POLICE BHAVAN KALABURAGI

POLICE BHAVAN KALABURAGI

26 August 2014

Gulbarga District Reported Crimes

ಹಲ್ಲೆ ಮಾಡಿ ಸುಲಿಗೆ ಮಾಡಿದ ಆರೋಪಿತರ ಬಂಧನ :
 ಸ್ಟೇಷನ ಬಜಾರ ಠಾಣೆ : ಗುಲಬರ್ಗಾ ನಗರದ ಐವಾನ-ಏ-ಶಾಹಿ ರಸ್ತೆಯಲ್ಲಿಯಲ್ಲಿರುವ ಇನಾಮದಾರ ಕಾಂಪ್ಲೆಕ್ಸ್ ನಲ್ಲಿ ಹೋರ ರಾಜ್ಯದ ಮೆಡಿಕಲ್ ಮತ್ತು ಇಂಜಿನಿಯರ ವಿದ್ಯಾರ್ಥಿಗಳು ವಾಸವಾಗಿರುವ ರೂಮಿಗೆ ನುಗ್ಗಿ ಮಾರಕಾಸ್ತ್ರದಿಂದ ಹೆದರಿಸಿ ಬೆಲೆಬಾಳುವ ಮೋಬೈಲಗಳು ಹಾಗು ನಗದು ಹಣ ದೋಚಿಕೊಂಡು ಹೋದ ಬಗ್ಗೆ ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾನ್ಯ ಎಸ್ ಪಿ ಸಾಹೇಬರು, ಮಾನ್ಯ ಅಪರ ಎಸ್.ಪಿ ಸಾಹೇಬರು ಹಾಗು ಮಾನ್ಯ ಡಿ ಎಸ್ ಪಿ ಸಾಹೇಬರು “ಎ” ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸ್ಟೇಷನ ಬಜಾರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ರಾಜಶೇಖರ ಹಳಿಗೋಧಿ ಹಾಗು ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ 1. ಇರ್ಫಾನ ಅಹ್ಮದ ಖಾನ ತಂದೆ ಶಕೀಲ ಅಹ್ಮದ ಖಾನ ಸಾ:ಸಂಪಿಗೆ ನಗರ ಗುಲಬರ್ಗಾ 2. ವಾಹೀದ ಅಹ್ಮದ ತಂದೆ ರುಕ್ಮೋದ್ದಿನ ಪಟೇಲ ಸಾ:ಎಮ್.ಎಸ್.ಮಿಲ್ ಗುಲಬರ್ಗಾ  3. ಶಹಾಬಾಜ ಅಹ್ಮದ ತಂದೆ ಅಬ್ದುಲ ಮಜೀದ ಸಾ:ಬಿಲಾಲಾಬಾದ ಕಾಲೋನಿ ಗುಲಬರ್ಗಾ 4. ಮಹ್ಮುದ ಅಮಾನುಲ್ಲಾ ತಂದೆ ಮಹ್ಮುದ ಕರಿಮುಲ್ಲಾ ಸಾ:ವಿದ್ಯಾ ನಗರ ಗುಲಬರ್ಗಾ 5. ಸೈಯದ ಆದಿಲ ತಂದೆ ಸೈಯದ ಶೌಕತ ಸಾ:ವಿದ್ಯಾ ನಗರ ಗುಲಬರ್ಗಾ ಇವರನ್ನು ದಿನಾಂಕ: 24-08-2014 ರಂದು ಬಂಧಿಸಿ ಬಂಧಿತರಿಂದ     8 ಮೋಬೈಲಗಳು, ನಗದು ಹಣ ಮತ್ತು ಅಪರಾಧಕ್ಕೆ ಬಳಸಿದ 4 ಸೈಕಲ್ ಮೋಟಾರಗಳು ಸೇರಿ ಹೀಗೆ ಒಟ್ಟು  ಅಂದಾಜು 3 ಲಕ್ಷ ರೂಪಾಯಿ ಕಿಮ್ಮತ್ತಿನ ಮಾಲನ್ನು ಜಪ್ತಿ ಮಾಡಿಕೊಂಡಿರುತ್ತಾರೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 25-08-2014 ರಂದು ಅಫಜಲಪೂರ ಪಟ್ಟಣದ ಅಂಬೇಡ್ಕರ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಅಂಬೇಡ್ಕರ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಶ್ರೀಶೈಲ ತಂದೆ ಪುಂಡಲಿಕ ಮಾಶಾಳ  ಸಾ|| ಆಲಮೇಲ ಹಾ||ವ|| ಉಸ್ಮಾನಿಯಾ ಕಾಲೋನಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 320/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು  ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 25-08-2014 ರಂದು ಅಫಜಲಪೂರ ಪಟ್ಟಣದ ಸರಕಾರಿ ಪ್ರೌಡ ಶಾಲೆ ಹತ್ತಿರ ರಾಜಧಾನಿ ಧಾಬಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ರಾಜಧಾನಿ ಧಾಬಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶ್ರೀಕಾಂತ ತಂದೆ ಮಲ್ಲಿಕಾರ್ಜುನ ಮಲ್ಲಾಬಾದಿ ವಯ; 23 ವರ್ಷ ಉ; ವ್ಯಾಪಾರ ಸಾ|| ಎ.