POLICE BHAVAN KALABURAGI

POLICE BHAVAN KALABURAGI

23 June 2014

Gulbarga District Reported Crimes

ಅಪಘಾತ ಪ್ರಕರಣಗಳು :
ಕಾಳಗಿ ಠಾಣೆ : ಶ್ರೀ ಮಾರುತಿ ತಂದೆ ಸಾಬಣ್ಣಾ ಬೇವಿನಗಿಡ   ಸಾ: ಮಳಗ(ಕೆ) ಇವರು ದಿನಾಂಕ 22-06-2014 ರಂದು ನನ್ನ ವ್ಯಯಕ್ತಿಕ ಕೆಲಸಕ್ಕಾಗಿ ಮೋಟರ ಸೈಕಲ ನಂ ಕೆಎ-32, 7228-ನೇದ್ದರ ಮೇಲೆ ಕಾಳಗಿ ಗ್ರಾಮಕ್ಕೆ ಹೋಗಿ ಮರಳಿ ರಾಜಾಪೂರ ಗ್ರಾಮ ಮಾರ್ಗವಾಗಿ ಮಳಗಿ (ಕೆ) ಗ್ರಾಮಕ್ಕೆ ಹೋರಟಾಗ ಸಾಯಂಕಾಲ 5-30 ಗಂಟೆಯ ಸುಮಾರಿಗೆ ಎದುರಿನಿಂದ ಲೊಕೇಶ ತಂದೆ ಶರಣಯ್ಯ ಜೀವಣಗಿ ಸಾ:: ರಾಜಾಫೂರ ಇತನು ಮೋಟರ ಸೈಕಲ ನಂ ಕೆಎ-32 ಎಕ್ಸ್ 0316 ನೇದ್ದರ ಮೇಲೆ ಅತೀವೇಗ ಮತ್ತು ನೀಷ್ಕಾಳಜೀತನದಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆದು ನನ್ನ ಬಲಗಾಲಿಗೆ ಒಳಪೇಟ್ಟು ಮಾಡಿ ನಂತರ ಲೊಕೇಶನು ತನ್ನ ಅಣ್ಣನಾದ ವಿರೇಶನೋಂದಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಜೀವ ಬೇದರಿಕೆ ಹಾಕಿ ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಗಾಯಾಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಯ್ಯದ ಹಬಿಬೂರ ರಹಿಮಾನ ತಂದೆ ಸಯ್ಯದ ರುಕ್ನೋದ್ದಿನ ಸಾ:ರಹಿಮತ ನಗರ ಹಳೆ ಜೇವರ್ಗಿ ರೋಡ ಗುಲಬರ್ಗಾ  ರವರು ದಿನಾಂಕ: 21-06-2014  ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಅಬ್ದುಲ್ ರವುಫ ಈತನು  ಫಿರ್ಯಾದಿಯ ಮೋ/ಸೈಕಲ್ ನಂ; ಕೆಎ 32 ಇಇ 3081 ನೆದ್ದರ ಮೇಲೆ ಫಿರ್ಯಾದಿಗೆ  ಹಿಂದೆ ಕೂಡಿಸಿಕೊಂಡು ಅಬ್ದುಲ್ ರವುಫ ಸದರ  ಮೋ/ಸೈಕಲ್  ರೈಲ್ವೆ ಸ್ಟೇಶನ ದಿಂದ  ಎಸ್.ವಿ.ಪಿ.ಸರ್ಕಲ್ ಮುಖಾಂತರ ಮಿನಿ ವಿಧಾನ ಸೌದ ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕನ್ನಡ ಭವನ ಎದುರು ರೋಡ ಮೇಲೆ ಮೊ/ಸೈಕಲ್ ನಂ; ಕೆಎ 01ಹೆಚ್.ಎ 0780 ನೆದ್ದರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು ಹೋಗುತ್ತಿದ್ದ ಮೋ/ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗು ಮತ್ತು ಅಬ್ದುಲ ರವುಫನಿಗೆ ಗಾಯಗೊಳಿಸಿ ತನ್ನ ಮೋ/ಸೈಕಲ್ ಸ್ಥಳದಲ್ಲೇ ಬಿಟ್ಟು ಸವಾರನು ಓಡಿ ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 22-06-2014 ರಂದು ಬೆಳಗ್ಗೆ ಶ್ರೀ ಮಲ್ಲಪ್ಪ ತಂದೆ ಹಣಮಂತ ಜಮಾದಾರ ಸಾ : ಮಣ್ಣುರ ಹಾಗು ಸಾಯಬಣ್ಣ ಚಿಕ್ಕಮಣೂರ, ಬಾಷಾ ಬಡಗೇರ, ಶಾಹುರಸಿದ್ದ ರವರು ಕುಡಿಕೊಂಡು ರಮೇಶ ಬಾಕೆ ಇವರ ಸಫಾರಿ ವಾಹಣದಲ್ಲಿ ಮಣ್ಣುರ ಗ್ರಾಮದಿಂದ ಅಫಜಲಪೂರಕ್ಕೆ ಹೊರಟಿದ್ದು ಬೆಳಗ್ಗೆ 10-30 ಗಂಟೆ ಸುಮಾರಿಗೆ ಕರಜಗಿ ಗ್ರಾಮದ ಸಮೀಪ ಮನೋಹರ ರಾಮನಗರ ಇವರ ಇಟ್ಟಂಗಿ ಭಟ್ಟಿ ಹತ್ತಿರ ವಾಹನ ನಿಲ್ಲಿಸಿ ಇಟ್ಟಂಗಿ ನೋಡುತ್ತಿರುವಾಗ ಅದೆ ಸಮಯಕ್ಕೆ ಬಸವರಾಜ ತಂದೆ ಮಾಹಾದೇವಪ್ಪಾ ಕರೂಟಿ  ಇವರು ತಮ್ಮ ಬೋಲೆರೊ ವಾಹನವನ್ನು ತಗೆದುಕೊಂಡು ನಮ್ಮ ಎದುರಿಗೆ ಬಂದು ನಮ್ಮ ವಾಹನಕ್ಕೆ ಅಡ್ಡಲಾಗಿ ನಿಲ್ಲಿಸಿ ತಮ್ಮ ವಾಹನದಿಂದ ಇಳಿದು ಬಂದು ನನ್ನನ್ನು ನೋಡಿ ಅವಾಚ್ಯ ಶಬ್ದಗಳಿಂದ ಬೈದು ಬಸವರಾಜ ಅಳ್ಳಗಿ ಇವನಿಗೆ ಪಂಚಾಯತಿಯಲ್ಲಿ ಬೈದಿ ಅಂತಾ ನ್ನ ಜೋತೆಗೆ ಜಗಳ ತೆಗೆದು ಅಲ್ಲಿಯೆ ಬಿದ್ದ ಬಡಿಗೆಯಿಂದ ನನಗೆ ಹೊಡೆಯತೊಡಗಿದನು ಬಸವರಾಜ ಜೋತೆಯಲ್ಲಿ ಬಂದಿದ್ದ ಬಸವರಾಜ ತಂದೆ ಗೌಡಪ್ಪ ಅಳ್ಳಗಿ, ಮಾಹಾಂತೇಶ ತಂದೆ ಚಂದಪ್ಪ ವಾಯಿ ಶಿವಪ್ಪ ತಂದೆ ಮಾಹಾದೇವಪ್ಪ ಕರೂಟಿ, ಹಣಮಂತ ತಂದೆ ಬನ್ನಪ್ಪ ಕರೂಟಿ, ಶಾಮ ತಂದೆ ಕಲ್ಲಪ್ಪ ಹಿರೋಳಿ ಇವರುಗಳು ನನ್ನನ್ನು ಮುಂದೆ ಹೋಗದಂತೆ ತಡೆದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಧರ್ಮರಾಜ ತಂದೆ ಭಗವಾನ ಜಾಧವ ಸಾ: ಭಗವಾನ ತಾಂಡಾ ವರನಾಳ ತಾ:ಜಿ:ಗುಲಬರ್ಗಾ ಇವರು  ದಿನಾಂಕ:21/06/2014ರಂದು ರಾತ್ರಿ 7-30 ಗಂಟೆಗೆ ನನ್ನ ಕ್ರೋಜರ ಜೀಪನ್ನು ತೆಗೆದುಕೊಂಡು ನಮ್ಮ ತಾಂಡಾಕ್ಕೆ ಬಂದು ಸರ್ಕಾರಿ ಶಾಲೆಯ ಮುಂದೆ ರಸ್ತೆಯಲ್ಲಿ ನನ್ನ ಕ್ರೋಜರ ಜೀಪನ್ನು ಸೈಡಿಗೆ ಹಚ್ಚಿ ಮನೆ ಕಡೆಗೆ ಹೋಗುತ್ತಿದ್ದಾಗ ನಮ್ಮ ಸಂಬಂಧಿಕರಾದ ಮೋಹನ ತಂದೆ ಕಿಶನ ಜಾಧವ ಮತ್ತು ನಾರಾಯಣ ತಂದೆ ಕಿಶನ ಜಾಧವ ಇವರು  ಬಂದು ನಮ್ಮ ತಾಂಡಾದ ವಸಂತ ಜಾಧವ ಇವರಿಗೆ ಮೈಯಲ್ಲಿ ಆರಾಮ ಇರುವುದಿಲ್ಲಾ ಅವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದೆ. ನಿನ್ನ ಕ್ರೋಜರ ಜೀಪನ್ನು ಕೊಡು ಅಂತಾ ಕೇಳಿದ್ದು. ಅದಕ್ಕೆ ನಾನು ಜೀಪನ್ನು ಕೊಡುವುದಿಲ್ಲಾ  ನಾನೆ ಬರುತ್ತೇನೆ. ನಡೆಯಿರಿ ಅಂತಾ ಅಂದಿದಕ್ಕೆ ಏ ರಂಡಿ ಮಗನೇ ಧರ್ಮ್ಯಾನೀನು ಒಬ್ಬನೇ ನಮ್ಮ ತಾಂಡಾದಲ್ಲಿ ಕ್ರೋಜರ ಜೀಪ ಇಟ್ಟಿದ್ದಿಯಾ ಅಂತಾ ನಿನಗೆ ಸೊಕ್ಕ ಬಂದಿದೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಾನು, ಜೀಪ ಕೊಡುವುದಿಲ್ಲಾ ಅಂತಾ ಮನೆ ಕಡೆಗೆ ಹೋಗುತ್ತಿದ್ದಾಗ ವಸಂತ ಈತನು ನನಗೆ ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದು ನಿಲ್ಲಿಸಿದಾಗ ನಾರಾಯಣ ಈತನು ಬಡಿಗೆಯಿಂದ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಾನು ಚೀರಾಡುತ್ತಿರುವಾಗ ಮೋಹನ ಜಾಧವ ಈತನು ನನಗೆ ಮೇಲಕ್ಕೆ ಎತ್ತಿ ಬಗೆದಿದ್ದರಿಂದ ಸೊಂಟಕ್ಕೆಗುಪ್ತಗಾಯವಾಯಿತು. ಅಲ್ಲಿಯೇ ಮನೆಯ ಮುಂದೆ ಕುಳಿತಿದ್ದ ನನ್ನ ತಂದೆ ಭಗವಾನ ಜಾಧವ ಮತ್ತು ನನ್ನ ಹೆಂಡತಿ ಶಾರದಾಬಾಯಿ ಇವರು ಜಗಳ ಬಿಡಿಸಲು ಬಂದಾಗ ನಾರಾಯಣ ಈತನು ಏ ರಂಡಿ ಮಕ್ಕಳೇ ನೀವು ಜಗಳ ಬಿಡಿಸಲು ಬರುತ್ತಿರಿ ನಮಗೆ ಎದುರು ಹಾಕಿಕೊಂಡುವರು ಯಾರೂ ಉಳಿದಿಲ್ಲಾ ಜೀವದ ಮೇಲೆ ಆಶೆ ಇದ್ದರೆ ನಾವು ಹೇಳಿದಂತೆ ಕೇಳ ಬೇಕು ಅಂತಾ ಜೀವದ ಭಯ ಹಾಕಿ ಹೊಡೆಬಡೆ ಮಾಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 June 2014

