POLICE BHAVAN KALABURAGI

POLICE BHAVAN KALABURAGI

03 December 2013

Gulbarga District Reported Crime

ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಚಂದಪ್ಪ ತಂದೆ ಕಾಶಪ್ಪ ನಾಯಿಕೊಡಿ ರವರ ಮಗ ಓಂ ಪ್ರಕಾಶ ಈತನು ಸಂಬಂದಿಕರಾದ ಭೀಮಣ್ಣ ತಂದೆ ಸಂಗಪ್ಪ ಇವರ  ಹೀರೋ ಹೊಂಡಾ  ಮೊಟಾರ ಸೈಕಲ ನಂ. ಕೆ.ಎ 32 ಈ.ಸಿ. 9306 ನೇದ್ದನ್ನು ತೆಗೆದುಕೊಂಡು ತನ್ನ ಹೆಂಡತಿಯ ತವರೂರಾದ ಶ್ಯಾಮನೂರ ಗ್ರಾಮಕ್ಕೆ  ಹೋಗಿ ಜಾತ್ರೆ ನೋಡಿಕೊಂಡು ಬರುತ್ತೇನೆ ಅಂತ ಹೇಳಿ ಹೊರಟು ಹೋಗಿದ್ದು. ನಿನ್ನೆ ರಾತ್ರಿ 10.15 ಪಿ.ಎಮ್. ಸುಮಾರಿಗೆ ಫಿರ್ಯಾದಿ ಹಾಗೂ ಆತನ ಮನೆಯವರು ಮನೆಯಲ್ಲಿ ಮಲಗಿಕೊಂಡಾಗ ಸಂಬಂದಿ ಬಸಪ್ಪ ತಂದೆ ಅಮಲಪ್ಪ ನಾಯಕೋಡಿ ಈತನು ಮನೆಗೆ ಬಂದು ತಿಳಿಸಿದ್ದೇನೆಂದರೆ, ಚಿತ್ತಾಪೂರ  ಟೆಂಗಳಿ ಮುಖ್ಯ ರಸ್ತೆಯ ದಂಡೋತಿ ಗ್ರಾಮದ ಹತ್ತಿರ  ರೋಡಿನ ಮೇಲೆ ನಿಮ್ಮ ಮಗ ಮೊಟಾರ ಸೈಕಲ ಮೇಲಿಂದ ಸ್ಕೀಡ ಆಗಿ ಬಿದ್ದು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ಈ ವಿಷಯ ಯಾರೋ ರೋಡಿನ ಮೇಲಿಂದ ಹೋಗುವರು ನನ್ನ ಮೊಬೈಲಗೆ ಫೋನ ಮಾಡಿ ತಿಳಿಸಿರುತ್ತಾರೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿ ಹಾಗೂ ಆತನ ಮಗ ಹೆಂಡತಿ ಸಂಬಂದಿ ಬಸಪ್ಪ ಎಲ್ಲರು ಕೂಡಿ ಒಂದು ಖಾಸಗಿ ವಾಹನ ಮಾಡಿಕೊಂಡು. ಸ್ಥಳಕ್ಕೆ ಬಂದು ನೋಡಲಾಗಿ, ಫಿರ್ಯಾದಿ ಮಗ ತಾನು ಚಲಾಯಿಸುತ್ತಿದ್ದ ಮೊಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ರೋಡಿನ ಮೇಲೆ ಸ್ಕೀಡ ಆಗಿ ಬಿದ್ದು. ಬಲ ಹುಬ್ಬಿನ ಹತ್ತಿರ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು. ಸದರಿ ಘಟನೆ ನಡೆದಾಗ ನಿನ್ನೆ ದಿನಾಂಕ 02-12-2013 ರಂದು ರಾತ್ರಿ 9.30 ಗಂಟೆ ಸುಮಾರಿಗೆ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಫರತಾಬಾದ ಠಾಣೆ : ಕಡಣಿ ಗ್ರಾಮದಲ್ಲಿ ಮಹಾಲಕ್ಷ್ಮಿ ದೇವಿಯ ಗುಡಿಯ ಕಟ್ಟೆಯ ಮೇಲೆ ಕೆಲವು ಜನರು ಕುಳಿತುಕೊಂಡು ಇಸ್ಪೇಟ ಜೂಜಾಟ ಆಡುತ್ತಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಟ ಆಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ 6  ಜನರನ್ನು ಹಿಡಿದುಕೊಂಡರು. ಪಿ.