ಪಿ.ಎಮ್.ಸಿ ಹತ್ತಿರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 380/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ ;
ಸಂಚಾರಿ ಠಾಣೆ : ಶ್ರೀ ಸಾಜೀದ ಅಹ್ಮದ ತಂದೆ ಸೈಯದ ಅಹ್ಮದ ಸಾಃ ಮ. ನಂ. 11-970/2 ರಾಮಚಕ್ಕಿ ಹತ್ತಿರ ಎಮ್.ಎಸ್.ಕೆ ಮಿಲ್ ಜಿಲಾನಾಬಾದ ಗುಲಬರ್ಗಾ ರವರು ದಿನಾಂಕ 23-08-2014 ರಂದು ರಾತ್ರಿ 8-00 ಪಿ.ಎಮ್ ದಿಂದ ದಿನಾಂಕ 24-08-2014 ರ ಬೆಳಗಿನ ಜಾವ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಗಾಯಾಳು ಅರುಣಾ ನಡೆದುಕೊಂಡು ಮನೆಗೆ ಬರುತ್ತಿರುವಾಗ ಯಾವುದೋ ಒಂದು ವಾಹನ ಡಿಕ್ಕಿ ಪಡಿಸಿ ಹೋಗಿರುತ್ತದೆ. ಗಾಯಾಳು ತನ್ನ ಮನೆಯ ಮುಂದೆ ಮಲಗಿಕೊಂಡಿದನ್ನು ದಿನಾಂಕ 24-08-2014 ರಂದು ಬೆಳಗ್ಗೆ ಆಕೆಯ ಮಗನಾದ ಫರೀದ ಈತನು ನೋಡಿ  ಅಕ್ಕಪಕ್ಕದದವರ ಸಹಾಯದಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾನೆ. ಅಪಘಾತದಲ್ಲಿ ಗಾಯಾಳು ತಲೆಗೆ ಪೆಟ್ಟಾಗಿ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      
ಕಳವು ಪ್ರಕರಣಗಳು  :
ಚೌಕ ಠಾಣೆ : ಶ್ರೀ ದೇವಿಂದ್ರ ತಂದೆ ನಾಗಪ್ಪ ಪಾಟೀಲ ಸಾ ;ಆಳಂದ ಕಾಲೋನಿ ಗುಲಬರ್ಗಾ ರವರು ದಿನಾಂಕ; 25/08/2014 ರಂದು ಬೆಳ್ಳಿಗ್ಗೆ 9.30 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಮಕ್ಕಳು ದೇವಸ್ತಾನಕ್ಕೆ ಹುಣಸಗಿ ಗ್ರಾಮಕ್ಕೆ ಹೋಗಿದ್ದು ನಾನು ಸಹ  9.30 ಗಂಟೆಯ ಸುಮಾರಿಗೆ ಮನೆಗೆ ಕೀಲಿ ಹಾಕಿಕೊಂಡು ಕೆಲಸಕ್ಕೆ ಹೋಗ್ಗಿದ್ದು ಮರಳಿ ನನ್ನ ಹೆಂಡತಿ ಮಕ್ಕಳು ಮದ್ಯಾಹ್ನ 2.30 ಗಂಟೆಗೆ ಮನೆಗೆ ಬಂದು ನೋಡಿದಾಗ ನಮ್ಮ ಮನೆಗೆ ಹಾಕಿರುವ ಕೀಲಿಯನ್ನು ಮುರಿದು ಕೆಳಗಡೆ ಬಿದ್ದಿದ್ದು ನೋಡಿ ಗಾಬರಿಗೊಂಡು ನನಗೆ ಪೋನ ಮಾಡಿದ್ದರಿಂದ ನಾನು ಬಮದು ನೋಡಿದಾಗ ನಮ್ಮ ಮನೆಯ ಬಾಗಿಲಿಗೆ ಹಾಕಿರುವ ಕೊಂಡಿ ಮತ್ತು ಕೀಲಿ ಮುರಿದಿದ್ದು ಮನೆಯೊಳಗೆ ಹೋಗಿ ನಾವು ಪರೀಶೀಲಿಸಿ ನೋಡಿದಾಗ ನಮ್ಮ ಮನೆಯಲ್ಲಿರುವ ಅಲ್ಮಾರಿಯಲ್ಲಿರುವ ಬಂಗಾರದ ಬೆಳ್ಳಿಯ ಆಭರಣಗಳು ಒಟ್ಟು 3.35.750/- ಬೆಲೆ ಬಾಳುವ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಶರಣಪ್ಪಾ ತಂದೆ ಸಿದ್ರಾಮಪ್ಪಾ ಪಾಟೀಲ ಸಾಃ ಪ್ಲಾಟ ನಂ 29 ಸ್ವಸ್ತೀಕ ನಗರ ಬೀಲಗುಂಡಿ ಲೇಔಟ ಗುಲಬರ್ಗಾ ಇವರು ಮನೆಯ ಕಟ್ಟಡ ಕಟ್ಟುತ್ತಿದ್ದು, ಸದರ ಮನೆಯ ನೆಲ ಅಂತಸ್ತಿನಲ್ಲಿ ನಡುಭಾಗದಲ್ಲಿರುವ ಬೇಡ ರೂಮಿನಲ್ಲಿ ಪಿ.