ಅಪಘಾತ ಪ್ರಕರಣ :-
ಸಂಚಾರಿ ಠಾಣೆ :ಶ್ರೀ ಮಹ್ಮದ ಗೌಸ್ ತಂದೆ ಮಹ್ಮದ ಜಿಲಾನಿ ಪಟೇಲ್ ಸಾ|| ಮೊಹಲ್ಲಾ ಮೋಮಿನ್ ಪುರ ಗುಲಬರ್ಗಾ ರವರು, ನಾನು ಮತ್ತು ಚಾಂದಪಾಶಾ ಇಬ್ಬರೂ ಕೂಡಿಕೊಂಡು ಆಟೋರಿಕ್ಷಾ ಕೆ.ಎ 32 9065 ನೇದ್ದರಲ್ಲಿ ಕುಳಿತು ತಾಜ್ ಫಂಕ್ಷನ್ ಹಾಲ್ ಗೆ ಹೋಗುತ್ತಿರುವಾಗ, ಕೆ.ಎಫ್.ಎಮ್ ಮಿಲ್ಕ್ ಡೈರಿ ಮುಂದಿನ ರೋಡಿನಲ್ಲಿ ಆಟೋದ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ಒಮ್ಮೇಲೆ ಕಟ್ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿದ್ದು, ಒಳಗೆ ಕುಳಿತ ಚಾಂದಪಾಶಾ ಇತನಿಗೆ ಗಾಯಗಳಾಗಿದ್ದು, ಅಪಘಾತ ಪಡಿಸಿದ ನಂತರ ಆಟೋ ಚಾಲಕನು ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ. ಕಾರಣ ಸದರಿ ಆಟೋ ಚಾಲಕನನ್ನು ಪತ್ತೆ ಹಚ್ಚಿ ಅವನ ವಿರುದ್ಧ ಕಾನೂನು ಸೂಕ್ತ ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment