POLICE BHAVAN KALABURAGI

POLICE BHAVAN KALABURAGI

13 July 2013

GULBARGA DIST REPORTED CRIMES

ಕಳ್ಳತನ ಪ್ರಕರಣ:

ಅಶೋಕ ನಗರ ಪೋಲಿಸ್ ಠಾಣೆ:  ಅಶೋಕ ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಮನೆ ಕಳ್ಳತನ ಸ್ವತ್ತಿನ ಅಪರಾಧಗಳು ಆಗುತ್ತಿದ್ದರಿಂದ ನೂತನ ಎಸ.ಪಿ ಅಮಿತಸಿಂಗ ಐ.ಪಿ.ಎಸ, ಕಾಶೀನಾಥ ತಳಕೇರಿ ಹೆಚ್ಚುವರಿ ಎಸ.ಪಿ,   ರವರು ಸ್ವತ್ತಿನ ಅಪರಾಧಗಳ ಪತ್ತೆಗಾಗಿ ಉದಯಕುಮಾರ ಡಿ.ಎಸ.ಪಿ ರವರ ನೇತೃತ್ವದಲ್ಲಿ ಟಿ.ಹೆಚ್.ಕರಿಕಲ್ ಪಿ.ಐ ಅಶೋಕ ನಗರ,  ಎಸ.ಎಸ. ಹುಲ್ಲೂರ ಪಿ.ಐ ಶಹಾಬಾದ, ಕೆ.ಎಸ.ಕಲ್ಲದೇವರು ಪಿಎಸಐ ಅಶೋಕ ನಗರ ಹಾಗೂ ಸಿಬ್ಬಂದಿ ಜನರಾದ ಮೌಲಾಲಿ ಹೆಚ್.ಸಿ 264, ರಫಿಕ ಪಿಸಿ 370, ಶಿವಪ್ರಕಾಶ ಪಿಸಿ 615, ಚಂದ್ರಕಾಂತ ಪಿಸಿ 176, ಸುರೇಶ ಪಿಸಿ 534, ಬಸವರಾಜ ಪಿಸಿ 765, ಗುರುಮೂರ್ತಿ ಪಿಸಿ 264, ರವರನ್ನು ಒಳಗೊಂಡ ತಂಡವನ್ನು ರಚಿಸಿದ್ದು, ಈ ತಂಡವು ಕಳೆದ ಒಂದುವರೆ ವರ್ಷದಿಂದ  ಮನೆ ಕಳ್ಳತನ ಮಾಡುತ್ತಿದ್ದ, ಕುಖ್ಯಾತ ಕಳ್ಳ ಭೀಮಾಶಂಕರ @ ಭೀಮಾ ತಂದೆ ಸಂಬಣ್ಣ ಬೋಳೆವಾಡ ಸಾ: ಬೋಳೆವಾಡ ಹಾ:ವ: ಬಾಪುನಗರ ಗುಲಬರ್ಗಾ ಇತನಿಗೆ ದಸ್ತಗಿರಿ ಮಾಡಿ ಅಶೋಕ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಕ್ತಿನಗರದ ಬೆಂಜಮಿನ್ ಸುಮಿತ್ರ ರವರ ಮನೆ , ಸಂತೋಷ ಕಾಲೋನಿ ಕಲ್ಯಾಣರಾವ ಕುಲಕರ್ಣಿ , ಕೋತಂಬರಿ ಲೇಔಟದ ಮಲ್ಲಿಕಾರ್ಜುನ ಪಾಟೀಲ, ಎನ್.ಜಿ.