POLICE BHAVAN KALABURAGI

POLICE BHAVAN KALABURAGI

20 December 2011

GULBARGA DIST REPORTED CRIMES

ದರೋಡೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ಪ್ರಶಾಂತ ತಂದೆ ಖಂಡಪ್ಪಾ ಬಂಡಿಗೇರ ವ;22 ವರ್ಷ ಉ: ವ್ಯಾಪಾರ ಜಾ: ಮರಾಠಾ ಸಾ: ಮಾಹಾಂತೇಶ್ವರ ಕಾಲೂನಿ ಅಫಜಲಪೂರರವರು ನಾನು ಮತ್ತು ನನ್ನ ಗೇಳೆಯನಾದ ಮಳೆಂದ್ರೆ ಬಿರಾದಾರ ಇಬ್ಬರು ಕೂಡಿಕೊಂಡು ಹಿರೋ ಹೊಂಡಾ ಮೋಟಾರ ಸೈಕಲ್ ನಂ ಕೆಎ-32 ಆರ್-4560 ನೇದ್ದರ ಮೇಲೆ ಗುಲಬರ್ಗಾದಿಂದ ಅಫಜಲಪೂರಕ್ಕೆ ಹೊರಟಿದ್ದು ದಾರಿ ಮಧ್ಯದಲ್ಲಿ ನಾಗದೇವತೆ ಯಲ್ಲಮ್ಮ ದೇವಸ್ಥಾನ ಗೂಡಿ ದಾಟಿ ಕೊಳಿ ಫಾರಂ ಹತ್ತಿರ ಬರುತ್ತಿದ್ದಾಗ ಎದುರಗಡೆಯಿಂದ ಇಂಡಿಕಾ ಮಾರುತಿ ಕಾರ ನಂ ಕೆಎ-25 ಎಮ್.ಬಿ-117 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಚಲಾಯಿಸಿಕೊಂಡು ನಮ್ಮ ಮೇಲೆ ಬರುತ್ತಿದ್ದಾಗ ನಾನು ಅವನಿಗೆ ಎ ಡ್ರೈವರ ನೋಡಿ ನಡೆಸು ಅಂತಾ ಅಂದಾಗ ಕಾರ ಚಾಲಕನು ತನ್ನ ಕಾರನ್ನು ತಿರುಗಿಸಿ ನಮ್ಮ ಮೊಟಾರ ಸೈಕಲಕ್ಕೆ ಬೇನ್ನು ಹತ್ತಿ ನಮ್ಮ ಮೋಟಾರ ಸೈಕಲವನ್ನು ಕೊಳಿ ಫಾರಂ ಹತ್ತಿರ ನಿಲ್ಲಿಸಿ ಕಾರಿನಿಂದ 4 ಜನರು ಇಳಿದು ನನಗೆ ತೆಕ್ಕೆಯಲ್ಲಿ ಹಿಡಿದು ಅವರಲ್ಲಿ ಒಬ್ಬನು ನನಗೆ ಕೈಯಿಂದ ಕಪಾಳ ಮೇಲೆ ಬೆನ್ನ ಮೇಲೆ ಹೊಡೆದಿರುತ್ತಾನೆ. ಮತ್ತು ನನ್ನ ಜೇಬಿನಲ್ಲಿದ 100=00 ರೂಪಾಯಿಯ 10.000=00 ಸಾವಿರ ಬಂಡಲ ಮತ್ತು 500=00 ನೂರು ರೂಪಾಯಿಯ 10.000=00 ಸಾವೀರ ಬಂಡಲ ಹೀಗೆ ಒಟ್ಟು 20.000=00 ಸಾವಿರ ರೂಪಾಯಿ ನಗದು ಹಣ ಮತ್ತು 2 ತೋಲಿ ಬಂಗಾರದ ಲಾಕೇಟ ಅ.ಕಿ.50.000=00 ಸಾವಿರ ರೊಪಾಯಿ ಹಿಗೆ ಒಟ್ಟು 70.000=00 ಸಾವಿರ ರೂಪಾಯಿಯನ್ನು ಜಬರ ದಸ್ತಿಯಿಂದ ಕಸಿದುಕೊಂಡಿರುತ್ತಾರೆ. ಮಳೆಂದ್ರ ಬಿರಾದಾರ ಇತನು ಜಗಳ ಬಿಡಿಸಲು ಬಂದಾಗ ಅವನಿಗು ಸಹಾ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ಹಣ ಕಸಿದುಕೊಂಡ ಅಪರಿಚಿತರ ವ್ಯಕ್ತಿಗಳ ಅಂದಾಜು ವ:25 ರಿಂದ 30 ವರ್ಷ ವಯಸ್ಸಿನವರು ಇರುತ್ತಾರೆ. ಅವರಲ್ಲಿ ಒಬ್ಬನು ಟಿ ಶರ್ಟ. ಜಿನ್ಸ ಪ್ಯಾಂಟ ಧರಿಸಿರುತ್ತಾನೆ ಮತ್ತು ಉಳಿದ 3 ಜನರು ಸಾದಾ ಪ್ಯಾಂಟ ಶರ್ಟ ಧರಿಸಿರುತ್ತಾರೆ. ಮತ್ತು ಅವರ ಹೆಸರು ವಿಳಾಗ ನನಗೆ ಗೊತ್ತಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 220/2011 ಕಲಂ 394 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ :
ಶ್ರೀ ವಿಜಯಕುಮಾರ ತಂದೆ ಮಾರುತಿ ಯಲಾಲಕರ್ ಸಾ: ಪಟಪಳ್ಳಿ ರವರು ನಾನು ಮತ್ತು ನನ್ನ ತಾಯಿಯಾದ ಚಂದ್ರಮ್ಮಾ , ಅಕ್ಕನ ಮಗಳಾದ ಮಮೀತಾ, ಹಾಗು ಕಾಕನ ಮಗಳಾದ ರುಕ್ಕಮಿಣಿ 4 ಜನರು ಕೂಡಿಕೊಂಡು ತೋಟ್ಟಿಲು ಕಾರ್ಯಕ್ರಮದ ಸಲುವಾಗಿ ದಿನಾಂಕ: 19-12-2011 ರಂದು ಮಧ್ಯಾಹ್ನ 1430 ಗಂಟೆಯ ಸುಮಾರಿಗೆ ಹಸರಗುಂಡಗಿ ಗ್ರಾಮಕ್ಕೆ ನಮ್ಮೂರಿಂದ ಹೊರಟಿದ್ದೇವು ನಮ್ಮೂರ ಕ್ರಾಸ ಹತ್ತಿರ ನಿಂತಾಗ ಚಿಂಚೋಳಿ ಕಡೆಯಿಂದ ಸರಕಾರಿ ಬಸ್ಸ ನಂಬರ ಕೆಎ/38-ಎಫ.-367 ನೇದ್ದು ಬಂದಾಗ ನಾವು ತುಮಕುಂಟಾ ಗ್ರಾಮದವರೆಗೆ ಹೊಗಬೇಕೆಂದು ಆ ಬಸ್ಸಿನಲ್ಲಿ ಹತ್ತಿದೇವು ಪ್ರಯಾಣಿಕರು ಬಹಳಷ್ಟು ಜನರು ಇರುವದರಿಂದ ನಾವುಗಳೂ ಬಾಗಿಲಿನಲ್ಲಿಯೇ ನಿಂತಿದ್ದೇವು ಬಸ್ಸ ಚಾಲಕನು ಬಸ್ಸನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಕಟ್ಟ ಮಾಡಿದ್ದರಿಂದ (ತಿರುಗಿಸಿದ್ದರಿಂದ) ಬಾಗಿಲಿನಲ್ಲಿ ನಿಂತಿದ್ದ ನನ್ನ ತಾಯಿ ಚಂದ್ರಮ್ಮಾ ಹಾಗು ಅಕ್ಕನ ಮಗಳಾದ ಮಮಿತಾ ಮತ್ತು ಕಾಕನ ಮಗಳಾದ ರುಕ್ಕಮಣಿ 3 ಜನರು ಕೆಳಗಡೆ ಬಿದ್ದರು ನನ್ನ ತಾಯಿ ಚಂದ್ರಮ್ಮಾ ಇವರಿಗೆ ತಲೆಗೆ ಹಾಗು ಮೇಲಕಿಗೆ ಭಾರಿ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಉಳಿದ ಮಮೀತಾ ಹಾಗು ರುಕ್ಕಮಿಣಿ ಇವರಿಗೆ ಸಾದಾ ಹಾಗು ಭಾರಿ ಗಾಯಾಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 151/2011 ಕಲಂ 279, 337, 338 304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಶಹಾಬೋದ್ದಿನ ತಂ/ ಮಹಿಬೂಬಸಾಬ ಯಲಗಾರ ಸಾ: ಸೋನಿಯಾ ಗಾಂಧಿ ಆಶ್ರಯ ಕಾಲನಿ ಗುಲಬರ್ಗಾರವರು ನಾನು ದಿನಾಂಕ 19/12/2011 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಮೋಟಾರ ಸೈಕಲ ನಂ 32 ಡಬ್ಲು-7874 ನೇದ್ದರ ಮೇಲೆ ನನ್ನ ಸ್ನೇಹಿತನಾದ ಮಹ್ಮದ ನಹೀಮ ಇತನಿಗೆ ಬೇಟಿ ಯಾಗುವ ಕುರಿತು ಹೋಗುವ ಕಾಲಕ್ಕೆ ಕೆಸಿಟಿ ಕಾಲೇಜ ಎದುರಿಗಡೆ ಹೋಗುತ್ತಿರುವಾಗ ಬಂದೂಕ ವಾಲಾ ಕಾಟದ ಕಡೆಯಿಂದ ರಸ್ತೆ ಕ್ರಾಸ ಮಾಡಿಕೊಂಡು ಅತೀವೇಗದಿಂದ ಮೋಟಾರ ಸೈಕಲ್ ನಂ ಕೆಎ 32 ಎಕ್ಸ್‌ 692 ನೇದ್ದನ್ನು ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಓಡಿ ಹಫಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 373/11 ಕಲಂ 279 337 ಐಪಿಸಿ ಸಂ/ 187 ಐಎಂವಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

