POLICE BHAVAN KALABURAGI

POLICE BHAVAN KALABURAGI

29 May 2014

Gulbarga District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀಮತಿ. ಜಯಶ್ರೀ ಗಂಡ ವಿನಾಯಕ ಭೋಸಲೆ ಸಾ:ರವಿವಾರಪೇಟ, ಸೋಲಾಪೂರ ಇವರ ದಿನಾಂಕ:26-05-2014 ರಂದು ನಾವು ನಮ್ಮ ಕುಟುಂಬ ಸಮೇತ ತಿರುಪತಿ ದೇವರ ದರ್ಶನಕ್ಕೆಂದು ಕಾರ ನಂ-MH12-HN-2557 ನೇದ್ದರಲ್ಲಿ ಕುಳಿತು ಸೋಲಾಪೂರದಿಂದ ತಿರುಪತಿಗೆ ಹೋಗಿ ದೇವರ ದರ್ಶನ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಸೇಡಂ ಮಾರ್ಗವಾಗಿ ಬರುವಾಗ, ರಂಜೋಳ-ಕುರಕುಂಟಾ ಕ್ರಾಸ್ ಮಧ್ಯೆದಲ್ಲಿ, ರೋಡಿನ ಮಧ್ಯೆದಲ್ಲಿ ಸೇಡಂ ಕಡೆ ಮುಖಮಾಡಿ ಒಂದು ಲಾರಿ ನಂ-AP28-V-6502 ನೇದ್ದು ಯಾವುದೇ ಮುನ್ಸೂಚನೆ ಇಂಡಿಕೇಟರ್ ಅಥವಾ ಲಾರಿ ಸುತ್ತಲೂ ಸುಚನಾ ಕಲ್ಲುಗಳು ಇಡದೇ ನಿಷ್ಕಾಳಜಿ ತನದಿಂದ ರೋಡಿನ ಮೇಲೆ ನಿಲ್ಲಿಸಿದ್ದು, ಸದರಿ ವಾಹನಕ್ಕೆ ಮಗ್ಗಲಾಗಿ ಸೈಡ್ ತೆಗೆದುಕೊಂಡು ನಮ್ಮ ಕಾರ ಚಾಲಕನು ಹೋಗುತ್ತಿ ರುವಾಗ, ಎದುರುಗಡೆಯಿಂದ ಒಂದು ಲಾರಿ ಟ್ಯಾಂಕರ್ ನಂ-KA22-B-9739 ನೇದ್ದರ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿಗೆ ಡಿಕ್ಕಿ ಪಡಿಸಿದ್ದರಿಂದ ಅಪಘಾತದಲ್ಲಿ ನನಗೆ ಭಾರಿ ರಕ್ತಗಾಯಗಳಾದವು ನನ್ನ ಹಾಗೆಯೇ ನಮ್ಮ ತಂಗಿಯಾದ ರಾಜಶ್ರೀ, ಅಣ್ಣನಾದ ವಿನಾಯಕ, ತಾಯಿಯಾದ ಮಂಗಲಾಬಾಯಿ ಹಾಗೂ ನಮ್ಮ ಕಾರ ಚಾಲಕನಾದ ನಾಗೇಶ ಇವರುಗಳಿಗೆ ಸಾದಾ ಹಾಗೂ ಭಾರಿ ರಕ್ತಗಾಯಗಳಾದವು. ಹಾಗೂ ಈ ಘಟನೆಯಲ್ಲಿ ಭಾರಿ ರಕ್ತಗಾಯವಾಗಿ ನನ್ನ ಮಕ್ಕಳಾದ ಪ್ರೀತಿ,ಶ್ರುತಿ ಮತ್ತು ತಂದೆಯಾದ ಕೊಂಡಿಬಾ ಹಾಗೂ ನಮ್ಮ ಗುರುಗಳಾದ ವಿಷ್ಣು ತಂದೆ ದತ್ತು ಮಹರಾಜ ಇವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 28-05-2014 ರಂದು 8;00 ಪಿ.