡನಿಗೆ ಕಪಾಳ ಮೇಲೆ ಹೊಡೆದನು ನಂತರ ನಮ್ಮ ಮೈದುನ ಶಿವಾನಂದ ಇವರಿಗೆ ರಮೇಶ ಇವನು ಕಾಲಿನಿಂದ ಬೆನ್ನಿನ ಮೇಲೆ ಒದ್ದು ನೆಲದ ಮೇಲೆ ಖೆಡವಿದನು ಶ್ರೀಮಂತ ಇವನು ಒಂದು ಕಲ್ಲಿನಿಂದ ನನ್ನ ಹಣೆ ಮೇಲೆ ಹೋಡೆದು ರಕ್ತಗಾಯ ಪಡಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 12-09-2014 ರಂದು ಬೆಳಿಗ್ಗೆ 08;30 ಗಂಟೆಗೆ ಶ್ರೀ ಆನಂದ ತಂದೆ ಪಾಂಡೂರಂಗ ಪೂಜಾರಿ ಸಾ : ಮಾತೋಳಿ ಮತ್ತು ನಮ್ಮ ತಮ್ಮಂದಿರರಾದ ರಮೇಶ ಪೂಜಾರಿ, ಶ್ರೀಮಂತ ಪೂಜಾರಿ ರವರು ನಮ್ಮ ಹೊಲದಲ್ಲಿ ಸಾಂಡ ಹತ್ತಿರ ಕೆಲಸ ಮಾಡುತ್ತಿದ್ದೇವಿ. ಆಗ ನಮಗೆ ಸಿದ್ರಾಮ ಪೂಜಾರಿ ರವರ ಹೆಂಡತಿ ಮಲ್ಲಮ್ಮ ಹಾಘು ಅವರ ನೆಗ್ಯಾಣಿ ದೇವಕ್ಕಿ ರವರು ನಮ್ಮ ಹತ್ತಿರ ಬಂದು ನ್ಯಾಯಾಲಯದ ತೀರ್ಪು ಆಗುವವರೆಗೆ ಸಾಂಡ ಮುಚ್ಚಬ್ಯಾಡರಿ ಇಲ್ಲಾ ಅಂದರೆ ನಮ್ಮ ಗಂಡಂದಿರಿಂದ ನಿಮಗೆ ಹೊಡೆಸುತ್ತೇವೆ ಅಂತಾ ಅಂದು ಅಲ್ಲಿಂದ ಹೋದರು ನಂತರ ನಾವು ಸಹ 09;30 .ಎಂ ಕ್ಕೆ ಲಕ್ಷ್ಮಣ ಪೂಜಾರಿ ರವರ ಮನೆ ಹತ್ತಿರ ಹೋಗ ಸದರಿ ಲಕ್ಷ್ಮಣನ್ನು ನ್ಯಾಯಾಲಯದ ತೀರ್ಪು  ಆಗುವವೆರೆಗೆ ನಮ್ಮ ಹೊಲದಲ್ಲಿನ ಸಾಂಡ ಮುಚ್ಚುವುದಿಲ್ಲ ಅಂತಾ ಹೇಳಿದರು ನಮ್ಮೊಂದಿಗೆ ಕಾಲಕೆದರಿಕೊಂಡು ಜಗಳ ಮಾಡಲು ಬರುತ್ತಿರಿ ಯಾಕೆ ಅಂತಾ ಕೇಳಿದ್ದಕ್ಕೆ ಎಲ್ಲರು ನಮಗೆ ಹೋಗದಂತೆ ತಡೆದುನಿಲ್ಲಿಸಿ ಅವರಲ್ಲಿ ಸಿದ್ರಾಮ ಪೂಜಾರಿ ಇವನು ಒಂದು ಕಲ್ಲಿನಿಂದ ನಮ್ಮ ತಮ್ಮ ಶ್ರೀಮಂತನಿಗೆ ತಲೆಯ ಮೇಲೆ ಹೊಡೆದನು ನಂತರ ಯಲ್ಲಾಲಿಂಗ ಇವನು ಕೈಯಿಂದ ನನ್ನ ಕಪಾಳ ಮೇಲೆ ಹೊಡೆದನು, ಶಿವಾನಂದ ಇವನು ತನ್ನ ಕಾಲಿನಿಂದ ನನ್ನ ಬೆನ್ನಿನ ಮೇಲೆ ಒದ್ದು ನೆಲದ ಮೇಲೆ ಕೆಡವಿದನು ಆಗ ಲಕ್ಷ್ಮಣ ಪೂಜಾರಿ ಇವನು ಕಾಲಿನಿಂದ ನನಗೆ ಒದ್ದು ಗಾಯಗೋಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

12 September 2014

Gulbarga District Reported Crimes

ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಆನಂದಕುಮಾರ ತಂದೆ ಶಿವಯೋಗಪ್ಪ ದೊಡ್ಡಮನಿ ಉ:ಪಿ.ಡಿಓ ಬಬಲಾದ (ಐಕೆ ಗ್ರಾ.ಪಂ) ಸಾ:ಹೀರಾಪುರ ತಾ:ಜಿ:ಗುಲಬರ್ಗಾ ರವರು ದಿನಾಂಕ 11-09-2014 ರಂದು ಕಗ್ಗನಮಡ್ಡಿ ಗ್ರಾಮದಲ್ಲಿ ಡಾ : ಬಿ.ಆರ್. ಅಂಬೇಡ್ಕರ ಸಮುದಾಯ ಭವನದ ಮುಂದುಗಡೆ ಇರುವ ಪಂಚಾಯತಿಗೆ ಸಂಂಧ ಪಟ್ಟ ಜಾಗೆಯನ್ನು ಅತೀಕ್ರಮಿಸಿದ್ದರಿಂದ ತೆರವು ಗೋಳಿಸುವ ಕುರಿತು ಪೊಲೀಸ ರಕ್ಷಣೆಯಲ್ಲಿ ಹೋದಾಗ 1) ಯಶವಂತ ತಂದೆ ಬಂಡೆಪ್ಪ ತಳಕೇರಿ 2) ದಶರಥ ತಂದೆ ಬಂಡೆಪ್ಪ ತಳಕೇರಿ 3) ಅಂಬಿಕಾ ಗಂಡ ಯಶವಂತ ತಳಕೇರಿ 4) ಅಂಬಾರಾಯ ತಂದೆ ಶಿವಪ್ಪ ನಾಯ್ಕಮನ ಸಾ:ಎಲ್ಲರೂ ಕಗ್ಗಿನ ಮಡ್ಡಿ ತಾ:ಜಿ:ಗುಲಬರ್ಗಾ ಇವರುಗಳು ತಕರಾರು ತೆಗೆದು ಜಗಳವಾಡಿ ತಡೆದು ನಿಲ್ಲಿಸಿ ಅವಾಶ್ಚ ಶಬ್ದಗಳಿಂದ ಬೈಯ್ದು ಸರಕಾರಿ ಕೆಲಸ ನಿರ್ವಹಿಸದಂತೆ ಅಡೆ ತಡೆ ಉಂಟು ಮಾಡಿ ಮಚ್ಚಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ದೀಪಕ ತಂದೆ ಧೂಳಪ್ಪಾ ಸುಂಟನೂರೆ ಸಾಃ ಬಸವಕಲ್ಯಾಣ ಬೀದರ ಹಾವಃ ಡಾಕ್ಟರ ಫಾರೂಖ್ ಇವರ ಅಪಾರ್ಟಮೆಂಟ್ಸ್ ನಲ್ಲಿ ಬಾಡಿಗೆ ಆರ್.ಟಿ.ಓ ಕ್ರಾಸ್ ಸಾಯಿ ನಗರ ಗುಲಬರ್ಗಾ ಇವರು ದಿನಾಂಕಃ 11/09/2014 ರಂದು 11:45 ಎ.ಎಂ. ಕ್ಕೆ ನಾನು ಮತ್ತು ನನ್ನ ಹೆಂಡತಿ ಮತ್ತು ನನ್ನ ಹೆಂಡತಿಯ ಕಾಕಿ ನಾವೆಲ್ಲರೂ ಕೂಡಿಕೊಂಡು ಮನೆಗೆ ಬೀಗ ಹಾಕಿಕೊಂಡು ನಾನು ನನ್ನ ಕರ್ತವ್ಯ ಕುರಿತು ಸರಕಾರಿ ಆಸ್ಪತ್ರೆಗೆ ಹೋಗಿರುತ್ತೇನೆ. ನನ್ನ ಹೆಂಡತಿ ಮತ್ತು ಕಾಕಿ ರವರು ಸುಪರ ಮಾರ್ಕೆಟಗೆ ಹೋಗಿರುತ್ತಾರೆ ನಂತರ 01:30 ಪಿ.ಎಂ. ಸುಮಾರಿಗೆ ಮನೆಯ ಮಾಲಿಕರಾದ ಡಾಕ್ಟರ ಫಾರೂಖ್ ಇವರು ಫೋನ್ ಮಾಡಿ ತಿಳಿಸಿದ್ದೇನೆಂದರೇ, ಮನೆಯ ಬಾಗಿಲಿನ ಕೀಲಿಕೊಂಡಿ ಮುರಿದಿದ್ದು ಮನೆ ಕಳ್ಳತನ ಆಗಿರಬಹುದು ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಅಳಿಯ ಹಾಗು ಹೆಂಡತಿಗೂ ಕೂಡ ಫೋನ್ ಮಾಡಿ ಮನೆಗೆ ಬಂದು ನೋಡಲು ಮನೆಯ ಬಾಗಿಲಿನ ಕೀಲಿ ಕೊಂಡಿ ಮುರಿದಿದ್ದು ಮನೆಯೊಳಗೆ ಹೋಗಿ ಡ್ರೆಸ್ಸಿಂಗ್ ಟೇಬಲಿನ ಡ್ರಾ ಚೆಕ್ ಮಾಡಿ ನೋಡಲಾಗಿ ಬಂಗಾರದ ಆಭರಣಗಳು  ಒಟ್ಟು ಅಃಕಿಃ 1,87,000/- ರೂ. ಬೆಲೆ ಬಾಳುವ ಬಂಗಾರ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಶಹೆನಾಜ್ ಪರ್ವೀನ ಗಂಡ ಮಹ್ಮದ ಅಲಿ ಸಾಃ ಪ್ಲಾಟ ನಂ. 