POLICE BHAVAN KALABURAGI

POLICE BHAVAN KALABURAGI

18 November 2011

GULBARGA DIST REPORTED CRIMES

ಜೂಜಾಟ ಪ್ರಕರಣ:
ದೇವಲಗಾಣಗಾಪೂರ ಪೊಲೀಸ್ ಠಾಣೆ
: ಶ್ರೀ ಮಂಜುನಾಥ ಎಸ್. ಕುಸುಗಲ್ ಪಿಎಸ್ಐ ದೇವಲಗಾಣಗಾಪೂರ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರು ಬಟಗೇರಾ ಗ್ರಾಮದಲ್ಲಿ ಸಂತೆ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಜನರು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದ ಮೇರೆಗೆ ದಾಳಿ ಮಾಡಿ ರಮೇಶ ತಂದೆ ಪದಮಣ್ಣ ಕೋಣಸಿರಸಗಿ ವಯ; 26 ವರ್ಷ, ನಿಂಗಪ್ಪ ತಂದೆ ಈಟಪ್ಪ ಕೋಣಸಿರಸಗಿ ವಯ; 50 ವರ್ಷ ಸಿದ್ದಣ್ಣ ತಂದೆ ಶಂಕ್ರೆಪ್ಪ ಕೋಣಸಿರಸಗಿ ವಯ; 35 ವರ್ಷ ಸಾ|| ಎಲ್ಲರು ಬಟಗೇರಾ ಗ್ರಾಮ ಅಂತಾ ತಿಳಿಸಿದ್ದು ಜೂಜಾಟಕ್ಕೆ ಉಪಯೋ್ಗಿಸಿದ ಒಟ್ಟು ಹಣ 745-00 ರೂ ಹಾಗು 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಠಾಣೆ ಗುನ್ನೆ ನಂಬರ:114/2011 ನೇದ್ದರ ಕಲಂ.87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:
ಸ್ಟೇಷನ
ಬಜಾರ
ಪೊಲೀಸ
ಠಾಣೆ:
ಭೀಮಶಾ ಎ.ಎಸ.ಐ ಸ್ಟೇಶನ ಬಜಾರ ಠಾಣೆ ರವರು ಮತ್ತು ಸಿಬ್ಬಂದಿ ಯವರು ದಿನಾಂಕ 16/11/2011 ರಂದು 1415 ಗಂಟೆ ಸುಮಾರಿಗೆ ಗುಲ್ಲಾಬಾಡಿಯಲ್ಲಿರುವ ಅಂಬಾಭವಾನಿ ಗುಡಿ ಹಿಂದುಗಡೆಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ 6 ಜನರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 460=00 ರೂ 52 ಇಸ್ಪೇಟ ಎಲೆಗಳನ್ನು ಮತ್ತು 2 ಮೊಬೈಲ್ ಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿದ್ದರ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 198/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ :
ಶ್ರೀ
ಬಿ. ಕೃಷ್ಣಪ್ಪಾ ತಹಸೀಲ್ದಾರರು ಚಿಂಚೋಳಿ ರವರು ಯಂಪಳ್ಳಿ ಗ್ರಾಮದಲ್ಲಿ ಸ್ಥಾಪಿಸಲಾಗಿದ್ದ ಭೂಕಂಪನ ಮಾಪನಾ ಉಪಕರಣವನ್ನು ದಿನಾಂಕ:
14-02-2007 ರಿಂದ ದಿನಾಂಕ: 12-10-2011 ರ ಮಧ್ಯದಲ್ಲಿ ಕಳುವಾಗಿರುತ್ತದೆ. ಈ ಉಪಕರಣಗಳು ಅತಿ ಅಮೂಲ್ಯವಾಗಿದ್ದು ಕೇಂದ್ರ ಸರಕಾರದ ಅಧೀನಕ್ಕೊಳಪಡುತ್ತದೆ. ಇದರ ಮೌಲ್ಯ ಸುಮಾರು 5 ಲಕ್ಷ ರೂಪಾಯಿ ಆಗುತ್ತದೆ ಸದರ ಉಪಕರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಅರ್ಜಿಯ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 139/2011 ಕಲಂ 379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಅರುಣಕುಮಾರ ತಂದೆ ಜಗನ್ನಾಥ ಹರಸೂರ ಸಾ|| ಗಾಜಿಪೂರ ರವರು ಗುಲಬರ್ಗಾ ನಾನು ದಿನಾಂಕ
17-11-2011
ರಂದು
16=00 ಗಂಟೆಗೆ
ಜಗತ ಸರ್ಕಲ್ ದಿಂದ ಸುಪರ ಮಾರ್ಕೇಟ ಮೇನ ರೋಡಿನಲ್ಲಿ ಬರುವ ನ್ಯೂವಾದಿರಾಜ ಲಾಡ್ಜ ಎದುರು ರೋಡಿನ ಮೇಲೆ ಬರುತ್ತಿದ್ದಾಗ ಮೋಟಾರ ಸೈಕಲ್ ನಂ:ಕೆಎ 32 ಕ್ಯೂ 8688 ನೆದ್ದರ ಸವಾರ
ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಬಂದು ನಡೆಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಮಾಡಿ ಭಾರಿ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 147/2011 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಮತಿ ಈರಮ್ಮಾ ಗಂಡ ಮಲ್ಲಿನಾಥ ನಂದೂರ ಸಾ|| ;ತಿಳಿಗುಳ ತಾ;ಜಿ; ಗುಲಬರ್ಗಾ ರವರು ನಾನು ದಿನಾಂಕ
17-11-2011
ರಂದು
13=15 ಗಂಟೆಗೆ
ಆರ್.ಪಿ.ಸರ್ಕಲ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ ಸೈಕಲ್ ನಂ:ಕೆಎ 32 ಕೆ 5949 ನೇದ್ದರ ಚಾಲಕ
ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಹಿಂದಿನಿಂದ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿ ಮೋ/ಸೈಕಲ್ ಸಮೇತ ಓಡಿ ಹೋಗಿರುತ್ತಾನೆ, ಅಂತಾ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 146/2011 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. .

ಹುಡಗಿ ಕಾಣೆಯಾದ ಪ್ರಕರಣ:

ವಾಡಿ ಠಾಣೆ: ಶ್ರೀ ಮಲ್ಲಿಕಾರ್ಜುನ ತಂದೆ ನಿಜಗುಪ್ಪ ಬಣಗಾರ ಸಾ|| ರೇವೂರ ತಾ|| ಅಪಜಲಪೂರ ರವರು ನನ್ನ ಮಗಳು ಮತ್ತು ಹೆಂಡತಿ ಕೂಡಿಕೊಂಡು ದಿನಾಂಕ: 14-11-2011 ರಂದು ಓಣಿಯ ಜನರ ಸಂಗಡ ಹಲಕಟ್ಟಿ ಗ್ರಾಮದ ವೀರಭದ್ರೇಶ್ವರ ಜಾತ್ರೆಗೆ ಹೋಗಿ ರಾತ್ರಿ 11-00 ಗಂಟೆಗೆ ಮಗಳಾದ ಜ್ಯೋತಿ ಇವಳು ಫಲಹಾರ ತರುತ್ತೆನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೂ ಬಂದಿರುವದಿಲ್ಲ, ಜ್ಯೋತಿ ಇವಳು ಎತ್ತರ 5 ಅಡಿ ಸಾದರಣ ಮೈಕಟ್ಟು, ದುಂಡು ಮುಖ, ಕಪ್ಪು ಬಣ್ಣ, ಬಳಿಯ ಚೂಡಿದಾರ ಮತ್ತು ಪೈಜಾಮ ಧರಿಸಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 218/2011 ಕಲಂ ಹುಡಗಿ ಕಾಣೆಯಾದ ಪ್ರಕಾರಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ಇವಳ ಬಗ್ಗೆ ಸುಳಿವು ದೊರೆತ್ತಲ್ಲಿ ವಾಡಿ ಪೊಲೀಸ್ ಠಾಣೆ 08476-202300 / ಮೋ. 9480803574 ಅಥವಾ ಗುಲಬರ್ಗ ನಿಸ್ತಂತು ಕೋಣೆ 08472-263604 ಗೆ ಸಂಪರ್ಕಿಸಲು ಕೋರಲಾಗಿದೆ.


 


 

17 November 2011

Gulbarga Dist Reported Crimes

ಮಟಕಾ ಪ್ರಕರಣ:
ದೇವಲ ಗಾಣಗಾಪೂರ ಠಾಣೆ : ಶ್ರೀ ಮಂಜುನಾಥ.ಎಸ್.ಕುಸುಗಲ್ ಪಿ.ಎಸ್.ಐ ದೇವಲಗಾಣಗಾಪೂರ ಪೊಲೀಸ ಠಾಣೆ. ರವರು ದಿನಾಂಕ: 16-11-2011 ರಂದು ಮದ್ಯಾಹ್ನ 4:00 ಗಂಟೆಗೆ ಠಾಣೆಯಲ್ಲಿದ್ದಾಗ ಚಿಣಮಗೇರಿ ಗ್ರಾಮದಲ್ಲಿ ವಿರಭದ್ರೇಶ್ವರ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಚೀಟಿಗಳನ್ನು ಕೊಟ್ಟು ಮಟಕಾ ಜೂಜಾಟ ನಡೆಸುತಿದ್ದಾನೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಜೂಜಾಟ ನಡೆಸುತಿದ್ದವನನ್ನು ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮರೇಪ್ಪ ತಂದೆ ನಾಗಪ್ಪ ತಳಕೇರಿ ವಯ: 41 ವರ್ಷ ಜಾ: ಹರಿಜನ ಉ: ಕೂಲಿ ಸಾ ಚಿಣಮಗೇರಾ ಅಂತಾ ತಿಳಿಸಿದ್ದು, ಅವನ ಹತ್ತಿರದಿಂದ ನಗದು ಹಣ 575=00 ರೂಪಾಯಿ, ಮಟಕಾ ಚೀಟಿ, ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂಬರ:112/2011 ಕಲಂ.78(3) ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ದರೋಡೆ ಪ್ರಕರಣ:
ಅಶೋಕ ನಗರ ಠಾಣೆ : ಶ್ರೀಮತಿ. ರೇವತಿ ಗಂಡ ಹಣಮಂತ ಮಮದಾಪೂರ ಸಾ: ವಿದ್ಯಾನಗರ ಅಲಿಬಾಗ ಜಿ: ರಾಯಬಾಗ (ಮಹಾರಾಷ್ಟ್ರ ರಾಜ್ಯ) ರವರು ನನ್ನ ಅಕ್ಕನ ಮಗ ಪ್ರತೀಕನ ಮದುವೆಗಾಗಿ ಗುಲಬರ್ಗಾಕ್ಕೆ ಬಂದಿದ್ದು ದಿನಾಂಕ 16/11/2011 ರಂದು ಸಾಯಂಕಾಲ 7:00 ಗಂಟೆಗೆ ನಾನು ಮತ್ತು ನನ್ನ ಅತ್ತಿಗೆ ರಂಜನಾ ಇಬ್ಬರೂ ಮಾರ್ಕೆಟಕ್ಕೆ ಹೋಗಿ ಬಜಾರ ಮಾಡಿಕೊಂಡು ವೆಂಕಟಗೀರಿ ಹೊಟೇಲ ಹತ್ತಿರ ಇಳಿದು ನಡೆದುಕೊಂಡು ಮಾಕಾ ಲೇಔಟ ಕಡೆಗೆ ಬರುತ್ತಿರುವಾಗ ರಾತ್ರಿ 8:45 ಗಂಟೆ ಸುಮಾರಿಗೆ ವಿಜಯ ಘಾಟಗೆ ರವರ ಮನೆಯ ಹತ್ತಿರ ತೆಗ್ಗಿನಲ್ಲಿ ರಸ್ತೆ ಮೂಲಕ ಹೊಗುತ್ತಿರುವಾಗ ಎದರುಗಡೆಯಿಂದ ಒಬ್ಬ ಬೈಕ ಸವಾರನು ಬಂದು ನನ್ನ ಕೊರಳಲ್ಲಿ ಕೈ ಹಾಕಿ ಒಂದು ಬಂಗಾರದ ಮಂಗಳಸೂತ್ರ ಹಾಗು ಎರಡು ಬಂಗಾರದ ಜೈನಗಳನ್ನು ಕಿತ್ತಿಕೊಂಡಾಗ ನಾನು ಕೈ ಹಿಡಿದ್ದಿದ್ದರಿಂದ ಅದರಲ್ಲಿ ಸ್ವಲ್ಪ ಭಾಗ ತುಕಡಿ ಉಳಿದಿರುತ್ತದೆ. ಆ ವೇಳೆಯಲ್ಲಿ ರಸ್ತೆಯಲ್ಲಿ ಬೀದಿ ದೀಪ ಇರಲಿಲ್ಲ ಕತ್ತಲು ಇತ್ತು ಆದ್ದರಿಂದ ಆ ಬೈಕಿನ ನಂಬರ ಹಾಗು ಆ ಬೈಕ ಸವಾರನ ಮುಖ ಕಾಣಿಸಿರುವುದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 123/2011 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ಶ್ರೀ ದೇವಿಂದ್ರಪ್ಪ ಎ.ಎಸ್.ಐ ನಿಂಬರ್ಗಾ ಠಾಣೆ ರವರು ವರದಿ ಮತ್ತು ಜಪ್ತಿ ಪಂಚನಾಮೆ ಹಾಗು ಅರೋಪಿಯನ್ನು ಹಾಜರ ಪಡಿಸಿದ್ದರಿಂದ ಸಾರಂಶದವೆನೆಂದರೆ, ದಿನಾಂಕ 16/11/2011 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ದುತ್ತರಗಾಂವ ಗ್ರಾಮದ ಗ್ರಾಮ ಪಂಚಾಯತ ಮುಂದುಗಡೆ ಬಸವೇಸ್ವರ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಲ್ಲಿಕಾರ್ಜುನ ತಂದೆ ಅಮೃತ ಜಮಾದಾರ 27 ವರ್ಷ, ಜಾ ಕಬ್ಬಲಿಗೆರ, ಉ ಕೂಲಿ ಕೆಲಸ ಮತ್ತು ಸಿದ್ದಾರೂಢ ತಂದೆ ಈರಣ್ಣಾ ಪೊಲೀಸ ಪಾಟೀಲ ವ 37 ವರ್ಷ, ಜಾ ಲಿಂಗಾಯತ, ಉ ಕೂಲಿಕೆಲಸ ಇಬ್ಬರೂ ಸಾ ದುತ್ತರಗಾಂವ ತಾ ಆಳಂದ ರವರು ಸಾರ್ವಜನಿಕರಿಗೆ ಮೋಸ ಮಾಡುತ್ತ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಜನರಿಗೆ ಹೇಳುತ್ತಾ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿದ್ದಾಗ ಎ.ಎಸ.ಐ ಹಾಗು ಸಿಬ್ಬಂಧಿ ಜನರಾದ ಶಿವರಾಯ, ನಜಮೊದ್ದೀನ, ಮಸ್ತಾನ ರವರು ದಾಳಿ ಮಡಿ ಅವರಿಂದ ನಗದು ಹಣ 280/- ರೂ, ಮಟಕಾ ಚೀಟಿ ವಶಪಡಿಸಿಕೊಂಡು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 121/2011 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ : ಶ್ರೀ ಚಂದ್ರಶೇಖರ ತಂ ಗುರುನಾಥರಾವ ಸೂತ್ರಾವೆ ವಯ 31 ವರ್ಷ ಉಃ ಬಟ್ಟೆ ವ್ಯಾಪಾರ ಸಾಃ ಮನೆ ನಂ 1/13-4 ವಿವೇಕಾನಂದ ನಗರ ಖೂಬಾ ಪ್ಲಾಟ ಗುಲಬರ್ಗಾ ರವರು ನಮ್ಮ ಅಂಗಡಿಗೆ ದಿನಾಂಕ 12.11.2011 ರಂದು ಮದ್ಯಾಹ್ನ 4 ಪಿ.ಎಂದಿಂದ 5.40 ಪಿ.ಎಂದ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ 4 ಜನ ಹೆಣ್ಣು ಮಕ್ಕಳು ಹಾಗೂ 2 ಜನ ಗಂಡು ಮಕ್ಕಳು ಗ್ರಾಹಕರಂತೆ ನಟಿಸುತ್ತ ಅಂಗಡಿಯಲ್ಲಿ ಇದ್ದ ಬೆಲೆಬಾಳುವ 45-50 ರೇಷ್ಮೆ ಸೀರೆಗಳು ಅಃಕಿಃ 4 ಲಕ್ಷದಿಂದ 4.5 ಲಕ್ಷ ಬೆಲೆಯುಳ್ಳ ಸೀರೆಗಳು ನಮಗೆ ಗೊತ್ತಾಗದ ಹಾಗೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 211/2011 ಕಲಂ 380 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