ಓ ಕಾಲೋನಿಯ ಶಶಿಕಲಾ, ವಿದ್ಯಾನಗರದ ವೀರಶೇಟ್ಟಿ ದೊಡ್ಡಮನಿ , ಶಾಂತಿನಗರದ ಅಪ್ತಾಬ ತಂದೆ ಅಬ್ದುಲ ರಜಾಕ ರವರುಗಳ ಮನೆ ಕಳ್ಳತನ ಆಗಿದ್ದು. ಈ  6 ಬಡಾವಣೆಗಳಲ್ಲಿ  ಮನೆ ಕಳ್ಳತನವಾದ ಪ್ರಕರಣಗಳನ್ನು ಬೇದಿಸಿದ್ದು ಅಲ್ಲದೇ ಸ್ಪೇಶನ ಬಜಾರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಾಸ್ತ್ರಿನಗರ, ರಹೆಮತ ನಗರ, ಪಿ&ಟಿ ಕಾಲೋನಿ, ವಿರೇಶ ನಗರ 4 ಬಡಾವಣೆಗಳಲ್ಲಿ ಮನೆ ಕಳ್ಳತನ ಮಾಡಿದ ಪ್ರಕರಣಗಳನ್ನು ಹೀಗೆ ಒಟ್ಟು 10 ಪ್ರಕರಣಗಳು ಬೇಧಿಸಿ ಆರೋಪಿತನಿಂದ ಒಟ್ಟು 250 ಗ್ರಾಂ ಬಂಗಾರದ ಆಭರಣಗಳು ಹಾಗೂ 1 ಕೆ.ಜಿ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.  ಸದರಿ ಆರೋಪಿ ಭೀಮಾಶಂಕರ @ ಭೀಮಾ ಬೊಳೆವಾಡ ಇತನು 2011 ನೇ ಸಾಲಿನಲ್ಲಿ  ಎನ್.ಜಿ.ಓ ಕಾಲೋನಿಯ ಪ್ರಾಣೇಶ ಹೆರೂರಕರ ರವರ ಮನೆ ಕಳ್ಳತನ ಪ್ರಕರಣದಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿದ್ದು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ನಂತರ ವಿಚಾರಣೆಗೆ ಹಾಜರಾಗದೇ ಕಳೆದ ಒಂದೂವರೆ ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಇತನ ವಿರುದ್ದ ನ್ಯಾಯಾಲಯದಿಂದ  3 ದಸ್ತಗಿರಿ ವಾರೆಂಟಗಳು ಜಾರಿಯಾಗಿದ್ದು,  ಸದರಿ ಕುಖ್ಯಾತ ಕಳ್ಳನು ಒಬ್ಬಳು ಹೆಂಡತಿ ಅಲ್ಲದೆ 3 ಹೆಣ್ಣು ಮಕ್ಕಳೊಂದಿಗೆ ಸಂಬಂಧ ಬೆಳೆಸಿದ್ದು ವಿಚಾರಣೆಯಿಂದ ತಿಳಿದುಬಂದಿರುತ್ತದೆ. ಅಲ್ಲದೆ ಸುಮಾರು 7-8 ಕಡೆ ರಾತ್ರಿ ವೇಳೆ ಬೆಡ್ ರೂಮ ಕಿಟಕಿಯಿಂದ ಬಂಬೂದಿಂದ ಪಾಂಟ್ಯ ಶರ್ಟಗಳನ್ನು ತೆಗೆದು  ಹಣ ಕಳ್ಳತನ ಮಾಡಿರುವ ಬಗ್ಗೆ, ಹೇಳಿದ್ದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ.

