POLICE BHAVAN KALABURAGI

POLICE BHAVAN KALABURAGI

03 November 2012

GULBARGA DISTRICT REPORTED CRIMES



ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ದಶರಥ ತಂದೆ ಶಿವಪುತ್ರಪ್ಪಾ ಭಾವಿಕಟ್ಟಿ  ಸಾ: ಬುಸಣಗಿ ತಾ: ಗುಲಬರ್ಗಾ ರವರು ನಾನು ದಿನಾಂಕ 02-11-2012 ರಂದು ರಾತ್ರಿ 10-45 ಗಂಟೆ ಸುಮಾರಿಗೆ ಪಂಚಶೀಲ ನಗರದಲ್ಲಿರುವ ನನ್ನ ಅಜ್ಜಿಯ ಮನೆಗೆ ಹೋಗಬೇಕೆಂದು ಕೇಂದ್ರ ಬಸ್ ನಿಲ್ದಾಣದ ಹತ್ತಿರ ರೋಡಿನ ಎಡ ಭಾಜು ನಿಂತಿರುವಾಗ ಎಮ್,ಎಸ್,ಕೆ ಮೀಲ ರೋಡ ಕಡೆಯಿಂದ ಟವೇರ ಜೀಪ ನಂ ಕೆಎ-36 ಎಮ್-3616 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ  ಭಾರಿ ಗಾಯಗೊಳಿಸಿ ತನ್ನ ವಾಹನ ಸಮೇತ ಹೋರಟು  ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:109/12  ಕಲಂ279,338 ಐಪಿಸಿsss ಸಂ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ನಾರಾಯಣ ತಂದೆ ಇರಪ್ಪ ಚೌವ್ಹಾಣ ಸಾ||ಖಣದಾಳ ತಾ||ಜಿ||ಗುಲಬರ್ಗಾ ರವರು ನಮ್ಮ ಲಾರಿ ಚಾಲಕ ರವಿ ಇತನು ಎಂದಿನಂತೆ  ದಿನಾಂಕ: 29/10/2012 ರಂದು ಸಾಯಂಕಾಲ ಸರ್ವಜ್ಞ ಕಾಲೇಜ ಎದುರಿಗೆ ಖುಲ್ಲಾ ಸ್ಥಳದಲ್ಲಿ ಟಿಪ್ಪ ನಂ: ಕೆಎ-32, ಬಿ-3498 ನಿಲ್ಲಿಸಿ ಕೀಲಿ ಹಾಕಿಕೊಂಡು ಹೋಗಿರುತ್ತಾನೆ. ದಿನಾಂಕ:30/10/2012 ಪ್ರತಿ ನಿತ್ಯದಂತೆ ಮುಂಜಾನೆ 7:00 ಗಂಟೆಗೆ ಊರಿನಿಂದ ಗುಲಬರ್ಗಾಕ್ಕೆ ಬಂದು, ಟಿಪ್ಪರ ನಿಲ್ಲಿಸಿದ ಸ್ಥಳದಲ್ಲಿ ನೋಡಲಾಗಿ ಟಿಪ್ಪರ ಇರಲಿಲ್ಲ. ಈ ಬಗ್ಗೆ ನಮ್ಮ ಡ್ರೈವರ ರವಿ ಇತನಿಗೆ ಫೋನ ಮಾಡಿ ಟಿಪ್ಪರ ಬಗ್ಗೆ ವಿಚಾರಿಸಲಾಗಿ ಟಿಪ್ಪರ ಅಲ್ಲಿಯೆ ಬಿಟ್ಟು ಬಂದಿರುವದಾಗಿ ತಿಳಿಸಿದ. ನಾನು, ಚಾಲಕ ರವಿ ಇಬ್ಬರು ಕೂಡಿ ಗುತ್ತೇದಾರ ಕೆಲಸ ಮಾಡುವ ಎಲ್ಲಾ ಗುತ್ತಿಗೆದಾರರ ಹತ್ತಿರ ಮತ್ತು ನಾನು ಸಾಲ ಪಡೆದ ಟಾಟಾ ಫೈನಾನ್ಸ್ ದಲ್ಲಿ ಸಹ ವಿಚಾರಿಸಿದ್ದು ಟಿಪ್ಪರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಯಾರೋ ಕಳ್ಳರು ಟಿಪ್ಪ ಕ್ಯಾಬ ನಂ: ಕೆಎ-32, ಬಿ-3498, ಚೆಸ್ಸಿ ನಂ; MAT361325A1P39888, ಇಂಜಿನ ನಂ:697TC66PZY134839, ಮಾಡೆಲ್ – 2010, ಹೆಚ್.ಜಿ.ವಿ (ಟಿಪ್ಪರ), ಕಲರ ಕ್ಯಾಬಿನ್ ಬಿಳಿ ಬಣ್ಣದ್ದು ಬಾಡಿ-ಆರೆಂಜ ಕಲರ ಅ.ಕಿ. 12,00,000=00 ರೂ (ಹನ್ನೆರಡು ಲಕ್ಷ ರೂ)  ಯಾರೋ ಕಳ್ಳರು ದಿನಾಂಕ:29/10/2012 ರಂದು ರಾತ್ರಿಯಿಂದ ದಿನಾಂಕ:30/10/2012 ರ ಬೆಳಗಿನ ಜಾವದ ಅವಧಿಯಲ್ಲಿ ಕಳುವು ಮಾಡಿಕೊಂಡು  ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:97/2012 ಕಲಂ.379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ:ಶ್ರೀ ಮಹ್ಮದ ಮಖಸೂದ ಅಹ್ಮದ ತಂದೆ ಮಹ್ಮದ ಇಸ್ಮಾಯಿಲ್ ಬಾಜೆ ಸಾ ಬುಲಂದ ಪರ್ವಾಜ ಕಾಲೋನಿ ಗುಲಬರ್ಗಾರವರು ನಾನು ನಾನು ರೋಜಾ ಮಾರ್ಕೆಟದ ಸಹಾರಾ ಕಾಂಪ್ಲೆಕ್ಸದಲ್ಲಿ ಎಮ.ಎಮ್ ಹೆಸರಿನ ಕಿರಾಣಿ ಅಂಗಡಿ ಇಟ್ಟುಕೊಂಡು ತಮ್ಮ ತಂದೆಯವರೊಂದಿಗೆ ವ್ಯಾಪಾರ ಮಾಡಿಕೊಂಡಿರುತ್ತೆನೆ. ದಿನಾಂಕ: 01/11/2012 ರಂದು ರಾತ್ರಿ 9:30 ಗಂಟೆಗೆ ನನ್ನ ಕಿರಾಣಿ ಅಂಗಡಿ ವ್ಯಾಪಾರ ಮುಗಿಸಿಕೊಂಡು ಅಂಗಡಿಗೆ ಕೀಲಿಗಳನ್ನು ಹಾಕಿ ಮನೆಗೆ ಹೋಗಿರುತ್ತೇನೆ.  ದಿನಾಂಕ:02/11/2012 ರಂದು ಬೆಳಿಗ್ಗೆ ನಾನು ಮತ್ತು ನನ್ನ ತಮ್ಮ ಮಹ್ಮದ ಮೋಹಿದ ಅಹ್ಮದ ಇಬ್ಬರೂ ಕೂಡಿಕೊಂಡು ವ್ಯಾಪಾರ ಮಾಡುವ ಕುರಿತು ನನ್ನ ಕಿರಾಣಿ ಅಂಗಡಿಯ ಹತ್ತಿರ ಬಂದು ಶೆಟ್ಟರ ನೋಡಿದಾಗ ಶೆಟ್ಟರಕ್ಕೆ ಹಾಕಿರುವ ಎರಡು ಲಾಕ್ ಗಳು ಇರಲಿಲ್ಲಾ ಗಾಬರಿಯಾಗಿ ಶಟ್ಟರ ಎತ್ತಿ ಒಳಗಡೆ ನೋಡಿದಾಗ ನನ್ನ ಅಂಗಡಿಯಲ್ಲಿ ಗಲ್ಲಾ ಇರಲಿಲ್ಲಾ ಮತ್ತು ರೀಚಾರ್ಜ ಮಾಡುವ ಕಾರ್ಡುಗಳು ಇರುವ ಪ್ಲಾಸ್ಟಿಕ್ ಡಬ್ಬಿ ಕೆಳಗಡೆ ಬಿಸಾಡಿದ್ದು ಅಲ್ಲಿ ಇಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುವದು ಕಂಡು ಬಂದಿದ್ದು ಗಲ್ಲಾದಲ್ಲಿ ಇಟ್ಟಿರುವ ನಗದು ಹಣ 35000/-ರೂಪಾಯಿ ಇದದ್ದು ಪಕ್ಕದ ಅಂಗಡಿಯ ಮುಂದೆ ಹೋಗಿ ಒಡೆದು ಹಣ ತೆಗೆದುಕೊಂಡು ಬಿಸಾಕಿ ಹೋಗಿರುತ್ತಾರೆ. ಗಲ್ಲಾದಲ್ಲಿ ಇಟ್ಟ ನಗದು ಹಣ 35000/-ರೂಪಾಯಿ ಎಲ್ಲಾ ನಮೂನೆಯ ಮೋಬಾಯಿಲ್ ರಿಚಾರ್ಜ ಕಾರ್ಡುಗಳು ಹೀಗೆ ಒಟ್ಟು 79,236/-ರೂಪಾಯಿ ಬೆಲೆಯುಳ್ಳ ಸಾಮಾನುಗಳನ್ನು ನಮ್ಮ ಅಂಗಡಿಯಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ . ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 83/2012 ಕಲಂ. 457,380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಮಹ್ಮದ ಅಬ್ದುಲ ಅಜೀಜ ತಂದೆ ಮಹಿಬೂಬಸಾಬ ವ: 63 ಉ: ನಿವೃತ್ತ ಸರಕಾರಿ ನೌಕರ ಸಾ: ಎಕಬಾಲ ಕಾಲನಿ ಜಿಲಾನಾಬಾದ ಎಮಎಸ್‌‌ಕೆಮಿಲ್‌ ಗುಲಬರ್ಗಾರವರು ನಾನು ದಿನಾಂಕ:-31/10/2012 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ನನ್ನ ಮೋಟಾರ ಸೈಕಲ ನಂ ಕೆಎ 32  ಕ್ಯೂ 1268 ನೇದ್ದರ ಮೇಲೆ ಹೀರಾಪೂರ  ಕ್ರಾಸ ಪೆಟ್ರೋಲ ಪಂಪ ದಿಂದ ಪೆಟ್ರೋಲ ಹಾಕಿಕೊಂಡು ಹುಸೇನ ಗಾರ್ಡನ ಹತ್ತಿರ ಮೋಟಾರ ಸೈಕಲಗೆ ಇಂಡಿಕೇಟರ ಹಾಕಿ ತಿರುಗಿಸಿಕೊಳ್ಳುತ್ತಿರುವಾಗ ಬುಲೇರೋ ಜೀಪ ನಂಬರ ಕೆಎ 33 ಎಮ್‌ ‌1147 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ತನ್ನ ವಾಹನವನ್ನು ನಿಲ್ಲಿಸಿದೆ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 351/2012 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ವಾಹಿದಮಿಯ್ಯ ತಂದೆ ಮಹಿಬೂಬಮಿಯ್ಯ ನಿಗೆವಾನ ಲಾರಿ ನಂ ಕೆಎ-39- 3783 ಮಾಲಿಕ  ಸಾ|| ಬಂಗೂರ ತಾ||ಜಿ||ಬೀದರ ರವರು ನನ್ನ ಲಾರಿಯಲ್ಲಿ  ದಿನಾಂಕ:31/10/2012 ರಂದು ಹೈದ್ರಾಬಾದ ಬಾಲಾಜಿ ಟ್ರಾನ್ಸ್‌‌ಪೋರ್ಟ ಮೂಖಾಂತರ ಗುಲ್ಬರ್ಗಾಕ್ಕೆ ಏಶಿಯನ್‌ ಪೆಂಟ ಬಾಕ್ಸ್ ಗಳ ಲೋಡ ಮಾಡಿಕೊಂಡು ಅಲ್ಲಿಂದ ರಾತ್ರಿ 10:30 ಗಂಟೆಗೆ ಹೊರಟು ದಿನಾಂಕ:1/11/2012 ರಂದು ಬೆಳಗಿನ ಜಾವ ಬಂದು ಆಳಂದ ರಸ್ತೆ ವಿಶ್ವರಾದ್ಯ ಗುಡಿಯ  ಹತ್ತಿರ ಲಾರಿಯನ್ನು ನಿಲ್ಲಿಸಿ ಲಾರಿಯ ಒಳಗೆ ಚಾಲಕ & ಕ್ಲೀನರ ಇಬ್ಬರು ಕ್ಯಾಬಿನಲ್ಲಿ ಮಲಗಿದ್ದು ಮುಂಜಾನೆ 6 ಗಂಟೆಗೆ ಎದ್ದುನೋಡಲು ಲಾರಿ ಲೋಡ ಮೇಲೆ ಹಾಕಿರುವ ತಾಡಪತ್ರಿಯನ್ನು ಕಟ್ ಮಾಡಿ ಅದರ ಒಳಗಿಂದ 28-30 ಎಶಿಯನ್‌ ಪೆಂಟ ಬಾಕ್ಸ್‌‌‌‌ ಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು. ಒಂದು ಬಾಕ್ಸ್‌ ಒಳಗೆ 6 ಡಬ್ಬಿ ಇದ್ದು ಒಂದು ಬಾಕ್ಸ್‌‌ ಗೆ 1632/- ರೂ ಕಿಮತ್ತು ಹೀಗೆ ಒಟ್ಟು 28 ರಿಂದ 30 ಬಾಕ್ಸ್‌‌‌ ಗಳ ಅಂದಾಜು ಕಿಮ್ಮತ್ತು 48,960/- ರೂಗಳು ಕಿಮತ್ತಿನದ್ದನ್ನು ಯಾರು ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:352/2012 ಕಲಂ 379 ಐಪಿಸಿ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

02 November 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:-01/11/2012 ರಂದು ಮುಂಜಾನೆ 8:00 ಗಂಟೆಗೆ ಶಿವಲಿಂಗಪ್ಪಾ @ ಸಂತೋಷ ಇತನು ತನ್ನ ಮೋಟಾರ ಸೈಕಲ ನಂ ಕೆಎ-32 ಎಲ್-2350 ನೇದ್ದರ ಮೇಲೆ ಹೈಕೊರ್ಟ ಕಡೆಗೆ ಹೊರಟಿದ್ದ ಅವನ ಮುಂದುಗಡೆ ಲಾರಿ ನಂ ಹೆಚ್.ಆರ್-37 ಎ-4687 ನೇದ್ದು ಹೋಗುತ್ತಿದ್ದು ಹೈಕೊರ್ಟ ಹತ್ತಿರ ಲಾರಿ ಚಾಲಕನು ತನ್ನ ಲಾರಿಯನ್ನು ಅಲಕ್ಷತನದಿಂದ ಯಾವುದೇ ಮುನ್ಸೂಚನೇ ನೀಡದೇ ಒಮ್ಮಲೇ ಬ್ರೇಕ ಹಾಕಿದ್ದರಿಂದ ಶಿವಲಿಂಗಪ್ಪಾ ಇತನು ಲಾರಿಯ ಎಡ ಬಾಗದ ಹಿಂದುಗಡೆ ಭಾಗಕ್ಕೆ ಗುದ್ದಿ ಕೆಳಗಡೆ ಬಿದಿದ್ದರಿಂದ ಆತನಿಗೆ ತಲೆಗೆ ಮತ್ತು ಎಡ ಕಣ್ಣಿನ ಹತ್ತಿರ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ಲಾರಿ ಚಾಲಕನು ಈ ಅಪಘಾತ ನೋಡಿ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಸುಭಾಶ ತಂದೆ ಸಿದ್ರಾಮಪ್ಪಾ  ನಿಂಬರ್ಗಿಕರ ಗೊಬ್ಬುರ (ಬಿ) ತಾ|\ ಅಫಜಲಪೂರ ಹಾವ|| ಸಮತಾ ಕಾಲೋನಿ ವಿಜಯನಗರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 346/2012 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಮಹ್ಮದ ಆರೀಫ್ ತಂದೆ ಮಹ್ಮದ ಯಾಕೂಬ್ ಸಾ:ಅಪ್ಪರ ಲೈನ ಸಂತ್ರಸವಾಡಿ ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯರಾದ ನಾಸೀರಖಾನ,ಮಹ್ಮದ ಅಬ್ದುಲ್ಲಾ, ಮಹ್ಮದ ಅಮಜದ ಅಲಿ,ಮಹ್ಮದ ಫೆರೋಜ ಮಹ್ಮದ ಅಕ್ಬರ,ಮಹ್ಮದ ಜಮೀಲ,ಮಹ್ಮದ ಹಾಸಮ್,ಅಬ್ದುಲ ಜಬ್ಬಾರ, ಅಬ್ದುಲ ಕರೀಮ @ ರಹೇಮಾನ  ಎಲ್ಲರೂ ಕೂಡಿಕೊಂಡು ನಮ್ಮ ಗೆಳೆಯ ಶಕೀಲ ಇವರ ಹೊಲದಲ್ಲಿ ಊಟ ಮಾಡಲು ಮೋಟಾರ ಸೈಕಲ ಮೇಲೆ ಶಕೀಲ ರವರ ಹೊಲಕ್ಕೆ ಸಂಜೆ 6-30 ಗಂಟೆ ಸುಮಾರಿಗೆ ಹೋಗಿ ಶೆಡ್ಡನಲ್ಲಿ ಊಟ ಮಾಡಿ ಕುಳಿತಾಗ, ದಿನಾಂಕ 28-10-12 ರಂದು ರಾತ್ರಿ 9-00 ಗಂಟೆ ಸುಮಾರಿಗೆ  25 ರಿಂದ 35 ವರ್ಷ ವಯಸ್ಸಿನ  8 ರಿಂದ 10 ಜನರು  ತಮ್ಮ ತಮ್ಮ ಕೈಯಲ್ಲಿ  ತಲವಾರ ಹಿಡಿದುಕೊಂಡು  ನಾನು ಮತ್ತು ನನ್ನ ಗೆಳೆಯರು ಕುಳಿತ ಶೆಡ್ಡನಲ್ಲಿ ಬಂದು ಈ ಹೊಲ ಯಾರದು ಅಂತಾ ಕೇಳಲು, ನಮ್ಮದು ಹೊಲ ಇರುತ್ತದೆ ಎಂದು ಹೇಳಿದಾಗ  ಅವರಲ್ಲಿ ಇಬ್ಬರು  ಅವಾಚ್ಯವಾಗಿ ಬೈದು  ಇಬ್ಬರು ತಮ್ಮ ಕೈಯಲ್ಲಿದ್ದ ತಲವಾರ ನನ್ ಕುತ್ತಿಗೆ ಹಚ್ಚಿ ನಮ್ಮಲ್ಲರಿಗೆ ಮುಖ ಕೆಳೆಗೆ ಮಾಡಿರಿ  ನಿಮ್ಮ ಹತ್ತಿರವಿದ್ದ ಹಣ ಮತ್ತು ಮೋಬಾಯಿಲ್  ತೆಗೆಯಿರಿ ಎಂದು ತಲವಾರ, ಮಚ್ಚು, ರಾಡು,  ತೋರಿಸಿ ಜೀವ ಬೆದರಿಕೆ ಹಾಕಿ ನನಗೆ ಮತ್ತು ನ್ನ ಗೆಳೆಯರ  ಕಿಸೆಯಲ್ಲಿ ಜಬರ ದಸ್ತಿಯಿಂದ ಕೈ ಹಾಕಿ ಹಣ ಮತ್ತು ಮೋಬಾಯಿಲ ಪರ್ಸ ಹೀಗೆ ಒಟ್ಟು ನಗದು ಹಣ 46,200/-ರೂ.ಮತ್ತು ಮತ್ತು 5 ಮೋಬಾಯಿಲ ಕಿಮ್ಮತ್ತು 10,600/- ರೂ. ಹೀಗೆ ಒಟ್ಟು 56,800/- ರೂ. ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 348/2012 ಕಲಂ 395 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಮಲ್ಲಿಕಾರ್ಜುನ ತಂದೆ ಅಮೃತರಾವ ಪೊಲೀಸ ಪಾಟೀಲ ಸಾ:ಅವರಾದ ಬಿ ತಾ:ಜಿ:ಗುಲಬರ್ಗಾರವರು ನಾನು ದಿನಾಂಕ:01/10/2012 ರಂದು ಸಾಯಾಂಕಾಲ 4:30 ಗಂಟೆ ಸುಮಾರಿಗೆ ಗುಲಬರ್ಗಾಕ್ಕೆ ಬರುವ ಕುರಿತು ಬಸ್ಸ ಸ್ಟಾಂಡ ಹತ್ತಿರ ನಿಂತುಕೊಂಡಾಗ ಅಬ್ದುಲ ತಂದೆ ಚಾಂದಸಾಬ ಕಣಜಿ ಇತನು ಕೂಸ್ರರ ನಂ ಕೆ.ಎ 32 ಬಿ-7259 ನೇದ್ದರಲ್ಲಿ ಕುಳಿತುಕೊಂಡು ಕೈಯಲ್ಲಿ ರಾಡ ಬಡಿಗೆಗಳನ್ನು ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು ನನಗೆ ಮತ್ತು ನಮ್ಮ ತಾಯಿ ಜೊತೆಗೆ ನಾವು ಇಲ್ಲದ ಸಮಯದಲ್ಲಿ ಯಾಕೇ ಜಗಳ ತೆಗೆದಿದ್ದಿರಿ ಅಂತಾ ಜಗಳ ತೆಗೆದು ರಾಡದಿಂದ ಬಡಿಗೆಯಿಂದ ಕೈಯಿಂದ ಹೊಡೇ ಬಡೇ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 349/2012 ಕಲಂ, 143, 147, 148, 323, 324, 504, 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

