POLICE BHAVAN KALABURAGI

POLICE BHAVAN KALABURAGI

18 January 2013

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ಭೋಜರಾಜ ತಂದೆ ರಾಮಚಂದ್ರ ಪಾಟೀಲ  ಸಾ||ಸರಸಂಬಾ ತಾ|| ಆಳಂದ ರವರು ನನಗೆ ದಿನಾಂಕ:16/01/2013 ರಂದು ರಾತ್ರಿ 8 ಗಂಟೆಗೆ ವರದಾಶಂಕರ ತಂದೆ ಯಶ್ವಂತರಾವ ಪೊಲೀಸ್ ಪಾಟೀಲ ಸಾ|| ಸರಸಂಬಾ ಇತನು  ಸರಸಂಬಾ ಗ್ರಾಮ ಪಂಚಾಯತಿಯ ಎದುರುಗಡೆ ಬಸವೇಶ್ವರ ಚೌಕ ಅಗಸಿಯಲ್ಲಿ ರಾಜಶೇಖರ ತಂದೆ ಚನ್ನಬಸ್ಸಪ್ಪ ಮಾಲಿ ಪಾಟೀಲ ಇತನಿಗೆ ಇಲ್ಲಿ ಯಾಕೇ ಕುಳಿತುಕೊಂಡಿರಿ ಅಂತಾ ಅವಾಚ್ಯವಾಗಿ ಬೈದು ಪಿಸ್ತೂಲ್ ತೋರಿಸಿ ಇಲ್ಲಿಂದ ಹೋಗು ಇಲ್ಲವಾದರೆ ಜೀವ ತೆಗೆಯುತ್ತೆನೆ ಅಂತಾ ಬೇದರಿಕೆ ಹಾಕಿ ಕೈಯಿಂದ ಹೊಡೆದಿರುತ್ತಾನೆ. ಮತ್ತು ರಾತ್ರಿ 10 ಗಂಟೆಯ ಸುಮಾರಿಗೆ ಬಿ.ಆರ್. ಪಾಟೀಲ ಇವರು ಸರಸಂಬಾ ಕ್ಕೆ ಬಂದು ವರದಶಂಕರನಿಗೆ ವಿಚಾರಿಸುತ್ತಿದ್ದಾಗ ವರದಾಶಂಕರನು ನೀನು ಸುಭಾಷ ಗುತ್ತೆದಾರ ಎದುರು ಚುಣಾವಣೆಗೆ ಹೇಗೆ ನಿಲ್ಲುತ್ತಿ ನೊಡುತ್ತೆನೆ, ನೀನು ಚುಣಾವಣೆಗೆ ನಿಂತರೆ ನಿನ್ನ ಜೀವ ತೆಗೆಯುತ್ತೆನೆ ಎಂದು ಬೈದು ಪಿಸ್ತೂಲ ತೋರಿಸಿ ಜೀವದ ಭಯದ ಬೇದರಿಕೆ ಹಾಕಿದ್ದಲ್ಲದೆ ಎದೆಯ ಮೇಲಿನ ಶರ್ಟ ಹಿಡಿದು ಹರಿದು ಹಾಕಿರುತ್ತಾನೆ. ಈ ಘಟನೆಗೆ  ಸುಭಾಷ ಗುತ್ತೆದಾರ ಇವರ ಕುಮ್ಮಕ ಇರುತ್ತದೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳಬೇಕು ಅಂತಾ ದೂರು ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:06/2013 ಕಲಂ 323, 341, 504, 506 [2] 109 ಸಂಗಡ 34 ಐ.ಪಿ.ಸಿ. ಮತ್ತು 25 ಆರ್ಮ್ಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ.ವರದಾಶಂಕರ ತಂದೆ ಯಶ್ವಂತರಾವ  ಪಾಟೀಲ  ಸಾ||ಸರಸಂಬಾ ತಾ||ಆಳಂದ ರವರು ನಾನು ದಿನಾಂಕ:16/01/2013 ರಂದು ಆಳಂದದಿಂದ ಸರಸಂಬಾಕ್ಕೆ ಬಂದಾಗ ಊರ ಅಗಸಿಯಲ್ಲಿ ನನ್ನ ಸ್ನೇಹಿತ ಹಣಮಂತ ಜಮಾದಾರ ಈತನಿಗೆ ರಾಜಶೇಖರ ಪಾಟೀಲ ಸರಸಂಬಾ ಇವರು ವರದಾಶಂಕರನ ಜೋತೆ ಹಾಗೂ ಗುತ್ತೇದಾರನ ಜೋತೆ ಯ್ಯಾಕೆ ತಿರುಗಾಡಿತ್ತಿ ಅಂತಾ ಕೇಳುತ್ತಿದ್ದನು. ಆಗ ನಾನು ಅವರ ಹತ್ತಿರ ಬಂದು ಹಣಮಂತ ಜಮಾದಾರ ಇವರಿಗೆ ನನ್ನ ಮೋಟರ್ ಸೈಕಲ್ ಮೇಲೆ ಕುಡಿಸಿಕೊಂಡು ಅವರ ಮನೆಗೆ ಬಿಟ್ಟು ಮತ್ತೆ ರಾಜಶೇಖರ ಪಾಟೀಲ ಇವರ ಎದುರುಗಡೆಯಿಂದ ಬರುತ್ತಿರುವಾಗ ರಾಜಶೇಖರ ಇತನು  ಅವಾಚ್ಯವಾಗಿ ಬೈದು ಅವನಿಗೆ ಯ್ಯಾಕೆ ಕರೆದುಕೊಂಡು ಹೋಗಿದ್ದಿ ಅಂತ ನನಗೆ ಪ್ರಶ್ನಿಸಿದರು, ಅದಕ್ಕೆ ನಾನು ಅದು ನನ್ನ ವೈಯಕ್ತಿಕ ವಿಚಾರ ನೀವು ಕೇಳುವ ಸಂಬಂದ ಇಲ್ಲ ಎಂದು ಹೇಳಿದಾಗ,ಅವನು ಅವಾಚ್ಯವಾಗಿ ಬೈದು ನಿನಗೆ ಇಲ್ಲೆ ಕೂಲೆ ಮಾಡುತ್ತೆನೆ ಅಂತ ಹೆದರಿಸಿದನು. ನಾನು ಬಿ.ಆರ್.ಪಾಟೀಲ ಬಂದರೂ ನನ್ನನ್ನೂ ಕೊಲ್ಲುವುದಕ್ಕೆ ಆಗುವುದಿಲ್ಲ ಇದು ಪ್ರಜಾಪ್ರಭುತ್ವ ಇದು ನನ್ನ ಹಕ್ಕು ಎಂದೆ, ನಾನು ಅಲ್ಲಿಂದ ಹೋಗಿ ಸಾವಳೇಶ್ವರದಲ್ಲಿ ಸಾರಾಯಿ ಕುಡಿದು ಪುನ: ಸರಸಂಬಾಕ್ಕೆ ಬಂದು ಸರಸಂಬಾ ಗ್ರಾಮ ಪಂಚಾಯತ ಹತ್ತಿರ ಬಂದು ನನ್ನ ಬೈಕ್ ನಿಲ್ಲಿಸಿ ನಿಂತಾಗ ಅಷ್ಟರಲ್ಲಿ ಸುಮಾರು 25-30 ಜನರು ಅದರಲ್ಲಿ ಬಿ.ಆರ್.ಪಾಟೀಲ, ರಾಜಶೇಖರ ಪಾಟೀಲ,ನಾಗರಾಜ ಪಾಟೀಲ, ಸಚೀನ,ಬಸವರಾಜ,ಪಂಡಿತ ಜಿಡಗೆ ಹಾಗೂ ಬೇರೆ ಊರಿನಿಂದ ನಾಲ್ಕರೂ ವಾಹನಗಳಲ್ಲಿ 25-30 ಕ್ಕೂ ಹೆಚ್ಚು ಜನರು ಬಂದು ಮೊದಲಿಗೆ ಬಿ.ಆರ್.ಪಾಟೀಲ ನನಗೆ ಪಿಸ್ತೂಲ್ ಎದೆಗೆ ಹಚ್ಚಿ ಮಗನೆ ನಿನಗೆ ಕೊಲ್ಲುತ್ತೇನೆ ಸರಸಂಬಾದಲ್ಲಿ ಜೆ.ಡಿ.ಎಸ್ ಕಛೇರಿ ಮುಚ್ಚು ಇಲ್ಲವಾದಲ್ಲಿ ನಿನಗೆ ಸಾಯಿಸುತ್ತೇನೆ ಎಂದು ಹೆದರಿಸಿದರು ಅವರ ಸಂಗಡಿಗರಾದ ರಾಜಶೇಖರ ಪಾಟೀಲ,ನಾಗರಾಜ ಪಾಟೀಲ,ಪಂಡಿತ ಜಡಗೆ ಇನ್ನೀತರ ಬೇರೆ ಊರಿನಿಂದ ಬಂದ ಸುಮಾರು 25-30 ಜನರು ನನಗೆ ಹೊಡೆದು ನನ್ನ ಕೊರಳಿನಲ್ಲಿದ್ದ 1 ತೊಲೆಯ (10 ಗ್ರಾಂ)ಬಂಗಾರದ ಚೈನುಮೊಬಾಯಿಲ್, ಡೈರಿ ಕಿತ್ತುಕೊಂಡಿರುತ್ತಾರೆ. ಸದರಿಯವರ ಮೇಲೆ ಕಾನೂನಿನ ಪ್ರಕಾರ  ಕ್ರಮ ಕೈಕೊಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:07/2013 ಕಲಂ:143,147,323,329,363,504,506(2),ಸಂಗಡ 149 ಐ.ಪಿ.ಸಿ. ಮತ್ತು 25 ಆರ್ಮ್ಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

17 January 2013

GULBARGA DISTRICT REPORTED CRIMES


ಶಾಲಾ ಮುಖ್ಯ ಗುರುಗಳ ಮೇಲೆ ಎಸ.ಡಿ.ಎಮ್ ಸಿ ಅಧ್ಯಕ್ಷನಿಂದ ಹಲ್ಲೆ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಭೀಮಾಶಂಕರ  ತಂದೆ ನಾಗಪ್ಪ ಬಿರಾದಾರ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಂತಗಿ ಗ್ರಾಮ  ತಾ|| ಆಳಂದರವರು ನಾನು ದಿನಾಂಕ: 16/01/2013 ರಂದು ಬೆಳಿಗ್ಗೆ  9-45 ಗಂಟೆಗೆ ಶಾಲೆಗೆ ಬಂದು ಮಕ್ಕಳ  ಪ್ರಾರ್ಥನೆಯನ್ನು  ಮುಗಿಸಿ ನನ್ನ ಕಾರ್ಯಾಲಯದ ಕೋಣೆಯಲ್ಲಿ  ಕರ್ತವ್ಯ ನಿರ್ವಹಿಸುತ್ತಾ ಕುಳಿತ್ತಿರುವಾಗ ದೇವಂತಗಿ ಗ್ರಾಮದ ಎಸ್‌.ಡಿ.ಎಮ್.ಸಿ  ಅಧ್ಯಕ್ಷನಾದ  ಸಿದ್ದುಗೌಡ  ಎಸ್‌.ಪಾಟೀಲ  ಇವನು ನನ್ನ  ಕಾರ್ಯಾಲಯಕ್ಕೆ ಬಂದು ಹೊಸ ಶಾಲಾ ಕೋಣೆಯ ಚೆಕ್ಕಿಗೆ ಸಹಿ ಮಾಡು ಅಂತ ಅಂದನು. ಅದಕ್ಕೆ ನಾನು ಪೂರ್ತಿ ಕೆಲಸ  ಆಗಿರುವುದಿಲ್ಲಾ, ನಂತರ ಚೆಕ್ಕಿಗೆ ಸಹಿ ಮಾಡೋಣ ಅಂತಾ ಅಂದಿದ್ದಕ್ಕೆ ಅವಾಚ್ಯವಾಗಿ ಬೈದು ನಾನು  ಎಷ್ಟು ಹೇಳತಿನಿ ಅಷ್ಟು ಕೇಳು ಅಂತ ಅಂದವನೆ ನನಗೆ ಜಗ್ಗಿ   ಕೈಯಿಂದ ಕಪಾಳಕ್ಕೆ ಹೊಡೆದು  ಬೆನ್ನಿಗೆ ಹೊಡೆದು ನೂಕಿ ಕೊಟ್ಟನು. ನೂಕಿ ಕೊಟ್ಟಿದ್ದರಿಂದ ಕಾರ್ಯಾಲಯದಲ್ಲಿದ್ದ  ಅಲಮಾರಿ ಹತ್ತಿರ  ಹೋಗಿ ಬಿದ್ದುದ್ದರಿಂದ ತೆಲೆಯ  ಮುಂಬಾಗಕ್ಕೆ ರಕ್ತಗಾಯವಾಗಿರುತ್ತದೆ.  ಪುನಾಃ  ಸಿದ್ದು ಇವನು ಕಾಲಿನಿಂದ ಒದ್ದನು, ಭೋಸಡಿ ಮಗನೆ ಮಾಸ್ಟರ  ನೀ ಇಲ್ಲಿ  ಹ್ಯಾಂಗ ನೌಕರಿ ಮಾಡುತ್ತಿ  ನೋಡುತ್ತೆನೆ ಅಂತಾ ಬೇದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:04/2013 ಕಲಂ 323, 353, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ದೇವಲ ಗಾಣಗಾಪೂರ ಪೊಲೀಸ್ ಠಾಣೆ:ಶ್ರೀ ಭಿಮಣ್ಣ ತಂದೆ ನಂದಣ್ಣ ಅರಿಕೇರಿ ಉ|| ಅನಾಥ ಆಶ್ರಮದಲ್ಲಿ ಮ್ಯಾನೇಜರ ಸಾ|| ಬೀಗುಡಿ ಹಾ||ವ||ದೇವಲಗಾಣಗಾಪೂರ ತಾ|| ಅಫಜಲಪೂರ ರವರು ನಾವು ಸುಮಾರು 6 ತಿಂಗಳನಿಂದ ಕಮಲಾಬಾಯಿ ನಾಕಮನ ಇವರ ಮನೆಯಲ್ಲಿ ಬಾಡಿಗೆ ಇರುತ್ತೆವೆ. ಜಾತ್ರೆಯ ನಿಮಿತ್ಯ ನಾವುಗಳು ನಮ್ಮ ಸ್ವ-ಗ್ರಾಮಕ್ಕೆ ಹೋಗಿದ್ದು, ಮನೆಯ ಮಾಲಿಕರು ಹೈದ್ರಾಬಾದಕ್ಕೆ ಹೋಗಿರುತ್ತಾರೆ. ದಿನಾಂಕ:15-01-2013 ರಾತ್ರಿ ವೇಳೆಯಲ್ಲಿ ಮನೆಯ ಬಾಗಿಲ ಕೀಲಿ ತೆರೆದು ಅಲ್ಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಅ||ಕಿ|| 12,000-00 ರೂ, ಮತ್ತು ಬೆಳ್ಳಿ ಅಭರಣಗಳು, ಎರಡು ಮೊಬಾಯಿಲ್ ಗಳು ಹೀಗೆ ಒಟ್ಟು 58 ಗ್ರಾಂ ಬಂಗಾರದ ಆಭರಗಣಗಳು  ಮತ್ತು 270 ಗ್ರಾಂ ಬೆಳಿಯ ಆಭರಣಗಳ ಅಂದಾಜು ಕಿಮ್ಮತ್ತು. 