19 December 2011

GULBARGA DIST REPORTED CRIMES

ಕಳ್ಳತನ ಪ್ರಕರಣದನದ ಮೂಳೆ ಕೊಬ್ಬಿನಿಂದ ಪಾಮ್ ಆಯಿಲ್ ಮತ್ತು ಡಾಲ್ಡ್ ತಯಾರಿಸುತ್ತಿದ್ದ ಇಬ್ಬರ ಆರೋಪಿಗಳ ಬಂದನ
ಗುಲಬರ್ಗಾ ನಗರದ ಹೊರ ವಲಯದ ಜಮಶೆಟ್ಟಿ ನಗರದ ಬಳಿ ಸುಮಾರು 10,000 ಚದರ ಅಡಿ ಜಮೀನು ಗುತ್ತಿಗೆಗೆ ಪಡೆದು ಆ ಸ್ಥಳದಲ್ಲಿ ದನದ ಮೂಳೆ ಬಳಸಿ ಪಾಮ್ ಯಿಲ್ ಮತ್ತು ಡಾಲ್ಡ ತಯಾರಿಸಲಾಗುತ್ತಿದ್ದು, ಇದರಿಂದ ಸುತ್ತ ಮುತ್ತ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದರಿಮದ ಕೇಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆ ಆಯುಕ್ತರವರಿಗೆ ದೂರು ಸಲ್ಲಿಸಿದ್ದವು. ಮಹಾ ನಗರ ಪಾಳಿಕೆ ಆಯುಕ್ತರಾದ ಶ್ರೀ ನಾಗಯ್ಯ ರವರು ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದರಿ ದೂರಿನ ಅನ್ವಯ ಮಾನ್ಯ ಎಸ.ಪಿ ಸಾಹೆಬರು ಮತ್ತು ಹೆಚ್ಚುವರಿ ಎಸ.ಪಿ ಸಾಹೇಬರ ಮತ್ತು ಗ್ರಾಮೀಣ ಉಪಾದೀಕ್ಷಕರ ಮಾರ್ಗದರ್ಶನದಲ್ಲಿ ಎಂಬಿ.ನಗರ ಸಿಪಿಐ ಬಿ.ಪಿ.ಚಂದ್ರಶೇಖರ ವಿಶ್ವ ವಿದ್ಯಾಲಯ ಠಾಣೆಯ ಪಿ.ಎಸ.ಐ ಪಂಡಿತ ಸಗರ, ಎ.ಎಸ.ಐ ಸಿದ್ರಾಮಗೌಡ, ಮತ್ತು ಸಿಬ್ಬಂದಿಯವರಾದ ಶಿವಪುತ್ರಸ್ವಾಮಿ, ವೇದರತ್ನಂ, ಅಶೋಕ, ಶಂಕರ, ಚಂದ್ರಕಾಂತ, ಬಲರಾಮ, ಪ್ರಭಾಕರ, ಹಾಗು ಅರ್ಜುನರವರು ಪ್ರಮುಖ ಆರೋಪಿಗಳಾದ ಮುಂಬೈಯ ದಾರವಿಯಲ್ಲಿ ನೇಲೆಸಿದ್ದ ಗುಲಬರ್ಗಾದ ರಹಿಮತ ನಗರದ ಇಸ್ಮಾಯಿಲ್ ಮತ್ತು ಮುಂಬೈ ಕುರ್ಲಾದ ನಿವಾಸಿ ಇಮ್ರಾನ್ ಹಾಜಿ ಖುರೆಷಿ ಎಂಬುವವರನ್ನು ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.

