POLICE BHAVAN KALABURAGI

POLICE BHAVAN KALABURAGI

19 May 2012

GULBARGA DIST REPORTED CRIMES


ಅಶ್ಲೀಲವಾಗಿ ಮೇಲ್ ಕಳುಹಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿರುವ ಮೊಬಾಯಿಲ್ ನಂಬರರವರ ಮೇಲೆ ಕಾನೂನು ಕ್ರಮ ಜರೂಗಿಸುವ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀಮತಿ ರಾಜಶ್ರೀ ಗಂಡ ಶರಣಬಸಪ್ಪ ಸಜ್ಜನ ಉ: ಓಂ ಎಂಟರಪ್ರೈಜಸ್ ಮಾಲಿಕಳು ಮತ್ತು ಟಿ.ಟಿ.ಕೆ ಪ್ರಸ್ಟೀಜ ಕಂಪನಿಯ ಸರ್ವಿಸ್ ಸೆಂಟರ ಮಾಲಿಕರು ಸಾ: ಕೆ.ಎಚ್.ಬಿ ಕಾಲೋನಿ ಕೊರ್ಟ ಹಿಂದುಗಡೆ ಗುಲಬರ್ಗಾರವರು ನನ್ನ ಮೋಬಾಯಿಲ್  ನಂಬರಿಗೆ ಅನಾಮಿಕ ಮೇಲ್  ID Mallappapatil2@gmail.com ಎಂಬುವವನಿಂದ ನನ್ನ ಮೊಬಾಯಿಲ್  ನಂಬರಗೆ ದಿನಾಂಕ:22/11/2011 ರಂದು ಸಂಜೆ 17:24 ಗಂಟೆಗೆ TD-677800  ಮೊ. ನಂ 9241444233 ದಿಂದ ಅವಾಚ್ಯವಾಗಿ ಮತ್ತು ಅಶ್ಲೀಲವಾಗಿ ಈ ಮೇಲ್ ಸಂದೇಶಗಳನ್ನು ಕಳುಹಿಸಿರುತ್ತಾನೆ. ದಿನಾಂಕ:17/05/2012 ರಂದು 14:30 ಗಂಟೆಗೆ  TD-677800  ಮೊ. ನಂ 7760672355 ಅಶ್ಲೀಲವಾಗಿ ಗಂಡ ಹೆಂಡತಿಗೆ ಬೆರ್ಪಡೆಯಾಗುವಂತ ಮೇಲ್ ಸಂದೇಶ ದಿನಾಂಕ:17/05/2012 ರಂದು 14:33 ಗಂಟೆಗೆ ಮತ್ತು ದಿನಾಂಕ:17/05/2012 ರಂದು 14:51 ಗಂಟೆಗೆ ಅತೀ ಅಶ್ಲೀಲವಾಗಿ ಈ ಮೇಲ್ ಸಂದೇಶ ಕಳುಹಿಸಿ ನನ್ನ ಮಾನಸಿಕ ನೆಮ್ಮದಿಗೆ  ಕಾರಣರಾಗಿರುವ ಈ ಮೇಲ್ ಐ.ಡಿ ID Mallappapatil2@gmail.com ಹಾಗೂ ನನಗೆ ಕಳುಹಿಸಿದ ಮೊಬಾಯಿಲ್ ನಂಬರಗಳಾದ 9241444233,  7760672355 ನೇದ್ದವರ ಮೇಲೆ  ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:70/2012 ಕಲಂ 323, 504, 507, 509 ಐಪಿಸಿ ಮತ್ತು 66 (ಎ), (ಬಿ) ಐ.ಟಿ ಅಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀ ಬಿ.ಎಂ ಪಾಟಿಲ ಅಧೀಕ್ಷಕರು ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರ  ಗುಲಬರ್ಗಾರವರು ನಮ್ಮ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರ ಗುಲಬರ್ಗಾ ಕಟ್ಟಡದಲ್ಲಿ ಬೋರಿಂಗ ಮತ್ತು ಲೈಟಿನ ಸಲುವಾಗಿ ಸಾದಾ ವೈರ ಮತ್ತು ಬೋರಿಂಗಕ್ಕೆ ಅಳವಡಿಸಿದ ಕೇಬಲ ವೈರನ್ನು ಯಾರೋ ಕಳ್ಳರು ವೈರ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ: 71/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ದೇವಾನಂದ ತಂದೆ ಬಾಬುರಾವ ಮುಗಳನಾಗಾಂವ   ಸಾ:ಮರತೂರ ರವರು ನನ್ನ ಹೆಂಡತಿ ಬಾಗಮ್ಮಾ ಇವಳು ನೀರಿಗೆ ಹೊದಾಗ ಕೈ ಹಿಡಿದು ಜಗ್ಗಾಡಿದ್ದು ಯಾಕೆ ಅಂತಾ ಕೇಳಲಿಕ್ಕೆ ಹೋದಾಗ ದೇವಾನಂದ ತಂದೆ ಚಂದಪ್ಪಾ ಮತ್ತು ಶಿವಾನಂದ ತಂದೆ ಚಂದಪ್ಪಾ, ಕುಶಾಲ ತಂದೆ ಚಂದಪ್ಪಾ ಇವನು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ, ಮತ್ತು ಅವರ ತಾಯಿ ಮಹಾದೇವಿ ಇವರು ಪ್ರಚೋದನೆ ಮಾಡಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 63/2012 ಕಲಂ: 323, 324, 504, ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.              
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಸತೀಶ ತಂದೆ ಶಾಮರಾವ ಗೌರಕರ ಸಾ:ಮುಡಬಿ ತಾ:ಬಸವಕಲ್ಯಾಣ ಜಿ:ಬೀದರ ರವರು ನಾನು ಮತ್ತು ಚಂದ್ರಕಾಂತ ಕಟ್ಟಿಮನಿ ಕೂಡಿಕೊಂಡು ದಿನಾಂಕ:15/05/2012 ರಂದು ನಸುಕಿನ ಜಾವ 5.00 ಗಂಟೆಗೆ ಗುಲಬರ್ಗಾದಿಂದ ಟಾಟಾ ಸುಮೋ ಜೀಪ ನಂ.ಎಮ್‌ಹೆಚ್‌-12 ಬಿಜಿ-9880 ನೇದ್ದರಲ್ಲಿ ಕುಳಿತು ತೊನಸಳ್ಳಿ (ಎಸ್‌) ಗ್ರಾಮ ಕಡೆಯಿಂದ ಶಹಾಬಾದಕ್ಕೆ ಬರುವಾಗ ತೊನಸಳ್ಳಿ ದಾಟಿ  ಚಾಲಕನು ತನ್ನ ಟಾಟಾ ಸುಮೋ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಟಾಟಾ ಸುಮೋ ಪಲ್ಟಿಯಾಗಿ ಬಿತ್ತು ಚಾಲಕನಿಗೆ ರಕ್ತಗಾಯವಾಗಿರುತ್ತೆವೆ ಮತ್ತು  ಎದುರಿನ ಗ್ಲಾಸ ಒಡೆದು ಬಾಡಿ ಬೆಂಡಾಗಿರುತ್ತದೆ ಆಗಿದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 64/2012 ಕಲಂ: 279, 337  ಐಪಿಸಿ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ: ಶ್ರೀಮತಿ ಮಹಾದೇವಿ ಗಂಡ ಚಂದಪ್ಪಾ ಚನ್ನಮಗೋಳ ಸಾ:ಮರತೂರ.  