POLICE BHAVAN KALABURAGI

POLICE BHAVAN KALABURAGI

18 July 2013

GULBARGA DIST REPORTED CRIMES

ಮಹಿಳಾ ಪೊಲೀಸ್ ಠಾಣೆ :
ವರದಕ್ಷಿಣೆ ಕಿರುಕಿಳ ಪ್ರಕರಣ:

ಶ್ರೀಮತಿ ಸರಸ್ವತಿ ಗಂಡ ಸಿದ್ದರಾಮ್ ಅಲ್ಲಾಪೂರ  ಸಾ:ವಿವೇಕಾನಂದ ನಗರ  ಖಾದ್ರೀ ಚೌಕ ಗುಲಬರ್ಗಾ ಇವರ ಮದುವೆಯು 14 ವರ್ಷಗಳ ಹಿಂದೆ ಸಿದ್ದರಾಮ್ ಇತನೊಂದಿಗೆ ದಂಗಾಪೂರ ಗ್ರಾಮದಲ್ಲಿ ನಡೆದಿದ್ದು ಈಗ ಮಿನಾಕ್ಷೀ ಎಂಬ 10 ವರ್ಷದ ಮಗಳು ಹಾಗೂ ಆಕಾಶ ಎಂಬ 8 ವರ್ಷದ ಮಗನಿರುತ್ತಾನೆ. ಮದುವೆಯಾದ ಕೆಲವು ದಿನಗಳ ನಂತರ ಸಿದ್ದರಾಮ್ ಇತನು ಪ್ರತಿದಿನ ಕುಡಿದು ಬಂದು ಹೊಡೆ ಬಡೆ ಮಾಡಿ ತವರು ಮನೆಯಿಂದ 20 ಸಾವಿರ ರೂಪಾಯಿ ತೆಗೆದುಕೊಂಡು ಬರುವಂತೆ ಒತ್ತಾಯಿಸಿದ್ದು  ತವರು ಮನೆಯಿಂದ 20 ಸಾವಿರ ರೂಪಾಯಿ ತಂದುಕೊಟ್ಟರು ಸಹ ಹೊಡೆ ಬಡೆ ಮಾಡುತ್ತಾ ಮಾನಸಿಕ ದೈಹಿಕ ಹಿಂಸೆ ಕೊಡುತ್ತಿದ್ದು. ಅಲ್ಲದೆ ಶ್ರೀಮಂತರಾಯ ತಂದೆ ಈರಪ್ಪಾ ಮತ್ತು ಬಸಮ್ಮಾ ಗಂಡ ಬಸವರಾಜ ಸಾ:ಯಲಗುಂಡಾ ತಾ: ಬಸವಕಲ್ಯಾಣ  ಇವರ ಸಹಾಯದಿಂದ ದಿನಾಂಕ:24.08.2009 ರಂದು ಸವೀತಾ @ ಸಂಗಿತಾ ,  ಬಸವರಾಜ ತಂ. ನಿರಂಜನ ಸಾ: ದುತ್ತರಗಾವ ಇವಳೋಂದಿಗೆ ಮದುವೆಯಾಗಿದ್ದು ಸರಸ್ವತಿಗೆ ಆರೋಪಿ ಸಂಗಿತಾ , ಶ್ರೀಶೈಲ್ , ಬಸವರಾಜ, ಬಸಮ್ಮಾ, ಶ್ರೀಶೈಲ್ ತಂ. ಶ್ರೀಮಂತರಾಯ, ಬಸಮ್ಮಾ ಗಂಡ ಬಸವರಾಜ ಎಲ್ಲರೊ ತವರು ಮನೆಯಿಂದ ಇನ್ನು ಹಣ ತರುವಂತೆ ಪಿಡಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ವರದಕ್ಷಣೆ ಕಿರುಕುಳ ನೀಡಿದ ಬಗ್ಗೆ ಸಲ್ಲಿಸಿದ ಖಾಸಗಿ ದೂರಿನ ಅನ್ವಯ ಮಹಿಳಾ ಪೊಲೀಸ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ

17 July 2013

GULBARGA DIST REPORTED CRIMES

ಮಳಖೇಡ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ :
ದಿನಾಂಕ 17/07/2013 ರಂದು ಗೌಡಪ್ಪ ತಂದೆ ಬಸವಣಪ್ಪ ಕೊಲಕುಂದಿ ಸಾ.ತೊಟ್ಟನಳ್ಳಿ ತಾ. ಸೇಡಂ ರವರ ಮರಳಿನ ಲಾರಿಯನ್ನು ತಹಸಿಲ್ದಾರ ರವರು ಜಪ್ತಿ ಮಾಡಿದ ಕಾರಣ ಯಾರೋ ಉದ್ದೇಶ ಪೂರ್ವಕ ಪೋನ್ ಮಾಡಿ ತನ್ನ ಮರಳಿನ ಲಾರಿಯನ್ನು ಜಪ್ತಿ ಮಾಡಿಸಿದ್ದಾರೆ ಎಂದು ಬೈಯುತ್ತಿದ್ದಾಗ 1) ಸೂರ್ಯಕಾಂತ ತಂದೆ ಅಣ್ಣಾರಾವ ಮುದಕನಳ್ಳಿ2) ಚಂದ್ರಕಾಂತ ತಂದೆ ಅಣ್ಣಾರಾವ ಮುದಕನಳ್ಳಿ ರವರು ಬಂದು ನೀನು ನಮಗೆ ಬೈಯುತ್ತಿದ್ದಿಯಾ ಎಂದು ಹೇಳುತ್ತಾ  ಅಕ್ರಮವಾಗಿ ತಡೆದು ಅವಾಚ್ಯವಾಗಿ ಬೈದು ಹೊಡೆ ಮಾಡಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ದಿನಾಂಕ 17/07/2013 ರಂದು ಗೌಡಪ್ಪ ತಂದೆ ಬಸವಣಪ್ಪ ಕೊಲಕುಂದಿ ಸಾ.ತೊಟ್ಟನಳ್ಳಿ ತಾ. ಸೇಡಂ ರವರ ಮರಳಿನ ಲಾರಿಯನ್ನು ತಹಸಿಲ್ದಾರ ರವರು ಜಪ್ತಿ ಮಾಡಿದ ಕಾರಣ ಗೌಡಪ್ಪನು ಸೂರ್ಯಕಾಂತ ತಂದೆ ಅಣ್ಣಾರಾವ ಮುದಕನಳ್ಳಿಯ ಅಣ್ಣನೇ ತಹಸಿಲ್ದಾರರಿಗೆ ಫೋನ್ ಮಾಡಿದ್ದು ಎಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿರುವಾಗ ಸೂರ್ಯಕಾಂತ ತಂದೆ ಅಣ್ಣಾರಾವ ಮುದಕನಳ್ಳಿಯು ಗೌಡಪ್ಪನಿಗೆ ನಮ್ಮ ಅಣ್ಣನಿಗೆ ವಿನಾಃಕಾರಣ ಏಕೆ ಬಯ್ಯುತ್ತಿರುವೆ  ಎಂದು ಕೇಳಲು 1) ಗೌಡಪ್ಪ ತಂದೆ ಬಸವಣಪ್ಪ ಕೊಲಕುಂದಿ ಮತ್ತು 2) ಗೌಡಪ್ಪ ತಂದೆ ಬಸವಣಪ್ಪ ಕೊಲಕುಂದಿ ರವರುಗಳು ವಿನಾ ಕಾರಣ ಅವಾಚ್ಯವಾಗಿ ಬೈದು ಹೊಡೆ ಮಾಡಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಪತ್ನಿಗೆ ಕಿರುಕುಳ ಪ್ರಕರಣ:

ದಿನಾಂಕ 15/07/2013  ರಂದು ಸುನಿತಾ ಗಂಡ ಮಹಾಂತೇಶ ತಳವಾರ  ರವರಿಗೆ ಅವಳ ಗಂಡನಾದ ಮಹಾಂತೇಶ ತಂದೆ ದೇವಪ್ಪ ತಳವಾರ ಸಹಶಿಕ್ಷಕ ಸಾ: ಸುಂಬಡ ತಾ: ಜೇವರ್ಗಿ ಹಾ.ವ. ಮಳಖೇಡ ಈತನು ಸುನಿತಾಳ  ಮಳಖೇಡದಲ್ಲಿರುವ  ಮನಗೆ ಬಂದು ಸುನಿತಾಳಿಗೆ ಅವಾಚ್ಯವಾಗಿ ಬೈದು ಕೂದುಲು ಹಿಡಿದು  ಎಳೆದಾಡಿ ಕೈಯಿಂದ ಹೊಡೆ ಬಡೆ ಮಾಡಿ ಹಾಗು ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿದ ಬಗ್ಗೆ ಸಲ್ಲಿಸಿದ ದೂರು ಸರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

