POLICE BHAVAN KALABURAGI

POLICE BHAVAN KALABURAGI

22 September 2013

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ಶ್ರೀ ಅವಿನಾಶ ತಂದೆ ಬಾಬುರಾವ ಶಿವಕೇರಿ, , ಸಾಃ ಮ. ನಂ. 260-261, ಆದರ್ಶ ನಗರ ಗುಲಬರ್ಗಾ  ರವರು ದಿನಾಂಕ 15-09-2013 ರಂದು ರಾತ್ರಿ  ಆದರ್ಶ ನಗರ ಫ್ಯಾನ್ಸಿಕ್ರಾಸ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಬಸವೇಶ್ವರ ಕಾಲೂನಿ ಕಡೆಯಿಂದ ಒಂದು ಸಿಲವರ ಬಣ್ಣದ ಮೋಟಾರ ಸೈಕಲ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಎದರುನಿಂದ ಡಿಕ್ಕಿ ಹೊಡೆದು ಅಪಘಾಥ ಪಡಿಸಿ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶ್ರೀಶೈಲ ರೆಡ್ಡಿ ತಂದೆ ನೀಲಕಂಠಪ ರೆಡ್ಡಿ ಸಾಃ ಸುಭಾಷ ಚೌಕ್ ಬ್ರಹ್ಮಪೂರ ಗುಲಬರ್ಗಾ ರವರು  ದಿನಾಂಕಃ 21-09-2013 ಮುಂಜಾನೆ 07:45 ಗಂಟೆ ಸುಮಾರಿಗೆ ಸುಭಾಷ ಚೌಕ್ ಬ್ರಹ್ಮಪೂರ ದಿಂದ ಹೊರಟು ಓಂ ನಗರ ಗೇಟಿಗೆ ಒಂದು ಆಟೋದಲ್ಲಿ ಬಂದು ಇಳಿದು ತನ್ನ ಗೆಳೆಯನಾದ ರೇವಣಯ್ಯ ಸ್ವಾಮಿ ಇವನೊಂದಿಗೆ ಇ.ಎಸ್.ಐ ಆಸ್ಪತ್ರೆಯ ಕಟ್ಟಡದ ಕಾಮಾಗಾರಿ ಕೆಲಸಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಓಂ ನಗರ ಗೇಟ್ ದಿಂದ ಮುಂದೆ ಇರುವ ಹೊಟೆಲ್ ಹತ್ತಿರ ಬಂದಾಗ ಒಬ್ಬ ಆಟೋ ಚಾಲಕ ನಂ. ಕೆ.ಎ. 32 ಎ 9744 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಡಿಕ್ಕಿ ಹೊಡೆದು ಭಾರಿಗಾಯಪಡಿಸಿಆಟೋ ಚಾಲಕನು ತನ್ನ ಆಟೋವನ್ನು ನಿಲ್ಲಿಸಿದಂತೆ ಮಾಡಿ ಹಾಗೇ ಚಲಾಯಿಸಿಕೊಂಡು ಹೋಗಿರುತ್ತಾನೆ. ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಆಕಸ್ಮಿಕ ಬೆಂಕಿ ಅಪಘಾತ :
ಫರತಾಬಾದ ಠಾಣೆ : ಶ್ರೀ ಅನೀಲಕುಮಾರ ತಂದೆ ಅಲಿಸಾಬ ಪವಾರ ಸಾ:ಮನೆ ನಂ: 117 ವಿಧ್ಯಾ ನಗರ ಕಾಲೋನಿ ಎಮ್.ಎಸ್.ಕೆ.ಮಿಲ್ಲ ರಸ್ತೆ ಗುಲಬರ್ಗಾ ಇವರು ದಿನಾಂಕ 20-09-2013 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಶಹಾಬಾದದಲ್ಲಿ ನ್ನ ಖಾಸಗಿ ಕೆಲಸ ಇರುವದರಿಂದ ನಮ್ಮ ಮಾವರಾದ ಮಧುಕರರಾವ ಇವರು ಖರೀಧಿಸಿದ ಹೊಸ ಕಾರನ್ನು ತಗೆದುಕೊಂಡು ಶಹಾಬಾದಕ್ಕೆ ಹೋಗಿ ಮರಳಿ ಗುಲಬರ್ಗಾಕ್ಕೆ ಬರುವ ಸಲುವಾಗಿ ರಾತ್ರಿ 11.00 ಗಂಟೆಗೆ ನಾನು ಸದರ ಹೊಸ ಕಾರನಲ್ಲಿ ಕುಳಿತು ಶಾಹಾಬಾದ ಜೇವರ್ಗಿ ರೋಡಿನ ಮೂಲಕ ಹೊರಟಿದ್ದು, ರಾತ್ರಿ 11-30 ಗಂಟೆಯ ಸುಮಾರಿಗೆ ಶಾಹಾಬಾದ ಕ್ರಾಸ ಇನ್ನೂ 1 ಕಿ.ಮಿ ಇರುವಾಗಲೇ ನಮ್ಮ ಕಾರಿನಲ್ಲಿ ವಾಯರ್ ಸುಟ್ಟ ವಾಸನೆ ಬರುತ್ತಿದ್ದಾಗ ನಮ್ಮ ಕಾರ ಚಾಲಕನು ಕಾರು ನಿಲ್ಲಿಸಿ ನೋಡಿದಾಗ ಕಾರಿನ ಇಂಜೀನ ಹತ್ತಿರ ಹೊಗೆ ಬರುತ್ತಿದ್ದನ್ನು ನೋಡಿ ಕಾರನಿಂದ ಹೊರಗಡೆ ಬಂದು ನೋಡುತ್ತಿದ್ದಂತೆ ಕಾರಿನ ಒಳಗಡೆ ಶಿಟಿಗೆ ಬೆಂಕಿ ಹತ್ತಿಕೊಂಡಿತ್ತು. ರಾತ್ರಿ ಇರುವದರಿಂದ ನಮಗೆ ಏನು ಮಾಡಬೇಕು ಅಂತಾ ತಿಳಿಯದೆ ಫಾಯರ್ ಸ್ಟೆಷನಕ್ಕೆ ಫೊನ ಮಾಡಿ ತಿಳಿಸಿದೇವು. ಫಾಯರ್ ವಾಹನ ಬರುವಾಗಲೇ ನಮ್ಮ ಕಾರಿಗೆ  ಸಂಪೂರ್ಣ ಬೆಂಕಿ ಹತ್ತಿಕೊಂಡಿದ್ದು ಇರುತ್ತದೆ. ಫಾಯರ್ ವಾಹನ ಬಂದು ಸದರಿ ಬೆಂಕಿಯನ್ನು ಆರಿಸಿದರು. ನಂತರ ನಮ್ಮ ಕಾರ ನೋಡಲು ಸಂಪೂರ್ಣವಾಗಿ ಸುಟ್ಟಿದ್ದು ಇರುತ್ತದೆ, ಸದರಿ ಕಾರಿನ ವಾಯರ ಸಕೀರ್ಟಿನಿಂದ ಹೊಗೆ ಎದ್ದು ಬೆಂಕಿ ಹತ್ತಿದ್ದು ಇರುತ್ತದೆ. ಬೆಂಕಿಯಿಂದ ನಮ್ಮ ಹೊಸ ಕಾರ ಇಂಜಿನ ನಂ 1 ಎನ್ ಡಿ 1215477 ಚೆಸ್ಸಿ ನಂ MBJ53NEE004009030~0112 ನೇದ್ದು ವಾಯರ ಶಾಕ ಸಕೀರ್ಟದಿಂದ ಆಕ್ಮಸಿಕವಾಗಿ ಬೆಂಕಿ ಹತ್ತಿ ಸಂಪೂರ್ಣವಾಗಿ ಸುಟ್ಟು ಹಾಳಾಗಿರುತ್ತದೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಶಿವಕುಮಾರ ತಂ ವೀರಭದ್ರಪ್ಪ ಮಾಗಾ ಸಾ|| ಹರಸೂರ ತಾ|| ಜಿ|| ಗುಲಬರ್ಗಾ  ರವರ ಹೆಂಡತಿಯಾದ ಮಹಾದೇವಿ ಇವಳು ತನ್ನ ಮಕ್ಕಳಾದ ಅಪೂರ್ವ, 04 ವರ್ಷ ಹಾಗೂ ಮಹೇಶ 3 ವರ್ಷದ ಗಂಡು ಮಗುವಿನೊಂದಿಗೆ ದಿನಾಂಕ 15-09-13 ರಂದು ಮದ್ಯಾಹ್ನ  12.00 ಗಂಟೆಯ ಸೂಮಾರಿಗೆ ತಮ್ಮೂರ ಸರಡಗಿ ಎಂಬುವ ಹೆಣ್ಣು ಮಗಳ ಹತ್ತಿರ ಬಟ್ಟೆ ಹೋಲೆಯವುದು ಕಲೆಯುವ ಸಂಬಂದ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಗಂಡನ ಮನೆಯಿಂದ ಹೋದವಳು ಇಲ್ಲಿಯವರೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾಳೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಸಂಬಂದಿಕರ ಊರುಗಳಿಗೆ ಹಾಗು ಇತರೆ ಕಡೆ ತಿರುಗಾಡಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 September 2013

ಜಾತಿ ನಿಂದನೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಬಸವರಾಜ ಮತ್ತು ಮಾಲಗತ್ತಿ ಗ್ರಾಮದ ಮನೊಹರ ಹಾಗೂ ವಿಠ್ಠಲ ರವರ ಹೆಣ್ಣು ಮಕ್ಕಳು ಕೂಡಿ ಕೊಂಡು ಮಾಲಗತ್ತಿ ದಿಂದ ರಾವೂರ ಕ್ಕೆ ಶಾಲೆಗೆ ಹೋಗಿದ್ದು ರಾವೂರದವರಾದ ಶರಣು ತಂದೆ ಮಲ್ಲೇಶಿ ಮತ್ತು ಅಶೋಕ ತಂದೆ ಮಲ್ಲೇಶಿ ರವರು ಸದರಿ ಹುಡಗಿಯರಿಗೆ ಚುಡಾಯಿಸಿದ ಸಂಬಂದವಾಗಿ ದಿನಾಂಕ: 20/09/2013 ರಂದು 12.30 ಪಿಎಮ್ ಕ್ಕೆ ಶ್ರೀ ಗುಂಡಪ್ಪಾ ತಂದೆ  ಯಲ್ಲಪ್ಪಾ ಕಟ್ಟಿ ಮತ್ತು ಶ್ರೀಶೈಲ ಹಾಗೂ ಮಲ್ಲಿಕಾರ್ಜುನ ಕೂಡಿ ಹೊಲಕ್ಕೆ ಹೋಗುವಾಗ 1] ಶರಣು ತಂದೆ ಮಲ್ಲೇಶಿ, ಮತ್ತು ಇತರೆ 5 ಜನರು ಹಾಗೂ ಇತರರು ಕೂಡಿಕೊಂಡು ಸದರಿಯವರಿಗೆ  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ  ನೀನು ನಿನ್ನ ಅಣ್ಣ ಮಗಳಿಗೆ ಚುಡಾಯಿಸಿದ್ದಿ ಅಂಥಾ ನಮ್ಮನ್ನು ಅಪಮಾನ ಮಾಡುತ್ತಿ ಅಂತಾ ಅವ್ಯಾಚ ಶಬ್ದುಗಳಿಂದ ಬೈದು ಜಾತಿ ನಿಂದನೆ ಮಾಡಿ ಅಲ್ಲಿಯೇ ಬಿದ್ದ ಬಡಿಗೆಯಿಂದ ತಲೆಗೆ ಹೊಡೆದು  ರಕ್ತಗಾಯ ಮಾಡಿದ್ದು ಇರುತ್ತದೆ. ಸೂಳಿ ಮಕ್ಕಳದ್ದು ಹೊಲೆಯರದ್ದು ಬಹಳ ಆಗಿದೆ ಇವರನ್ನು ಮುಗಿಸಿಯೇ ಬಿಡರಿ ಅಂತಾ ಜೀವದ ಬೇದರಿಕೆ ಹಾಕಿರುತ್ಥಾರೆ. ಸದರಿಯವರೆಲ್ಲರೂ 3 ಮೊಟಾರ ಸೈಕಲ ಮೇಲೆ ಬಂದು ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 September 2013

ಅಪಘಾತ ಪ್ರಕರಣ :
ಮುಧೋಳ ಠಾಣೆ : ಶ್ರೀ ಬಂದೇಪ್ಪ ತಂದೆ ಬಂದೇಪ್ಪ ಜಗಮೋಳ ಸಾ: ಬುರಗಪಲ್ಲಿ ಇವರು ದಿ: 17-09-2013 ರಂದು ಗಣಪತಿಯನ್ನು ನಮ್ಮೂರ ಪೆಂಟಪ್ಪ ಇವರ ಟ್ಯಾಕ್ಟರ್ ದಲ್ಲಿ ಇಟ್ಟು ಊರಿನ ಎಲ್ಲರೂ ಕೂಡಿ ಉರಲ್ಲಿ ಮೇರವಣಿಗೆ ಮಾಡುತ್ತಾ ಬಂದು ಚಂಡ್ರಕಿ ರಸ್ತೆಯಲ್ಲಿರುವ ಬಾವಿಯಲ್ಲಿ ಗಣಪತಿ ಹಾಕಲು ನಮ್ಮುರ ಗೇಟದಿಂದ ಯಾನಾಗುಂದಿ ಕಡೆಗೆ ಹೊಗುವ ರಸ್ತೆಯಲ್ಲಿ ನಾವೇಲ್ಲರೂ, ಗಣಪತಿ ಮೂರ್ತಿಯೊಂದಿಗೆ ಟ್ಯಾಕ್ಟರ್ ಟ್ರಲಿಯಲ್ಲಿ ಕುಳಿತಿದ್ದು, ದಿ: 17-09-2013 ರಂದು ರಾತ್ರಿ 2300 ಬುರಗಪಲ್ಲಿ ಗೇಟ ದಾಟಿ ಸ್ವಲ್ಪ ಮುಂದೆ ಯಾನಾಗುಂದಿ ಕಡೆಗೆ ಹೊಗುತ್ತಿದ್ದಾಗ, ಶಾಂತಯ್ಯಾ ಸ್ವಾಮಿ ಮಠದ ಎದರುಗಡೆ ರಸ್ತೆಯ ಮೇಲೆ ಹೊಗುತ್ತಿದ್ದಾಗ, ಟ್ಯಾಕ್ಟರ್ ಚಾಲನಾದ ರಮೇಶ ತಂದೆ ಚಂದ್ರಪ್ಪ ಪೊಶರ್ ಇತನು ಟ್ಯಾಕ್ಟರ್ ನ್ನು ಅತಿವೇಗ ಹಾಗು ಅಡ್ಡಾತಿಡ್ಡಿಯಾಗಿ ನಡೆಸುತ್ತಿದ್ದಾಗ ಟ್ಯಾಕ್ಟರ್ ಚಾಲಕನ ನಿಂಯತ್ರಣತಪ್ಪಿ, ಪ್ಲಟಿಯಾಗಿ ಬಿದಿದ್ದು, ಇದರಿಂದ ನಮಗೆಲ್ಲಾ. ಕೈಕಾಲುಗಳಿಗೆ ಇತರೆಕಡೆಗೆ ಎಲ್ಲಾ. ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ಸದರಿ ಟ್ಯಾಕ್ಟರ್ ಚಾಲಕನು ಅಪಘಾತ ಪಡಿಸಿ ಓಡಿ ಹೊಗಿದ್ದು, ನಂತರ ನಮ್ಮೂರಿನವರು ಯಾರೋ ಅಂಬುಲೆನ್ಸಗೆ ಫೋನ ಮಾಡಿ ಕರೆಯಿಸಿದ್ದು, ನಾವೇಲ್ಲರೂ ಅಂಬುಲೇನ್ಸನಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಗುರುಮಠಕಲ್‌ನಲ್ಲಿ ಉಪಚಾರ ಹೊಂದಿ, ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು, ಇದರಲ್ಲಿ, ಭಾರಿಗಾಯಗಳಾದಂತ, ಮಲ್ಲಪ್ಪ ತಂದೆ ತಿಪ್ಪಣ್ಣಾ ಭೋಗಮ್ಮಗೋಳ, ಇವರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಗುಲಬರ್ಗಾದಲ್ಲಿ ಸೇರಿಕೆ ಮಾಡಿರುತ್ತಾರೆ. ತಿಪ್ಪಣ್ಣ ತಂದೆ ಸಾಯಪ್ಪ ಕೊನೇರಿ ಇವರಿಗೆ ಹೆಚ್ಚಿನ ಉಪಚಾರಕ್ಕಾಗಿ ಹೈದರಾಬಾದಕ್ಕೆ ಕರೆದುಕೊಂಡು ಹೊಗಿರುತ್ತಾರೆ. ಸದರಿ ಅಪಘಾತ ಪಡಿಸಿದ ಟ್ಯಾಕ್ಟರ್ ಮೇಲೆ ನಂಬರ ಬರೆದಿರುವದಿಲ್ಲಾ. ಸದರಿ ಪ್ರಕರಣದಲ್ಲಿ ಗಾಯಾಳುವಾದ ತಿಪ್ಪಣ್ಣ ತಂದೆ ಸಾಯಪ್ಪ ಕೊನೇರಿ ಸಾ: ಬುರಗಪಲ್ಲಿ ತಾ: ಸೇಡಂ ಇತನು ಹೈದರಾಬಾದನಲ್ಲಿರುವ ನೀಖಿಲ್ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ದಿ: 19-09-2013 ರಂದು ಬೆಳಗ್ಗೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.