ರವರು  ನಾನು ಮನೆಯಲ್ಲಿದ್ದಾಗ ಶಾಮರಾವ ಇವನು ನನಗೆ ಹೊರಗೆ ಕರೆದು ನನ್ನ ತಾಯಿಯ ಸಂಗಡ  ಬೋರವೇಲ ಹತ್ತಿರ ಯಾಕೆ ಜಗಳ ಮಾಡಿದೆ ಅಂತಾ ಕೇಳಿ ಹೊಡೆ ಬಡೆ ಮಾಡಿದನು ಅದರಂತೆ ದೇವಾನಂದ, ಶಾಮರಾವ, ಸಂಜು ಇವರು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:65/2012 ಕಲಂ: 324,323,504,506 ಸಂ 34  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶಿವಾನಂದ ತಂದೆ ಕಾಶಿರಾಯ ಅಷ್ಟಗಾ ಸಾ|| ಅಸ್ಟಗಾ ರವರು ನಮ್ಮ ಮನೆ ಎದುರು ನಾನು ಮತ್ತು ಶರಣಮ್ಮ ಕುಳಿತಾಗ ತಮ್ಮ  ಜಾತಿಯವರಾದ ಶಾಂತಪ್ಪ ಆಲಗೂಡ ಮತ್ತು ಆತನ ಮಗ ಅರ್ಜುನ  ಇಬ್ಬರು ನನ್ನ ಹತ್ತಿರ ಬಂದು  ಮನೆ ಕಟ್ಟುವ ಗೌಂಡಿ ಕೆಲಸಕ್ಕೆ ಬಾ ಎಂದು ಕರೆದರು. ಅದಕ್ಕೆ ನಾನು ಇಂದು ಬೇರೆಯವರ  ಹತ್ತಿರ  ಬೆಳಿಗ್ಗೆ  ಗೌಂಡಿ ಕೆಲಸಕ್ಕೆ ಹೋಗಿದ್ದೆನೆ ನಾಳೆ ಬರುತ್ತೇನೆ ಅಂತಾ ಹೆಳಲು ಶಾಂತಪ್ಪಾ ಮತ್ತು ಅರ್ಜುನ ಇವರು ಕೂಡಿಕೊಂಡು ಕೊಡಬೇಕಾದ 3000/- ರೂ ಕೊಡು ಇಲ್ಲದಿದ್ದರೆ ಹಣ ವಾಪಸ್ಸು ಕೊಡು ಅಂತಾ ಜಗಳ ಮಾಡಿರುತ್ತಾರೆ ನಾನು ಎರಡು ದಿವಸ ಬಿಟ್ಟು ಕೊಡುತ್ತೆನೆ ಅಂತಾ ಅಂದಿದಕ್ಕೆ ಅವಾಚ್ಯವಾಗಿ ಬೈದು ರಾಡಿನಿಂದ ತಲೆ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:158/2012 ಕಲಂ 504, 323, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಕಳ್ಳತನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ : ಶ್ರೀ ಚಂದ್ರಕಾಂತ ತಂದೆ  ರುದ್ರಪ್ಪ ರಾಠೋಡ ಉ|| ಮುಖ್ಯ ಗುರುಗಳು ಸಾ|| ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ದೇಸಾಯಿ ಕಲ್ಲೂರ ತಾ|| ಅಫಜಲಪೂರ ರವರು ನಮ್ಮ  ದೇಸಾಯಿ ಕಲ್ಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಣೆಯಲ್ಲಿ ಇಟ್ಟಿದ್ದ ಸಮ್ ಸಂಗ ಟಿ ವಿ 1,  ಹೋಲಿಗೆಯ 