ಓ.ಪಿ ಮಾಡುವ ಗುತ್ತೆದಾರರಾದ 1. ಮಹ್ಮದ ಶಬ್ಬಿರ ಅಹ್ಮದ 2. ಶರಣಬಸಪ್ಪಾ ಔರಾದ ಇವರುಗಳಿಗೆ ಸೇರಿದ 1.ಒಂದು ಬಾಷಾ ಮಶೀನ 2. ಒಂದು ಹ್ಯಾಮರ ಮಶೀನ 3.  ಚೇನಲ್ ಮಶೀನ ಎರಡು ಜೋತೆ 4. ದಾಗರ ಚಂದ ಕಟಿಂಗ ಮಶೀನ 5. ಕಟಿಂಗ್ ಮಶೀನ್ ಅಃಕಿಃ 6. ಗ್ರಾಂಡರ್ ಹೈಟೆಕ್ ಪವರ್ ಅಲ್ಲದೇ ಮನೆ ಕೆಲಸಕ್ಕಾಗಿ ತಂದು ಇಡಲಾಗಿದ್ದ ನಳದ ತೊಟ್ಟಿ ಜೋಡಣೆಯ ಬಿಡಿಭಾಗಗಳು ಹಾಗು ವಿದ್ಯುತ್ ಛಕ್ತಿ ಸರಬರಾಜು ಬೋರ್ಡ ಹಾಗು ಇತರೆ ಸಾಮಾನುಗಳು ದಿನಾಂಕಃ 24/08/2014 ರಂದು ರಾತ್ರಿ 08:00 ಗಂಟೆಗೆ ಬೆಡ್ ರೂಮಿನಲ್ಲಿ ಇಟ್ಟು ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕಃ 25/08/2014 ರಂದು ಬೆಳಗ್ಗೆ 06:00 ಗಂಟೆಗೆ ಬಂದು ನೋಡಲಾಗಿ ಬೆಡ್ ರೂಮಿಗೆ ಹಾಕಿದ ಕೀಲಿ ಮುರಿದಿದ್ದು ಒಳಗಡೆ ಇದ್ದ ಮೇಲಿನ ಸಾಮಾನುಗಳು ಇರಲಿಲ್ಲಾ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರ4ಕರಣ ದಾಖಲಾಗಿದೆ.   
ಅಶೋಕ ನಗರ ಠಾಣೆ : ಶ್ರೀ ಶ್ರೀರಂಗ ವರದಪಾಂಡೆ ತಂದೆ ಅಶೋಕ ವರದಪಾಂಡೆ ವಿಳಾಸ: ನಂ;13 1-3-183/40/68/1 ಗಾಂಧಿನಗರ ಹೈದ್ರಾಬಾದ. ಸದ್ಯದ ವಾಸ: ಪ್ಲಾಟ ನಂ: 62 ಘಾಟಗೆ ಲೇಔಟ ಗುಲಬರ್ಗಾ ರವರು 4 ವರ್ಷಗಳಿಂದ ನಾನು ನನ್ನ ಕುಟುಂಬದವರೊಂದಿಗೆ ಬಸಣ್ಣ ಎಸ್. ಸಿಂಪಿ ಪ್ಲಾಟ ನಂ: 62 ಘಾಟಗೆ ಲೇಔಟ ಗುಲಬರ್ಗಾದಲ್ಲಿ ಮೋದಲ ಮಹಡಿಯಲ್ಲಿ ವಾಸವಾಗಿರುತ್ತೇವೆ.  ಕೆಳಗಡೆ ನೆಲ ಮಹಡಿಯ್ಲಲಿ ಮಾಲಿಕರು ವಾಸವಾಗಿರುತ್ತಾರೆ. ದಿನಾಂಕ: 21/08/2014 ರಂದು ರಾತ್ರಿ 8:00 ಗಂಟೆಗೆ ನಮ್ಮ ಮನೆಯ ಮಾಲಿಕರಾದ ಬಸಣ್ಣ ಸಿಂಪಿ ಮತ್ತು ಅವರ ಹೆಂಡತಿಯಾದ ಶ್ರೀಮತಿ ಶೈಲಜಾ ರವರೊಂದಿಗೆ ಬೆಂಗಳೂರಿಗೆ ಹೋಗಿ ಬರುತ್ತೇವೆ ಮನೆಯಲ್ಲಿ ಯಾರು ಇರಲ್ಲ ಮನೆ ಬೀಗ ಹಾಕಿದ್ದು ನೋಡಿಕೊಳ್ಳುವಂತೆ ತಿಳಿಸಿ ಹೋಗಿರುತ್ತಾರೆ. ನಂತರ ನಾನು ದಿನಾಂಕ 25/08/2014 ರಂದು  ಮುಂಜಾನೆ 7:00 ಗಂಟೆಗೆ ಕೆಳಗಡೆ ಬಂದಾಗ ಮನೆಯ ಮಾಲಿಕರ ಮನೆಯ ಬಾಗಿಲು ತೆರೆದಿದ್ದು ಕಂಡು ಬಂತು ಹತ್ತಿರ ಹೋಗಿ ನೋಡಲು ಮನೆಯ ಕಬ್ಬಿಣ ಗೇಟಬಾಗಿಲದ ಕೊಂಡಿ ಮುರಿದಿದ್ದು ಒಳಗಡೆ ಬಾಗಿಲ ಕಿಲಿ ಕೂಡಾ ಮುರಿದಿದ್ದು ಬೇಡ್ ರೂಂ ನಲ್ಲಿನ ಅಲಮಾರಿಯ  ಬಾಗಿಲು ತೆರೆದಿದ್ದು ಅದರಲ್ಲಿರುವ ಬಟ್ಟೆಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ನಂತರ ನಾನು ನನ್ನ ಮನೆಯ ಮಾಲಿಕರಾದ ಬಸಣ್ಣ.