16 November 2011


ಕುಖ್ಯಾತ ಮನೆ ಕಳವು ಮಾಡುವ ಮೂರು ಜನರ ಬಂದನ , ಸುಮಾರು 3.5 ಲಕ್ಷ ರೂ ಬೆಲೆಭಾಳುವ ಬಂಗಾರ, ಬೆಳ್ಳಿ ಆಭರಣಗಳು ಮತ್ತು ಮೋಟಾರ ಸೈಕಲ್ ವಶ

ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿಯ ಆರೋಪಿತರ ಪತ್ತೆ ಮಾನ್ಯ ಎಸ.ಪಿ ಸಾಹೇಬರು ಗುಲಬರ್ಗಾ ಮತ್ತು ಹೆಚ್ಚುವರಿ ಎಸ.ಪಿ ಸಾಹೇಬರು ಹಾಗು ಗ್ರಾಮಾಂತರ ಉಪ-ವಿಭಾಗದ ಡಿ.ಎಸ.ಪಿ ರವರ ಮಾರ್ಗದರ್ಶನದ ಮೇರೆಗೆ ದಿನಾಂಕ:15-11-2011 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಂ.ಬಿ.ನಗರ ವೃತ್ತ ಗುಲರ್ಗಾ ರವರ ನೇತ್ರತ್ವದಲ್ಲಿ ಪಿಐ ಗಳಾದ ಶ್ರೀ ಬಿ.ಬಿ.ಪಟೇಲ್ ಪಿಐ ಡಿಸಿಐಬಿ ಘಟಕ ಗುಲಬರ್ಗಾ, ಶ್ರೀ ಅಸ್ಲಂ ಬಾಷಾ ಪಿ.ಐ ಡಿ.ಎಸ್.ಬಿ ಘಟಕ ಗುಲಬರ್ಗಾ ಮತ್ತು ಪಿ.ಎಸ್.ಐ ರವರುಗಳಾದ ಶ್ರೀ ಪಂಡಿತ ಸಗರ ಪಿ.ಎಸ್.ಐ ವಿವಿ ಠಾಣೆ, ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಮ್.ಬಿ ನಗರ ಠಾಣೆ, ಭೋಜರಾಜ ರಾಠೋಡ ಪಿ.ಎಸ್.ಐ ಫರಹತಾಬಾದ , ಶ್ರೀ ಶಾಂತಿನಾಥ ಪಿ.ಎಸ್.ಐ ಕಮಲಾಪುರ ಮತ್ತು ಸಿಬ್ಬಂದಿಯವರಾದ ಗುರಶರಣ ಹೆಚ.ಸಿ , ಶ್ರೀ ಶಿವಪುತ್ರ ಸ್ವಾಮಿ ಹೆಚ್.ಸಿ, ಶ್ರಿ ಅಶೋಕ ಪಿಸಿ, ವೇದರತ್ನಂ ಪಿಸಿ,ಪ್ರಭಾಕರ ಪಿಸಿ, ಮಶಾಕ ಪಿಸಿ, ಅಣ್ಣಪ್ಪಾ ಪಿಸಿ, ರಮೇಶ ಪಿಸಿ, ಮತ್ತು ಅರ್ಜುನ ಎಪಿಸಿ ರವರು ಖಚಿತ ಭಾತ್ಮಿ ಮೇರೆಗೆ ಶಹಾಬಾದ ರಿಂಗ ರೊಡ ಹತ್ತಿರ ಖಚಿತ ಭಾತ್ಮಿಯಂತೆ ಕುಖ್ಯಾತ ಮನೆ ಕಳವು ಮಾಡುವ ಆರೋಪಿತರಾದ 1) ನಾಗ್ಯಾ @ ನಾಗರಾಜ ತಂದೆ ಮೊನ್ಯಾ ವಃ 24 ವರ್ಷ 2) ಚೊಕಲು ತಂದೆ ಗುಡ್ಯಾ ಪಾರದಿ ವಃ 26 ವರ್ಷ 3) ಅರ್ಜುನ ತಂದೆ ಮೊನ್ಯಾ @ ಮೊಹನ ವಃ 22 ವರ್ಷ ಸಾ.. ಎಲ್ಲರೂ ಸಾವಳಗಿ ಇವರನ್ನು ಓಡಿ ಹೋಗುತ್ತಿರುವಾಗ ಮಿಂಚಿನ ದಾಳಿ ಮಾಡಿ ಹಿಡಿದು ಸದರಿಯವರ ಹೆಚ್ಚಿನ ವಿಚಾರಣೆ ಕುರಿತು ತನಿಖೆಗೆ ಒಳ ಪಡಿಸಿದಾಗ ಸುಮಾರು 2 ತಿಂಗಳಿಂದ ಹಿಂದೆ ಗುಲಬರ್ಗಾ ನಗರದ ಮಹಾತ್ಮ ಬಸವೇಶ್ವರ ನಗರ, ಪ್ರಶಾಂತ ನಗರ, ಮತ್ತು ಅಣ್ಣೆಮ್ಮಾ ನಗರದಲ್ಲಿ ಬಿಗ ಹಾಕಿದ ಮನೆ ಬಾಗಿಲ ಕಿಲಿಗಳನ್ನು ಮುರಿದು ಒಳಗೆ ಹೋಗಿ ಅಲಮಾರಿಗಳಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಕಳವು ಮಾಡಿಕೊಂಡು ಹೋದ ಬಗ್ಗೆ ತನಿಖೆ ಕಾಲಕ್ಕೆ ತಿಳಿಸಿದ್ದು ಸದರಿ ಆರೋಪಿತರಿಂದ ಬಂಗಾರದ ಆಭರಣಗಳು , ಬೆಳ್ಳಿ ಆಭರಣಗಳು ಮನೆ ಬಳಕೆ ವಸ್ತುಗಳು ಹಾಗೂ ಒಂದು ಮೊಟಾರ ಸೈಕಲ ವಗೈರೆ ವಸ್ತುಗಳನ್ನು ಜಪ್ತು ಮಾಡಿಕೊಂಡು ತನಿಖೆ ಮುಂದುವರೆಸಲಾಗಿದೆ ಮಾನ್ಯ ಎಸ್.ಪಿ ಸಾಹೇಬರು ಪ್ರಕರಣವನ್ನು ಭೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಅವರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