ಎಂ ಕ್ಕೆ ಶ್ರೀಮತಿ ಗಂಗಾಬಾಯಿ ಗಂಡ ಮಹಾದೇವ ಬಾಣಿ  ಸಾ|| ದೇವರನಾವುದಗಿ vÁ: ¹AzÀV ರವರ ತಂಗಿ ಗಂಡ ಚಂದ್ರಕಾಂತ ಇವರು ನಮಗೆ ಫೋನ ಮಾಡಿ ನಾನು ಮತ್ತು ನನ್ನ ಹೆಂಡತಿ ರೇಣುಕಾ ಹಾಗು ನನ್ನ ಮಗಳು ಮಾಯಾ ರವರೆಲ್ಲರು ಕೂಡಿಕೊಂಡು ದೇವರು ಕೇಳಲು ಸಿಂದಿಗಿ ತಾಲೂಕಿನ ತಾರಾಪೂರ ಗ್ರಾಮಕ್ಕೆ ನಮ್ಮೂರ ಶರಬುಕಾಂತ ಕುಮುಸಗಿ ರವರ ಮೋಟರ ಸೈಕಲ್ ನಂ ಕೆ.ಎ-32/ಇಇ-2392 ನೇದ್ದರ ಮೇಲೆ ಗೊಬ್ಬೂರದಿಂದ 6;00 ಪಿ.ಎಂ ಸುಮಾರಿಗೆ ಹೊರಟಿರುತ್ತೇವೆ, ನಂತರ ಅಂದಾಜು 7;30 ಪಿ.ಎಂ ಸುಮಾರಿಗೆ ನಾವು ಅಫಜಲಪೂರದ ಸಮೀಪ ನಿರಾವರಿ ಆಫಿಸನಿಂದ ಅರ್ದಾ ಕೀ.ಮಿ ದಾಟಿ ರಸ್ತೆಯ ಎಡಗಡೆಯಿಂದ ಹೋಗುತ್ತಿದ್ದಾಗ ಮಳೆ ಬಂದು ಅಲ್ಲಿ ಕೆಸರು ಜಾಸ್ತಿಯಾಗಿದ್ದರಿಂದ ನಮ್ಮ ಮೋಟರ ಸೈಕಲ್ ಒಮ್ಮೇಲೆ ಕಟ್ಟ ಮಾಡಲುಹೋಗಿ ಕೆಳಗೆ ಬಿದ್ದೆವು, ನನ್ನ ಹೆಂಡತಿಗೆ ಒಳಪೆಟ್ಟಾಗಿ ಬಿಕ್ಕುತ್ತಿದ್ದಳು ನನಗೆ ಸ್ವಲ್ಪ ತರಚಿದಗಾಯಗಳು ಆಗಿರುತ್ತವೆ ನನ್ನ ಮಗಳಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ, ನಂತರ ನಾನು 108 ಅಂಬೂಲೆನ್ಸಗೆ ಫೋನ ಮಾಡಿ ವಿಷಯತಿಳಿಸಿ ಅಂಬೂಲೆನ್ಸ್ ಬಂದ ನಂತರ ನನ್ನ ಹೆಂಡತಿಯನ್ನು ಉಪಚಾರ ಕುರಿತು ಅಫಜಲಪೂರ ಸರಕಾರಿ ಆಸ್ಪತ್ರೆಗೆ ತೆಗದುಕೊಂಡು ಹೋದೆನು. ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾಗ ಅಂದಾಜ ಸಮಯ 8;00 ಗಂಟೆಗೆ ನನ್ನ ಹೆಂಡತಿ ರೇಣುಕಾ ಇವಳು ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

28 May 2014

Gulbarga District Reported Crimes

ಕಳವು ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಗುಂಡೆರಾವ ತಂದೆ ಶರಣಪ್ಪ ಹಳಿಮನಿ ಸಾ|| ನಿಂಬರ್ಗಾ ಇವರು ದಿನಾಂಕ 27-05-2014 ರಂದು 0100 ಗಂಟೆಯಿಂದ 5 ಗಂಟೆಯ ಮಧ್ಯದ ಅವಧಿಯಲ್ಲಿ ತಮ್ಮ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿನ ಟೀಜೂರಿಯಲ್ಲಿ ಇಟ್ಟಂತಹ 2 ಬಂಗಾರದ ಸುತ್ತುಂಗರಗಳು ಅ.