POLICE BHAVAN KALABURAGI

POLICE BHAVAN KALABURAGI

12 August 2011

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಠಾಣೆ :
ಶ್ರೀಮತಿ  ನಿಂಗಮ್ಮ ಗಂಡ ಶರನಪ್ಪ ಬಳಿಚಕ್ರ  ಸಾ: ಸಂಜೀವನಗರ ಗುಲಬರ್ಗ ರವರು    ನನ್ನ ಮಗನಾದ ಜೀವನ ಮತ್ತು ವಿನೋದ ಮತ್ತು ಇನ್ನೊಬ್ಬ ಹೊಂಡಾ ಆಕ್ಟೀವಾ ಮೊಟಾರ ಸೈಕಲ್ ನಂ:ಕೆಎ 01 ಇ.ಎಫ್.3237ನೇದ್ದರ ಮೇಲೆ ಎಸ್.ವಿ.ಪಿ. ಸರ್ಕಲ್  ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ವಿನೋದ ಇತನು ಒಮ್ಮೇಲೆ ಕಟ್ಟ ಹೊಡೆದಿದ್ದರಿಂದ ಮೋಟಾರ ಸೈಕಲ್ ಸಮೇತ ಎಲ್ಲರು ಕೆಳಗೆ ಬಿದ್ದು ಅವರಲ್ಲಿ ಜೀವನನಿಗೆ ಗಾಯಗೊಳಿಸಿ ತನ್ನ ಹೊಂಡಾ ಅಕ್ಟೀವ ಮೋಟಾರ ಸೈಕಲ ಸಮೇತ ಓಡಿ ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                

ಕೊಲೆ ಪ್ರಕರಣ:
ಗ್ರಾಮೀಣ ಠಾಣೆ
ಶ್ರೀಮತಿ ಸಂಗೀತಾ ಗಂಡ ಮಹಾಂತೇಶ ಪೂಜಾರಿ ಜ್ಯಾತಿ;ಕುರುಬರ ಸಾ; ಕೆರೆ ಹತ್ತಿರ ದುಬೈಕಾಲೂನಿ ಆಳಂದ ರೋಡ ಗುಲಬರ್ಗಾ ರವರು ನನ್ನ ಗಂಡ ಮಹಾಂತೇಶ ಇತನನ್ನು ದಿನಾಂಕ.10-08-2011 ರಂದು 10-00 ಪಿ.ಎಂ.ದಿಂದ ದಿನಾಂಕ. 11-08-2011 ರಂದು ಮುಂಜಾನೆ 11-00 ಗಂಟೆಯ ಅವಧಿಯ ಮದ್ಯದಲ್ಲಿ ಯಾರೋ ದುಷ್ಕರ್ಮಿಗಳು ಉಪಳಾಂವ ಏರಿಯಾದ ವನ್ಯಧಾಮದ ಪಕ್ಕದ ಹೊಲದಲ್ಲಿ ಹರಿತವಾದ ಆಯುಧದಿಂದ/ಭಾರವಾದ ವಸ್ತುವಿನಿಂದ ಹೊಡೆದು ಭಾರಿ ರಕ್ತಗೊಳಿಸಿ, ಮುಖ ಜಚ್ಚಿದಂತೆಯಾಗಿ ಮಾಡಿ ಮುಖ ಪೂರ್ತಿ ವಿರೂಪ ಮತ್ತು ರಕ್ತಮಯ ಮಾಡಿ ಕೊಲೆ ಮಾಡಿದ್ದು, ಸದರಿ ಕೊಲೆ ಮುಚ್ಚು ಹಾಕುವ ದುರುದ್ದೇಶದಿಂದ ಮುಖದ ಮೇಲೆ ಯಾಶಿಡ್ ಹಾಕಿ ಮುಖ ವಿರೂಪಗೊಳಿಸಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಸಂಚಾರಿ ಪೊಲೀಸ್ ಠಾಣೆ
: ಮಲ್ಲಿಕಾರ್ಜುನ ತಂದೆ ಬಸಪ್ಪ ಕೊಕಟನೂರ ಸಾಃ  ಜಿಡಿಎ ಕಛೇರಿ ಎಸ.ವಿ.ಪಟೇಲ ಗುಲಬರ್ಗಾ ರವರು ಲಾರಿ ನಂ  HR 55 / L 2473   ನೇದ್ದರ ಚಾಲಕ ಹಸನ ಸಾ|| ಸಾ: ಗುರಗಾಂವ ಹರಿಯಾಣಾ ರಾಜ್ಯ ಇತನು ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಾಲಯಿಸಿ ಎಸ.ವಿ ಪಟೇಲ ಬಡಾವಣೆಯ ಸ್ವಾಗತ ಕಮಾನಕ್ಕೆ ಡಿಕ್ಕಿ ಪಡಿಸಿ ಅಂದಾಜು 40000 /- ರೂ. ಹಾನಿ ಮಾಡಿ ವಾಹನ ಸ್ಥಳದಲ್ಲಿಯೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.            