11 July 2013

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ: ದಿನಾಂಕ 09-07-2013 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಹುಮನಾಬಾದ ರೋಡಿಗೆ ಇರುವ ಖಾನ ಮೋಟಾರ್ಸ ಅಂಗಡಿ ಮುಂದೆ ಮೃತ ಮಹ್ಮದ ಖಯುಮ ತಂದೆ ಅಬ್ದುಲ ಹಮೀದ   ಈತನು ನಡೆದುಕೊಂಡು ಗಂಜ ಬಸ್ ಸ್ಟಾಂಡ ಕಡೆಗೆ ಹೋಗುತ್ತಿದ್ದಾಗ ಒಂದು ಟಂ.ಟಂ ಗೂಡ್ಸ ವಾಹನ ಚಾಲಕನು ತನ್ನ ವಾಹನವನ್ನ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಮೃತ ಮಹ್ಮದ ಖಯುಮ ತಂದೆ ಅಬ್ದುಲ ಹಮೀದ ಈತನಿಗೆ ಹಿಂದಿನಿಂಡ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು  ನಂತರ 108 ಅಂಬುಲೈನ್ಸ ವಾಹನದಲ್ಲಿ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಆತನು ಅಪಘಾತದಲ್ಲಿ ಆದ ಭಾರಿಗಾಯಗಳಿಂದ ರಾತ್ರಿ 08-00 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತ ಫಿರ್ಯಾದಿ ಇಂದು ಮೃತ ದೇಹವು ಗುರ್ತಿಸಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಇರುತ್ತದೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೋಲಿಸ್ ಠಾಣೆ:ಇಂದು ದಿನಾಂಕ 10/07/2013 ರಂದು 9-30 ಪಿ.ಎಂ.ಕ್ಕೆ ಪಿರ್ಯಾಧಿ ನಾಗೇಶ ತಂದೆ ಶ್ರೀಮಂತ ರೆಡ್ಡಿ ವ: 43 ಸಾ: ಜೈನಗಲ್ಲಿ ಆಳಂದ ತಾ: ಆಳಂದ  ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ಅರ್ಜಿ ಕೊಟ್ಟಿದ್ದು ಸಂಕ್ಷಿಪ್ತ ಸಾರಾಂಶವೆನೆಂದರೆ ದಿನಾಂಕ 10/07/2013 ರಂದು ಮದ್ಯಾಹ್ನ ಆಳಂದ ಎಸ್.ಬಿ.ಎಚ್ ಬ್ಯಾಂಕಿಗೆ ಹೋಗಿ ಲಾಕರದಲ್ಲಿಟ್ಟ ಬಂಗಾರದ ಆಭರಣಗಳನ್ನು ಅಂದರೆ 1) ಬಂಗಾರದ ನೇಕಲೇಸ್ ಅಂದಾಜು 8 ತೊಲೆ ಅ.ಕಿ. 2 ಲಕ್ಷ  2) ಗಂಟನಾ (ಬಂಗಾರದ ತಾಳಿ ) 8 ತೊಲೆ  ಅ.ಕಿ. 2 ಲಕ್ಷ 3) ಪಾಟಲಿ ಬಂಗಾರದ 6 ತೊಲೆ ಅ.ಕಿ. 1,1/2 ಲಕ್ಷ 4) ಬ್ರಾಸಲೇಟ್ ಬಂಗಾರದ  2 ತೊಲೆ ಅ.ಕಿ. 