1,89,000=00 ರೂಪಾಯಿಗಳ ಮೌಲ್ಯದ್ದು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 06/2013 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುಧೋಳ ಪೊಲೀಸ್ ಠಾಣೆ:ಶ್ರೀಮತಿ, ದೇವಮ್ಮಾ ಗಂಡ ದೇವಪ್ಪಾ ಸಾ|| ಇಟ್ಲಾಪುರ ಆಂದ್ರ ಪ್ರದೇಶ ರಾಜ್ಯದವರು ನಾನು ಹಾಗು ಮೃತನಾದ ಗಂಗಪ್ಪಾ ತಂದೆ ಶಾಮಪ್ಪಾ ಮತ್ತು ಇನ್ನಿತರರು ಕೂಡಿಕೊಂಡು  ಅಟೋ ನಂ:ಕೆಎ-32/ಎ-5281 ನೇದ್ದರಲ್ಲಿ ಕುಳಿತುಕೊಂಡು ಇಟ್ಕಲ್ ದಿಂದ ಕೊಲಕುಂದಾ ಕಡೆಗೆ ಹೊರಟಿದ್ದು ದಿನಾಂಕ:16-01-2013 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಶಕಲಾಸಪಲ್ಲಿ ಗ್ರಾಮ ದಾಟಿ ಸ್ವಲ್ಪ ಮುಂದೆ ಬಂದಾಗ ಅಟೋ ಚಾಲಕನಾದ ಬಸವರಾಜ ತಂದೆ ನಾಗಣ್ಣಾ ಇತನು ಅಟೋವನ್ನು ಅತಿವೇಗವಾಗಿ ಹಾಗು ನಿಸ್ಕಾಳಜಿತನದಿಂದ ನಡೆಯಿಸುತ್ತಿರುವಾಗ ಅಟೊ ಪಲ್ಟಿಯಾಗಿ ಗಂಗಪ್ಪಾ ಇತನಿಗೆ ಭಾರಿ ಗಾಯವಾಗಿದ್ದು, ಉಪಚಾರ ಕುರಿತು ಸೇಡಂ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಅಟೋ ಚಾಲಕನು ಓಡಿ ಹೋಗಿರುತ್ತಾನೆ ಅಂತಾ ದೇವಮ್ಮಾ ಇವರು ಹೇಳಿಕೆ ನೀಡಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:07/2013 ಕಲಂ  279, 304 (ಎ) ಐಪಿಸಿ ಸಂಗಡ 187 ಐ.ಎಮ್ ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

16 January 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಪಂಡಿತ ತಂದೆ ಬಸವಣಪ್ಪ ಹರಸೂರ ಸಕಾರಿ ನೌಕರ ಸಾ: ಡಿಎಆರ ಹೆಡ್ ಕ್ವಾರ್ಟಸ  ಗುಲಬರ್ಗಾ ರವರು ನಾನು ದಿನಾಂಕ:15-01-2013 ರಂದು ರಾತ್ರಿ 9-30 ಗಂಟೆಗೆ ಅಟೋರಿಕ್ಷಾ ಕಾಯುತ್ತಾ ತಹಶೀಲ ಕಾರ್ಯಾಲಯದ ಎದುರು ರೋಡಿನ ಪಕ್ಕದಲ್ಲಿ ನಿಂತ್ತಿರುವಾಗ ಅಟೋರಿಕ್ಷಾ ನಂಬರ ಕೆಎ-32/7199 ನೇದ್ದರ ಚಾಲಕ ತನ್ನ ಅಟೋವನ್ನು ಸುಪರ ಮಾರ್ಕೆಟ ಕಡೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಟೋರಿಕ್ಷಾ ಅಲ್ಲೆ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2013 ಕಲಂ 279,337 ಐ.