ಕಳ್ಳತನ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ :
ಶ್ರೀಮತಿ ನಂದಾ ಗಂಡ ರಮೇಶ ಸಜ್ಜನ ಸಾ ಸೇಡಂ ಹಾವಮನೆ ನಂ. 7-12-ಬಿ ಗಂಜ, ಹುಮನಾಬಾದ ರೋಡ, ಸೆಂಟ್ರಲ್ ವೇರ್ ಹೌಸ್ ಹತ್ತಿರ ಗುಲಬರ್ಗಾ ರವರು ನಾನು ಮತ್ತು ನನ್ನ ಅಕ್ಕ ಕಮಲಾಬಾಯಿ ಗಂಡ ಸಿದ್ರಾಮಪ್ಪ ಸಜ್ಜನ ಇಬ್ಬರೂ ಕೂಡಿಕೊಂಡು ಬಸ್ ನಂ. ಕೆ.ಎ 32 ಎಫ್ 1399 ನೇದ್ದರಲ್ಲಿ ಖರ್ಗೆ ಪೇಟ್ರೋಲ್ ಪಂಪ್ ಹತ್ತಿರ ಹತ್ತಿ ಸೇಡಂಗೆ ಹೊರಟಿದ್ದೇವು. ನಾವು ಯುನಿವರ್ಸಿಟಿ ಗೇಟ್ ಸಮೀಪ ನನ್ನ ಅಕ್ಕನ ಕೊರಳಿನಲ್ಲಿದ್ದ 3 ತೊಲೆ ಘಂಟಾನ (ರಸ್ಸಿ ಲಾಕೆಟ್ ಎರಡು ಪದರು) ಅಃಕಿಃ 75,000/- ರೂಪಾಯಿಗಳದ್ದು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗನ್ನೆ ನಂ 166/2011 ಕಲಂ. 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Gulbarga Dist Reported Crimes