15 July 2013

GULBARGA DIST REPORTED CRIME

ಗುಲಬರ್ಗಾ ಗ್ರಾಮೀಣ  ಪೊಲೀಸ  ಠಾಣೆ

              ಶ್ರೀ. ಜಯಕುಮಾರ ತಂದೆ ಧನಸಿಂಗ ಪವ್ಹಾರ ಸಾ:ಉದನೂರ ತಾಂಡಾ ತಾ:ಜಿ:ಗುಲಬರ್ಗಾ ಕೊಟ್ಟ ಹೇಳಿಕೆ ಸಾರಂಶ ಏನೆಂದರೆ ತನ್ನ ಹೆಂಡತಿ ಸುರೇಖಾಳು ತನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿ ವಿಷಸೇವನೆ ಮಾಡಿ ತನ್ನ ವಿರುದ್ದ ಹೆಂಡತಿಗೆ ಕಿರುಕುಳ ಕೊಡುತ್ತೇನೆ ಅಂತಾ ತನ್ನ ಅತ್ತೆ ಶಾರದಾಬಾಯಿ ಕೇಸು ದಾಖಲಿಸಿದ್ದು ಕೇಸು ಕೊರ್ಟಿನ ವಿಚಾರಣೆಯಲ್ಲಿ ಇದ್ದು. ದಿನಾಂಕ:-10/07/2013 ರಂದು ಕೇಸಿನ ವಿಚಾರಣೆ ಇದ್ದ ಕಾರಣ ಕೋರ್ಟಿಗೆ ಹೋದಾಗ ರಾಜಿ ಆಗೋಣಾ ಅನ್ಯೋನದಿಂದ ಮಕ್ಕಳೊಂದಿಗೆ ಸಂಸಾರ ಮಾಡೋಣಾ ಅಂತಾ ತನ್ನ ಹೆಂಡತಿಗೆ ತಿಳಿ ಹೇಳಿದಾಗ ಅತ್ತೆ ಶಾರಾದಾಬಾಯಿ ಮತ್ತು ಬನಸಿ ರಾಠೋಡ ಅವರೆಲ್ಲರೂ ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಮಾನಸಿಕ ಕಿರುಕುಳ ಕೊಟ್ಟು ಮದುವೆ ಸಮಯದಲ್ಲಿ ಕೊಟ್ಟ ಬಂಗಾರ ವಾಪಸ್ಉ ಕೋಡು ಇಲ್ಲದಿದ್ದರಿ ನಿನಗೆ ಖಲ್ಲಾಸ ಮಾಡಿ ಬೀಡುತ್ತೇವೆ ಅಂತಾ ಜೀವದ ಭಯ ಹಾಕಿದ್ದು. ನಾನು ಮನ ನೊಂದು 3 ತೋಲಿ ಬಂಗಾರ ಹೇಗೆ ಮುಟ್ಟಿಸಲಿ ಎಂದು ಮನಸ್ಸಿನ ಮೇಲೆ ಮಾನಸಿಕವಾಗಿ ಪರಿಣಾಮ ಮಾಡಿಕೊಂಡು ಅವರು ಪದೇ ಪದೇ ಕೊಟ್ಟ ಕಿರುಕುಳದಿಂದ ಬೆಸತ್ತು ಕೊರ್ಟಿನಿಂದ ನೇರವಾಗಿ ಮನೆಗೆ ಹೋಗಿ ಮನೆಯಲ್ಲಿ ಸಂಜೆ 06:30 ಗಂಟೆ ಸುಮಾರಿಗೆ ಮನೆಯಲ್ಲಿದ್ದ ಗಾಸಲೇಟ ಎಣ್ಣೆ ಡಬ್ಬಿ ತೆಗೆದುಕೊಂಡು ಮೈಮೇಲೆ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡಿದ್ದರಿಂದ ತಲೆಯಿಂದ ತೊಡೆಯವರೆಗೆ ಪೂರ್ತಿ ಮೈ ಸುಟ್ಟಿರುತ್ತದೆ ಕಾರಣ ಸದರಿ ನನ್ನ ಹೆಂಡತಿ ಸುರೇಖ , ಅತ್ತೆ ಶಾರದಾಬಾಯಿ ಮತ್ತು ಬನಸಿರಾಠೋಡ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳ ಬೇಕು ಅಂತಾ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾದ್ದು.


                       ಇಂದು ದಿನಾಂಕ 14-07-2013  ರಂದು ಸಾಯಂಕಾಲ 08-30 ಗಂಟೆಗೆ ಜಯಕುಮಾರನು ಆಸ್ಪತ್ರೆಯಲ್ಲಿ ಗುಣ ಮುಖನಾಗದೆ ಮೃತ ಪಟ್ಟಿದ್ದು ಈ ಬಗ್ಗೆ ಮೃತನ ತಾಯಿ ಚಾಂದಿಬಾಯಿ ಕೊಟ್ಟ ಹೇಳಿಕೆ ಮೇಲಿಂದ ಮುಂದಿನ ಕ್ರಮ ಕೈಕೊಳ್ಳಲಾಗಿದೆ.