ಸಿಂಪಿ ಅವರಿಗೆ ಫೋನ ಮಾಡಿ ನಡೆದ ಘಟನೆ ಬಗ್ಗೆ ತಿಳಿಸಿದೆನು. ಆಗ ಮಾಲಿಕರು ನನಗೆ ತಿಳಿಸಿದ್ದು ಒಂದು ಕಪ್ಪು ಬಣ್ಣದ ಪರ್ಸಿನಲ್ಲಿ ನನ್ನ ವಿಳಾಸದ ಕಾಗದ ಪತ್ರಗಳೊಂದಿಗೆ 7 ಸಾವಿರ ರೂ.ಗಳು ನಗದು ಹಣ ಇದ್ದವು ಎಂದು ತಿಳಿಸಿದರು. ಯಾರೊ ಕಳ್ಳರು ನಮ್ಮ ಮಾಲಿಕರ ಮನೆಯ ಬೀಗ ಮುರಿದು ಮನೆ ಒಳಗೆ ಪ್ರವೇಶ ಮಾಡಿ ಅಲಮಾರಿ ಇತ್ಯಾದಿ ಚಲ್ಲಪಿಲ್ಲಿ ಮಾಡಿದ್ದು ನಗದು ಹಣ 7 ಸಾವಿರ ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

25 August 2014

Gulbarga District Reported Crimes

ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅಬ್ದುಲ ರಹೆಮಾನ ತಂದೆ ಅಲ್ಲಾಬಕ್ಷ ಶೇಖ ಸಾ :ಚಾಂದಬಡಾ ಶಹಾಬಾದ ರವರಿಗೆ ನಮ್ಮ ತಂದೆಯವರ ಕಾಲದಿಂದ  ಬೆಂಡಿ ಬಜಾರದಲ್ಲಿ  3 ಅಂಗಡಿಗಳ ಕೋಣೆಗಳಿದ್ದು,  ಒಂದು  ಕೋಣೆಯಲ್ಲಿ  ನಾನು ಸ್ವಂತ ಮೆಣಸಿಕಾಯಿ ಕುಟ್ಟುವ ಮಶೀನ ಹಾಕಿ ವ್ಯಾಪಾರ ಮಾಡಿಕೊಂಡು ಇರುತ್ತೇನೆ. ಇನ್ನುಳಿದ 2 ದುಕಾನಗಳು ಬಾಡಿಗೆಗೆ ಕೊಟ್ಟಿರುತ್ತೇವೆ.  ಆ ಅಂಗಡಿಗಳ ವಿಷಯದಲ್ಲಿ  ನನಗೂ  ಮತ್ತು ನನ್ನ ತಮ್ಮ ಅಬ್ದುಲ  ಜಬ್ಬಾರನಿಗೂ  ಸುಮಾರು  6 ತಿಂಗಳಿಂದ  ತಕರಾರು ಆಗಿ ಮನೆಯಲ್ಲಿ ನಮ್ಮ ತಂದೆಯವರು  ಅವನಿಗೂ ಕೂಡ ವ್ಯಾಪಾರಕ್ಕಾಗಿ 3 ಲಕ್ಷ ರೂಪಾಯಿ ಕೊಟ್ಟಿದ್ದರು,  ಸದರಿ ನನ್ನ ತಮ್ಮ ನನಗೆ ಮತ್ತು ನಮ್ಮ ತಂದೆಯವರಿಗೆ 3 ಲಕ್ಷ ಹಣ ಮತ್ತು ಎರಡು ಅಂಗಡಿಗಳು ನನಗೆ ಕೊಡು ಅಂತಾ ತಕರಾರು ಮಾಡುತ್ತಿದ್ದನು. ಇಲ್ಲದಿದ್ದರೆ, ಇನ್ನು 3 ಲಕ್ಷ ರೂಪಾಯಿ ಕೊಡು ಅಂತಾ ನನಗೆ ಮತ್ತು ನಮ್ಮ ತಂದೆತಾಯಿಯವರೊಂದಿಗೆ ಹಲವಾರು ಬಾರಿ ಜಗಳಮಾಡಿ  ತೊಂದರೆ ಮಾಡುತ್ತಾ ಬಂದಿದ್ದು ದಿನಾಂಕ: 22/08/2014 ರಂದು ಸಾಯಂಕಾಲ ನಾನು ಮನೆಯ ಮುಂದೆ ನಿಂತುಕೊಂಡಾಗ ನನ್ನ ತಮ್ಮ ಅಬ್ದುಲ ಜಬ್ಬರ ಇತನು ಬಂದು ನನಗೆ ಏ ಬೋಸಡಿ ಮಗನೆ ಇನ್ನೂ 3 ಲಕ್ಷ್ಮ ರೂಪಾಯಿ ಕೊಡುತ್ತಿ ಇಲ್ಲಾ ನಿನ್ನ ಜೀವ ತೆಗೆದು ಎಲ್ಲಾ ಅಂಗಡಿಗಳು ನಾನೇ ತೆಗೆದುಕೊಳ್ಳುತ್ತೇನೆ. ಅಂತಾ ಚಿರಾಡಿ ಹೋಗಿದ್ದು ದಿನಾಂಕ: 24/08/2014 ರಂದು ರಾತ್ರಿ 7-30 ಗಂಟೆಗೆ ನಾನು ಬೆಂಡಿ ಬಜಾರದಿಂದ ಅಂಗಡಿಯನ್ನು ಮುಚ್ಚಿಕೊಂಡು ಮನೆಗೆ ಬರುವಾಗ ಮನೆಯ ಹತ್ತಿರದ ರೋಡಿನಲ್ಲಿ   ಲೋಹರಗಲ್ಲಿ  ಕಡೆಯಿಂದ  ನನ್ನ ತಮ್ಮ ಅಬ್ದುಲ ಜಬ್ಬರ ಇತನು ತನ್ನ ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು  ಏ ರಾಂಡಕೆ ಅಂತಾ ಅವಾಚ್ಯ ಬೈದು  ನನಗೆ ತಡೆದು ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ನನ್ನ ಹೊಟ್ಟೆಗೆ ಚಾಕುವಿನಿಂದ ಹೊಡೆಯಲು ಬಂದಾಗ,  ನಾನು ತಪ್ಪಿಸಿಕೊಳ್ಳು  ಒಮ್ಮೇಲೆ ತಿರುಗಿದೆನು.   