50 ಸಾವಿರ 5) ನೇಕಲೇಸ (ಲಾಕೇಟ) ಬಂಗಾರದ 1 ವರೇ ತೊಲೆ ಅ.ಕಿ. 30 ಸಾವಿರ 6) 2 ಡಿಸೈನ್ ಉಂಗುರ ಬಂಗಾರದ 7 ಗ್ರಾಂ  ಅ.ಕಿ. 20 ಸಾವಿರ 7) 1 ಸಾದಾ ಬಂಗಾರದ ಉಂಗುರ 5 ಗ್ರಾಂ ಅ.ಕಿ. 13 ಸಾವಿರ 8) ಕಿವಿಯ ಬಂಗಾರದ ಓಲೆ 5 ಗ್ರಾಂ ಅ.ಕಿ. 13 ಸಾವಿರ 9) 2 ಜೊತೆ ಕಾಲುಂಗರ ಬೆಳ್ಳಿ  2 ತೊಲೆ ಅ.ಕಿ. 8 ಸಾವಿರ 10) 2 ಜೊತೆ ಕಾಲು ಚೈನ್ ಬೆಳ್ಳಿ  8 ತೊಲೆ  28 ಸಾವಿರ 11) ಬಂಗಾರದ ತಾಳಿ ಬಂಗಾರದ 1,1/2 ತೊಲೆ 38 ಸಾವಿರ  ಲಾಕರ ಇಂದ ತೆಗೆದಕೊಂಡು ನಾಳೆ ನನ್ನ ಚಿಕ್ಕಮ್ಮನ ಮಗನ ಮುದುವೆಗೆ ಹೋಗಲು ಗುಲಬರ್ಗಾಕ್ಕೆ ಸುಮಾರು 4 ಗಂಟೆಗೆ ಬಂದು ಇಲ್ಲಿ ನನ್ನ ಹೆಂಡತಿ ಲಕ್ಷ್ಮಿ ಹಾಗು ಮಕ್ಕಳು ವಿಕ್ರಮ್, ಆದಿತ್ಯಾ ಹಾಗು ನಂದಿನಿ ಅಅವರು ಗುಲಬರ್ಗಾದಲ್ಲಿ ಶಾಲೆಯ ಸಲುವಾಗಿ ಇದ್ದು ಶ್ರೀ ಶ್ರೀಮಂತ ರಡ್ಡಿ ರವರ ಮನೆ ನಂ. 10-105/4 ಶರಣ ನಗರದಲ್ಲಿ ಬಾಡಿಗೆ ಮನೆ ಮಾಡಿ ಇರುತ್ತಾರೆ. ಅವರಿಗೆ ಕರೆದುಕೊಂಡು ಸಾಯಂಕಾಲ 5-35 ಕ್ಕೆ ಎನ್.ಜಿ.ಓ ಕಾಲೋನಿಯಿಂದ ಆಟೋ ತೆಗೆದುಕೊಂಡು 5-45 ಪಿ.ಎಂ.ಕ್ಕೆ ಬಸ್ ಸ್ಟ್ಯಾಂಡಗೆ ಬಂದು ಸುಮಾರು 5-50 ಪಿ.ಎಮ್. ಗಂಟೆಗೆ ಬೀದರಗೆ ಹೋಗುವ ಬಸ್ಸ ನಂ. ಕೆ.ಎ-38 ಎಫ್- 588 ಕುಳಿತು ಕೊಂಡು ರಾಜಹಂಸ ಬಸ್ಸ ಕ್ಯಾರಿಯರ ಮೇಲೆ ಸೂಟಕೇಸ್ ಇಟ್ಟು ಟಿಕೇಟ ತೆಗೆದುಕೊಂಡು ಕುತ್ತಿದ್ದೇವು.
          ಸುಮಾರು 6 ಪಿ.ಎಂ ಗಂಟೆಗೆ ನಮ್ಮ ಮುಂದೆ ಒಬ್ಬ ಮನುಷ್ಯ ಅಡ್ಡ ಬಂದು ಕೆಳಗೆ ನಿಂತ ವ್ಯಕ್ತಿಗೆ Hello by by ಅಂತಾ ಹೆಳಿದ ಆಗ ನಾವು ಅವನಿಗೆ ಏ ಮೇಲೆ ಬಿಳಬೇಡ ಅಂದ ಗದರಿಸಿದೇವು ಆಗ ಕೆಳಗೆ ನಿಂತ ವ್ಯಕ್ತಿ ನಮಗೆ ತೊದಲುತ್ತಾ Time ಕೇಳಿದ ಆಗ ನಾವು ಅವನಿಗೆ ಬಗ್ಗಿ ಟೈಮ್ ಹೇಳಿದೇವು. ಆಗ ಸಮಯದಲ್ಲಿ ನಮ್ಮ ಚಿತ್ತ ಬೇರೆ ಕಡೆ ತಿರುಗಿಸಿ 3 ಜನ ಸೇರಿ carrier  ಮೇಲೆ ಇಟ್ಟ ನಮ್ಮ ಸೂಟಕೇಸ್ ಹಾಗು ಅದರಲ್ಲಿ ಇದ್ದ ಬಂಗಾರದ ಒಡವೇಗಳು ಹಾಗು 6-7 ಜೊತೆ ಬಟ್ಟೆಗಳು ಕಳ್ಳತನ ಮಾಡಿ ತೆಗೆದುಕೊಂಡು ಓಡಿ ಹೋಗಿರುತ್ತಾರೆ.