110, ಬಾರೆಹಿಲ್ಸ್ ಗಣೇಶ ನಗರ ಗುಲಬರ್ಗಾ ಇವರು ದಿನಾಂಕಃ 11/09/2014 ರಂದು 09:00 ಎ.ಎಂ. ಕ್ಕೆ ತಮ್ಮ ಮನೆಗೆ ಕೀಲಿ ಹಾಕಿಕೊಂಡು ಮಹಾಗಾಂವ್ ಗ್ರಾಮದ ಶಾಲೆಗೆ ಹೋಗಿದ್ದು ಕರ್ತವ್ಯ ಮುಗಿಸಿಕೊಂಡು ಮರಳಿ 05:00 ಪಿ.ಎಂ. ಕ್ಕೆ ಬಂದು ನೋಡಲಾಗಿ ಮನೆಗೆ ಹಾಕಿದ ಕೀಲಿ ಮುರಿದಿದ್ದು ಮನೆಯ ಬೆಡರೂಮಿನಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಲೆಮಾರಿ ತೆರೆದಿದ್ದು ಅಲೆಮಾರಿಯಲ್ಲಿದ್ದ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ವಾಚ್ ಗಳು, ಸ್ಯಾಮಸಂಗ್ ಮೊಬೈಲ್ ಹಾಗು ನಗದು ಹಣ 25,000/- ರೂ.ಹೀಗೆ ಒಟ್ಟು ಅಃಕಿಃ 11,12,000/- ರೂ. ಬೆಲೆ ಬಾಳುವ ಬಂಗಾರ & ಬೆಳ್ಳಿಯ ಆಭರಣಗಳನ್ನು ಯಾರೋ ಕಳ್ಳರು ಇಂದು 09:00 ಎ.ಎಂ. ದಿಂದ 05:00 ಪಿ.ಎಂ. ಅವಧಿಯಲ್ಲಿ ಮನೆಯ ಬಾಗಿಲಿನ ಕೀಲಿ ಮುರಿದು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಸೈಯದ್ ಆಸ್ಪಕ ಅಹಮ್ಮದ್ ತಂದೆ ಸೈಯದ್ ಅಹಮ್ಮದ್ ಸಾ: ನ್ಯಾಮತಿ ತಾ: ಹೊನ್ನಾಳಿ ಜಿ: ದಾವಣಗೆರೆ ಹಾ:: ಮನೆ ನಂ ಬಿ2 104 ಹೈಕೋರ್ಟ ವಸತಿ ಗೃಹ ಗುಲ್ಬರ್ಗಾ ಇವರು ದಿನಾಂಕ: 11/09/2014 ರಂದು ಬೆಳಿಗ್ಗೆ 9-30 ಗಂಟೆಗೆ ಫಿರ್ಯಾದಿ ಮತ್ತು ಆತನ ಹೆಂಡತಿ ರುಕ್ಸಾನಾ ಬೇಗಂ ಇವರು ತಮ್ಮ ಕೆಲಸಕ್ಕೆ ಹೋಗಿದ್ದು ಫಿರ್ಯಾದಿದಾರನ  ಹೆಂಡತಿ ಮಧ್ಯಾಹ್ನ 2-30 ಪಿಎಮ್ ದ ಸುಮಾರಿಗೆ ಕೆಲಸದಿಂದ ಮರಳಿ ಮನೆಗೆ ಬಂದು ನೋಡಲಾಗಿ  ಮನೆಯ ಬಾಗಿಲು ಮುರಿದಿದ್ದು ಒಳಗೆ ಹೋಗಿ ನೋಡಲು ಬೆಡರೂಮ ನಲ್ಲಿದ್ದ ಅಲಮಾರಿ ಲಾಕರ್ ಮುರಿದಿದ್ದು ಅಲಮಾರಿಯಲ್ಲಿದ್ದ ಬಂಗಾರದ ಬೆಳ್ಳಿಯ ಆಭರಣಗಳು ಅ.ಕಿ.  2,10,200/-ರೂ  ಕಿಮ್ಮತ್ತಿನ ಬೆಳ್ಳಿ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.