Gulbarga District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಅಂಬಿಕಾ ಗಂಡ ನಾಗಪ್ಪಾ  ಜಮಾದಾರ ಸಾ : ಲಿಂಬಿತೋಟ ಅಫಜಲಪೂರ ರವರ  ಗಂಡನಾದ ನಾಗಪ್ಪಾ ಇವರು ದಿನಾಂಕ 20-06-2014 ರಂದು 5:00 ಗಂಟೆಯ ಸುಮಾರಿಗೆ ನನ್ನ ಗಂಡ ಯಾರದೋ ಮೋಟರ ಸೈಕಲ್ ತೆಗೆದುಕೊಂಡು ಬಂದು ಅವಸರದಲ್ಲಿ ಬಟ್ಟೆ ಬದಲಾಯಿಸಿಕೊಳ್ಳುತ್ತಿದ್ದರು, ಆಗ ನಾನು ಯಾಕೆ ಇಷ್ಟು ಅವಸರ ಮಾಡುತ್ತಿದ್ದಿರಿ ಏನಾಯಿತು ಅಂತಾ ಕೇಳಿದಾಗ ಕೇಶಾಪೂರದಿಂದ ನನ್ನ ಗೆಳೆಯ ಕಮಲಾಕರ ಎನ್ನುವವರು ಬಾ ಅಂತಾ ಫೋನ್ ಮಾಡಿದ್ದಾನೆ ಕೆಲಸ ಇದೆ ಅದಕ್ಕೆ ಹೋಗುತ್ತಿದ್ದೇನೆ ಅಂತಾ ಹೇಳಿ ಸದರಿ ಮೋಟರ ಸೈಕಲ್ ತೆಗೆದುಕೊಂಡು ಹೋದರು, ನಂತರ 9;30 ಪಿ.ಎಂ ಸುಮಾರಿಗೆ ನನ್ನ ಗಂಡನ ಸೋದರ ಮಾವ ವಿಠ್ಠಲ ತಂದೆ ಸಿದ್ರಾಮ ಇಂಗಳಗಿ ರವರು ನಮ್ಮ ಮನೆಗೆ ಫೋನ್ ಮಾಡಿ ಕೇಶಾಪೂರದಲ್ಲಿ ಯಾರೋ ನಾಗಪ್ಪನನ್ನು ಕೊಲೆ ಮಾಡಿರುತ್ತಾರೆ ಅಂತಾ ಹೇಳಿದರು. ಆಗ ನಾವೆಲ್ಲರು ಗಾಬರಿಯಾಗಿ ನಾನು ಮತ್ತು ನಮ್ಮ ಅತ್ತೆ-ಮಾವ ಹಾಗು ವಿಠ್ಠಲ ಇಂಗಳಗಿ ಮತ್ತು ಇನ್ನಿತರರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಕೇಶಾಪೂರ ಗ್ರಾಮಕ್ಕೆ ಹೋಗಿ ನೋಡಲಾಗಿ ನನ್ನ ಗಂಡನ ಶವ ಬಿದ್ದಿತ್ತು. ನನ್ನ ಗಂಡನ ಶವ ನೋಡಲು ನನ್ನ ಗಂಡ ಕೆಳಗಡೆ ಮುಖ ಮಾಡಿ ಬಿದ್ದುದ್ದು, ತಲೆಯ ಮೇಲೆ ಭಾರಿ ರಕ್ತಗಾಯ ವಾಗಿ ರಕ್ತ ಸೋರಿದ್ದು ಇತ್ತು. ಸದರಿ ನನ್ನ ಗಂಡನ ಶವ ಕಮಲಾಕರ ಕುಂಬಾರ ರವರ ಮನೆಯ ಮುಂದೆ ಬಿದ್ದಿರುತ್ತದೆ ಅಂತಾ ಜನರು ಮಾತಾಡುತ್ತಿದ್ದರು, ನಂತರ ಅಲ್ಲೇ ಪಕ್ಕದಲ್ಲೇ ನಿಂತಿದ ಅದೇ ಗ್ರಾಮದ ಗುರಣ್ಣಗೌಡ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ದೌಲಪ್ಪ ಹೊಸಮನಿ, ಸೈಫನ್ ಚೌಧರಿ ರವರಿಗೆ ಘಟನೆ ಬಗ್ಗೆ ಕೇಳಿದಾಗ ಅವರು ಹೇಳಿದ್ದೇನೆಂದರೆ, 8;00 ಪಿ.ಎಂ ಸುಮಾರಿಗೆ ನಾಗಪ್ಪ ಇವನು ನಮ್ಮೂರ ಕಮಲಾಕರ ಕುಂಬಾರ ರವರ ಮನೆಗೆ ಬಂದು ಕಮಲಾಕರನನ್ನು ಅವಾಚ್ಯವಾಗಿ ಬೈಯುತ್ತಿದ್ದನು, ಆಗ ಕಮಲಾಕರ ಇವನು ನಾಗಪ್ಪನಿಗೆ ನೀನು ನಮ್ಮ ಮನೆಗೆ ಯಾಕ ಬರತಿಯೋ ಮಗನಾ ನಿನಗು ನನ್ನ ಹೆಂಡತಿಗು ಸಂಬಧ ಆದೇನಲೆ ಅಂತಾ ಅಂದನು ಆಗ ನಾಗಪ್ಪನು ನಾನು ನಿನ್ನ ಹೆಂಡತಿ ಸಂಗಡ ಇದಿನಿ, ಏನ ಮಾಡಕೋತಿಯೋ ಅಂಥಾ ಅಂದು ಇಬ್ಬರು ಒಬ್ಬರಿಗೊಬ್ಬರು ಹೊಡೆದಾಡುತ್ತಿದ್ದರು. ಆಗ ಕಮಲಾಕರ ಇವನು ರೋಷದಲ್ಲಿ ಅಲ್ಲೆ ಬಿದ್ದಿದ ಒಲೆ ಉದುವ ಉದಕೊಳಿಯಿಂದ ಮತ್ತು ಕಲ್ಲಿನಿಂದ ನಾಗಪ್ಪನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿದನು. ಆಗ ನಾಗಪ್ಪನು ನೆಲದ ಮೇಲೆ ಮುಖ ಕೆಳಗೆ ಮಾಡಿ ಬಿಕ್ಕುತ್ತಾ ಬಿದ್ದನು, ಆ ಸಮಯದಲ್ಲಿ ನಾವೆಲ್ಲರು ಸೇರಿ ಜಗಳ ಬಿಡಿಸಿ ನಾಗಪ್ಪನಿಗೆ ನೋಡಲಾಗಿ ಅವನ ತಲೆಯ ಮೇಲೆ ಭಾರಿ ರಕ್ತಗಾಯ ವಾಗಿ ತಲೆಯಿಂದ ಅತೀ ರಕ್ತ ಸ್ರಾವ ವಾಗುತ್ತಿತ್ತು, ಆಗ ನಾವು ಅವನನ್ನು ನೀರು ಕುಡಿಸುತ್ತಿದಾಗ 9;00 ಪಿ.ಎಂ ಸುಮಾರಿಗೆ ಒಮ್ಮೇಲೆ ಉಸಿರು ನಿಂತು, ಮೃತ ಪಟ್ಟಿದ ಬಗ್ಗೆ ಖಚಿತಪಟ್ಟೆವು. ಸದರಿ ಕಮಲಾಕರ ತಂದೆ ಮಲ್ಕಪ್ಪ ಕುಂಬಾರ ಸಾ|| ಕೇಶಾಪೂರ ಇವನು ತನ್ನ ಹೆಂಡತಿಯೊಂದಿಗೆ ನನ್ನ ಗಂಡ ಅನೈತಿಕ ಸಂಬಂಧ ಇಟ್ಟುಕೊಂಡ ವಿಷಯವನ್ನು ತಲೆಯಲ್ಲಿ ಇಟ್ಟುಕೊಂಡು ನನ್ನ ಗಂಡನನ್ನು ಕಲ್ಲಿನಿಂದ ಮತ್ತು ಒಲೆ ಉದುವ ಉದಕೊಳಿಯಿಂದ ತಲೆಯ ಮೇಲೆ ಜೋರಾಗಿ ಹೊಡೆದು ಬಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶೇಖರ ತಂದೆ ರಾಣಪ್ಪಾ ಸರಡಗಿ ಸಾ: ಮರಗಮ್ಮ ಟೆಂಪಲ ಹತ್ತಿರ ಬಾಪು ನಗರ ಗುಲಬರ್ಗಾ  ರವರು ದಿನಾಂಕ 20-06-2014 ರಂದು ಸಾಯಂಕಾಲ 5-15 ಗಂಟೆ ಸುಮಾರಿಗೆ ತಾನು ಚಲಾಯಿಸುತ್ತಿರುವ ಮೋ/ಸೈಕಲ ನಂಬರ ಎಪಿ-28 ಎಜೆ-7670 ನೇದ್ದರ ಹಿಂದುಗಡೆ ನನ್ನ ಅಕ್ಕಳಾದ ಆರತಿ ಇವಳನ್ನು ಕೂಡಿಸಿಕೊಂಡು ಏಷಿಯನ ಮಹಲದಿಂದ ಮನೆಯ ಕಡೆಗೆ ಹೋಗುವಾಗ ಏಷಿಯನ ಮಹಲ ಎದುರುಗಡೆ ಇರುವ ರೋಡ ಮೇಲೆ ಹಳೆ ಡಿಪಿಓ ಕ್ರಾಸ ಕಡೆಯಿಂದ ಕಾರ ನಂಬರ ಕೆಎ-32 ಬಿ-9243 ರ ಚಾಲಕ ಇನಾಯತ ಅಲಿ ತಂದೆ ಮಕ್ಸೂದ ಅಲಿ ಇತನು ಎದುರಿನಿಂದ  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಮತ್ತು ನನ್ನ ಅಕ್ಕ ಆರತಿ ಇವಳಿಗೆ ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮಾಹಾಗಾಂವ ಠಾಣೆ : ಶ್ರೀ ಬಸವರಾಜ ತಂದೆ ವೀರಭದ್ರಪ್ಪ ಮಂಠಾಳ ಸಾ: ಮುಕರಂಬಿ ಗ್ರಾಮ ತಾ:ಚಿಂಚೋಳಿ  ರವರು ದಿನಾಂಕ 20-06-14 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿ ಮುಕರಂಬಿಯಿಂದ ಟೆಂಪೋದಲ್ಲಿ ಕುಳಿತುಕೊಂಡು, ಮಾಹಾಗಾಂವ ಕ್ರಾಸಿಗೆ ಬೆಳಿಗ್ಗೆ 8-15 ಗಂಟೆ ಸುಮಾರಿಗೆ ಬಂದಾಗ, ಆಗ ಮಾಹಾಗಾಂವ ಕ್ರಾಸಿನಲ್ಲಿ ಒಬ್ಬ ಟಂಟಂ ಕೆಎ 32 ಬಿ 9915 ಚಾಲಕ ಕಮಲಾಪೂರ ಅಂತಾ ಕೂಗುತ್ತಿದ್ದರಿಂದ ನಾವೆಲ್ಲರೂ ಕಮಲಾಪೂರಕ್ಕೆ ಹೋಗುವ ಕುರಿತು ಟಂಟಂ ಕೆಎ 32 ಬಿ 9915 ರಲ್ಲಿ ಏರಿ ಕುಳಿತೇವು. ನಾನು ಟಂಟಂ ಎಡಭಾಗದ ಬದಿಯಲ್ಲಿ ಕುಳಿತೆನು. ಟಂಟಂ ಚಾಲಕನು ಟಂಟಂನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ  ನಡೆಸುತ್ತಾ ಹೊರಟಿದ್ದು, ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಮಾಹಾಗಾಂವ ಕ್ರಾಸ ದಾಟಿ ಸ್ವಲ್ಪ  ಮುಂದೆ ಇರುವ ಕಾರ್ಪೋರೇಶನ ಬ್ಯಾಂಕ ದಾಟಿ ಸ್ವಲ್ಪ ಮುಂದೆ ಎದುರಿನ ರೋಡಿನ ಮೇಲೆ ಬಂದಾಗ, ವೇಗದಲ್ಲಿ ಒಮ್ಮಿಂದ ಒಮ್ಮೇಲೆ ಎಡಕ್ಕೆ ಹೊರಳಿಸಿದ್ದರಿಂದ, ವೇಗದ ಆಯ ತಪ್ಪಿ ರೋಡಿನ ಎಡಭಾಗಕ್ಕೆ ಪಲ್ಟಿ ಮಾಡಿದ್ದರಿಂದಒಳಗಿದ್ದ ಎಲ್ಲಾ ಜನರು ನನ್ನ ಮೇಲೆ ಬಿದ್ದರು. ಇದರಿಂದಾಗಿ ನನ್ನ  ಬಲಗಾಲ ಮೊಳಕಾಲ ಭಾರಿ ರಕ್ತಗಾಯವಾಗಿ ಕಾಲು ಮುರಿದಂತಾಗಿದ್ದು, ಮತ್ತು ಎಡಗೈ ಮೊಳಕೈ ಮೇಲೆ ತರಚಿದ ರಕ್ತಗಾಯವಾಗಿದ್ದು, ನನ್ನ ಹೆಂಡತಿ ಗಂಗಮ್ಮಾ, ಅಪ್ಪಣ್ಣಾ, ಸಿದ್ರಾಮ, ಕಸ್ತೂರಬಾಯಿ, ಶೋಭಾ, ದಾಸಮಯ್ಯ, ಅಣವೀರಮ್ಮಾ ಮತ್ತು ಟಂಟಂ ಚಾಲಕನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಸಂಚಾರಿ ಠಾಣೆ : ಶ್ರೀಮತಿ ಪಾರ್ವತಿ  ಗಂಡ ಬಾಬುರಾವ ರಾಠೋಡ, ಸಾಃ ಮರ್ತುರ ತಾಂಡ ಗುಲಬರ್ಗಾ ರವರು ದಿನಾಂಕ 21-06-2014 ರಂದು 1930 ಗಂಟೆಯ ಸುಮಾರಿ ಫಿರ್ಯಾದಿಯು ಆಳಂದ ರೋಡಿಗೆ ಇರುವ ಆರ್ಶಿವಾದ ಕಲ್ಯಾಣ ಮಂಟಪದ ಎದರುಗಡೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತನು ತನ್ನ ಅಟೋರಿಕ್ಷಾ ನಂ. ಕೆ.ಎ 32 8742 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಪಲ್ಟಿ ಮಾಡಿ ಫಿರ್ಯಾದಿ ಹಾಗೂ ಆರೋಪಿ ಗಾಯಗೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ದೊಡ್ಡಪ್ಪ ತಂದೆ ಶರಣಬಸಪ್ಪ ನಿಷ್ಠಿ ರವರು ದಿನಾಂಕ 21-06-2014  ರಂದು ಮಧ್ಯಾಹ್ನ 12=30 ಗಂಟೆಗೆ  ತನ್ನ ಕಾರ ನಂ: ಕೆಎ 32 ಎನ್ 3663 ನೆದ್ದರಲ್ಲಿ ಎಸ್.ವಿ.ಪಿ.ಸರ್ಕಲ್ ದಿಂದ ಸುಪರ ಮಾರ್ಕೇಟ ಕಡೆಗೆ ಹೋಗುತ್ತಿದ್ದಾಗ ಮಹಾನಗರ ಪಾಲಿಕೆ ಎದುರು ರೋಡ ಮೇಲೆ ಹಿಂದಿನಿಂದ ಮೋ/ಸೈಕಲ್ ನಂ: ಕೆಎ 32 ಎಸ್ 6408 ನೆದ್ದರ ಸವಾರ ನರೇಶ ಇತನು ತನ್ನ ಮೋ/ಸೈಕಲ್ ನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕಾರಿಗೆ ಹಿಂದಿನಿಂದ  ಡಿಕ್ಕಿ ಪಡಿಸಿ ಅಪಘಾತಮಾಡಿ ಕಾರ ಜಕ್ಂ:ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-06-2014 ರಂದು 4;00 ಪಿಎಮ್ ಕ್ಕೆ ಅಫಜಲಪೂರ ಪಟ್ಟಣದ ದೇಸಾಯಿಕಲ್ಲೂರ ರಸ್ತೆಯಲ್ಲಿರುವ ಸೋಂದುಸಾಬ ದರ್ಗಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಂತೆ ಸೋಂದು ಸಾಬ ದರ್ಗಾಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸೋಂದು ಸಾಬ ಸರ್ಗಾದ ಮುಂದೆ ಆಲದ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜುಜಾಡುತ್ತಿದ್ದ 5 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಪ್ರಶಾಂತ ತಂದೆ ದತ್ತುಗೌಡ ಪಾಟೀಲ 2) ವಿಜಯಕುಮಾರ ತಂದೆ ವಿಶ್ವನಾಥ ಗೂಳೆದ 3) ಬಸವರಾಜ ತಂದೆ ಶಾಮರಾಯ ಖಂಡೋಳಿ 4) ಸಂಜಯಕುಮಾರ ತಂದೆ ಗುರಣ್ಣ ಬಟಗೇರಿ 5) ಶರಣಪ್ಪ ತಂದೆ ಮಾಂತಪ್ಪ ಟಗೇರಿ ಸಾ|| ಎಲ್ಲರೂ ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  ಒಟ್ಟು 2,290/- ರೂ ನಗದು ಹಣ ಮತ್ತು ಮತ್ತು 52 ಇಸ್ಪೆಟ ಎಲೆಗಳುನ್ನು ಜಪ್ತಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-06-2014 ರಂದು 6:00 ಪಿ.ಎಂ ಕ್ಕೆ ಘತ್ತರಗಿ ಗ್ರಾಮದಲ್ಲಿ ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಶ್ರೀ  ಭಾಗ್ಯವಂತಿ ಕಲ್ಯಾಣ ಮಂಟಪದಿಂದ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲು ಇಬ್ಬ ವ್ಯಕ್ತಿ  ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಚಂದುಗೌಡ ತಂದೆ ಹಣಮಂತರಾಯಗೌಡ ಮಾಲಿ ಪಾಟೀಲ ಸಾ|| ಘತ್ತರಗಿ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3380/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

20 June 2014

Gulbarga District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮತಿ ತಾರಾಬಾಯಿ ಗಂಡ ದುಂಡಪ್ಪ ದೇವುರ ಸಾ: ಶಿವಶಂಕರ ಬಡಾವಣಿ ಮಲಗಣ ಕ್ರಾಸ ಸಿಂದಗಿ ಜಿ; ಬಿಜಾಪೂರ  ರವರು ದಿನಾಂಕ  19--06-2014 ರಂದು ರಾತ್ರಿ 07-15 ಗಂಟೆಗೆ  ತನ್ನ ಮಗನಿಗೆ ಹೊರಗಿನ ಔಷದ ತರಲು  ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರಿನ ರೋಡನಲ್ಲಿ ನಡೆದುಕೊಂಡು ರೋಡ ದಾಟುತ್ತಿದ್ದಾಗ ಆರ್.ಟಿ.ಓ ಕ್ರಾಸ್ ಕಡೆಯಿಂದ ಅಟೋರೀಕ್ಷಾ  ನಂಬರ ಕೆಎ-32 -8390 ರ ಚಾಲಕ ಯುಸುಪ ಈತನು ತನ್ನ ಅಟೋರೀಕ್ಷಾವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ  ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ:- 19/06/2014 ರಂದು ಮದ್ಯಾಹ್ನ 12:30 ಗಂಟೆ ಸುಮಾರಿಗೆ ಮೃತ ಶೇಖ ಫೀರ ಪಾಶಾ ಇತನು ತನ್ನ ಕೋಳಿ ಸಾಗಾಣಿಕೆ ಮಾಡುವ ಟಂ ಟಂ ನಂ ಕೆಎ-39/3808 ನೇದ್ದನ್ನು ತೆಗೆದುಕೊಂಡು ಅದರಲ್ಲಿ ಫಿರ್ಯಾದಿ ಮಹಮ್ಮದ ಶಾ ಇತನಿಗೆ ಕೂಡಿಸಿಕೊಂಡು ಗುಲಬರ್ಗಾಕ್ಕೆ ಬರುವಾಗ ಅವರಾದ ಗ್ರಾಮದ ಹತ್ತಿರ ಇರುವ ಈರಣ್ಣಾ ಚೌವಡಶೆಟ್ಟಿ ಇವರ ಹೋಲದ ಹತ್ತಿರ ಮೆಹೆಂದ್ರಾ ಪಿ.ಕಪ್ ನಂ ಎಪಿ-05 ಡಬ್ಲೂ-8448 ನೇದ್ದರ ಚಾಲಕನು ಹಿಂದಿನಿಂದ ಅತೀವೇಗ ಮತ್ತು ನಿಕ್ಷಾಜಿತನದಿಂದ ಚಲಾಯಿಸಿ ಅಪಘಾತ ಪಡಿಸಿದ್ದರಿಂದ ಸದರಿ ಟಂ ಟಂ ರೋಡಿನ ಬಲ ಬದಿಯ ತಗ್ಗಿನಲ್ಲಿ ಬಿದಿದ್ದರಿಂದ ಫಿರ್ಯಾದಿ ಮತ್ತು ಮೃತನಿಗೆ ಭಾರಿ ರಕ್ತಗಾಯಗಳಾಗಿದ್ದು ಅಲ್ಲದೇ ಸದರಿ ಮೆಹೆಂದ್ರ ಪಿ.