             ಆ ಕಳ್ಳರನ್ನು ನಾವು ನೋಡಿದರೇ ಗುರುತು ಹಿಡಿಯುತ್ತೇವೆ. ಆದ್ದರಿಂದ ತಾವುಗಳು ಕಳ್ಳರನ್ನು ಹಿಡಿದು ನಮ್ಮ ವಸ್ತುಗಳನ್ನು ಕೊಡಿಸಬೇಕಾಗಿ ಹಾಗು ಅವರ ಮೇಲೆ ಸೂಕ್ತ ರೀತಿಯ ಕಾನೂನು ರೀತಿಯ ಕ್ರಮ ಕೈಕೊಳ್ಳಬೇಕಾಗಿ ವಿನಂತಿ ಅಂತಾ ವಗೈರೆ ಪಿರ್ಯಾಧಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ. 106/2013 ಕಲಂ. 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಕೆ ಕೈಕೊಂಡಿದ್ದು ಇರುತ್ತದೆ.

10 July 2013

GULBARGA DIST REPORTED CRIMES

ಮಟಕಾ ಪ್ರಕರಣ:
 ರೋಜಾ ಪೊಲೀಸ್ ಠಾಣೆ ಗುಲಬರ್ಗಾ: ದಿನಾಂಕ:09/07/2013 ರಂದು ಶ್ರೀ ನಿಂಗಪ್ಪಾ ಪೂಜೇರಿ ಪಿಎಸ್ಐ[ಅ.ವಿ] ರೋಜಾ ಠಾಣೆ ರವರು ಖಚಿತ ಮಾಹಿತಿ ಮೇರೆಗೆ ಕಾಲಾಹುಡಾ ಮೇಸ್ತ್ರಿ ಹೋಟೆಲ ಹತ್ತಿರದಲ್ಲಿ ಸಾರ್ವಜನಿಕರಿಂದ ತನ್ನ ಲಾಭಕ್ಕಾಗಿ ಹಣ ಪಡೆದುಕೊಂಡು 1 ರೂಪಾಯಿಗೆ 80ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಕಿಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ ಪಿಸಿ-645 ಮದರಸಾಬ, ಪಿಸಿ-248 ವೈಜನಾಥ, ಹಾಗೂ ಪಂಚರಾದ 1} ಸಂಜು @ ಸಂಜೀವಕುಮಾರ ತಂದೆ ಅರ್ಜುನ ರಾವ ಆಕಾಶ ಕೋರೆ ಸಾ: ರೋಜಾ [ಬಿ] ಗುಲಬರ್ಗಾ 2} ರಾಜೇಂದ್ರ ತಂದೆ ತುಳಸಿರಾಮ ಬೋಳೆ ಸಾ: ರೋಜಾ [ಬಿ] ಗುಲಬರ್ಗಾ ರವರೊಂದಿಗೆ ಕಾಲಾಹೂಡಾ ಹತ್ತಿರ ಬರುವ ಮೇಸ್ರತಿ ಹೋಟೆಲ ಹತ್ತಿರದ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಿಯಾಕೂ 80 ರೂಪಿಯಾ ದೇತಾಹೂ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ನಾವೆಲ್ಲರೂ ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹ್ಮದ ನಿಜಾಮ ತಂದೆ ಮಹ್ಮದ ಮೈನುದ್ದಿನ ಆಟೋವಾಲೆ ಉ: ಆಟೋ ಡ್ರೈವರ ಸಾ: ಮಂಗಲಗಿ ಗ್ರಾಮ ಹಾ||ವಾ||  ಮಿಲ್ಲತ ನಗರ ಗುಲಬರ್ಗಾ ಅಂತಾ ಹೇಳಿದ್ದು ಆತನಿಂದ  ನಗದು ಹಣ 2350/-ರೂಪಾಯಿಗಳು ಅಲ್ಲದೇ 2 ಮಟಕಾ ನಂಬರ ಬರೆದ ಚೀಟಿಗಳು, ಒಂದು ಬಾಲಪೆನ್ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ ಮುದ್ದೆಮಾಲನ್ನು ಪಂಚರ ಸಮಕ್ಷಮ ಆರೋಪಿತನಿಗೆ ದಸ್ತಗಿರಿ ಮಾಡಿ ಆರೋಪಿ ಮಹ್ಮದ ನಿಜಾಮ ತಂದೆ ಮಹ್ಮದ ಮೈನುದ್ದಿನ ಆಟೋವಾಲೆ ಈತನ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕಳ್ಳತನ ಪ್ರಕರಣ:
 ಅಶೋಕ ನಗರ ಪೋಲಿಸ್ ಠಾಣೆ:  ಶ್ರೀಮತಿ ಶಶಿಕಲಾ ಗಂಡ ಶಿವಶರಣಪ್ಪ ಬಂಡೇನೋರ ಸಾ: ಎನ್.ಜಿ. ಕಾಲೋನಿ ಗುಲಬರ್ಗಾ ರವರು ದಿನಾಂಕ: 25-26/03/2013 ರಂದು ರಾತ್ರಿ ವೇಳೆ ಮನೆಯ ಬಾಗಿಲು ಮುಂದೆ ಮಾಡಿ ಮನೆಯ ಮುಂದಿನ ಕಟ್ಟೆಯ ಮೇಲೆ ಮಲಗಿ ಮುಂಜಾನೆ 6:00 ಗಂಟೆಗೆ ಎದ್ದು ಮನೆಯ ಒಳಗೆ ಹೋಗಿ ನೋಡಿದಾಗ  ಅಲಮಾರಿ ತೆಗೆದಿದ್ದು ಬಟ್ಟೆ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಲಮಾರಿಯಲ್ಲಿ ಸ್ಟೀಲ್ ಡಬ್ಬಿಯಲ್ಲಿ ಇಟ್ಟಿದ್ದ ಬಂಗಾರದ ವಸ್ತುಗಳಾದ  1) ಒಂದು ಬಂಗಾರದ ತಾಳಿ ಚೈನ್  40 ಗ್ರಾಂ .ಕಿ. 1,00,000=00 ರೂ. 2) ಒಂದು ಬಂಗಾರದ ಜಿರಾಮಣಿ 10 ಗ್ರಾಂ .ಕಿ. 25,000=00 ರೂ. 3) ಒಂದು ಬಂಗಾರದಕರಿಮಣಿ ತಾಳಿ 10 ಗ್ರಾಂ .ಕಿ. 25,000=00 ರೂ. 4) ಒಂದು ಬಂಗಾರದ ಕರೆಳ್ಳಿ 10 ಗ್ರಾಂ .ಕಿ. 25,000=00 ರೂ. 5) ಒಂದು ಜೋತೆ ಕಿವಿಓಲೆ 10 ಗ್ರಾಂ .ಕಿ. 25,000=00 ರೂ. 6) ಬೆಳ್ಳಿಯ ಕಾಲ್ಚೈನ, ಊಡದಾರ 400 ಗ್ರಾಂ .ಕಿ. 20,000=00 ರೂ ಹೀಗೆ ಒಟ್ಟು 80 ಗ್ರಾಂ ಬಂಗಾರ ಮತ್ತು 400 ಗ್ರಾಂ ಬೆಳ್ಳಿಯ ಆಭರಣಗಳು ಅಂದಾಜು ಕಿಮ್ಮತ್ತು 2,20,000=00 ರೂ ಬೆಲೆ ಬಾಳುವ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಪ್ರಕರಣ ದಾಖಲಿಸಿ ತನಿಖೆ ಕೈಕೊಂಳ್ಳಲಾಗಿದೆ.