ಕಿ 14000/- ರೂಪಾಯಿ ಹಾಗೂ 5000/- ರೂಪಾಯಿ ನಗದು ಹಣ ಮತ್ತು ಫಿರ್ಯಾದಿಯ ಪ್ಯಾಂಟಿನ ಕಿಸೇಯಲ್ಲಿ ಇಟ್ಟಿರುವ 5000/- ರೂಪಾಯಿ ನಗದು ಹಣ ಹೀಗೆ ಒಟ್ಟು 2400/- ರೂಪಾಯಿ ಮೌಲ್ಯದ ಹಣ ಮತ್ತು ಬಂಗಾರದ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ರಾಚಣ್ಣಾ ತಂದೆ ಮಲ್ಲಿನಾಥ ಅಮಾಣಿ  ಸಾ|| ನಿಂಬರ್ಗಾ ಇವರು ದಿನಾಂಕ 26-05-2014 ರಂದು 11 ಗಂಟೆಯಿಂದ ದಿನಾಂಕ 27-05-2014 ರಂದು 6 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿಯ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿನ ಟೀಜೂರಿಯಲ್ಲಿ ಇಟ್ಟಂತಹ ಅರ್ಧ ತೊಲಿಯ ಎರಡು ಬಂಗಾರದ ಉಂಗುರ ಅ.ಕಿ 12000/-, ಬೆಳ್ಳಿ ಸಾಮಾನು ಚಮಚಾ, ವಾಟಿ ಅ.ಕಿ 2000/- ಮಗುವಿನ ಕಿವಿಯಲ್ಲಿಯ ಬಂಗಾರದ ರಿಂಗ 1500/-, ಮಗುವಿನ ಬಂಗಾರದ ಉಂಗುರ 1500/-, ನಗದು ಹಣ 6000/- ರೂಪಾಯಿ ಹೀಗೆ ಒಟ್ಟು 23000/- ರೂಪಾಯಿ ಮೌಲ್ಯದ ಹಣ ಮತ್ತು ಬಂಗಾರದ ಹಾಗೂ ಬೆಳ್ಳಿಯ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ಶ್ರೀ ಶಂಭುಲಿಂಗಯ್ಯಾ ತಂ ರಾಚಯ್ಯಾ ಮಠಪತಿ  ಸಾ|| ತೊಂಡಕಲ ತಾ||ಜಿ|| ಗುಲಬರ್ಗಾ  ದಿನಾಂಕ 26-05-2014  ರಂದು ತಾನು ಹೊಲಕ್ಕೆ ಹೋಗಿ ಸಾಯಂಕಾಲ ಮನೆಗೆ ಬಂದಿದ್ದು ತನ್ನ ಆಳು ಮನುಷ್ಯ ಕೂಡಾ ರಾತ್ರಿ 8.30 ಗಂಟೆಗೆ ಮನೆಗೆ ಬಂದು ಎತ್ತುಗಳು ಮತ್ತು ಎಮ್ಮೆ ಹೋಲದಲ್ಲಿ ಕಟ್ಟಿ ಮೇವು ಹಾಕಿ ಬಂದಿರುತ್ತೇನೆ ಅಂತಾ ತಿಳಿಸಿ ತನ್ನ ಮನೆಗೆ ಹೋದನು ಇಂದು ಬೆಳಗ್ಗಿನ ಜಾವ 6 ಗಂಟೆಗೆ ನಮ್ಮ ಆಳು ಮನುಷ್ಯ ಹೋಲಕ್ಕೆ ಹೋಗಿದ್ದು 6.15 ಎ,ಎಮ್,ಕ್ಕೆ ವಾಪಸ ಮನೆಗೆ ಬಂದು ತಿಳಿಸಿದ್ದೆನಂದರೆ ಒಂದು ಎತ್ತು ಕಾಣುತ್ತಿಲ್ಲಾ ಅಂತಾ ಹೇಳಿದ್ದಾಗಿ ತಾನು ತನ್ನ ಮಕ್ಕಳೊಂದಿಗೆ ಹೋಲಕ್ಕೆ ಹೋಗಿ ನೊಡಲಾಗಿ ಒಂದು ಎಮ್ಮೆ ಮತ್ತು ಒಂದು ಎತ್ತು ಹೋಲದಲ್ಲಿದ್ದು ಇನ್ನೊಂದು ಬೀಳಿ ಬಣ್ಣದ ಸಹದೃಡ ಮೈಕಟ್ಟಿನ  2 ಕೋಡುಗಳು ನೇರವಾಗಿದ್ದ ಅಂದಾಜು 7-8 ವರ್ಷ ವಯಸ್ಸಿನ ಅ.