ಕಪ್ ಚಾಲಕನು ಎದುರಿಗೆ ಬರುತ್ತಿದ್ದ ಡಿಸ್ಕವರಿ ಮೋಟಾರ ಸೈಕಲ ನಂ ಕೆಎ-32 ಇಬಿ-8145 ನೇದ್ದಕ್ಕೆ ಡಿಕ್ಕಿ ಹೊಡೆದಿದ್ದರಿಂದ ಗಾಯಾಳು ಶಿವಕುಮಾರ ಮತ್ತು ಸಿದ್ದಪ್ಪ ಇವರಿಗೆ ಭಾರಿ ಗಾಯಗಳಾಗಿದ್ದು ಸದರಿಯವರನ್ನು 108 ಅಂಬುಲೆನ್ಸದಲ್ಲಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ತರುವಾಗ 01:45 ಪಿ.ಎಂದ ಸುಮಾರಿಗೆ ದಾರಿ ಮದ್ಯದಲ್ಲಿ ಶೇಖ ಫಿರ ಪಾಶಾ ಇತನು ಮೃತ ಪಟ್ಟಿದ್ದು ಅಪಘಾತ ಪಡಿಸಿದ ನಂತರ ಮೆಹೆಂದ್ರಾ ಪಿಕಪ್ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿಂಬರ್ಗಾ ಠಾಣೆ : ಶ್ರೀ ರಾಘವೇಂದ್ರ ತಂದೆ ಪ್ರಭು ನಡಗೇರಿ ಸಾ|| ಕುಡಕಿ ಇವರು ದಿನಾಂಕ 18-06-2014 ರಂದು ರಾತ್ರಿ ಕುಡಕಿಯಿಂದ ಫಿರ್ಯಾದಿದಾರರು  ತಮ್ಮ ಕ್ರೂಸರ ನಂ. ಕೆ.ಎ 29, ಎಮ. 2089 ನೇದ್ದರಲ್ಲಿ ಭಜನೆ ಕಾರ್ಯಕ್ರಮ ಕುರಿತು 01] ಚಂದ್ರಶಾ ತಂದೆ ಗ್ಯಾನಬಾ ತಳವಾರ, 02] ಚೌಡಪ್ಪ ತಂದೆ ಶಿವಲಿಂಗಪ್ಪಾ ಪೊಲೀಸ ಪಾಟೀಲ, 03] ಶ್ರೀಮಂತ ತಂದೆ ಯಲ್ಲಪ್ಪ ಪೊಲೀಸ ಪಾಟೀಲ, 04] ಹಣಮಂತ ತಂದೆ ಅಪ್ಪಾಸಾಬ ಎಲ್ಲರೂ ಕೂಡಿ ಹೊರಟಾಗ ಸುಂಟನೂರ ಗ್ರಾಮದ ಹತ್ತಿರ ಇರುವ ಅಪ್ಪಾಪೀರ ದರ್ಗಾದ ಹತ್ತಿರ ರಾತ್ರಿ 9 ಗಂಟೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಟ್ರಾಕ್ಟರ ನಂ. ಕೆ.ಎ 32, ಟಿ 3951 – 52 ನೇದ್ದರ ಚಾಲಕನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಕ್ರೂಸರಗೆ ಡಿಕ್ಕಿ ಹೊಡೆದಿದ್ದರಿಂದ ಕ್ರೂಸರದಲ್ಲಿದವರಿಗೆ ತರಚಿದ ಮತ್ತು ರಕ್ತಗಾಯಗಳಾಗಿದ್ದು ಅಲ್ಲದೆ ಕ್ರೂಸರ ಜಖಂಗೊಂಡಿರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಅರ್ಜುನ ತಂದೆ ಧರ್ಮಣ್ಣಾ ಕಾಂಬಳೆ ಸಾ: ಸಂಗೋಳಗಿ ಶೆಡ್ ತಾ|| ಆಳಂದ ರವರು ದಿನಾಂಕ 21-06-2014 ರಂದು ಸಂಬಂಧಿಕರ ಮದುವೆ ಇರುವುದರಿಂದ ನಾವು ಮದುವೆಗೆ ಹೋಗಬೇಕು ಅಂತಾ ದಿನಾಂಕ 18-06-2014 ರಂದು ರಾತ್ರಿ 11:00 ಗಂಟೆ ಸುಮಾರಿಗೆ ಪೂನಾದಿಂದ ನಮ್ಮ ಅಳಿಯ ಚಲಾಯಿಸುವ ವಾಹನ ನಂ ಎಮ್‌ಹೆಚ್‌ 12 ಸಿಟಿ 7556 ಟಾಟಾ ಸೂಮೋ ವಾಹನ ನೇದನ್ನು ಮಾಡಿಕೊಂಡು ನಾನು & ನನ್ನ ಹೆಂಡತಿ ರಾಧಾಬಾಯಿ ಮಗಳು ಕವಿತಾಗಂಡ ಶಿವಾನಂದ ಜಮಗೆ, ಸಂಗೀತಾ ಗಂಡ ಮಲ್ಲಿನಾಥ ಜುಬರೆ, ಮೊಮ್ಮಕ್ಕಳಾದ ಗೌರಮ್ಮಾ ತಂದೆ ಅಭಿಮಾನ್ ಕಾಂಬಳೆ, ಚಂದ್ರಕಲಾ ತಂದೆ ಶಿವಾನಂದ ಜಮಗೆ, ಪದ್ಮಾ ತಂದೆ ಶಿವಾನಂದ ಜಮಗೆ, ಕಾರ್ತಿಕ ತಂದೆ ಶಿವಾನಂದ ಜಮಗೆ, ಪ್ರೇಮಾ ತಂದೆ ರೋಹಿತ ಕಾಂಬಳೆ, & ನನ್ನ ಅಳಿಯ ಮಲ್ಲಿನಾಥ ಜುಬರೆ ಎಲ್ಲರೂ ಕೂಡಿ ಸೋಲಾಪೂರ ಮಾರ್ಗ ಮೂಲಕ ವಾಗ್ದರಿ ರೋಡಿನ ಮಾರ್ಗ ಮೂಲಕ ನಮ್ಮೂರ ಸಂಗೋಳಗಿ (ಜಿ) ಕಡೆಗೆ ಬರುವಾಗ ಸಾವಳೇಶ್ವರ ಪಾಟಿ ದಾಟಿ ಬರುವಾಗ ಖಾನಾಪೂರ ಕ್ರಾಸ್ ಹತ್ತಿರ ಬಂದಾಗ ನಮ್ಮ ಟಾಟಾ ಸೂಮೋ ವಾಹನ ಚಾಲಕ ನನ್ನ ಅಳಿಯ ಮಲ್ಲಿನಾಥ ಮರೆಪ್ಪಾ ಜುಬರೆ ಈತನು ಅತಿವೇಗ & ಅಲಕ್ಷತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಹೋಗುವಾಗ ನಿಧಾನವಾಗಿ ಚಲಾಯಿಸು ಅಂತಾ ಹೇಳಿದರೂ ಕೂಡಾ ಅದೇ ರೀತಿಯಲ್ಲಿ ಓಡಿಸುತ್ತಾ ಹೋಗುವಾಗ ನಿಧಾನವಾಗಿ ಚಲಾಯಿಸು ಅಂತಾ ಹೇಳಿದರೂ ಕೂಡಾ ಅದೇ ರೀತಿಯಲ್ಲಿ ಓಡಿಸುತ್ತಾ ಹೋದವನೆ ವಾಹನ ನಿಯಂತ್ರಣ ತೆಗೆದುಕೊಳ್ಳಲಾಗದೆ, ಒಮ್ಮೇಲೆ ರೋಡಿನ ಪಕ್ಕಕ್ಕೆ ಖಾನಾಪೂರ ಕ್ರಾಸ್ ಹತ್ತಿರ ತಗ್ಗಿನಲ್ಲಿ ವಾಹನ ಪಲ್ಟಿ ಮಾಡಿದ್ದರಿಂದ ಒಳಗಡೆ ಇದ್ದ ನನಗೆ ಬಲಕ್ಕೆ ಭುಜದ ಮೇಲೆ ಸೊಂಟದ ಮಗ್ಗಲಿಗೆ, ಎಡಗೈ ಬೆರಳಿಗೆ, ಹೊಟ್ಟೆಗೆ ಎದೆಗೆ ಗುಪ್ತಗಾಯವಾಗಿದೆ, ಮೊಮ್ಮಗಳು ಗೌರಮ್ಮಳಿಗೆ ಎಡಮೆಲಕಿಗೆ ಸೊಂಟಕ್ಕೆ ಗುಪ್ತಗಾಯ ರಕ್ತಗಾಯವಾಗಿದ್ದು ಚಂದ್ರಕಲಾ ಇವಳಿಗೆ ಹೊಟ್ಟೆಗೆ ಎಡಮೊಳ ಕಾಲಿಗೆ ಗುಪ್ತಗಾಯ ಪದ್ಮಾ ಇವಳಿಗೆ ಹೊಟ್ಟೆಗೆ ಬೆನ್ನಿಗೆ ಗುಪ್ತಗಾಯವಾಗಿದ್ದು ಮಗಳು ಕವಿತಾ ಇವಳಿಗೆ ಎಡಗೈ ಮುಂಗೈ ಮುರದಿದ್ದು ಹಣೆಗೆ ಮೊಳಕಾಲಿಗೆ ತರಚಿದ ಗಾಯವಾಗಿದ್ದು ಕಾರ್ತಿಕ ಇತನಿಗೆ ಎಡ ಮೆಲಕಿಗೆ ಹಣೆಯ ಮೇಲೆ ತೆರಚಿದ ಗಾಯವಾಗಿದ್ದು ನನ್ನ ಅಳಿಯ ಚಾಲಕ ಮಲ್ಲಿನಾಥನಿಗೆ ಬಲಗಡೆ ಸೊಂಟಕ್ಕೆ ತೆರಚಿದ ರಕ್ತ ಮತ್ತು ಗುಪ್ತ ಗಾಯವಾಗಿದ್ದು ಬಲಗೈ ಮುಂಗೈ ಹತ್ತಿರ ರಕ್ತ ಮತ್ತು ಗುಪ್ತ ಗಾಯವಾಗಿದ್ದು ಮೊಮ್ಮಗಳು ಪ್ರೇಮಾ ಇವಳಿಗೆ ಗದ್ದಕ್ಕೆ ತೆರಚಿದ ಗಾಯವಾಗಿದೆ, ಮತ್ತು ನನ್ನ ಹೆಂಡತಿ ರಾಧಾಬಾಯಿ ಇವಳಿಗೆ ತಲೆಯ ಮೇಲೆ ಭಾರಿ ರಕ್ತಗಾಯವಾಗಿ ಬಲಗಾಲು ಮುರಿದು ಸ್ಥಳದಲ್ಲಿಯೇ ಮೃತ್ತಪಟ್ಟಿರುತ್ತಾಳೆ, ನನ್ನ ಮಗಳು ಸಂಗೀತಾ ಗಂಡ ಮಲ್ಲಿನಾಥ ಜುಬರೆ ಇವಳಿಗೆ ಹಣೆಯ ಮೇಲೆ ತಲೆ ಒಡೆದು ಭಾರಿ ರಕ್ತಗಾಯ & ಅಲ್ಲಲ್ಲಿ ಗುಪ್ತಗಾಯವಾಗಿ ಬಲಗೈ ಮುಂಗೈ ಮುರಿದು ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಮೃತ್ತ ಪಟ್ಟಿರುತ್ತಾಳೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರೀಮಿನಾಶಕ ಔಷಧಿ ಸೇವಿಸಿ ಮರಣ ಹೊಂದಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಶರಣಪ್ಪ ತಂದೆ ಶಿವಪ್ಪಾ ಸುಗೂರ ಸಾ|| ಬೆಣ್ಣೆಶಿರೂರ ಇತನು ಸರಾಯಿ ಕುಡಿದ ನಶೆಯಲ್ಲಿ ಹೊಟ್ಟೆ ನೋವು ತಾಳದೆ ಮನೆಯಲ್ಲಿದ್ದ ಯಾವುದೋ ಒಂದು ಕ್ರಿಮಿನಾಶಕ ಔಷಧಿ ಸೇವಿಸಿ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆಯಾಗಿ ದಿನಾಂಕ 19-06-2014 ರಂದು 0715 ಗಂಟೆಗೆ ಮೃತಪಟ್ಟಿರುತ್ತಾನೆ ಸದರಿಯವನ ಸಾವಿನ ಬಗ್ಗೆ ಯಾವುದೇ ರೀತಿಯ ಸಂಶಯ ಫಿರ್ಯಾದಿ ಇಲ್ಲ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.