ಅದ್ದರಿಂದ ನನ್ನ ಬೆನ್ನಿಗೆ  ಚಾಕು ಹತ್ತಿ   ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಮಾಹಾಗಾಂವ ಠಾಣೆ : ಸಿದ್ರಾಮಪ್ಪಾ ಹುಡಗಿ ಈತನು ಸುಮಾರು 6-7 ವರ್ಷಗಳಿಂದ ವಿಪರಿತ ಕುಡಿತ ಚಟಕ್ಕೆ ಬಲಿಯಾಗಿ ಮಾನಸಿಕ ಅಸ್ವಸ್ಥದಿಂದ ಬಳಲುತ್ತಿದ್ದು   ನಿನ್ನೆ ದಿ: 23/08/14 ರಂದು ಸೆರೆ ಕುಡಿದ ನಶೆಯಲ್ಲಿ ರಕ್ತವಾಂತಿ ಮಾಡಿಕೊಂಡಿದ್ದ ರಿಂದ ಮನಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜೀಗುಪ್ಸೆಗೊಂಡು ಇಂದು ದಿನಾಂಕ:24/08/2014 ರಂದು ಬೆಳಿಗ್ಗೆ 7-30 ಗಂಟೆಯಿಂದ 10-00 ಗಂಟೆ ಮಧ್ಯದ ಅವಧಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ಶ್ರೀಮತಿ ಮಾಲಾಶ್ರೀ ಗಂಡ ಸಿದ್ರಾಮಪ್ಪಾ ಹುಡಗಿ ಸಾ: ಹೊಳಕುಂದಾ ತಾ:ಜಿ:ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀಮತಿ ಮಾನಂದಾ ಗಂಡ ಶಿವುಪುತ್ರ ಹೊಸಗೌಡ ಸಾ: ಗುಂಡಗುರ್ತಿ ಇವರ ಗಂಡನಾದ ಶಿವಪುತ್ರ ಈತನು ಟೇಲರ ಕೆಲಸ ಮಾಡಿಕೊಂಡಿದ್ದು ಇಂದು ಬೆಳ್ಳಿಗಿನ ಜಾವ 4-45 ಸುಮಾರಿಗೆ ನನ್ನ ಗಂಡ ಈತನು ರೊಡಿನ ಕಡೆಗೆ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಹೋದರು ನಂತರ 5-20 ಎ.ಎಮ್ ಕ್ಕೆ ನಮ್ಮ ಗ್ರಾಮದ ಮಲ್ಲಿಕಾರ್ಜುನ ಈತನು ನಮ್ಮ ಮನೆಗೆ ಬಂದು ತಿಳಿಸಿದೆನೆಂದರೆ ತಾನು ಹಾಗೂ ನಿಮ್ಮ ಗಂಡ ಶಿವುಪುತ್ರ ಇಬ್ಬರು ಕೂಡಿ ಸಂಡಾಸ ಕುಳಿತು ಮರಳಿ ಮನೆಗೆ ಬರಬೇಕು ಅಂತಾ ಮಲ್ಲಿಕಾರ್ಜುನ ಖರ್ಗೆ ರವರ ಮನೆ ಹತ್ತಿರ ರೊಡಿನ ಪಕ್ಕದಿಂದ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಂದು ಸಿಲ್ವರ ಬಣ್ಣದ ವಾಹನ ನಂ ಕೆಎ-32 ಎಮ್-9284 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ರೊಡಿನ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ನಿನ್ನ ಗಂಡನಿಗೆ ಡಿಕ್ಕಿ ಪಡಿಸಿದ ಪರಿಣಾಮ ನಿನ್ನ ಗಂಡನ ಟೊಂಕಿಗೆ ಭಾರಿ ರಕ್ತಗಾಯ ತೆಲೆಗೆ ರಕ್ತಗಾಯ ಬಲಗೈಗೆ ಭಾರಿ ರಕ್ತಗಾಯವಾಗಿ ಎರಡು ಮೂಳಕಾಲಗಳು ಕಿತ್ತಿರುತ್ತವೆ. ಸದರಿ ವಾಹನ ಚಾಲಕನು ತನ್ನ ವಾಹನ ನಿಲ್ಲಿಸಿದಂತೆ ಮಾಡಿದಾಗ ನಾನು ನಂಬರ ನೋಡಿದ್ದು ಆಗ ಸದರಿ ವಾಹನ ಚಾಲಕ ತನ್ನ ವಾಹನ ಸಮೇತ ಓಡಿ ಹೋಗಿದ್ದು ನಿನ್ನ ಗಂಡ ಸ್ಥಳದಲ್ಲಿಯೇ ಬಿದ್ದಿರುತ್ತಾನೆ ಅಂತಾ ತಿಳಿಸಿದನು. ಆಗ ನಾನು ಹಾಗೂ ನಮ್ಮ ಮೈದುನನಾದ ಜಗನ್ನಾಥ ಹಾಗೂ ಅಣ್ಣಾರಾವ ಕೂಡಿ ಸ್ಥಳಕ್ಕೆ ಬಂದು ನನ್ನ ಗಂಡನಿಗೆ ನೋಡಲಾಗಿ ಭಾರಿ ರಕ್ತಗಾಯ & ತೆಲೆಗೆ ರಕ್ತಗಾಯ , ಬಲಗೈಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಬಿದ್ದಿದ್ದು ನಂತರ ನನ್ನ ಗಂಡನಿಗೆ ಅಂಬುಲೈನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ತಂದು ಸೇರಿಕೆ ಮಾಡಿದ್ದು ನನ್ನ ಗಂಡ ಉಪಚಾರ ಫಲಕಾರಿ ಆಗದೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಳಗಿ ಠಾಣೆ : ಶ್ರೀಮತಿ ಮಾಹಾದೇವಿ ಗಂಡ  ಬಸವರಾಜ ಜೋತೆಪನೋವರ್ @ ಚಂದಾಪ್ಪನೋವರ್ ಸಾ:ಮುಕರಂಬಾ ಇವರು ದಿನಾಂಕ 24/08/2014 ರಂದು ಮುಂಜಾನೆ 6-00 ಗಂಟೆಯ ಸುಮಾರಿಗೆ ನನ್ನ ಗಂಡ ಮತ್ತು ಇನ್ನು 3-4 ಜನರು ಕೂಡಿ ಪ್ರತಿ ವರ್ಷದಂತೆ ಶ್ರೀ ರೇವಣಸಿದ್ದೇಶ್ವರ ದೇವರ ದರ್ಶನಕ್ಕೆಂದು ಕ್ರೂಸರ್ ವಾಹನ ನಂಬರ ಕೆಎ-28 ಎಮ್-4361 ನೇದ್ದರಲ್ಲಿ ಹೋಗುತ್ತಿರುವಾಗ ಚಾಲಕನು ಅತೀ ವೇಗ ಹಾಗೂ ನಿಲಕ್ಷ್ಯತನದಿಂದ ವಾಹನ ಓಡಿಸಿ ಬೇಡಸೂರ ದಾಟಿ ಭೀಮಾಶಂಕರ ಕುಲಕರ್ಣಿ ಇವರ ಹೊಲದ ಹತ್ತಿರ ಅಪಘಾತ ಪಡಿಸಿದ್ದರಿಂದ ಅದರಲ್ಲಿ ಕುಳಿತ ಬಸವರಾಜ ಜೋತೆಪನೋರ ಭಾರಿ ಗಾಯ ಹೊಂದಿದ್ದು ಹಾಗೂ ಇನ್ನು 3 ಜನರಿಗೆ ರಕ್ತಗಾಯಗಳಾಗಿ 108 ವಾಹನನದಲ್ಲಿ ಉಪಚಾರಕ್ಕಾಗಿ ತೆಗೆದುಕೊಂಡು ಹೋಗಿದ್ದು ನನ್ನ ಗಂಡನಿಗೆ ಖಾಸಗಿ ಜೀಪಿನಲ್ಲಿ ಗುಲಬರ್ಗಾಕ್ಕೆ ಉಪಚಾರಕ್ಕೆಂದು ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾನೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 August 2014

Gulbarga District Reported Crimes

ಹುಡುಗ ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಅಂಬಾರಾಯ ತಂದೆ ಚಂದ್ರಶಾ ಪೂಜಾರಿ ಸಾಃ ಕೋತನ ಹಿಪ್ಪರಗಾ ತಾಃ ಆಳಂದ ಜಿಲ್ಲಾಃ ಗುಲಬರ್ಗಾ ರವರ  ಹಿರಿಯ ಮಗ ಚಂದ್ರಕಾಂತ ಇವರಿಗೆ ಗುಲಬರ್ಗಾದ ಧರಂಸಿಂಗ ಕನ್ನಡ ಪ್ರಾಥಮಿಕ ಶಾಲೆ ಅಂಬಿಕಾ ನಗರ ಗುಲಬರ್ಗಾದಲ್ಲಿ ಶಾಲೆ ಕಲಿಯಲು ಸೇರಿಕೆ ಮಾಡಿದ್ದು, ಈಗ 6 ನೇ ತರಗತಿಯಲ್ಲಿ ಓದುತ್ತಿದ್ದಾನೆ ಮತ್ತು ಕರುಣೇಶ್ವರ ನಗರದಲ್ಲಿರುವ ಬಿ.ಸಿ.ಎಮ್ ಹಾಸ್ಟಲದಲ್ಲಿ ಇರುತ್ತಾನೆ. ಹೀಗಿರುವಾಗ ದಿನಾಂಕ 19/08/2014 ರಂದು ಸಾಯಂಕಾಲ 06:00 ಪಿ.ಎಮ್ ಸುಮಾರಿಗೆ ಧರಂಸಿಂಗ ಶಾಲೆಯ ಶಾಂತಯ್ಯಮಠ ಮುಖ್ಯೋಪಾಧ್ಯಾಯರು ಇವರು ಫೋನ್ ಮೂಲಕ ತಿಳಿಸಿದ್ದೆನೆಂದರೆ, ನನ್ನ ಮಗ ದಿನಾಂಕ 19/08/2014 ರಂದು 01:15 ಪಿ.