2 ಯಂತ್ರಗಳು ಅಂಧಾಜು ಕಿಮ್ಮತ್ತು 23,000/- ರೂ ಯಾರೊ ಕಳ್ಳರು ರಾತ್ರಿ ಸಮಯದಲ್ಲಿ ಕೋಣೆಯ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು  ಟಿವಿ ಮತ್ತು ಹೋಲಿಗೆ ಯಂತ್ರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಲಿಖೀತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:88/2012 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಮಹ್ಮದ ಸಲೀಮ್ ತಂದೆ ಮಹ್ಮದ ಸಲಾಮ್ ಮಿಯಾ ಉಃ ಅಟೋ ಚಾಲಕ ಸಾ: ಕೆ.ಬಿ.ಎನ್. ಕಾಲೇಜು ಹತ್ತಿರ ಬಿಲಾಲಾಬಾದ  ಗುಲಬರ್ಗಾರವರು ನಾನು  ದಿನಾಂಕ 18-05-2012 ರಂದು ಸಾಯಂಕಾಲ 6-00 ಗಂಟೆಗೆ ಗಂಜ್ ಬಸ್ ನಿಲ್ದಾಣ ರೋಡಿಗೆ ಇರುವ ದರಬಾರ ಹೋಟಲ ಮುಂದೆ ಹೊರಟಾಗ ಟಂ ಟಂ ನಂ ಕೆಎ 32  ಎ 4243 ಚಾಲಕ ಗಂಜ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ ನಂ – ಕೆಎ 30 ಜೆ 9892 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಬಲಗಾಲಿನ ಪಾದಕ್ಕೆ ಗಾಯಗೊಳಿಸಿದ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 27/2012 ಕಲಂ 279, 338 ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ಹೀರಾಮಣಿ ತಂದೆ ಗನ್ನು ರಾಠೋಡ ಉ:ಆಟೋ ಚಾಲಕ ಸಾ: ಕೇರೂರ ತಾಂಡಾ ತಾ:ಜಿ: ಗುಲಬರ್ಗಾರವರು ನಾನು ದಿನಾಂಕ:18/05/2012 ರಂದು ಮುಂಜಾನೆ ನಮ್ಮ ಊರಿನಿಂದ ಆಟೋ ನಂ ಕೆ.ಎ 32 ಎ-9043 ನೇದ್ದರಲ್ಲಿ ತಾಂಡಾದರೊಂದಿಗೆ ಗುಲ್ಬರ್ಗಾಕ್ಕೆ ಬರುವಾಗ ಮುಂಜಾನೆ 6:30 ಗಂಟೆಯ ಸುಮಾರಿಗೆ ಹುಮನಾಬಾದ ರಿಂಗ ರೋಡಿನ ಸರ್ಕಲದಲ್ಲಿ ಬಂದಾಗ ಸೇಡಂ ರಿಂಗ ರೋಡ ಕಡೆ ಯಿಂದ  ಲಾರಿ ನಂ ಎಮ್-ಎಚ್-24 ಜೆ-6722 ನೇದ್ದರ ಚಾಲಕನು ತನ್ನ ಲಾರಿ ಯನ್ನು ಅತೀವೇಗದಿಂದ & ಅಲಕ್ಷತನದಿಂದ ನಡೆಸಿಕೊಂಡು ಬಂದು ಆಟೋಕ್ಕೆ ಡಿಕ್ಕಿ ಪಡಿಸಿದ್ದರಿಂದ ನಮ್ಮ ಆಟೋ ಬಲಗಡೆ ಮಗ್ಗಲು ಪಲ್ಟಿ ಆಗಿ ಅದರಲ್ಲಿದ್ದ ನಮ್ಮಗೆಲ್ಲಾ ಗಾಯಗಳಾಗಿರುತ್ತವೆ ಲಾರಿ ಚಾಲಕ ಶ್ರೀ ಲಕ್ಷ್ಮಣಕುಮಾರ ತಂ/ ವಾಮನ ಕುಂಬಾರ ಸಾ:ಚಿಕ್ಕರೂಟ ತಾ:ಜಿ: ಲಾತೂರ ಇವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 157/2012 ಕಲಂ 279 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