ಎಸ್. ಸಾಹೇಬರು ಸದರಿಯವರಿಗೆ ವಿಚಾರಿಸಿ ಚೇಕ ಮಾಡಲಾಗಿ ಅವರಲ್ಲಿ ಒಬ್ಬೋಬ್ಬರಾಗಿ ತಮ್ಮ ಹೆಸರು 1. ಬಸವರಾಜ ತಂದೆ ಭೀಮಶಾ ಆಳಂದಕರ ಸಾ: ಶರಣಸಿರಸಗಿ 2. ರಾಜಶೇಖರ ತಂದೆ ಹಣಮಂತ್ರಾಯ ಬೇರಜಿ ಸಾ:ಕಡಣಿ 3. ಮಲ್ಲಿಕಾರ್ಜುನ ತಂದೆ ಗುರಶಾಂತಪ್ಪಾ ಸಿದ್ದಣಗೋಳ ಸಾ: ಕಡಣಿ  4. ಪ್ರದೀಪ ತಂದೆ ಸಿದ್ರಾಮ ದ್ಯಾವನ ಸಾ: ಕಡಣಿ 5. ದೇವಿಂದ್ರಪ್ಪಾ ತಂದೆ ಹಣಮಂತ್ರಾಯ ಕರಿಕಲ್ಲ ಸಾ: ಕಡಣಿ  6. ಚಿದಾನಂದ ತಂದೆ ಚಂದ್ರಶಾ ಸಿಂಗನ ವಯ: ಸಾ: ಕಡಣಿ 52 ಇಸ್ಪೇಟ ಎಲೆಗಳು ಅಂದಾರ ಬಾಹರ ದೈವದ ಜೂಜಾಟಕ್ಕೆ ಬಳಸಿದ ಒಟ್ಟು ಹಣ  2900=00 ರೂ ಗಳು ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಫಿರೋಜಾಬಾದ ಗ್ರಾಮದಲ್ಲಿ ಅಕ್ಕ ಮಹಾದೇವಿಯ ಗುಡಿಯ ಮುಂದೆ ಕುಳಿತು ಕೆಲವು ಜನರು ಕುಳಿತುಕೊಂಡು ಇಸ್ಪೇಟ ಜೂಜಾಟ ಆಡುತ್ತಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಂಚರು ಹಾಗು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಗುಡಿಯ ಹಿಂದೆ ನಿಂತು ನೋಡಲಾಗಿ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 4 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಜೂಜಾಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 4 ಜನರನ್ನು ಹಿಡಿದುಕೊಂಡರು. ಪಿ.ಎಸ್. ಸಾಹೇಬರು ಸದರಿಯವರಿಗೆ ವಿಚಾರಿಸಿ ಚೇಕ ಮಾಡಲಾಗಿ 1. ಸಿದ್ದಣ್ಣಾ ತಂದೆ ವೀರಬಸಪ್ಪಾ ದುಧನಿ ಸಾ: ಫಿರೋಜಾಬಾದ 2. ಗುಂಡಪ್ಪಾ ತಂದೆ ಬಸವರಾಜ ಶಿರೂರ ಸಾ:ಫಿರೋಜಾಬಾದ 3.) ಸಿದ್ರಾಮಪ್ಪಾ ತಂದೆ ಬಸವರಾಜ ನೆಲೋಗಿ ಸಾ: ಫಿರೋಜಾಬಾದ 4. ರಾಜು ತಂದೆ  ಶಿವಶರಣಪ್ಪಾ ಮಾಲಗತ್ತಿ ಸಾ: ಫಿರೋಜಾಬಾದ ಇವರಿಂದ 52 ಇಸ್ಪೇಟ ಎಲೆಗಳನ್ನು ಮತ್ತು  ಒಟ್ಟು ಹಣ  3720=00 ರೂ ಗಳು ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡಡು ಠಾಣೆಗೆ ಬಂದು ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಸುರೇಶ ಬೆಂಡೆಗುಂಬಳ ಪಿ.ಎಸ್.ಐ ಅಫಜಲಪೂರ ಪೊಲೀಸ್ ಠಾಣೆ ರವರು ದಿನಾಂಕ 02-12-2013 ರಂದು ಅಮವಾಸೆ ಇದ್ದರಿಂದ ಘತ್ತರಗಾ ಗ್ರಾಮದ ಶ್ರೀ ಭಾಗ್ಯವಂತಿ ದೇವಿಯ ದರ್ಶನಕ್ಕೆ ಸುಮಾರು ಜನರು ಬರುವ ಸಂಭಂದ ಸದರಿ ಬಂದೊಬಸ್ತ ಕರ್ತವ್ಯ ಕುರಿತು ಬೆಳಿಗ್ಗೆ 7:00 ಗಂಟೆಗೆ ಸಿಬ್ಬಂದಿಯವರೊಂದಿಗೆ ಘತ್ತರಗಾ ಗ್ರಾಮಕ್ಕೆ ಹೋಗಿ ಬಂದೊಬಸ್ತ ಕರ್ತವ್ಯ ನಿರ್ವಹಿಸುತ್ತಿದ್ದಾಗ  ಮದ್ಯಾಹ್ನ 1:00 ಗಂಟೆ ಸುಮಾರಿಗೆ ಭಾಗ್ಯವಂತಿ ದೇವಿಯ ಗುಡಿಯ ಮುಂದೆ ಇದ್ದಾಗ ಖಚಿತ ಬಾತ್ಮಿ ಬಂದಿದ್ದು ಎನೆಂದರೆ, ಘತ್ತರಗಾ ಗ್ರಾಮದ ಹೊರವಲಯದಲ್ಲಿ ಅಂದರೆ ಹಾವಳಗಾ ರೋಡ ಬದಿಗೆ ಇದ್ದ ಬಸಪ್ಪ ನಿಂಬರ್ಗಿ ಈತನ ಹೊಲದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಿಡದ ಕೇಳಗೆ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ  ನಿಂತು ನೋಡಲು ಬಸಪ್ಪ ನಿಂಬರ್ಗಿ ಇವರ ಹೊಲದ ಪಕ್ಕದಲ್ಲಿ ಇರುವ ಬೇವಿನ ಗಿಡದ ಕೇಳಗೆ  ಸಾರ್ವಜನಿಕ ಸ್ಥಳದಲ್ಲಿ  ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜುಜಾಡುತ್ತಿದ್ದ 6 ಜನರನ್ನು ಹಿಡಿದು  ಹೆಸರು ವಿಳಾಸ ವಿಚಾರಿಸಲಾಗಿ 1) ಬಸವರಾಜ ತಂದೆ ಕಂಠೆಪ್ಪ ಜಮಾದಾರ 2) ಶರಣಪ್ಪ ತಂದೆ ಶಿವರಾಯ 3) ಲಗಮಣ್ಣ ತಂದೆ ಸಿದ್ದಪ್ಪ ಜಗಲಗೊಂಡ 4) ಪೀರಪ್ಪ ತಂದೆ ಲಕ್ಷ್ಮಣ ಜಗಲಗೊಂಡ 5) ಚಂದ್ರಾಮ ತಂದೆ ಅರ್ಜುನ ಚವರಾದ ಸಾ: ಎಲ್ಲರು ಘತ್ತರಗಾ ಹೀಗೆ ಒಟ್ಟು 900-00 ರೂ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿ ಪಡಿಸಿಕೊಂಡು   ಆರೋಪಿತರೊಂದಿಗೆ ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಸೇಡಂ ಠಾಣೆ : ಶ್ರೀ ವೆಂಕಟಸ್ವಾಮಿ ತಂದೆ ಪರುಶುರಾಮ ವಡ್ಡರ ಸಾ : ಬಟಗೇರಾ (ಕೆ) ತಾ : ಸೇಡಂ ರವರ ಮಗಳಾದ ಅನುಸುಜಾ ವಯಾ 17 ವರ್ಷ ಇವಳಿಗೆ ಅದೇ ಗ್ರಾಮದ ರಾಜು ತಂದೆ ಶಿವರಾಯ ಫಸಲರ ಇತನು ದಿನಾಂಕ 01-12-2013 ರಂದು ಮಧ್ಯಾಹ್ನ 1-30 ಗಂಟೆಗೆ ಪುಸಲಾಯಿಸಿ ಅಪಹರಣಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶಿವಶರಣಪ್ಪ   ತಂದೆ ಪಿರಪ್ಪ ಮಹಾಗಂವ  ಸಾನಾಗನಳ್ಳಿ  ತಾ|| ಜಿ|| ಗುಲಬರ್ಗಾ ರವರು ತನ್ನ  ದ್ವಿಚಕ್ರ  ವಾಹನ ಟಿವ್ಹಿಎಸ್  ಹೇವಿ ಡ್ಯೂಟಿ ನಂಕೆಎ 32 ಇಸಿ 3613 ನೇದ್ದು ರೇಲ್ವೆ ಸ್ಟೇಷನ ಎದುರಗಡೆ ದಿನಾಂಕ 28-112013 ರಂದು  ರಾತ್ರಿ  7;00  ಗಂಟೆಯ  ಸುಮಾರಿಗೆ ನಿಲುಗಡೆಮಾಡಿ ತರಕಾರಿ ತೆಗೆದುಕೊಂಡು ರಾತ್ರಿ 7-30 ಗಂಟೆಯ ಸುಮಾರಿಗೆ  ಬಂದು  ನೋಡಲಾಗಿ  ಸದರಿ  ದ್ವಿಚಕ್ರ ವಾಹನ  ಇರಲಿಲ್ಲಿ. ನಾನು ಇಲ್ಲಿಯವರೆಗೆ ಎಲ್ಲಾಕಡೆ ಹುಡಕಾಡಿದರೂ ಸಹ ನನ್ನ ಸೈಕಲ್ ಮೋಟಾರ ಸಿಕ್ಕಿರುವದಿಲ್ಲ.  ಕಾರಣ  ನನ್ನ ದ್ವಿಚಕ್ರ ವಾಹನ ಟಿವ್ಹಿಎಸ್ ಹೇವಿ ಡ್ಯೂಟಿ ನಂ; ಕೆಎ 32 ಇಸಿ 3613  ಚಸ್ಸಿ ನಂMD621BD11C2N58669 ಇಂಜಿನ್ ನಂ OD1NC1554032 || ಕಿ|| 20,000/- ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

02 December 2013

Gulbarga District Reported Crimes

ಮಾನವ ಜೀವಕ್ಕೆ ಅಪಾಯವಾಗುವ ಮಾದಕ ವಸ್ತು  ಬ್ರೌನ್ ಶೂಗರನ್ನು  2 ಕೆ.ಜಿ 900 ಗ್ರಾಂ ಜಪ್ತಿ 8 ಜನರ ಬಂಧನ.
ಗ್ರಾಮೀಣ ಠಾಣೆ : ದಿನಾಂಕ 01-12-2013 ರಂದು ಆಳಂದ ರೋಡಿನ ರಾಣೇಶ ಪೀರ ದರ್ಗಾದ ಹತ್ತಿರ ಕೆಲವು ಜನರು ಬ್ರೌನ ಸೂಗರ ಅಕ್ರಮವಾಗಿ ಹೊಂದಿದ್ದು ಅಲ್ಲದೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯ ಮೇರೆಗೆ ಮಾನ್ಯ ಎಸ್.ಪಿ ಸಾಹೇಬರು ಗುಲಬರ್ಗಾ ಮತ್ತು ಅಪರ ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಶ್ರೀ ಸಂತೋಷಬಾಬು, ಕೆ. ಈಪಿಎಸ್ (ಪ್ರೋ) ಎ.ಎಸ್.ಪಿ. ಗ್ರಾಮಾಂತರ ಉಪ-ವಿಭಾಗ ರವರ ನೇತ್ರತ್ವದಲ್ಲಿ ಶ್ರೀ ಡಿ.ಜಿ. ರಾಜಣ್ಣಾ ಸಿಪಿಐ ಗ್ರಾಮೀಣ ವೃತ್ತ, ಪಿ.ಎಸ್.ಐ ರವರಾದ ಹರಿಬಾ ಜಮಾದಾರ, ಗ್ರಾಮೀಣ ಠಾಣೆ, ನಿಂಪ್ಪ ಶಿವೂರ ಕಮಲಾಪೂರ ಠಾಣೆ, ಬಾಪುಗೌಡ ಪಾಟೀಲ ಮಾಹಾಗಾಂವ ಠಾಣೆ,ಹಾಗು ಪಂಚರು ಮತ್ತು  ಸಿಬ್ಬಂದಿಯವರೋಂದಿಗೆ ಮಧ್ಯಾಹ್ನ 0100 ಗಂಟೆಗೆ ರಾಣೇಶ ಪೀರ ದರ್ಗಾದ ಮುಂದೆ ಹೋದಾಗ 8 ಜನ ಆಪಾದಿತರಾದ 1.ಇರ್ಫಾನ್ ತಂದೆ ಉಸ್ಮಾನ ಪಟೇಲ್ ಇನಾಮಾದಾರ ಸಾ : ಬೆನಕನಳ್ಳಿ 2.ಗಣೇಶಕುಮಾರ ತಂದೆ ಶರಣಪ್ಪ ಹೊಸಮನಿ  ಉ: ಎಂ.ಬಿ.ಬಿ.ಎಸ್ ವಿದ್ಯಾರ್ಥಿ ತುಮಕುಮರ ಸಿಧ್ದಾರ್ಥ ಕಾಲೇಜ್ ಸಾ: ಬೆನಕನಳ್ಳಿ 3.ಶೇಖರ @ ರಾಜಶೇಖರ ತಂದೆ ಸಿದ್ದಣ್ಣ ಕ್ಯಾಸನ್ ಸಾ : ಇಂದಿರಾ ನಗರ ಚಿತಾಪುರ 4.ಶಿವಕುಮಾರ ತಂದೆ ಚೆನ್ನಪ್ಪ ಪಡಶೇಟ್ಟಿ ಸಾ: ಲಾಡ್ಜಿಂಗ್ ಕ್ರಾಸ್ ಚಿತಾಪುರ 5. ಜಯತೀರ್ಥ @ ಜಯಪ್ರಕಾಶ ತಂದೆ ಮಲ್ಲಿಕಾರ್ಜುನ ಹುಡುಗಿ ಸಾ: ವಿದ್ಯಾನಗರ ಕಾಲೋನಿ ಬೀದರ 6. ಶ್ರೀನಿವಾಸ ತಂದೆ ದೇವಿಂದ್ರಪ್ಪ @ ಗುಂಡಪ್ಪ ಯಲಗುರ್ತಿ  ಉ : ಡಿ,,ಆರ್ ಪೊಲೀಸ್ ಪೇದೆ ಬಕಲ್ ನಂ: 307  ಸಾ : ಕ್ವಾಟರ್ಸ ನಂ: 10-1-35 ಪೊಲೀಸ್ ಕಾಲೋನಿ ಬೀದರ. 7.ಮಹಿಬೂಬ ತಂದೆ ಖಾಜಾಮಿಯ್ಯಾ ಇನಾಮದಾರ  ಸಾ : ಬೆನಕನಳ್ಳಿ ತಾ : ಚಿಂಚೋಳಿ 8. ರಾಚಯ್ಯಾ @ ಬಸಯ್ಯಾ ತಂದೆ ಮೋಘಲಯ್ಯಾ ಗುತ್ತೇದಾರ ಸಾ : ಬೆನಕನಳ್ಳಿ ತಾ :  ಚಿಂಚೋಳಿ ರವರೇಲ್ಲರೂ ಕೂಡಿ ಮಾನವ ಜೀವಕ್ಕೆ ನಶೆಯಾಗುವ ಮತ್ತು ಅಪಾಯಕಾರಿಯಾಗಿರುವ ಬ್ರೌನ್ ಶೂಗರನ್ನು ಅಕ್ರಮವಾಗಿ ಯಾವುದೆ ಲೈಸೇನ್ಸ ಇಲ್ಲದೆ ಅನಧಿಕೃತವಾಗಿ ವ್ಯಾಪಾರದಲ್ಲಿ ತೊಡಗಿರುವಾಗ 0130 ಗಂಟೆಗೆ ದಾಳಿ ಮಾಡಿದಾಗ ಆಪಾದಿತರಿಂದ 2 ಕೆ.ಜಿ 900 ಗ್ರಾಂ, ಬ್ರೌನ್ ಶೂಗರ್ ಹಾಗೂ 4 ಮೋಟಾರ ಸೈಕಲಗಳು, ಮತ್ತು 7 ಮೊಬೈಲಗಳನ್ನು ಜಪ್ತಿ ಪಡಿಸಿಕೊಂಡು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 30-12-2013 ರಂದು ಸಾಯಾಂಕಾಲ 6:00 ಗಂಟೆಯ ಸುಮಾರಿಗೆ ಶ್ರೀ  ರಫೀಕ ತಂದೆ ಸೈಯದಸಾಬ ಪಾಗಾ  ಸಾ: ಇಜೇರಿ ತಾ: ಜೇವರ್ಗಿ ಜಿ:ಗುಲಬರ್ಗಾ ರವರು ತಮ್ಮ ಟಮ್‌ಟಮ್‌ ನಂ ಕೆಎ 32 ಬಿ- 7064 ನೇದ್ದನ್ನು ತೆಗೆದುಕೊಂಡು ನಾನು ಮತ್ತು ನಮ್ಮ ಅಣ್ಣ ಇಬ್ಬರೂ ಕೂಡಿ ತರಕಾರಿ ತರಲು ಗುಲಬರ್ಗಾಕ್ಕೆ ಹೊಗಿರುತ್ತೆವೆ. ತರಕಾರಿಯನ್ನು ಖರಿದಿ ಮಾಡಿಕೊಂಡು ದಿನಾಂಕ 01-12-2013 ರಂದು ನೆಸುಕಿನಲ್ಲಿ 5:00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಫಿರೊಜಾಬಾದ ದರ್ಗಾದ ಸಮೀಪ ಹೊಗುತ್ತಿರುವಾಗ ನಮ್ಮ ಎದುರುಗಡೆ ಜೇವರ್ಗಿ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಮ್ಮ ಟಮ್‌ಟಮ್‌ನ ಎದುರಿಗೆ ಡಿಕ್ಕಿ ಪಡಿಸಿದನು. ಇದರಿಂದ ನನಗೆ ಯಾವುದೆ ಗಾಯ ವಾಗಿರುವದಿಲ್ಲ. ಟಮ್‌ಟಮ್‌ನಲ್ಲಿದ್ದ ನಮ್ಮಣ್ಣನಿಗೆ ರಕ್ತಗಾಯವಾಗಿದ್ದಲ್ಲದೆ ಎದಗೆ ಒಳಪೆಟ್ಟಾಗಿರುತ್ತದೆ. ನಂತರ ಸದರಿ ಕಾರ ನಂ. ನೋಡಲಾಗಿ ಕೆಎ 32 ಎಮ್‌-6921 ಅಂತಾ ಇದ್ದು ಅದರ ಚಾಲಕನ ಹೆಸರು ಸಿದ್ದಲಿಂಗಪ್ಪ ಅಂತಾ ಗೊತ್ತಾಗಿರುತ್ತದೆ. ಕಾರ ಚಾಲಕನಿಗೆ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜುಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಫರಥಾಬಾದ ಠಾಣೆ : ನಂದಿಕೂರ ಗ್ರಾಮದಲ್ಲಿ ಕೆಲವು ಜನರು ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಇಟ್ಟು ಇಸ್ಪೆಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಮೇರೆಗೆ ಮಾನ್ಯ ಎ.ಎಸ್.ಪಿ ಸಾಹೇಬರು ಮಾರ್ಗದರ್ಶನದಲ್ಲಿ ಹೋಗಿ ಗುಡಿಯ ಹಿಂದೆ ನಿಂತು ನೋಡಲಾಗಿ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 4 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಜೂಜಾಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು  ದಾಳಿ ಮಾಡಿ 3 ಜನರನ್ನು ಹಿಡಿದುಕೊಂಡಿದ್ದು ಒಬ್ಬನು ಓಡಿ ಹೋದನು. ನಾನು ಸದರಿಯವರಿಗೆ ವಿಚಾರಿಸಿ ಚೇಕ ಮಾಡಲಾಗಿ ಅವರಲ್ಲಿ 1. ಮಹೇಶ ತಂದೆ ದೇವಿಂದ್ರ ಚವ್ಹಾಣ ಸಾ:ನಂದಿಕೂರ ತಾಂಡಾ 2.ಬಾಬು ತಂದೆ ಶಿವಶರಣಪ್ಪಾ  ಸಕಪಲ  3. ರಾಜು ತಂದೆ ಕಾನು ಚವ್ಹಾಣ   ಸಾ:ನಂದಿಕೂರ ತಾಂಡಾ  ಅಲ್ಲದೆ ಓಡಿ ಹೋದವನ ಹೆಸರು  ನಾಗಪ್ಪಾ ಗುತ್ತೇದಾರ ಸಾ:ನಂದಿಕೂರ ಇರುತ್ತಾನೆ ಅಂತಾ ತಿಳಿಸಿದರು. ಒಟ್ಟು 5120=00 ರೂಗಳು ಹಾಗು  52 ಇಸ್ಪೇಟ ಮತ್ತು ಎರಡು ಮೊಬೈಯಲ್ ಗಳು ಹೀಗೆ ಒಟ್ಟು 5920=00 ರೂ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು ಆಪಾದಿತರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೈದಿ ಅ ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 01-12-2013 ರಂದು ಸಾಯಂಕಾಲ 7:00 ಗಂಟೆಗೆ ಕೇಂದ್ರ ಕಾರಾಗೃಹದ ಸಿಬ್ಬಂದಿಯವರಾದ ಶ್ರೀ ಗುರುರಾಜ .ಎನ್. ಕಾಮಾ ವಿಕ್ಷಕ ಇವರು ಪೊಲೀಸ ಠಾಣೆಗೆ ಹಾಜರಾಗಿ ಕೇಂದ್ರ ಕಾರಾಗೃಹದ ಅಧೀಕ್ಷಕರು ಎಮ್. ಸೋಮಶೇಖರ ರವರು ನೀಡಿದ ಲಿಖಿತ ಫಿರ್ಯಾದಿ ತಂದು ಹಾಜರ ಪಡಿಸಿದ್ದು ಸದರಿ ಲಿಖಿತ ಫಿರ್ಯಾದಿ ಸಾರಾಂಶವೆನೆಂದರೆ ಈ ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿ 19458 ಆಶಾಬೀ ತಂದೆ ಚಾಂದ ಮಹಿಬೂಬಸಾಬ ಸಾ: ದೇವದುರ್ಗ ತಾ: ದೇವದುರ್ಗ ಜಿ: ರಾಯಚೂರ ಎಂಬಾಕೆಯು 01 ವರ್ಷ ಶಿಕ್ಷೆ ಅನುಭವಿಸುತ್ತಿದ್ದು ವಯಸ್ಸಾಗಿದರಿಂದ ಅನಾರೋಗ್ಯದಿಂದ ಬಳಲುತಿದ್ದರಿಂದ ಈ ಸಂಸ್ಥೆಯ ವೈದ್ಯಾಧಿಕಾರಿಗಳು ಮೇಲ್ಕಾಣಿಸಿದ ಬಂದಿಯನ್ನು ಅಂದೆ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದರು. ಸದರಿ ಬಂಧಿಯು ಇಂದು ದಿನಾಂಕ: 01-12-2013 ರ ಮದ್ಯಾಹ್ನ 03:00 ಗಂಟೆಯ ಸಮಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 30-11-2013 ರಂದು ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಕಲ್ಲಿನ ವಿಷಯದ ಸಂಬಂಧ ಕಸ್ತೂರಿಬಾಯಿ ತಂ, ಗುರುಪಾದಯ್ಯ ಸ್ವಾಮಿ ಚನ್ನಮ್ಮ ಗಂ, ಶಿವಲಿಂಗಯ್ಯ ಸ್ವಾಮಿ, ಶಿವಲಿಂಗಯ್ಯ ತಂ, ಗುರುಪಾದಯ್ಯ ಸ್ವಾಮಿ ಇವರೆಲ್ಲರೂ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಕಸ್ತೂರಿಬಾಯಿ ಇವಳು ಹಲ್ಲಿನಿಂದ ಬಲಕೈಗೆ ಕಚ್ಚಿದ್ದು ಶಿವಲಿಂಗಯ್ಯ ಇತನು ನನ್ನ ತಲೆ ಮೇಲಿನ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಿ ಅವರೆಲ್ಲರೂ ಕೂಡಿ ಜೀವದ ಬೆದರಿಕೆ ಹಾಕಿರುತ್ತಾರೆ ಶ್ರೀಮತಿ ಸುವರ್ಣ ಗಂ ಸೂರ್ಯಕಾಂತ ಸುಂಕೆನವರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಅಖಿಲಾಬೇಗಂ ಗಂಡ ಮಹ್ಮದ ಮದಾರ ಸಾ;ಬುದ್ದನಗರ ಸ್ಟೇಷನ ಎರಿಯಾ ಗುಲಬರ್ಗಾ ಇವರನ್ನು ತಂದೆ ತಾಯಿಯವರು ದಿನಾಂಕ 02.11.2011 ರಂದು ಮಹ್ಮದ ಮದಾರ ಇತನೊಂದಿಗೆ ಸಂಪ್ರದಾಯದಂತೆ ಜೆ.ಕೆ ಪಂಕ್ಷನ್ ಹಾಲದಲ್ಲಿ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ವರನಿಗೆ ವರದಕ್ಷೀಣೆ ವರೋಪಚಾರ ಅಂತಾ 1 ವರೆ ತೊಲೆ ಬಂಗಾರ 25.000/-ರೂಪಾಯಿ ಕೊಟ್ಟಿದ್ದು ಅಲ್ಲದೇ ಗೃಹಪಯೋಗಿ ಸಾಮಾನುಗಳು ಕೂಡ ಕೊಟ್ಟಿದ್ದು ಇರುತ್ತದೆ . ನನ್ನ ಗಂಡ ದಿನಾಲೂ ಕುಡಿದು ಬಂದು ನಿನ್ನ ತವರು ಮನೆಯಿಂದ 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ನಾನು ಹಣ್ಣಿನ ವ್ಯಾಪಾರ ಮಾಡುತ್ತೇನೆ. ಅಂತಾ ಹಿಂಸೆ ಕೊಡುತ್ತಿದ್ದನು. ಹಾಗೂ ನನ್ನ ಅತ್ತೆಯಾದ ರಜಿಯಾ ಕೂಡ ಇನ್ನು 3 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತಾ ಹಿಂಸಿಸುತ್ತಿದ್ದಳು. ದಿನಾಂಕ 07.11.2013 ರಂದು ಬೆಳಗ್ಗೆ 11 ಎ.ಎಂಕ್ಕೆ ನನ್ನ ಗಂಡ ಮಹ್ಮದ ಮದಾರ ಅತ್ತೆ ರಜಿಯಾ ಹಾಗೂ ನಾದಿನಿಯರಾದ ಪರವೀನ, ವಾಹೀದಾ ಮೈದುನ ಮಹ್ಮದ ಗೌಸ ಇವರುಗಳು ನನ್ನ ತವರು  ಮನೆಗೆ ಬಂದು ರಂಡಿ ತವರು ಮನೆಯಿಂದ 1 ಲಕ್ಷ ರೂಪಾಯಿ 3 ತೊಲೆ ಬಂಗಾರ ತೆಗೆದುಕೊಂಡು ಬಾ ಅಂದರೆ ಬಂದು ತವರು ಮನೆಯಲ್ಲಿ ಕುಳಿತಿರುವಿಯಾ ಅಂತಾ ನನ್ನ ಕೂದಲು ಹಿಡಿದು ಒದ್ದು ಹೊಡೆಬಡೆಮಾಡಿ ಅವಾಚ್ಯ ಶಬ್ದಗಳಿಂದ ಬೈದು  ನನಗೆ ಹಣ ಮತ್ತು ಬಂಗಾರವನ್ನು ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ  ಕಿರುಕುಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಮಲ್ಲೇಶ ತಂದೆ ಹಣಮಂತ ಮೇತ್ರೆ ಸಾ;ಶಹಾ ಹುಸೇನಿ ಚಿಲ್ಲಾ ಹತ್ತಿರ ಬೋರಾಬಾಯಿ ನಗರ ಗುಲಬರ್ಗಾ ಇವರ ಮಗಳಾದ ಕು; ನೀಲು @ ನೀಲಮ್ಮ ವಯ;11 ವರ್ಷ ಇವಳು ದಿನಾಂಕ 23.11.2013 ರಂದು ಸಂಜೆ 6.30 ಗಂಟೆಯ ಸುಮಾರಿಗೆ ಮನೆಯ ಮುಂದೆ ಆಟವಾಡುತ್ತಿದ್ದವಳು ನಂತರ 7 ಗಂಟೆಯ ಸುಮಾರಿಗೆ ನೋಡಲಾಗಿ ಅವಳು ಮನೆಯ ಮುಂದೆ ಇರಲಿಲ್ಲಾ ಎಲ್ಲಿಯಾದರೂ ಬೇರೆ ಕಡೆ ಹೋಗಿರಬಹುದು ಅಂದುಕೊಂಡು ಓಣಿಯಲ್ಲಿ ಹುಡುಕಾಡಿದ್ದು ಸಿಗಲಿಲ್ಲಾ ಅಲ್ಲದೇ ನಮ್ಮ ಸಂಬಂದಿಕರ ಮನೆಗಳಿಗೆ ಮತ್ತು ಊರುಗಳಿಗೆ ಹೋಗಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಅಮತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

01 December 2013

Gulbarga District Reported Crimes

ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಶಿವಪ್ಪ ತಂ ಮಲ್ಲಪ್ಪ ರಾಜೋಳ  ಸಾ|| ಕೋಡ್ಲಾ ತಾ|| ಸೇಡಂ ಜಿ|| ಗುಲಬರ್ಗಾ ರವರು ದಿನಾಂಕ: 29-11-13 ರಂದು ಸಾಯಂಕಾಲ 5.15 ಗಂಟೆಯ  ಸುಮಾರಿಗೆ  ಹೀರೊ ಹೊಂಡಾ ನಂ ಕೆ.ಎ-37-ಕ್ಯೂ-9952 ನೇದ್ದರ ಮೇಲೆ ಬಬಲಾದ ಐಕೆ ಗ್ರಾಮದಿಂದ ಅಂಕಲಗಿ ಮಾರ್ಗವಾಗಿ ಗುಲಬರ್ಗಾಕ್ಕೆ ಹೋಗುವಾಗ ಕಗ್ಗನಮಡ್ಡಿ ಕ್ರಾಸ ದಾಟಿ ಮುಂದೆ ಒಂದು ಕ್ರೂಸರ ಹೋಗುತ್ತಿದ್ದು ಹಿಂದೆ ಹೋಗುವಾಗ ಒಮ್ಮಲೆ ಕ್ರೂಸರ ಚಾಲಕನು ತನ್ನ ಕ್ರೂಸರನ್ನು ಸದರಿ ವಾಹನ ನಿಲ್ಲಿಸಿದ್ದಾಗ ತನ್ನ ಮೋಟಾರ ಸೈಕಲನ್ನು ಬಾಜು ಮಾಡಿಕೊಂಡು ಮುಂದೆ ಹೋಗಬೇಕೆ ನ್ನುವಸ್ಟರಲ್ಲಿ ಎದುರುಗಡೆಯಿಂದ ಕೆ,ಎಸ್,ಅರ್,ಟಿ,ಸಿ, ಬಸ್ಸ ನಂ ಕೆ,ಎ, 38 ಎಫ್,697 ಚಾಲಕ ಇತನು ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ಡಿಕ್ಕಿ ಹೋಡೆದ ಪ್ರಯುಕ್ತ ತನಗೆ ಮೋಳಕಾಲದಿಂದ ಪಾದದವರೆಗೆ ಭಾರಿ ರಕ್ತಗಾಯವಾಗಿದ್ದು ಬಲಗೈ ನಡುಬೆರಳಿಗೆ ಹಾಗೂ ಇತರೆ ಕಡೆ ಭಾರಿಗಾಯಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಪ್ರಭುಲಿಂಗ ತಂದೆ ದಯಾನಂದ ಬೀರಾದಾರ ಸಾ|| ಕಲಕೊಟಗಿ ಹಾ||ವ|| ಮಹಾಗಾಂವ ತಾ||ಜಿ|| ಗುಲಬರ್ಗಾ  ರವರು ದಿನಾಂಕ 29-11-2013 ರಂದು ಬೆಳಮಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ತನಗೆ ಹಾಗೂ ಆಳಂದ ವಲಯದ ಬಿ.ಆರ್.ಪಿ ಕಲ್ಯಾಣರಾವ ಇಬ್ಬರಿಗೂ ಮುಖ್ಯ ಅತಿಥಿಯಾಗಿ ಕರೆಯಿಸಿದ್ದರಿಂದ ಬೆಳಿಗ್ಗೆ 10:30 ಗಂಟೆಗೆ ತನ್ನ ಮೋಟಾರ ಸೈಕಲ್ ನಂ: ಕೆ.ಎ-32-ಆರ್-404 ನೇದ್ದರ ಮೇಲೆ 10:30 ಎ.ಎಮ್ ಕ್ಕೆ ಮಹಾಗಾಂವ ದಿಂದ ಹೊರಟ್ಟಿದ್ದು ಮೋಟಾರ ಸೈಕಲ್ ತಾನೆ ಚಲಾಯಿಸುತ್ತಿದ್ದು ಕಲ್ಯಾಣರಾವ ಹಿಂದೆ ಕುಳಿತ್ತಿದ್ದು ಮಹಾಗಾಂವ ತಾಂಡಾದ ಸೀಮಾಂತರದ ಗುಡ್ಡದ ಹತ್ತಿರ ರೋಡಿನ ಎಡಗಡೆಯಿಂದ ಮೋಟಾರ ಸೈಕಲ್ ಸಾಹುಕಾಶವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ 10:45 ಎ.ಎಮ ಕ್ಕೆ ಎದುರುಗಡೆಯಿಂದ ಟಾಟಾ ಇಂಡಿಕಾ ಕಾರ ನಂ: ಎಮ್,.