ಎಮ್ ಸುಮಾರಿಗೆ ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಹೋದವನು ಮರಳಿ ಶಾಲೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ ಅಂತಾ ತಿಳಿಸಿದ್ದ, ನಾನು ಮತ್ತು ನಮ್ಮ ಮಾವ ಈರಪ್ಪಾ ಪೂಜಾರಿ ಕೂಡಿ ಶಾಲೆಗೆ ಬಂದು ಶಾಂತಯ್ಯಮಠ ಇವರಿಗೆ ವಿಚಾರಿಸಿ ಗುಲಬರ್ಗಾ ನಗರದಲ್ಲಿ ಎಲ್ಲಾ ಕಡೆ ತಿರುಗಾಡಿ ವಿಚಾರಿಸಿದರು ಕೂಡಾ ಸಿಕ್ಕಿರುವುದಿಲ್ಲಾ ನನ್ನ ಮಗ ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀಮತಿ ಮರಲಿಂಗಮ್ಮ ಗಂಡ ನಾಗಪ್ಪ ಹೊನ್ನಪ್ಪನೋರ,ಸಾ: ಕಲಕಂಬಾ ಗ್ರಾಮ, ಇವರ ಗಂಡ ನಾಗಪ್ಪ ಇವರು ದಿನಾಂಕ 23-08-2014 ರಂದು ಬೆಳಿಗ್ಗೆ ಮನೆಯಿಂದ ಕ್ರುಜರ ಜೀಪ ನಡೆಸಲು ಅಂತಾ ಹೇಳಿ ಹೋಗಿ ರಾತ್ರಿಯಾದರೂ ನನ್ನ ಗಂಡ ಮನೆಗೆ ವಾಪಸ್ಸು ಬಂದಿರಲಿಲ್ಲ. ರಾತ್ರಿ 11 ಗಂಟೆಯ ಸುಮಾರಿಗೆ ಸೇಡಂ ದಿಂದ ಸವೇರಾ ಹೊಟೆಲ ಮಾಲಿಕ ಯುನುಸ್ ಇವರು ಪೋನ ಮಾಡಿ ನನಗೆ ತಿಳಿಸಿದ್ದೆನಂದರೆ, ದಿನಾಂಕ 23-08-2014 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ನಿನ್ನ ಗಂಡ ನಾಗಪ್ಪ ಈತನು ನಮ್ಮ ಕ್ರುಜರ್ ಜೀಪ ಗುಲ್ಬರ್ಗಾ ದಿಂದ ಪ್ಯಾಸೆಂಜರ್ ಹಾಕಿಕೊಂಡು ಬಂದು ಸೇಡಂ ನ ಬಸವೇಶ್ವರ ಹೊಟೆಲ ಮುಂದುಗಡೆ ಇರುವ ಟ್ಯಾಕ್ಸಿ ಸ್ಟ್ಯಾಂಡ ಹತ್ತಿರ ನಿಲ್ಲಿಸಿ ನಡೆದುಕೊಂಡು ಸೇಡಂ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದಾಗ ಗುಲ್ಬರ್ಗಾ ಕಡೆಯಿಂದ ಒಂದು ಕ್ರುಜರ್ ಜೀಪ ನಂಬರ ಕೆಎ-32,ಬಿ-6552 ನೇದ್ದರ ಚಾಲಕ ಪ್ರಶಾಂತ ಇತನು ತನ್ನ ಕ್ರುಜರ್ ಜೀಪನ್ನು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ನಾಗಪ್ಪ ಇತನಿಗೆ ಸೇಡಂನ ಐ ಬಿ. ಎದುರುಗಡೆ ಮುಖ್ಯರಸ್ತೆಯ ಮೇಲೆ ಕ್ರುಜರ್ ಡಿಕ್ಕಿ ಪಡಿಸಿದ್ದರಿಂದ ನಾಗಪ್ಪ ಇತನು ಕೆಳಗೆ ಬಿದ್ದನು ಆಗ ನಾನು ಮತ್ತು  ಸಂಜು ನಾಮದಾರ, ಕಾಲಜ್ಞಾನಮೂರ್ತಿ ಮತ್ತು ಶರಣಯ್ಯ ಗಣಾಚಾರಿ ಸಾ:ಸೇಡಂ ಎಲ್ಲರೂ ಅಫಘಾತವನ್ನು ನೋಡಿ ಹತ್ತಿರ ಹೋಗಿ ನೋಡಲಾಗಿ ನಾಗಪ್ಪ ಇತನಿಗೆ ಅಫಘಾತದಲ್ಲಿ ಎಡಗೈ ಮೊಳಕೈಗೆ ರಕ್ತಗಾಯ, ಎಡಗೈ ಭುಜಕ್ಕೆ ಗುಪ್ತಗಾಯ ಹಾಗು ತರಚಿದ ಗಾಯವಾಗಿದ್ದು  ಎಡಗಡೆ ಎದೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತಸ್ರಾವ ವಾಗಿದ್ದು ನಾವು ನಾಗಪ್ಪ ಇತನಿಗೆ ಸೇಡಂ ಸರಕಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡುವಷ್ಟರಲ್ಲಿ ವೈಧ್ಯರು ಪರೀಕ್ಷಿಸಿ ನಾಗಪ್ಪ ಇತನು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದು . ಕ್ರುಜರ ಚಾಲಕ ನಾಗಪ್ಪ ಇವರಿಗೆ ಅಫಘಾತ ಪಡಿಸಿದ ನಂತರ ಕ್ರುಜರ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನೀವು ಸೇಡಂ ಸರಕಾರಿ ಆಸ್ಪತ್ರೆಗೆ ಬರ್ರಿ” ಅಂತಾ ತಿಳಸಿದ್ದರಿಂದ ನಾನು ಮತ್ತು ನಮ್ಮ ಅತ್ತೆಯಾದ ರತ್ನಮ್ಮ ಗಂಡ ಸಾಬಣ್ಣ ಹೊನ್ನಪ್ಪನೋರ ಇಬ್ಬರು ಕೂಡಿ ಸೇಡಂ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಗಂಡ ನಾಗಪ್ಪ ಇವರು ಅಫಘಾತದಲ್ಲಿ ಗಾಯ ಹೊಂದಿ ಮೃತ ಪಟ್ಟಿದ್ದು ನಿಜಇರುತ್ತದೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 22-08-2014 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಶ್ರೀ ತಾರಾಸಿಂಗ @ ಮೋಹನ ತಂದೆ ಶಂಕರ ಚವ್ಹಾಣ ಸಾ: ಪ್ಲಾಟ ನಂ 52 ಸಾಹಿ ಮಂದಿರ ಹಿಂದುಗಡೆ ಭಾಗ್ಯಲಕ್ಷ್ಮಿ ನಗರ  ಗುಲಬರ್ಗಾ  ರವರು ತನ್ನ ಮೋ/ಸೈಕಲ್ ನಂ; ಕೆಎ 32 ಜೆ 2563 ನೆದ್ದರ ಮೇಲೆ ಸತೀಶ ಈತನಿಗೆ ಹಿಂದೆ ಕೂಡಿಸಿಕೊಂಡು ಸಿ.ಟಿ ಬಸ್ ನಿಲ್ದಾಣ ದಿಂದ ಜಗತ ಸರ್ಕಲ್ ಕಡೆಗೆ ಹೋಗುತ್ತಿರುವಾಗ ದಾರಿ ಮಧ್ಯದ ಮೈಕ್ರೋಟವಾರ ಹತ್ತಿರ ರೋಡಿನ ಮೇಲೆ ಮೋ/ಸೈಕಲ್ ನಂ; ಕೆಎ 34 ವಿ 9537 ರ ಸವಾರನು ತನ್ನ ಮೋ/ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೆ.ಎಸ್.ಆರ್.ಟಿ.ಸಿ ಬಸ್ ಗೆ ಓವರ ಟೇಕ ಮಾಡಲು ಹೋಗಿ ಫಿರ್ಯಾದಿ ಮೋ/ಸೈಕಲ್ ಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ನನ್ನ ಬಲಗಾಲ ಮೊಳಕಾಲ ಕೆಳಗೆ ರಕ್ತ ಗಾಯ , ಬಲಗಾಲ ರಿಸ್ಟ ಹತ್ತಿರ ಭಾರಿ ರಕ್ತಗಾಯ ಹಾಗು ಎಡ ತಲೆಗೆ ರಕ್ತಗಾಯವಾಗಿರುತ್ತದೆ. ಸತೀಶ ಇತನಿಗೆ ಯಾವುದೆ ಗಾಯಗಳು ಆಗಿರುವದಿಲ್ಲಾ .ಫಿರ್ಯಾದಿಗೆ ಗಾಯಗೊಳಿಸಿ ಮೋ/ಸೈಕಲ್ ಅಲ್ಲಿಯೇ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶರಣು ಕುಮಾರ ತಂದೆ ಭೀಮಣ್ಣಾ ಇವರು ದಿನಾಂಕಃ 22/08/2014 ರಂದು ರಾತ್ರಿ 08:30 ಪಿ.ಎಂ. ನನ್ನ ಡಿ.ಎಲ್ ಕಮ್ಯೂನಿಕೇಷನ್ ಮೊಬೈಲ್ ಅಂಗಡಿಗೆ ಎಂದಿನಂತೆ ಕೀಲಿ ಹಾಕೊಮಡು ಮನೆಗೆ ಹೋಗಿದ್ದು ಬೆಳಗ್ಗೆ ದಿನಾಂಕಃ 23/08/2014 ರಂದು 06:00 ಎ.ಎಂ. ಸುಮಾರಿಗೆ ನಮ್ಮ ಅಂಗಡಿಯ ಪಕ್ಕದಲ್ಲಿದ್ದ ಆಕಾಶ ಕ್ಷೌರ ಅಂಗಡಿಯ ಮಾಲಿಕರಾದ ಶ್ರೀಮಂತ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮೊಬೈಲ್ ಅಂಗಡಿಯ ಬಾಗಿಲು ತೆರೆದಿದೆ ಕಳ್ಳತನವಾಗಿರಬಹುದು ಅಂತಾ ತಿಳಿಸಿದ ಕೂಡಲೆ ನಾನು ಮೊಬೈಲ್ ಅಂಗಡಿಗೆ ಬಂದು ನೋಡಲಾಗಿ ಅಂಗಡಿಗೆ ಹಾಕಿದ ಕೀಲಿ ಮುರಿದಿದ್ದು ಅಂಗಡಿಯ ಬಾಗಿಲು ತೆರೆದಿದ್ದು ಒಳಗಡೆ ಹೋಗಿ ನೋಡಲಾಗಿ ಅಂಗಡಿಯಲ್ಲಿದ್ದ ಮೊಬೈಲಗಳು ಮತ್ತು ಮೋಡಮ ಹಾಗು ನಗದು ಹಣ ಹೀಗೆ ಒಟ್ಟು 22,500/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.