18 May 2012


ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ ಮಿತಾನಂದ  ತಂದೆ ನಾಗಪ್ಪ  ಕುಡಕೆ  ಸಾ: ಕಿಣ್ಣಿಅಬ್ಬಾಸ   ರವರು ದಿ:17/05/2012 ರಂದು ನಾಮದೇವ  ತಂದೆ  ತಿಪ್ಪಣ್ಣಾ ಕುಡಕೆ ಮನೆಯ ಮುಂದೆ ಹಾದು ಹೊಗುವಾಗ      ನಾಮದೇವ  ತಂದೆ  ತಿಪ್ಪಣ್ಣಾ ಕುಡಕೆ , ಚಂದ್ರಬಾಗಮ್ಮ ಗಂಡ  ನಾಮದೇವ ಕುಡಕೆ, ಸಂತೋಷ ತಂದೆ ನಾಮದೇವ ಕುಡಕೆ, ಸಂಜೂಕುಮಾರ   ತಂದೆ  ನಾಮದೇವ ಕುಡಕೆ ಇವರೆಲ್ಲರೂ ನನ್ನನ್ನು ತಡೆದು   ಮನೆಯ ಜಾಗೆಯ ವಿಷಯದಲ್ಲಿ ಹಿಂದಿನ ವೈಮನಸ್ಸಿನಿಂದ   ತಡೆದು  ನಿಲ್ಲಿಸಿ  ಅವಾಚ್ಯೆ ಶಬ್ದಗಳಿಂದ   ಬೈದು ಕೈಯಿಂದ ಬಡೆ ಮಾಡಿ  ಜೀವ ಭಯದ  ಬೆದರಿಕೆ   ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ   ಗುನ್ನೆ. ನಂ 19/2012 ಕಲಂ 323, 341, 504 506 ಸಂಗಡ 34  ,ಪಿ,ಸಿ ಪ್ರಕಾರ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಉದಯ ತಂದೆ ಚಂದ್ರಶ್ಯಾ ಖಾಣಗೆ ಸಾ|| ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು, ದಿನಾಂಕ : 16/05/2012 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯರಾದ ಸತೀಶ ಬಸವನಗರ, ರಾಜು ಅಶೋಕ ನಗರ ಮೂರು ಜನರು ಬಸ್ ಸ್ಟಾಂಡ ಹತ್ತಿರದ ನ್ಯೂ ತ್ರೀಶೂಲ್ ಬಾರ & ರೆಷ್ಟೋರೆಂಟದಲ್ಲಿ ಪಾರ್ಟಿ ಮಾಡಲು ಹೊಗಿದ್ದು ರೆಷ್ಟೊರೆಂಟಿನ ಗಾರ್ಡನದಲ್ಲಿ ಕುಳಿತು ಬೀಯರ ಕುಡಿಯುತ್ತಾ, ಗೌಡ ಎಂಬ ಮ್ಯಾನೆಜರನಿಗೆ ಊಟ ಆರ್ಡರ ಮಾಡುತ್ತಿರುವಾಗ ಆತನು, ನೀವು ಮೊನ್ನೆ ಊಟ ಮಾಡದೆ ಹೊಗಿದ್ದೀರಿ ಅಂತಾ ಏರು ದ್ವನಿಯಲ್ಲಿ ಮಾತನಾಡಿದ್ದು ಆಗ ನಾವು ಊಟ ಮಾಡ್ಲಿ ಬಿಡ್ಲಿ ಬೀಲ್ ಕೊಟ್ಟಿದ್ದೆವೆ ಅಂತಾ ಹೇಳಿದ್ದಕ್ಕೆ ಆತನು ಅವಾಚ್ಯವಾಗಿ ನನ್ನನ್ನು ಬೈದು ಜಾತಿ ನಿಂದನೆ ಮಾಡಿ ಹೊಡೆದು ಗಾಯಗೊಳಿಸಿರುತ್ತಾನೆ.  