ಕಿ. 45,000 ರೂ ಕಿಮ್ಮತ್ತಿ ನ ಎತ್ತು ಕಾಣಲಿಲ್ಲಾ ದಾವಣಿಯಲ್ಲಿ ನೋಡಿದ್ದಾಗ ನನ್ನ ಎತ್ತು ಹಗ್ಗದ ಸಮೇತಾ ಬಿಡಿಸಿಕೊಂಡು ಹೊಗಿದ್ದು ಕಂಡು ಬಂತ್ತು ನಂತರ ನಮ್ಮ ಆಳು ಮನುಷ್ಯ ನನ್ನ ಮಕ್ಕಳು ಹಾಗೂ ನಾನು ಅಡವಿಯಲ್ಲಿ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿಲ್ಲಾ ನಿನ್ನೆ ದಿನಾಂಕ 26-05-2014 ರಂದು  ರಾತ್ರಿ 9 ಪಿ,ಎಮ್,ದಿಂದ ಇಂದು 27-05-2014  ರ ಬೆಳಗ್ಗಿನ ಜಾವ 5.30 ಎ,ಎಮ್,ದ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ತೋಟದಲ್ಲಿ ಕಟ್ಟಿದ ಒಂದು ಎತ್ತು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಸೋಮಶೇಖರ ತಂದೆ ರೇವಣಸಿದ್ದಪ್ಪಾ ಜನಕಟ್ಟಿ  ಸಾ:ಡೊಂಗರಗಾಂವ  ತಾ:ಜಿ: ಗುಲಬರ್ಗಾ ಇವರು ಲಾರಿ ನಂ ಎಮ್ ಹೆಚ್ 25 ಬಿ 9066 ನೆದ್ದರ ಮೇಲೆ ಚಾಲಕ ಅಂತಾ ಕೆಲಸ  ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದೆನೆ . ನನ್ನಂತೆ ನನ್ನ ಮಗ ಪ್ರಭು ಸಹ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ 24-05-2014 ರಂದು 6 ಗಂಟೆಯ ಸುಮಾರಿಗೆ ನಮ್ಮ ಲಾರಿ ನಂ ಎಮ್ ಹೆಚ್ 25 ಬಿ 9066 ನೆದರಲ್ಲಿ ರಾಯಚೂರನ ವಿಜಯಲಕ್ಷ್ಮೀ ಕಮರ್ಸಿಯಲ ಕಂಪನಿಯಿಂದ ಅಕ್ಕಿಲೋಡ ಮಾಡಿಕೊಂಡು ಗುಲಬರ್ಗಾಕ್ಕೆ ಬರುತ್ತಿದ್ದೆನೆ ಅಂತಾ ನನ್ನ ಮಗ ಪ್ರಭು ಇವರು ನನಗೆ ಪೋನ ಮಾಡಿ ತಿಳಿಸಿರುತ್ತಾನೆ. ಹೀಗಿದ್ದು ದಿನಾಂಕ 25-05-2014 ರಂದು ರಾತ್ರಿ 12-15 ಗಂಟೆಯ ಸುಮಾರಿಗೆ  ನಾನು ನಮ್ಮೂರಿನಲ್ಲಿದ್ದಾಗ ನನ್ನ ಮಗ ಪ್ರಭು ಈತನು ಪೋನ ಮಾಡಿ ತಿಳಿಸಿದ್ದೆನೆಂದರೆ, ದಿನಾಂಕ 24-05-2014 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ನಾನು ಅಕ್ಕಿಲೋಡ ಮಾಡಿದ ನಮ್ಮ ಲಾರಿ ನಂ ಎಮ್ ಹೆಚ್ 25 ಬಿ 9066 ನೆದ್ದನ್ನು ರಾಯಚೂರಿನಿಂದ ಗುಲಬರ್ಗಾ ಕಡೆಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಸರಡಗಿ(ಬಿ) ಖಣಿ ಹತ್ತಿರ ಬರುತ್ತಿರುವಾಗ ನನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಗೆ ಪಲ್ಟಿಗೊಳಿಸಿರುತ್ತೆನೆ.  ಇದರಿಂದ ನನಗೆ ಯಾವುದೇ ಗಾಯ ವೈಗೆರೆಯಾಗಿರುವುದಿಲ್ಲಾ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನಮ್ಮ ಅಳಿಯ ಶಿವಕುಮಾರ ಬೀಮಳ್ಳಿ ಇಬ್ಬರೂ ಕೂಡಿ ಸದರ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗ ಪ್ರಭು ಇತನು ಅಕ್ಕಿ ಲೋಡ ಮಾಡಿದ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಗೆ ಲಾರಿಯನ್ನು  ಪಲ್ಟಿಗೊಳಿಸಿ ಹಾನಿಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 26/05/2014 ರಂದು ರಾತ್ರಿ 10:30 ಪಿ.ಎಂ. ಸುಮಾರಿಗೆ ನನ್ನ ಮಗ ಫೈಸಲ ಇತನು ಜಾಗನೇಕಿ ರಾತ್ ಸಲುವಾಗಿ ಮನೆಯಿಂದ ಪಲ್ಸರ್ ಮೋಟಾರ ಸೈಕಲ ನಂ. KA 32 Y 2211 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ KNZ ಫಂಕ್ಷನ್ ಹಾಲ್ ಎದರುಗಡೆ ಇರುವ ರಿಂಗ್ ರೋಡದಲ್ಲಿ ಪಲ್ಸರ್ ಮೋಟಾರ ಸೈಕಲ ಸ್ಕಿಡ್ ಆಗಿ ಬಿದ್ದಿದ್ದರಿಂದ ಎಡಗೈ ಮೊಳಕೈ ಹತ್ತಿರ ಭಾರಿ ಗಾಯವಾಗಿ ಮುರಿದಂತಾಗಿದ್ದು, ಎಡಗಡೆ ತೊಡೆಯ ಹತ್ತಿರ ಭಾರಿ ಗಾಯ ಹಾಗು ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಅಲ್ಲಿನ ಜನರು ನೋಡಿ ಅಂಬುಲೆನ್ಸ್ ದಲ್ಲಿ ಹಾಕಿ ಉಪಚಾರಕ್ಕಾಗಿ ಸತ್ಯ ಆಸ್ಪತ್ರೆಗೆ ಸೇರಿಸಿರುತ್ತಾರೆ. ಅಂತಾ  ಶ್ರೀ ಇಕ್ರಾಮೂದ್ದಿನ ತಂದೆ ಮೈನೂದ್ದಿನ ಖಲೀಫ್  ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ  ತಿಪ್ಪಣ್ಣಾ ತಂದೆ ಭಾಗಣ್ಣಾ ಹೊಸಮನಿ ಸಾ;ಜನಿವಾರ ಹಾವ; ಬಸವೇಶ್ವರ ಕಾಲನಿ ಎಂ.ಜಿ ರೋಡ ಕೆ.ಇ.