ಮೋಸ ವಂಚನೆ ಪ್ರಕರಣ :
ಅಫಜಲಪೂರ ಪೊಲೀಸ್ ಠಾಣೆ:
ಬಸವರಾಜ ತಂದೆ ನಾಮದೇವ ಸಿಂಗೆ ಸಾ|| ಬಳೂರಗಿ ತಾ|| ಅಫಜಲಪೂರ  ರವರು ನಮ್ಮ ಸಂಬಂದಿಕಳಾದ ದುಂಡವ್ವ ಇವಳನ್ನು ದಿನಾಂಕ 15/7/1988 ರಂದು ಸಂತಪ್ಪ ತಂದೆ ಮರೆಪ್ಪ ದಿಮ್ಮೆ ಮತ್ತು ಸಂಗಡ 4 ಜನರು ಸಾ|| ಎಲ್ಲರೂ ಬಳೂರಗಿ ರವರು ದುಂಡವ್ವ ಇವಳನ್ನು ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿ ಅವಳ ಹೆಸರಿನಲ್ಲಿದ್ದ ಜಮೀನು ದುಂಡವ್ವಳ ಸಹಿ ಮಾಡಿದಂತೆ ಕಾಗದ ಪತ್ರಗಳನ್ನು ಸೃಷ್ಟಿಸಿ ಸವೆð ನಂ.58,315 ತಮ್ಮ ಹೆಸರಿನಿಂದ ಮಾಡಿಕೊಂಡಿರುತ್ತಾರೆ ಅಂತಾ ಮಾನ್ಯ ಜೆ ಎಂ ಎಫ್ ಸಿ ಕೋರ್ಟ ಅಫಜಲಪೂರದಲ್ಲಿ ಅರ್ಜಿ ಸಲ್ಲಿಸಿದ್ದು ಮಾನ್ಯರ ಪತ್ರದ ಆಧೇಶದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ಆಳಂದ ಪೊಲೀಸ ಠಾಣೆ:
ಶಿವಾನಂದ ತಂದೆ ಫಕೀರಪ್ಪ ಭಕರೆ ಸಾ|| ರೇವಣಸಿದ್ದೇಶ್ವರ ಕಾಲೋನಿ ಆಳಂದ ರವರು ನನ್ನ ಟವರ ಪಕ್ಕದಲ್ಲಿರುವ ಇರುವ ಗಾರ್ಡ ರೂಮನಲ್ಲಿ  ಇದ್ದ 40 ಮೀಟರ ಆರ.ಎಫ್. ಕೇಬಲ ವಾಯರ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಕಮಲಾಪೂರ ಪೊಲೀಸ ಠಾಣೆ : ನಾಗಪ್ಪಾ ತಂದೆ ಏಗಪ್ಪಾ ಜಮಾದಾರ ಸಾ: ಚೆಂಗಟಾ ತಾ:ಚಿಂಚೋಳಿ ಜಿ :ಗುಲಬರ್ಗಾರವರು ನಾನು ದಿನಾಂಕ:11-08-2011 ರಂದು ಬೆಳಿಗ್ಗೆ ಕಮಲಾಪೂರದಲ್ಲಿ ಕೆಲಸವಿದ್ದ ಪ್ರಯುಕ್ತ ಕಮಲಾಪುರಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೋಗಲು, ಬುಲೇರೋ ಪಿಕಪ್ ಗೂಡ್ಸ ವಾಹನ ನಂ: ಕೆಎ:32 ಬಿ:3037 ನೇದ್ದರಲ್ಲಿ ನಾನು, ನಮ್ಮ ಸಂಬಂಧಿಕರಾದ ಲಕ್ಷ್ಮಣ ಬಿಟನೂರ, ಮತ್ತು ನಮ್ಮೂರಿನವರಾದ ಸಿದ್ದಪ್ಪಾ ಖೇರ್ಜಿ, ಶರಣಪ್ಪಾ ದೇಸಾಯಿ ಹಾಗು ಅಂಬಣ್ಣಾ ತಂದೆ ಕಾಂಬಳೆ ಎಲ್ಲರೂ ಕುಳಿತುಕೊಂಡು ಚೆಂಗಟಾ ಗ್ರಾಮಕ್ಕೆ ಹೋಗುತ್ತಿರುವಾಗ ಕಮಲಾಪೂರ ಚೆಂಗಟಾ ರೋಡಿನ ವಡಗೇರಾ ಗ್ರಾಮದ ಸಮೀಪ ಚಾಲಕ ಸಂಜಿವಕುಮಾರ ಇತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ರೊಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ಒಳಗೆ ಕುಳಿತ ನಮ್ಮೆಲರಿಗೆ ರಕ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 August 2011