01 November 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ, ಅಯ್ಯಪ್ಪಾ ತಂದೆ ನಿಂಗಪ್ಪಾ ರಾಜೊಳ ಸಾ|| ಜಾಂಬವೀರ ಕಾಲೋನಿ ವಾಡಿ ರವರು ನನಗೆ 2 ಗಂಡು,4 ಜನ ಹೆಣ್ಣು ಮಕ್ಕಳಿದ್ದು ಮರೆಮ್ಮಳ ಇವಳಿಗೆ ಸಾಬಣ್ಣಾ ಜೊತೆಗೆ ಮದುವೆ ಮಾಡಿದ್ದು,ಅಳಿಯ ಮಗಳು ಎಲ್ಲರೂ ಒಟ್ಟಿಗೆ ಇರುತ್ತೆವೆ. ದಿನಾಂಕ:31-10-2012 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಸಾಬಣ್ಣ ಇತನು ಜಾಂಬವಿರ ಕಾಲೋನಿಯ ಕಮೀಟಿ ಹಾಲ್ ಮುಂದೆ ಬರುತ್ತಿರುವಾಗ ನಮ್ಮ ಓಣಿಯ ರಾಜು ಮತ್ತು ಮಲ್ಲು ಇವರು ಅವಾಚ್ಯವಾಗಿ ನಿಂದನೆ ಮಾಡಿರುತ್ತಾರೆ.  ರಾತ್ರಿಯಾಗಿದ್ದರಿಂದ ಮುಂಜಾನೆ ವಿಚಾರಣೆ ಮಾಡೊಣ ಅಂತಾ ಊಟಮಾಡಿ ಮಲಗಿಕೊಂಡೆವು. ದಿನಾಂಕ:01-11-2012 ರಂದು ಮುಂಜಾನೆ 7-00 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ ಸರೂಬಾಯಿ, ಮಗ ಮಲ್ಲಿಕಾರ್ಜುನ ಮತ್ತು ಮಗಳು ಮರೆಮ್ಮಾ 4 ಜನರು ಕೂಡಿ ಲಕ್ಷ್ಮಣ ಇತನ ಮನೆಯ ಮುಂದೆ ಹೋಗಿ ಲಕ್ಷ್ಮಣನಿಗೆ ಕರೆದೆ. ಆಗ ಲಕ್ಷ್ಮಣ ಮತ್ತು ಆತನ ಹೆಂಡತಿ ಶಾಂತಮ್ಮಾ ಮಗ ರಾಜು ಮನೆಯ ಹೊರಗೆ ಬಂದರು ಅಷ್ಟರಲ್ಲಿ ಮಲ್ಲು ಕೂಡಾ ಬಂದರು ಯಾಕೆ ನಿನ್ನೆ ರಾತ್ರಿ ನನ್ನ ಅಳಿಯನಿಗೆ ಬೈದಿರಿ ಅಂತಾ ಕೇಳಿದರು ಭೊಸಡಿ ಮಕ್ಕಳೆ ನಿಮ್ಮ ಅಳಿಯನೇ ನಮ್ಮ ಅಣ್ಣ ಮಲ್ಲುನಿಗೆ ಹೊಡೆದು ಮತ್ತೆ ಮನೆತನ ಬಂದಿರಿ ಅಂತಾ ಬೈದು ರಾಜು ಇತನು ತನ್ನ ಮನೆಯಲ್ಲಿ ಹೋಗಿ ಬತಾಯಿ ನಮೂನೆಯ ಚಾಕು ತಂದವನೆ ನನ್ನ ಕುತ್ತಿಗೆಗೆ ಹೊಡೆಯಲು ಬಂದನು ಆಗ ನಾನು ತಪ್ಪಿಸಿಕೊಳ್ಳಲು ಆ ಏಟು ನನ್ನ ಬಲಗಡೆ ಗಲ್ಲಕ್ಕೆ ಹತ್ತಿತ್ತು, ಇನ್ನೊಂದು ಏಟು ಹೊಡೆಯಲು ಬಂದನು ನಾನು ತಪ್ಪಿಸಿಕೊಳ್ಳಲು ಬಲಗೈ ಮೊಳಕೈ ಕೇಳಗೆ ಬಿತ್ತು ಆಗ ನನ್ನ ಮಗ ಮಲ್ಲಿಕಾರ್ಜುನ, ಮಗಳು ಮರೆಮ್ಮಾ ನನ್ನ ಹೆಂಡತಿ ಸರೂಬಾಯಿ ಬಿಡಿಸಲು ಬಂದರೆ ನಿಮಗು ಇವತ್ತು ಬಿಡುವುದಿಲ್ಲಾ ಅಂತಾ ಅಂದವರೆ ಅದೆ ಚಾಕುವಿನಿಂದ ರಾಜು ಇತನು ನನ್ನ ಮಗ ಮಲ್ಲಿಕಾರ್ಜುನನಿಗೆ ಕತ್ತಿಗೆಗೆ ಹೊಡೆಯಲು ಹೋದ ತಪ್ಪಿಸಿಕೊಳ್ಳಲು ಅದು ಕುತ್ತಿಗೆಗೆ ಬಿತ್ತು ಮತ್ತೊಂದು ಏಟು ಕೂಡಾ ಕುತ್ತಿಗೆಗೆ ಹೊಡೆದನು ಅದರಿಂದ ಭಾರಿ ರಕ್ತಗಾಯವಾಗಿ ರಕ್ತ ಬರ ಹತ್ತಿತು ನನ್ನ ಹೆಂಡತಿಗೆ ಲಕ್ಷ್ನಣ ಇತನು ಕೈಮುಷ್ಟಿಮಾಡಿ ಹೊಟ್ಟೆಗೆ ಗುದ್ದಿದನು ಮಗಳು ಮರೆಮ್ಮಳಿಗೆ ಮಲ್ಲು ಕಲ್ಲಿನಿಂದ ತಲೆಗೆ ಹೊಡೆದನು. ಶಾಂತಮ್ಮಾ ಕೂಡಾ ಕಲ್ಲಿನಿಂದ ತಲೆಗೆ ಹೊಡೆದನು ನನ್ನ ಮಗ ಮಲ್ಲಿಕಾರ್ಜುನ ಇತನಿಗೆ ಕುತ್ತಿಗೆಗೆ ಹೊಡೆದು ಭಾರಿ ರಕ್ತಗಾಯಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:142/2012 ಕಲಂ,504, 323, 324, 307, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುಧೋಳ ಠಾಣೆ:ಶ್ರೀ ಲಕ್ಷ್ಮಣ ತಂದೆ ಚಂದ್ರಯ್ಯಾ ಕಲಾಲ ವ|| 16 ಜಾ|| ಕಲಾಲ ಸಾ|| ಹೂಡಾ ಗ್ರಾಮ ತಾ|| ಸೇಡಂ ರವರು ನಮ್ಮ ತಂದೆಯವರಾದ ಚಂದ್ರಯ್ಯ ಇನ್ನೂ ನಾಲ್ಕು ಜನರು ಕೂಡಿಕೊಂಡು ದಿನಾಂಕ: 01-11-2012 ರಂದು ಮುಂಜಾನೆ 7-00 ಗಂಟೆಗೆ  ಕೊಂತನಪಲ್ಲಿ ಕ್ರಾಸ್ ಹತ್ತಿರ ಸೇಡಂ ರಸ್ತೆಯ ಎಡಭಾಗಕ್ಕೆ ಹೂಡಾ ಗ್ರಾಮದ ಕಡೆಗೆ ಬರುವುದಕ್ಕಾಗಿ ನಿಂತಾಗ ಮುದೋಳ ಕಡೆಯಿಂದ ಹೋರಟಿದ್ದ ಮಹಿಂದ್ರಾ ಮ್ಯಾಕ್ಸ್ ವಾಹನ ನಂ:ಕೆಎ-32 ಎ-0135 ನೇದ್ದರ ಚಾಲಕನಾದ ಪ್ರಭುಲಿಂಗ ತಂದೆ ಮಹಾಂತಪ್ಪಾ ಇತನು ತನ್ನ ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಚಂದ್ರಯ್ಯಾ ಇತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಉಪಚಾರ ಕುರಿತು ಸೇಡಂ ಕಡೆಗೆ ಕರೆದುಕೊಂಡು ಹೋಗುವಾಗ ಮೃತ ಪಟ್ಟಿರುತ್ತಾನೆ. ಸದರಿ ಚಾಲಕನ ವಿರುದ್ದ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 141/2012 ಕಲಂ,279,304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.