ಕಳ್ಳತನ ಪ್ರಕರಣ;

ಗ್ರಾಮೀಣ ಠಾಣೆ : ಶ್ರಿ. ಶಿವಮೂರ್ತಿ ತಂದೆ ಪೀರಪ್ಪಾ ಹಡಪದ ವಯ;45 ವರ್ಷ ಉ;ಹೈನುಗಾರಿಕೆ ಸಾ; ಶಿವಲಿಂಗೇಶ್ವರ ಕಾಲೂನಿ ರಾಣೇಸ್ಪೀರ ದಾರ್ಗ ರೋಡ ಗುಲಬರ್ಗಾ.ರವರು ನಾನು ಸುಮಾರು ಇಪ್ಪತ್ತು ವರ್ಷಗಳಿಂದ ಹೈನುಗಾರಿಕೆ ಮಾಡುತ್ತಾ ಬಂದಿದ್ದು. ನನ್ನ ಹತ್ತಿರ ಒಟ್ಟು 15 ಎಮ್ಮೆಗಳು ಇರುತ್ತವೆ, ಅವುಗಳಲ್ಲಿ ಕೆಲವು ಹಾಲು ಕೋಡುತ್ತವೆ. ಹೀಗಿದ್ದು ದಿನಾಂಕ. 14-11-2011 ರಂದು ರಾತ್ರಿಗೆ ಎಲ್ಲಾ ಎಮ್ಮೆಗಳು ಮನೆ ಎದರು ಆವರಣದಲ್ಲಿ ಕಟ್ಟಿ ಹಾಕಿರುತ್ತೇನೆ. ದಿನಾಂಕ. 15-11-2011 ರಂದು ಮುಂಜಾನೆ ಎದ್ದು ನೋಡಲು 2 ಹಾಲು ಕೋಡುವ ಎಮ್ಮೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಿನ್ನೆಯಿಂದ ಇವತ್ತಿನವರೆಗೆ ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಮೇಲಿಂದ ಮೇಲಿಂದ ಠಾಣೆ ಗುನ್ನೆ ನಂ. 339/2011 ಕಲಂ. 379 ಐಪಿಸಿ ನೆದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಗಾಂಜಾ ಜಪ್ತಿ ಪ್ರಕರಣ:

ಅಫಜಲಪೂರ ಪೊಲೀಸ್ ಠಾಣೆ : ಶ್ರೀ ಡಿ.ಕೆ. ತೋರವಿ ಎಸ್.ಪಿ. .ಡಿ.ಎಸ್. ಸಿ..ಡಿ ಗುಲಬರ್ಗಾ ರವರು ಮತ್ತು ಆರ್.ವಿ. ಸಾವಳಗಿ ಪಿ. ಮತ್ತು ಮಂಜುನಾಥ ಎಸ್, ಪಿಎಸ್ಐ ಅಫಜಲಪೂರ ಠಾಣೆ ರವರು ಮತ್ತು ಸಿಬ್ಬಂದ್ದಿ ಜನರಾದ ಥಾಮದೇವ ಸಿ.ಎಚ್.ಸಿ, ಸಂಜಿವ ರೆಡ್ಡಿ. ಈರಣ್ಣ. ಲಕ್ಷ್ಮಿಕಾಂತ ಸಿಪಿಸಿ. ರವರು ಪಂಚರ ಸಮಕ್ಷಮ ಮಣೂರ ಗ್ರಾಮದ ದ್ಯಾವಪ್ಪ ನಗರದಲ್ಲಿ ಅಶೋಕ ತಂದೆ ಹಣಮಂತ ದೊಂಬರ ಈತನು ತನ್ನ ಹೊಲದಲ್ಲಿ ಗಾಂಜಾ ಬೆಳೆದು ಒಣಗಿದ ತಪ್ಪಲು ತನ್ನ ಹೋಲದಲ್ಲಿಯೆ ಓಣಗಲು ಹಾಕಿದ ಬಗ್ಗೆ ಭಾತ್ಮಿ ಬಂದಿದ್ದು ನಾವು ಸ್ತಳಕ್ಕೆ ಹೋಗಿ ಕಬ್ಬಿನ ಹೊಲದಲ್ಲಿ ಹುಡುಕಾಡಲಾಗಿ ಕಬ್ಬಿನ ಬೆಳೆಯಲ್ಲಿ ನೆಲದ ಮೇಲೆ ಗಾಂಜಾದ ತಪ್ಪಲು ಓಣಗಲು ಹಾಕಿದ್ದು ನೋಡಿ ಖಚಿತ ಪಡಿಸಿಕೊಂಡು ಮೆಲ್ಕಂಡ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದ್ದಿ ಜನರು ದಾಳಿ ಮಾಡಿ ಹೋಲದ ಮಾಲಿಕನನ್ನು ವಿಚಾರಿಸಲಾಗಿ ಅಶೋಕ ತಂದೆ ಹಣಮಂತ ದೊಂಬರ ಸಾ|| ದ್ಯಾವಪ್ಪ ನಗರ ಮಣ್ಣೂರ ಅಂತಾ ಹೇಳಿದ್ದು ಮತ್ತು ಓಣಗಲು ಹಾಕಿದ ಗಾಂಜಾ 250 ಗ್ರಾಮ || ಕಿ|| 2.500-00 ನೇದನ್ನು ಜಪ್ತ ಮಾಡಿಕೊಂಡಿದ್ದರ ಜ್ಞಾಪನ ಪತ್ರದ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ,191/2011 ಕಲಂ.20 (ಬಿ) ಎನ್.ಡಿ.ಪಿ ಎಸ್ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.