ಬಿ ಆಪೀಸ ಎದುರುಗಡೆ ಗುಲಬರ್ಗಾ ಇವರ ಮಗಳಾದ ಸರಸ್ವತಿ ವ|| 17 ವರ್ಷ ಇವಳಿಗೆ ನಮ್ಮ ಗ್ರಾಮದವನೆಯಾದ ರಮೇಶ ತಂದೆ ಸಿದ್ದಪ್ಪಾ ಇತನು ದಿನಾಂಕ:20.05.2014  ರಂದು 3 ಪಿ ಎಮ್ ಕ್ಕೆ ನಾವು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನನ್ನ ಮಗಳಿಗೆ ಅಪಹರಣ  ಮಾಡಿಕೋಂಡು ಹೋಗಿರುತ್ತಾನೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 May 2014

Gulbarga District Reported Crimes

ಕೊಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶಮಶದ ಆಲಂ ತಂದೆ ಅಕ್ಬರ ಹುಸೆನ್‌ ಸಿದ್ದಿಕಿ ಸಾ:ಫಿರೋಜಾಬಾದ ಇವರಿಗೆ ಮೂರು ಜನ ಮಕ್ಕಳಿದ್ದು ನಾನು ಬಿಹಾರದ ನೂರಪೂರ ಬೆಗೂ ಸರಾಯಿತ ತಾ:ಜಿ:ದವನಿದ್ದು ಕಳೆದ 14 ವರ್ಷದಿಂದ ನಾವು ಫಿರೊಜಾಬಾದ ಗ್ರಾಮದಲ್ಲಿ ವಾಸವಾಗಿರುತ್ತೆವೆ. ದಿನಾಂಕ: 21/05/2014 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಾನು ಮಸೂತಿಯಲ್ಲಿದ್ದಾಗ ನನ್ನಹೆಂಡತಿಯಾದ ತರುನೂ ಆರಾ ಇವಳು ನನಗೆ ಫೊನ್‌ಮಾಡಿ ಈಗ 4:30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಮಗಳು ಸಾದಿಯ ಆಯಾತ ಇವಳು ಆಟವಾಡುತ್ತಿದ್ದಾಗ ಮನೆಯ ಮುಂದಿನ ಗಲ್ಲಿ ರಸ್ತೆಯ ಮೇಲಿಂದ ಈಗ 4:40 ಗಂಟೆಯ ಸುಮಾರಿಗೆ ಕಾಣದೆ ಇರುತ್ತಾಳೆ. ಅಂತಾ ತಿಳಿಸಿದ ಕೂಡಲೆ ನಾನು ಮನೆಗೆ ಹೋಗಿ ಇಬ್ಬ್ರೂ ಕೂಡಿಕೊಂಡು ಮನೆಯ ಆಜುಬಾಜು ಹುಡಕಾಡಿ, ಊರಿನ ಪ್ರಮೂಖ ರಸ್ತೆ ಹಾಗೂ ಗಲ್ಲಿಯ ರಸ್ತೆಸುತ್ತಲೂ ಹುಡಕಾಡಿದ್ರು ನನ್ನ ಮಗಳು ಸಿಕ್ಕಿರುವದಿಲ್ಲ. ಮರು ದಿವಸ  ನಾನು ಮತ್ತು ಲತೀಫ ಜಾಗಿರದಾರ ಹಾಗೂ ಇತರರು ಕೂಡಿಕೊಂಡು ನಮ್ಮೂರಿನ ಸುತ್ತ-ಮುತ್ತಲು ಹುಡಕಾಡಿದರೂ ನಮ್ಮ ಮಗಳು ಸಿಗದೆಯಿದ್ದರಿಂದ ದಿನಾಂಕ:22/೦5/2014 ರಂದು ಫರಹತಾಬಾದ ಪೊಲೀಸ್‌ ಠಾಣೆಗೆ ಹೋಗಿ ನನ್ನ ಮಗಳು ಕಾಣೆಯಾದ ಬಗ್ಗೆ ಪ್ರಕ್ರಣ ದಾಖಲಿಸಿ ಬಂದಿರುತ್ತೆನೆ. ದಿನಾಂಕ:26/05/2014 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ನಮ್ಮೂರಿನ ಅಗಸಿ ಹತ್ತಿರ ನಿಂತಿದ್ದಾಗ ನಮ್ಮೂರಿನ ಇಸ್ಮಾಯಿಲ್‌ ಮುಜಾವರ, ಶಕೀಲ್‌ ಷಾ, ಮತ್ತು ಮೈನೊದ್ದಿನ ಗ್ವಾಡಿಕರ ಇವರು ಬಂದು ನನಗೆ ತಿಳಿಸಿದ್ದೆನಂದರೆ ನಾವು ಸುಬಾಶ್ಚಂದ್ರ ಮಾಮನಿ ಇವರ ಮನೆಯಲ್ಲಿ ಕಾರ್ಯಕ್ರಮ ಇದ್ದ ಪ್ರಯುಕ್ತ ಟೆಂಟ್‌ ಹೊಡೆಯುತ್ತಿರುವಾಗ ಬಸಯ್ಯ ಸ್ವಾಮಿ ಇವರ ಹಾಳುಬಿದ್ದ ಖುಲ್ಲಾ ಜಾಗೆಯಲ್ಲಿ ವಾಸನೆ ಬರುತ್ತಿದ್ದಾಗ ಅಲ್ಲಿ ನಾವು ಹೋಗಿ ನೋಡಿದಾಗ ಒಂದು ಹುಡಗಿಯ ಮೃತ ದೇಹದ ಬಿದ್ದಿರುತ್ತದೆ, ಅದು ನಿಮ್ಮ ಮಗಳ ಮೃತ ದೇಹ ಇರಬಹುದು ಅಂತಾ ತಿಳಿಸಿದ ಕೂಡಲೆ ನಾನು ಮತ್ತು ಅವರೆಲ್ಲರೂ ಕೂಡಿಕೊಂಡು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಮೃತ ದೇಹದ ಮೇಲೆ ಅಂಗಿ( ಫ್ರಾಕ್‌) ಮತ್ತು ಅದ್ರ ಪಕ್ಕದಲ್ಲಿ ಬಿದ್ದಿದ್ದ ಅಂಡ್ರವೇರ ನೋಡಿ ಗುರುತಿಸಿದ್ದು, ಅದು ನನ್ನ ಮಗಳ  ಮೈಮೇಲೆ ಇದ್ದ ಬಟ್ಟೆಗಳಗಿದ್ದು ಸದರಿ ಮೃತ ದೇಹವು ನನ್ನ ಮಗಳಾದ ಸಾದಿಯಾ ಆಯಾತ ಇವಳದೆ ಇದ್ದಿರುತ್ತದೆ. ಸದ ರಿ ಮೃತ ದೇಹದ ತಲೆಯ ಭಾಗ ಪೂರ್ತಿಯಾಗಿ ಒಡೆದು ಬೇರೆಬೇರೆಯಾಗಿಬಿದ್ದಿರುತ್ತದೆ. ಮುಖದ ಭಾಗ ಇದ್ದಿರುವದಿಲ್ಲ ಬಲಗೈ ಮತ್ತು ಬಲಗಾಲು ಪೂರ್ತಿಯಾಗಿ ಇದ್ದಿರುವದಿಲ್ಲ, ಎಡಗಾಲು ಮತ್ತು ಎಡಗೈ ಇದ್ದು ಎಡಗಾಲು ಮೊಳಕಾಲಿನಿಂದ ಬೆರ್ಪಟ್ಟು ಬಿದ್ದಿರುತ್ತದೆ.ಬಾಯಿಯಲ್ಲಿನ ಒಸಡು ಬಿದ್ದಿದ್ದು  ಕೆಲವು ಹಲ್ಲುಗಳು ಇದ್ದಿರುವದಿಲ್ಲ.ಸದರಿ ಮೃತ ದೇಹದ ಮೈಮೇಲಿನ ಚರ್ಮ ಪೂರ್ತಿಯಾಗಿ ಸುಲಿದಿದ್ದು ಹುಳಗಳು ಕಂಡುಬಂದಿರುತ್ತವೆ ದಿನಾಂಕ:22/05/2014 ರಂದು 4:40 ಪಿಎಮ್‌ ದಿಂದ ಇಲ್ಲಿಯವರೆಗೆ ಸದ್ರಿ ನನ್ನ ಮಗಳಾದ ಸಾದಿಯಾ ಆಯಾತ ಇವಳನ್ನು ಯಾರೋ ಅಪರಿಚೀತರು ಯಾವುದೋ ದುರುದ್ದೇಶದಿಂದ ಕೊಲೆ ಮಾಡಿ ಗುರುತು ಸಿಗಂದಂತೆ ಮೂಖದ ಭಾಗ ಹಾಗೂ ದೇಹದ ಭಾಗದ ಮೇಲಿನ ಚರ್ಮ ಸುಲಿದು ನುಜ್ಜಗುಜ್ಜಾಗಿ ಮಾಡಿ ಬಿಸಾಡಿ ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.