ಜೂಜಾಟ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ.
ದಿನಾಂಕ 18/12/2011 ರಂದು ದುತ್ತರಗಾಂವ ಗ್ರಾಮದ ಸಾರ್ವಜನಿಕ ನೀರಿನ ಭಾವಿಯ ಹತ್ತಿರ ಅಂದಾರ ಬಹಾರ ಎಂಬ ಇಸ್ಪೀಟ ಜೂಜಾಟ ನಡೆಯುತ್ತಿರುವ ಮಾಹಿತಿ ಬಂದ ಮೇರೆಗೆ ಶ್ರೀ ಎಸ್.ಎಸ್ ದೊಡಮನಿ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಭೀಮರಾಯ ಪಾಟೀಲ, ವಿಶ್ವನಾಥ ರೆಡ್ಡಿ, ಶಿವರಾಯ ಸಿಪಿಸಿ ರವರು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ರಾಜು ತಂದೆ ಅಮೃತರಾವ, ವೀರಭದ್ರ ತಂದೆ ಮಹಾರುದ್ರಪ್ಪ ಶೀಲವಂತ, ಶಂಭುಲಿಂಗ ತಂದೆ ಗುರಣ್ಣಾ ಮಂಗಾಣೆ ಮತ್ತು ಭೀಮಶ್ಯಾ ತಂದೆ ಕಾಶಿರಾಮ ವಡ್ಡರ ಸಾ ಎಲ್ಲರೂ ದುತ್ತರಗಾಂವ ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ ಒಟ್ಟು 1850/- ಮತ್ತು 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 127/2011 ಕಲಂ 87 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಡಿರುತ್ತಾರೆ.
ಹಲ್ಲೆ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀಮತಿ ಗೀತಾ ಗಂಡ ಚೆನ್ನಾರೆಡ್ಡಿ ಪಾಟೀಲ ಗುಲಬರ್ಗಾ ರವರು ಜೇವರ್ಗಿ ರಿಂಗ ರೋಡಿನಲ್ಲಿ ನನ್ನ ಗಂಡ ಸರ್ವಜ್ಞ ಎಂಬ ಪಿ.ಯು.ಸಿ ಕಾಲೇಜ ನಡೆಸುತ್ತಿದ್ದು ಅಲ್ಲದೆ ಚೆನ್ನಾರೆಡ್ಡಿ ಪಾಟೀಲ ವಿದ್ಯಾರ್ಥಿ ಸೇವಾ ಪ್ರತಿಷ್ಠಾನ ಪ್ರೈಮರಿ ಹಾಗೂ ಹೈಸ್ಕೂಲ್ ಸಹ ನಡೆಸುತ್ತಿದ್ದೆವೆ ಸದರಿ ಶಾಲೆಯು ಟ್ರಷ್ಟ ಅಡಿಯಲ್ಲಿ ನಡೆಯುತ್ತಿದ್ದು ನಾನು ಹಾಗೂ ನನ್ನ ತಾಯಿ ಮುಖ್ಯಸ್ಥರು ಇರುತ್ತೆವೆ. ಶಾಲೆಯ ಖರ್ಚು ವೆಚ್ಚ ಆಗು ಹೊಗುಗಳನ್ನು ನಾನೆ ನೊಡಿಕೊಂಡು ಹೋಗುತ್ತೆನೆ. ತಾಯಿಯ ಹೆಸರನ್ನು ದುರುಪಯೊಗಪಡಿಸಿಕೊಂಡು ಶಿವರಾಜ ಪಾಟೀಲ ಇತನು ಆತನ ಹೆಂಡತಿ ಹಾಗೂ ಮಾವನ ಪ್ರಚೊದನೆಯಿಂದ ಪ್ರೈಮರಿ ಹೈಸ್ಕೂಲ ಶಾಲೆಯಲ್ಲಿ ನನ್ನದು ಪಾಲು ಇದೆ ಎಂದು ಸುಮಾರು ವರ್ಷಗಳಿಂದ ನಮ್ಮೊಂದಿಗೆ ವಾದ ಮಾಡುತ್ತಾ ಬಂದಿರುತ್ತಾನೆ ದಿನಾಂಕ 18/12/2011 ರಂದು ನಾನು ಕಾಲೇಜಿನ ಕ್ಯಾಂಪಸದಲ್ಲಿ ಇರುವಾಗ ನನ್ನ ತಮ್ಮ ಶಿವರಾಜ ಪಾಟೀಲ ಆತನ ಹೆಂಡತಿ ಸಪ್ನ ಅವಳ ತಂದೆ ಅಮೃತರಡ್ಡಿ ಅವರ ಸಂಬಂದಿ ಸೋಮನಾಥರೆಡ್ಡಿ ನಮ್ಮ ತಾಯಿ ಶ್ರೀಮತಿ ಶಾಂತದೇವಿ, ಪುಷ್ಪಾ ಹಾಗೂ ಇತರರು 12-15 ಜನರು ಮುಂಜಾನೆ ಕಾಲೇಜ ಕ್ಯಾಂಪಸದಲ್ಲಿ ಅತಿಕ್ರಮ ಪ್ರವೇಶ ಮಾಡಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 143, 147, 448, 354, 307, 109, 506 ಸಂ. 149 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.