ಪಿ.ಸಿ ಸಂ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಮಾಡಲು  ಪ್ರಯತ್ನ:
ಮುಧೋಳ ಪೊಲೀಸ್ ಠಾಣೆ:ಶ್ರೀ ಸಣ್ಣ ಮಾಣಿಕಪ್ಪಾ ತಂದೆ ಸಾಯಿಬಣ್ಣಾ ಇಳಿಗೇರ ವಯಾ||45 ವರ್ಷ ಜಾತಿ|| ಕಲಾಲ ಸಾ|| ಕಾನಾಗಡ್ಡಾ ಗ್ರಾಮ. ತಾ||ಸೇಡಂ ರವರು ನಮಗೆ ಹಾಗು ನಮ್ಮ ಅಣ್ಣತಮ್ಮಂದಿರಾದ ಸಾಯಿಬಣ್ಣಾ @ ಸಾಬಯ್ಯಾ ತಂದೆ ಆಶಣ್ಣಾ ಕಲಾಲ ಇವರ ಮದ್ಯ ಹೊಲದ ಸಂಬಂಧ 15-20 ವರ್ಷಗಳಿಂದ ತಕರಾರು ಇದ್ದು ಕೊರ್ಟಿನಲ್ಲಿ ಕೇಸ್ ಇದೆ. 8-10 ದಿವಸಗಳ ಹಿಂದೆ ಸದರಿ ಹೊಲ ಕೊರ್ಟಿನಲ್ಲಿ ನನ್ನ ಹೆಸರಿನಿಂದ ಆಗಿರುತ್ತದೆ.ಸಾಬಯ್ಯಾ ಇತನು ನನಗೆ ಕೊಲೆ ಮಾಡಿದರೆ ಸದರಿ ಆಸ್ತಿ ತನಗೆ ಬರುತ್ತದೆ ಅಂತಾ ನನ್ನ ಮೇಲೆ ವೈಮನಸ್ಸು ಹೊಂದಿ, ದಿನಾಂಕ 15-01-2013 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ಹಾಗು ನಮ್ಮುರ ಸಾಯಪ್ಪಾ, ಮಾಹಾದೇವ ಪೂಜಾರಿ ಕೂಡಿಕೊಂಡು ಸಾಬಯ್ಯಾ ಕಲಾಲರವರ ಮನೆಯ ಮುಂದಿನ ರಸ್ತೆಯಿಂದ ಹೋಗುತಿದ್ದಾಗ ಸಾಯಿಬಣ್ಣಾ @ ಸಾಬಯ್ಯಾ ಕಲಾಲ ಹಾಗು ಆತನ ತಮ್ಮನಾದ ಮೈಪಾಲ ಕಲಾಲ ಇತನ ಮಕ್ಕಳಾದ ಮೋಹನಕುಮಾರ, ರಮೇಶ ರವರು ನಾಲ್ಕು ಜನರು ಅವಾಚ್ಯವಾಗಿ ಬೈದು, ನನಗೆ ತಮ್ಮ ಮನೆಯಲ್ಲಿ ಎಳೆದುಕೊಂಡು ಹೋಗಿ ಸಾಬಯ್ಯಾ, ಮೈಪಾಲ,ಮೋಹನಕುಮಾರ, ರಮೇಶ ಇವರೆಲ್ಲರೂ ನನಗೆ ಕೊಡಲಿಯಿಂದ, ಬಡಿಗೆಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 05/2013 ಕಲಂ 341.323.324.307.504 ಸಂಗಡ 34 ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.