ಹೆಚ್-06-ಎಮ್-8270 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆಭಾರಿರಕ್ತಗಾಯಗಳಾಗಿ ಕಾಲು ಮತ್ತು ಕೈ ಮುರಿದಿರುತ್ತದೆ. ಎದೆಯ ಎಡಭಾಗಕ್ಕೆ ಭಾರಿಒಳಪೆಟ್ಟಾಗಿರುತ್ತದೆ ಹಾಗೂ ಕಲ್ಯಾಣರಾವ ಇತನಿಗೆ ಭಾರಿರಕ್ತಗಾಯಗಳಾಗಿರುತ್ತವೆ ಅಪಘಾತ ಪಡಿಸಿದ ಕಾರ ಅಲ್ಲೆ ನಿಂತಿದ್ದು ಅದರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಿದಾಗ ಆತ ಹೆಸರು ಹೇಳದೆ ಕಾರು ತೆಗೆದುಕೊಂಡು ಓಡಿಹೋಗಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ :  ದಿನಾಂಕ 30-11-2013 ರಂದು  2.30 ಎ,ಎಮ್,ಕ್ಕೆ ಎಮ್,ಡಿ, ಮೀನಿರ ಪಾಶ ತಂ ಇಮಾಮಸಾಬ  ಸಾ|| ಬಸವಕಲ್ಯಾಣ  ಈತನು ತನ್ನ ವಶದಲ್ಲಿದ್ದ ಲಾರಿ ನಂ ಕೆ,ಎ, 39 -7160  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ  ಲಾರಿ ಪಲ್ಟಿ ಹೊಡೆಯಿಸಿ ಲುಕ್ಷಾನ ಮಾಡಿರುತ್ತಾನೆ ಅಂತಾ ಶ್ರೀ ಶೌಕತಅಲಿ ತಂ ಮಿಯಾಜಾನಿ ಸೌದಾಘರ ಸಾ||ಬಜಾರ ಗಲ್ಲಿ ಮನ್ನಾಎಖೇಳ್ಳಿ ತಾ|| ಹುಮನಾಬಾದ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಂಗಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಶಾಹಾಬಾದ ನಗರ ಠಾಣೆ : ದಿನಾಂಕ 30-11-2013 ರಂದು 1-15 ಪಿಎಮ್ ಕ್ಕೆ ಶ್ರೀ ಮಲ್ಲಿಕಾರ್ಜುನ ತಂದೆ ಶಿವಣ್ಣಾ ಕಿರಣಗಿ ಸಾ: ಅಶೋಕ ನಗರ ಶಹಾಬಾದ ರವರ ತಂದೆಯಾದ ಶಿವಣ್ಣಾ ಕಿರವಣಿ ಇವರು ಮನೆಯಿಂದ ಹೊನಗುಂಟಾ ಕ್ರಾಸ ಕಡೆಗೆ ನಡೆದುಕೊಂಡು ರೋಡಿನ ಪಕ್ಕದಲ್ಲಿ ಹೋಗುತ್ತಿದ್ದಾಗ ಜೇವರ್ಗಿ ಕ್ರಾಸದಿಂದ ಹೊನಗುಂಟಾ ಕ್ರಾಸ ಕಡೆಗೆ ಟ್ಯಾಕ್ಟರ್ ನಂ: ಕೆ.ಎ-32/ಟಿ.ಎ-2056/57 ನೇದ್ದರ ಚಾಲಕನು ತನ್ನ ಟ್ಯಾಕ್ಟರನ್ನು ಅತೀವೇಗ ಮತ್ತು ನಿಷ್ಕಾಳಜಿತದಿಂದ ಚಲಾಯಿಸಿಕೊಂಡು ಬಂದು ನಮ್ಮ  ತಂದೆಗೆ ಹಿಂದಿನಿಂದ ಡಿಕ್ಕಿ ಹೊಡೆದು ಟ್ಯಾಕರ ಚಾಲಕನು ತನ್ನ ಟ್ಯಾಕರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಇದರಿಂದ ನಮ್ಮ ತಂದೆಗೆ ಬಲಗಡೆ ಹಣೆಗೆ , ಬಲಗ ಮೊಳಕಾಲಿಗೆ, ಬಲಗಡೆ ಮುಖಕ್ಕೆ , ಬಲ ಭುಜಕ್ಕೆ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು ಮತ್ತು ಬಲಗೈ ಬೆರಳಿಗೆ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 30-11-2013 ರಂದು ಬೆಳಗ್ಗೆ 11.00 ಗಂಟೆಯ ಸೂಮಾರಿಗೆ ಕಲ್ಲಿನ ವಿಷಯದ ಸಂಬಂದ ಸುವರ್ಣ ಗಂ ಸೂರ್ಯಕಾಂತ ಸುಂಕೆನವರ , ಸೂರ್ಯಕಾಂತ ತಂ ಕೋಬಣ್ಣ ಸುಂಕೆನವರ ಪರಮೇಶ್ವರ ತಂ ಸೂರ್ಯಕಾಂತ ಸುಂಕೆನವರ , ಇವರೆಲ್ಲರೂ ಕೂಡಿ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಕೈಯಿಂದ ಹೋಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿ ತಲೆಯ ಮೇಲಿನ ಕೂದಲು ಹಿಡಿದು ಎಳದಾಡಿ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಕು: ಕಸ್ತೂರಿಬಾಯಿ ತಂ ಗುರುಪಾದಯ್ಯ ಸ್ವಾಮಿ ಸಾ|| ಕುರಿಕೋಟ ತಾ||ಜಿ|| ಗುಲಬರ್ಗಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.