GULBARGA DIST REPORTED CRIMES

ಅಪಘಾತ ಪ್ರಕರಣ ಒಂದು ಸಾವು :
ಶಹಾಬಾದ ನಗರ ಠಾಣೆ:
ಶ್ರೀ ವಿಜಯಕುಮಾರ ತಂದೆ ಪಾಂಡು ರಾಠೋಡ ಉ: ಡ್ರೈವರ ಕೆಲಸ ಸಾ: ಕಾಳನೂರ ರವರು ನಾನು ನಿನ್ನೆ ದಿನಾಂಕ 10/08/2011 ರಂದು ಸಾಯಕಾಂಲ ಸುಮಾರಿಗೆ ನನ್ನ ಲಾರಿ ನಂ: ಸಿಜಿ/12 , ಜೆಡಸಿ 2026 ನೇದ್ದನ್ನು ವಾಡಿಯಿಂದ ಕಾಳನೂರಕ್ಕೆ ಚಲಾಯಿಸಿಕೊಂಡು ಬರುತ್ತಿರುವಾಗ ನನ್ನ ಮುಂದೆ ಟೀಪರ್ ನಂ: ಕೆ.ಎ-32/3125 ನೇದ್ದರ ಚಾಲಕ ಕೀಶನ ತಂದೆ ಗಂಗು ರಾಠೋಡ ಸಾ: ಕಾಳನೂರ ಇತನು ತನ್ನ ಟಿಪ್ಪರನ್ನು ಅತೀವೇಗ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಎಡಗಡೆ ಕಟ್ ಮಾಡಿದ್ದರಿಂದ ಟಿಪರ ಎಡಗಡೆ ಪಲ್ಟಿಯಾಗಿ ಬಿದ್ದು ಅದರಲ್ಲಿ ಕುಳಿತ ಗುಂಡುರಾವ ತಂದೆ ಬಸವಣಪ್ಪಾ ಮತ್ತು ಗೀರಿಧರ ತಂದೆ ಬಸವರಾಜ ಸಾ|| ನಂದೂರ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಾಲಕ ಕೀಶನ ಗೆ ಮುಖಕ್ಕೆ ಭಾರಿ ರಕ್ತಗಾಯವಾಗಿದ್ದು ಮತ್ತು ಎದೆಗೆ ಭಾರಿ ಒಳಪೆಟ್ಟಾಗಿ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕೀಶನ ಇತನು ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಕಿರುಕುಳ ಪ್ರಕರಣ :

ರೇವೂರ ಠಾಣೆ: ಶಾರದಾಬಾಯಿ ಗಂಡ ಭೀಮು ರಾಠೋಡ ಸಾ:ನಿಲೂರ ತಾಂಡಾ ತಾ:ಅಫಜಲಪೂರ ರವರು ನಾನು ಅಂಗನವಾಡಿ ಶಾಲೆಗೆ ಹೋಗುತ್ತೇನೆ ಅಂತ ಹೇಳಿದಾಗ ಗಂಡನಾದ ಭೀಮು ಇತನು ನೀನು ಅಂಗನವಾಡಿ ಶಾಲೆಗೆ ಹೊಗಬೇಡಾ ನನ್ನ ಜೋತೆ ಮುಂಬೈಗೆ ಬಾ ನೀನು ಅಂಗನವಾಡಿ ಕೆಲಸಕ್ಕೆ ಹೋದರೆ ನಿನಗೆ ಸುಮ್ಮನೆ ಬಿಡುವದಿಲ್ಲ ಅಂತಾ ಬೇದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಟಕಾ ಪ್ರಕರಣ :
ಬ್ರಹ್ಮಪೂರ ಠಾಣೆ
:  ದಿನಾಂಕ: 11/08/2011 ರಂದು ಮದ್ಯಾಹ್ನ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೆನೆಂದರೆ ಜಗತ ಸರ್ಕಲ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಮೋಸ ಮಾಡಿ ಅವರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೆರೆಗೆ ಪಂಚರ ಸಮಕ್ಷಮ ಪಿ.ಎಸ.ಐ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹೆಸರು ವಿಳಾಸ ವಿಚಾರಿಸಲು ತಿಮ್ಮಯ್ಯ ತಂದೆ ಶಿವಪ್ಪ ಮೇಠಿ, ಸಾ|| ನಾಗನಟಗಿ ತಾ|| ಶಹಾಪೂರ, ಹಾ||ವ|| ಜೇವರ್ಗಿ ಕಾಲೋನಿ ಗುಲಬರ್ಗಾ ಅಂತಾ ಹೇಳಿದ್ದು, ಅವನ ಹತ್ತಿರ ನಗದು ಹಣ 3000/-, ಮಟಕಾ ಚೀಟಿ, ಜಪ್ತಿ ಮಾಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.