ಬಿಡಿಸಲು ಬಂದ ನನ್ನ ಗೆಳೆಯರಿಗೂ ಸಹ ಸಣ್ಣ ಪೂಟ್ಟ ಗಾಯಗಳಾಗಿರುತ್ತವೆ ಸಪ್ಲೈ  ಮಾಡುತ್ತಿದ್ದ ಮೂರು ಜನ ವೇಟರ ಸೇರಿ ಜಾತಿ ನಿಂದನೆ ಮಾಡಿ, ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ. 44/2012 ಕಲಂ 323, 324, 504, 506 ಸಂ. 34 ಐ.ಪಿ.ಸಿ ಮತ್ತು 3 (1) (10) ಎಸ್.ಸಿ/ಎಸ್.ಟಿ ಪಿಎ ಎಕ್ಟ  1989 ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ಕಾಳ ಸಂತೆಗೆ ಸಾಗಣೆ ಮಾಡುತ್ತಿದ ಪಡಿತರ ಧಾನ್ಯ ವಶ :
ಗ್ರಾಮೀಣ ಠಾಣೆ : ದಿನಾಂಕ 17/05/2012  ಲಾರಿ ನಂ RJ 04 GA 5783 ನೇದ್ದರ ಚಾಲಕ , ಟಂ ಟಂ ಆಟೋ ನಂ KA 32 B 4257  ನೇದ್ದರ ಚಾಲಕ, ಟಂ ಟಂ ಆಟೋ ನಂ KA 32 A 1876  ನೇದ್ದರ ಚಾಲಕ  ಸರಕಾರಿ  ಪಡಿತರ ಆಹಾರ ಇಲಾಖೆಯ 50 ಕೆ.ಜಿ ತೂಕದ 150 ಅಕ್ಕಿ ಯನ್ನು ಸರಕಾರಕ್ಕೆ ಮತ್ತು ಪಡಿತರ ಫಲಾನುಭವಿಗಳಿಗೆ ಮೋಸ ಮಾಡಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಗೋಸ್ಕರ ಅಕ್ಕಿಯನ್ನು ಸಾಗಣೆ ಮಾಡುತ್ತಿರುವಾಗ ಬಾತ್ಮೀಯ ಮೇರೆಗೆ  ಸೈಯದ ಚಿಂಚೋಳಿ ರೋಡಿನ ಹತ್ತಿರ  ದಾಳಿ ಮಾಡಿ 50 ಕೆ.ಜಿ. ತೂಕದ  150 ಅಕ್ಕಿ ಚೀಲಗಳು ಅ.ಕೀ. 70,500 /-  ಮತ್ತು ಲಾರಿ ನಂ RJ 04 GA 5783 ಅ.ಕೀ 4 ಲಕ್ಷ ರೂ/-  ಟಂ ಟಂ ಆಟೋ ನಂ KA 32 B 4257  ಅ.ಕೀ. 80,000 /- ರೂ.  ಟಂ ಟಂ ಆಟೋ ನಂ KA 32 A 1876  ಅ.ಕೀ. 80,000/-  ಜಪ್ತ ಮಾಡಿಕೊಂಡ ಹೀಗೆ ಒಟ್ಟು 6,30,500 /-  ಜಪ್ತ ಮಾಡಿಕೊಂಡ ಬಗ್ಗೆ ಫಿರ್ಯಾದಿ ಶ್ರೀಮತಿ  ಪ್ರಮೀಳಾಬಾಯಿ  ಗುಜ್ಜಾರಿ  ಆಹಾರ ನಿರೀಕ್ಷಕರು  ಸರಬರಾಜು  ಇಲಾಖೆ  ಗುಲಬರ್ಗಾ ರವರ ದೂರಿನ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಗ್ರಾಮೀಣ  ಠಾಣೆ ಗುನ್ನೆ ನಂ. 156/12 ಕಲಂ 3 ಮತ್ತು 7 ಈ.ಸಿ. ಎಕ್ಟ 1955 ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.