POLICE BHAVAN KALABURAGI

POLICE BHAVAN KALABURAGI

24 July 2011

GULBARGA DISTRICT REPORTED CRIEMS

ಮುಂಜಾಗ್ರತೆ ಅಡಿಯಲ್ಲಿ ಪ್ರಕರಣ:
ಆಳಂದ ಠಾಣೆ :
ಬಸ್ಸಪ್ಪ ತಂದೆ ಚನ್ನಪ್ಪ ನಾಗುರೆ ಸಾ: ಪಡಸಾವಳಿ ಮತ್ತು ಕುಪೆಂದ್ರ ತಂದೆ ಶರಣಪ್ಪ ಚಾರಿ ಸಂಗಡ ಒಬ್ಬ ಸಾ:ಪಡಸಾವಳಿ ಮದ್ಯ, ಸುಮಾರು ವರ್ಷಗಳಿಂದ ಪಡಸಾವಳಿ ಗ್ರಾಮದ ಹೊಲ ಸರ್ವೆ ನಂ 269 ನೆದ್ದರ ವಿಷಯದಲ್ಲಿ ವೈಮನಸ್ಸು ಇದ್ದು, ಸದರಿಯವರು ಈ ವಿಷಯವಾಗಿ ಯಾವುದೇ ಸಮಯದಲ್ಲಿ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆ ಭಂಗ ಉಂಟು ಮಾಡಬಹುದು, ಎಂಬ ಕಾರಣಕ್ಕೆ 2 ಪಾರ್ಟಿ ಜನರ ಮೇಲೆ ಮುಂಜಾಗೃತ ಕ್ರಮದ ಅಡಿಯಲ್ಲಿ ಪ್ರರಕಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ:
ಆಳಂದ ಠಾಣೆ :
ಕಾಶಿನಾಥ ತಂದೆ ಭಿಮಾಶಂಕರ ಪಾಟೀಲ್ ಸಾ|| ಜಮಗಾ ಜೆ ರವರು ನನ್ನ ಮತ್ತು ರಾಜಶೇಖರ ಮಧ್ಯ ನಡುವೆ ಹೊಲ ಸರ್ವೆ ನಂ 119/5 ನೆದ್ದರ ವಿಷಯದಲ್ಲಿ ವೈಮನಸ್ಸು ಇದ್ದು ದಿನಾಂಕ 22/07/2011 ರಂದು ಸಾಯಂಕಾಲ ನನ್ನ ಮನೆ ಹತ್ತಿರ ರಾಜಕುಮಾರ ತಂದೆ ಪಂಡಿತರಾವ ಪಾಟೀಲ್ ಸಂಗಡ ಒಬ್ಬ ಸಾ:ಸಾ|| ಜಮಗಾ ಜೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ಸರಪಳಿಯಿಂದ ಮತ್ತು ಕೈಯಿಂದ ಹೊಡೆದು ರಕ್ತಗಾಯ ಗೊಳಿಸಿರುತ್ತರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ವಂಚನೆ ಪ್ರಕರಣ:

ಶಹಾಬಾದ ನಗರ ಠಾಣೆ : ದಿನಾಂಕ: 01-02-2010 ರಿಂದ 31-05-20110 ರ ಅವಧಿಯಲ್ಲಿ ನಗರ ಸಭೆ ಕಾರ್ಯಲಯದ ಪೌರಾಯುಕ್ತರು ಆಗಿದ್ದ ಎಮ್‌.ಬಿ. ನಡುವಿನಮನಿ ಸಿಎಮ್‌ಸಿ ಕಮೀಷನರ ಬಸವಕಲ್ಯಾಣ ರವರು ಕುಡಿಯುವ ನೀರಿನ ಸಾಮಾಗ್ರಿ, ನೈರ್ಮಲ್ಯ ಸಾಮಾಗ್ರಿ ಹಾಗು ವಿದ್ಯುತ್ ಸಾಮಾಗ್ರಿ ಖರೀದಿಯಲ್ಲಿ ಒಟ್ಟು 20,91102-00 ರೂಪಾಯಿಗಳು ದೂರುಪಯೋಗ ಮಾಡಿಕೊಂಡಿರುತ್ತರೆ ಅಂತಾ ರಾಜಾ ಪಟೇಲ ಐ/ಸಿ ಕಮೀಶನರ ಸಿಎಮ್‌ಸಿ ಶಹಾಬಾದ ರವರು ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ಕಳವು ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಮಲ್ಲಿನಾಥ ತಂದೆ ಶ್ಯಾಮರಾವ ಪೂಜಾರಿ ಸಾ: ಶಿವಾಜಿ ನಗರ ಗುಲಬರ್ಗಾ ರವರು ನನ್ನ ಮೋಟಾರ ಸೈಕಲ ನಂ ಕೆಎ 32 ಡಬ್ಲು 2027 ನೇದ್ದು ದಿನಾಂಕ 4/5/2011 ರಂದು ಮುಂಜಾನೆ ಹುಮನಾಬಾದ ರಿಂಗ ರೋಡದ ಹತ್ತಿರ ಸಾಗರ ಧಾಬಾದ ಮುಂದೆ ನಿಲ್ಲಿಸಿ ಧಾಬಾದ ಒಳಗಡೆ ಹೋಗಿ ಊಟ ಮಾಡಿಕೊಂಡು ಹೊರಗೆ ಬಂದು ನೋಡಲಾಗಿ ಅಲ್ಲೆ ನಿಲ್ಲಿಸಿದ ನನ್ನ ಮೋಟಾರ ಸೈಕಲ್ ಅ||ಕಿ|| 35680/- ರೂಗಳದ್ದು ಯಾರು ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ಕೂಲಿ ಕೆಲಸ ಮಾಡುತ್ತಿರುವಾಗ ಮೊದಲನೆ ಮಹಡಿಯಿಂದ ಬಿದ್ದು ಮಹಿಳೆ ಸಾವು :

ವಿಶ್ವ ವಿದ್ಯಾಲಯ ಠಾಣೆ : ಶ್ರೀ ನರಸಿಂಹಲು ತಂದೆ ಶಾಂತಯ್ಯಾ ತಿಮ್ಮಾನೂರ ಸಾ|| ಗಾಜಲ ಪೇಠ ರವರು ನನ್ನ ಹೆಂಡಿತಿಯಾದ ಅಂಜಮ್ಮಾ ಇವಳು ದಿನಾಂಕ 23-07-2011 ರಂದು ಮದ್ಯಾಹ್ನ ಇವಳು ಹೊಸದಾಗಿ ಕಟ್ಟುತ್ತಿರುವ ಇ.ಎಸ್.ಐ ಆಸ್ಪತ್ರೆಯ ಮೇಡಿಕಲ್ ವಿಬಾಗದಲ್ಲಿ ಮೋದಲನೇ ಅಂತಸ್ತಿನಲ್ಲಿ ಇತರೆ ಜನರೊಂದಿಗೆ ಕೆಲಸ ಮಾಡುತ್ತಿದ್ದಾಗ, ಮೊದಲನೇ ಅಂತಸ್ತಿನಿಂದ ಕೆಳಗೆ ಬಿದ್ದು, ಭಾರಿ ಗಾಯ ಹೊಂದಿದ್ದು ಉಪಚಾರ ಕುರಿತು ಆಸ್ಪತ್ರೆ ದಾಖಲ ಮಾಡಿದ್ದು ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ , ಈ ಘಟನೆಗೆ ಇ.ಎಸ್.ಐ ಆಸ್ಪತ್ರೆ ಕಟ್ಟಲು ಗುತ್ತೆ ಹಿಡಿದ ಗುತ್ತೆದಾರ ಮತ್ತು ಮಾಲೀಕ ಇತರೆ ಇಂಜಿನೀಯರ್, ಸುಪರ್ ವೈಜರ್ಗಳ ನಿರ್ಲಕ್ಷತನದಿಂದ ನನ್ನ ಹೆಂಡತಿ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

23 July 2011

GULBARGA DISTRICT REPORTED CRIMES

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ
: ಶ್ರೀ ಸುಬಾಸ ತಂದೆ ಅಮಲಪ್ಪಾ ನಡುವಿನಮನಿ ಸಾ: ಅರಿಕೇರಾ(ಜೆ) ತಾ: ಸುರಪೂರ ರವರು ನಾನು ಮತ್ತು ಕಾಕನ ಮಗ ಭೀಮರಾಯ ತಂದೆ ಶರಣಪ್ಪಾ ನಡುವಿನಮನಿ ಇಬ್ಬರೂ ಕೂಡಿಕೊಂಡು ಲಾರಿ ನಂ ಕೆ.ಎ-32, 8814 ನೇದ್ದರಲ್ಲಿ ಹೊರಟಿದ್ದು, ಕೆಲ್ಲೂರ ಸಮೀಪ ಏಕಿ ಮಾಡಲು ಭೀಮರಾಯ ಇತನು ಇಳಿದಾಗ ಲಾರಿ ಚಾಲಕ ಸೂರ್ಯಾಕಾಂತ ಇತನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಸ್ತಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ
:ಶ್ರೀ ವೆಂಕಟೇಶ ತಂದೆ ಏಮಜೀ ರಾಠೋಡ ಸಾಃ ಪಾಣೆಗಾಂವ ತಾಃಜಿಃ ಗುಲಬರ್ಗಾ ರವರು ನಾನು, ನನ್ನ ಹೆಂಡತಿ ಕಲಾವತಿ, ನಮಗಳಾದ ಪಾರ್ವತಿ, ಅಣ್ಣನ ಮಗನಾದ ಕುಪೇಂದ್ರ ಹಾಗು ನಮ್ಮ ತಾಂಡಾದವರಾದ ಶಿವರಾಮ ಎಲ್ಲರೂ ಕೂಡಿಕೊಂಡು ಕಾಳಮಂದರಗಿ ತಾಂಡಾಕ್ಕೆ ಹೋಗಿ ತಾಂಡಾದಲ್ಲಿ ಯಾರೂ ಇರದ ಕಾರಣ ಓಕಳಿ ಕ್ರಾಸಿಗೆ ಹೋಗಿ ಚಹಾ ಕುಡಿದು ರೋಡಿನ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದುಗಡೆಯಿಂದ ಬಸ್ಸ ಕೆಎ:32, ಎಫ್: 1258 ನೇದ್ದರ ಚಾಲಕನಾದ ವಿಶ್ವನಾಥ ಮ್ಯಾಕೆಲೆ ಸಾಃಹಣಮಂತವಾಡಿ ತಾಃಬಸವಕಲ್ಯಾಣ ಜಿಃ ಬೀದರ ಇತನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಹೆಂಡತಿ ಕಲಾವತಿ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಅವಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯ ಮತ್ತು ಬಲ ಮೆಲಕಿಗೆ ಒಳಪೆಟ್ಟಾಗಿ ಗುಪ್ತಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಚೀನ ತಂದೆ ತಿರುಪತಿ ಪಾಟೀಲ ಭಾಗ್ಯವಂತಿ ನಗರ ಗುಲಬರ್ಗಾ ರವರು ಹೈಕೋರ್ಟ ಕಡೆಯಿಂದ ಜೇವರ್ಗಿ ರಿಂಗ ರೋಡ ಕಡೆ ಹೋಗುವ ರೋಡಿನಲ್ಲಿ ಮಹಾರಾಜ ಲೇಔಟ ಹತ್ತಿರ ರಿಂಗ ರೋಡಿನ ಮೇಲೆ ಹೈಕೋರ್ಟ ಕಡೆಯಿಂದ ಟಿಪ್ಪರ ಲಾರಿ ನಂಬರ ಕೆಎ 32 ಬಿ 1900 ನೆದ್ದರ ಚಾಲಕ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಕಾರ ನಂ: ಕೆಎ 32 ಎಮ್ 9368 ನೆದ್ದಕ್ಕೆ ಓವರ ಟೆಕಮಾಡಿ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

GULBARGA DIST REPORTED CRIME

ಮನುಷ್ಯ ಕಾಣೆಯಾದ ಪ್ರಕರಣ :
ದೇವಲ ಗಾಣಗಾಪೂರ ಠಾಣೆ :
ಶ್ರೀಮತಿ ಆಲವೇಲು ಗಂಡ ಸಾಲಯ್ಯ ಕಾಮಶೇಟ್ಟಿ ಸಾ|| ಪುಲಿಚರಲ್ ತಾ|| ಪೆದ್ಡಾಪೂರ್ ಜಿಲ್ಲೆ || ನಲಗೊಂಡ ರಾಜ್ಯ ಆಂದ್ರ ಪ್ರದೇಶ ರವರು ನಾನು ಮತ್ತು ನನ್ನ ಗಂಡ ಸಾಲಯ್ಯ ದಿನಾಂಕ:15-07-2011 ರಂದು ಮಧ್ಯಾಹ್ನ ದೇವಲಗಾಣಗಾಫುರಕ್ಕೆ ಬಂದು ಶ್ರೀ ದತ್ತಾತ್ರೇಯ ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಾಗ ನನ್ನ ಗಂಡ ಕಾಣೆಯಾಗಿರುತ್ತಾನೆ ಇಲ್ಲಿಯವರೆಗೂ ಎಲ್ಲಾ ಕಡೆ ಹೂಡುಕಾಡಿದರೂ ಸಿಕ್ಕಿರುವುದಿಲ್ಲಾ ಅಂತಾ ದೂರು ಸಲ್ಲಿಸಿದ ಮೇರೆಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.